ಚೀನಾ ತೆಕ್ಕೆಗೆ ಬಿದ್ದ ಮಾಲ್ಡೀವ್ಸ್ ಸ್ಥಿತಿ ಏನಾಗಿದೆ ? – ಭಾರತಕ್ಕೆ ಚೀನಾದಿಂದ ಕಾದಿದೆಯಾ ಅಪಾಯ?

ಚೀನಾ ತೆಕ್ಕೆಗೆ ಬಿದ್ದ ಮಾಲ್ಡೀವ್ಸ್ ಸ್ಥಿತಿ ಏನಾಗಿದೆ ? – ಭಾರತಕ್ಕೆ ಚೀನಾದಿಂದ ಕಾದಿದೆಯಾ ಅಪಾಯ?

ಭಾರತ ಮತ್ತು ಮಾಲ್ಡೀವ್ಸ್ ನಡುವೆ ಹೊತ್ತಿಕೊಂಡಿರುವ ರಾಜತಾಂತ್ರಿಕ ಸಮರದ ಬೆಂಕಿ ಅಷ್ಟು ಬೇಗನೆ ಶಮನವಾಗೋಕೆ ಸಾಧ್ಯವೇ ಇಲ್ಲ. ಯಾಕಂದ್ರೆ ಒಬ್ಬರು ಈ ಬೆಂಕಿಗೆ ತುಪ್ಪ ಸುರಿಯುತ್ತಾ, ಚಳಿ ಕಾಯಿಸಿಕೊಳ್ತಾ ಮಜಾ ನೋಡ್ತಾ ಇದ್ದಾರೆ. ಅದು ಚೀನಾ ಅಧ್ಯಕ್ಷ ಕ್ಸಿ ಜಿನ್​ಪಿಂಗ್. ಭಾರತದ ಪಾಲಿಗೆ ಮಾಲ್ಡೀವ್ಸ್ ಲೆಕ್ಕಕ್ಕಿಲ್ಲ. ಮಾಲ್ಡೀವ್ಸ್ ಜೊತೆಗೆ ಜಿದ್ದಿಗೆ ಬಿದ್ದು ಸಾಧಿಸೋಕೆ ಏನೇನೂ ಇಲ್ಲ. ಇದು ಎಲ್ಲರಿಗೂ ಗೊತ್ತಿರೋ ವಿಚಾರವೇ. ಆದರೆ, ನಿಜಕ್ಕೂ ಇಲ್ಲಿ ಸೆಣಸಾಡುತ್ತಿರುವುದು ಚೀನಾದ ವಿರುದ್ಧ. ಮಾಲ್ಡೀವ್ಸ್ ಹೆಗಲ ಮೇಲೂ ಗನ್ ಇಟ್ಟು ಚೀನಾ ಭಾರತವನ್ನ ಟಾರ್ಗೆಟ್ ಮಾಡ್ತಿದೆ. ಈಗಾಗ್ಲೇ ಮಾಲ್ಡೀವ್ಸ್ ಚೀನಾದ ಕಪಿಮುಷ್ಠಿಗೆ ಸಿಲುಕಿಯಾಗಿದೆ. ಹಾಗಿದ್ರೆ ಮಾಲ್ಡೀವ್ಸ್​ನ್ನ ಇಟ್ಟುಕೊಂಡು ಚೀನಾ ಯಾವ ರೀತಿ ತಂತ್ರ ಹೆಣೀತಿದೆ? ಸರ್ವಾಧಿಕಾರಿಯ ಉದ್ದೇಶವಾದ್ರೂ ಏನು? ಭಾರತಕ್ಕೆ ಯಾವೆಲ್ಲಾ ರೀತಿ ಅಪಾಯ ಎದುರಾಗಿದೆ? ಮಾಲ್ಡೀವ್ಸ್​ ವಿಚಾರದಲ್ಲಿ ನಿಜಕ್ಕೂ ನಡೆಯುತ್ತಿರುವುದು ಏನು ಎಂಬ ಬಗ್ಗೆ ವಿವರವಾದ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಬಾಯ್ಕಾಟ್ ಮಾಲ್ಡೀವ್ಸ್! – ಬಾಲಿವುಡ್, ಕ್ರಿಕೆಟ್ ತಾರೆಯರ ಅಭಿಯಾನ- ಪ್ರಧಾನಿ ಮೋದಿ ಪರ ಸೆಲೆಬ್ರಿಟಿಗಳ ಬ್ಯಾಟಿಂಗ್

ಮೊಹಮ್ಮದ್ ಮೊಯಿಜು ಭಾರತ ವಿರೋಧಿ ನಿಲುವನ್ನ ಮತ್ತಷ್ಟು ಗಟ್ಟಿ ಮಾಡುತ್ತಲೇ ಪ್ರಧಾನಿ ಮೋದಿ ಲಕ್ಷದ್ವೀಪಕ್ಕೆ ಭೇಟಿ ನೀಡಿ ನೀರಲ್ಲಿ ಮುಳುಗಿ ಎದ್ದು, ಮಾಲ್ಡೀವ್ಸ್​ನಂಥಾ ಜಾಗ ನಮ್ಮಲ್ಲೂ ಇದೆ ಅಂತಾ ಪರೋಕ್ಷವಾಗಿ ಟಕ್ಕರ್ ಕೊಟ್ಟಿದ್ದರು. ಇದರಿಂದ ಮಾಲ್ಡೀವ್ಸ್ ಮೂಲ ಆದಾಯ ಪ್ರವಾಸೋದ್ಯಮಕ್ಕೆ ಹೊಡೆತ ಬೀಳೋಕೆ ಶುರುವಾಗಿದೆ. ಈಗ ಮೊಹಮ್ಮದ್ ಮೊಯಿಜು ಪ್ರವಾಸಿಗರಿಗಾಗಿಯೂ ತಮ್ಮ ಬಿಗ್​ಬಾಸ್ ಚೀನಾದ ಮೊರೆ ಹೋಗಿದ್ದಾರೆ. ಚೀನಾದಿಂದ ಪ್ರವಾಸಿಗರನ್ನ ಕಳುಹಿಸುವಂತೆ ಪರಿ ಪರಿಯಾಗಿ ಬೇಡಿಕೊಳ್ತಾ ಇದ್ದಾರೆ. ಇದ್ರಲ್ಲೇ ಗೊತ್ತಾಗುತ್ತೆ, ಮಾಲ್ಡೀವ್ಸ್ ಸರ್ಕಾರ ಈಗ ಯಾರ ತಾಳಕ್ಕೆ ತಕ್ಕಂತೆ ಕುಣೀತಾ ಇದೆ ಅನ್ನೋದು.

ಇಲ್ಲಿ ಇನ್ನೊಂದು ಇಂಪಾರ್ಟೆಂಟ್ ಸಂಗತಿ ಕೂಡ ಇದೆ. ಹೇಳಿಕೇಳಿ ಮಾಲ್ಡೀವ್ಸ್ ದ್ವೀಪ ರಾಷ್ಟ್ರ. ಸುಮಾರು ದ್ವೀಪಗಳೆಲ್ಲಾ ಸೇರಿ ಮಾಲ್ಡೀವ್​​ ರಾಷ್ಟ್ರ ಇರೋದು. ಆದ್ರೆ ಗ್ಲೋಬಲ್​ ವಾರ್ಮಿಂಗ್​ನಿಂದಾಗಿ ಸಮುದ್ರದಲ್ಲಿ ನೀರಿನ ಮಟ್ಟ ಹೆಚ್ಚಾಗ್ತಾನೆ ಇದೆ. ವಿಜ್ಞಾನಿಗಳ ವರದಿ ಪ್ರಕಾರ 2050ರ ವೇಳೆ ಶೇಕಡಾ 80ರಷ್ಟು ಮಾಲ್ಡೀವ್ಸ್ ಸಂಪೂರ್ಣವಾಗಿ ನೀರಲ್ಲಿ ಮುಳುಗಡೆಯಾಗುತ್ತೆ. ಮಾಲ್ಡೀವ್ಸ್ ಕಥೆ ಮುಗೀತು ಅಂತಾನೆ ಅರ್ಥ. ಆಗ ಏನೇ ಸಂಕಷ್ಟ ಬಂದ್ರೂ ಮಾಲ್ಡೀವ್ಸ್​ಗೆ ಮೊದಲು ನೆರವು ಕೇಳೋದು ಭಾರತದ ಬಳಿಯೇ. ಯಾಕಂದ್ರೆ ಮಾಲ್ಡೀವ್ಸ್​ಗೆ ಅತ್ಯಂತ ಹತ್ತಿರದಲ್ಲಿರೋ ಪವರ್​​ಫುಲ್ ರಾಷ್ಟ್ರ ಅಂದ್ರೆ ಭಾರತ ಮಾತ್ರ. ಈ ವಿಚಾರ ಗೊತ್ತೀದ್ರೂ ಮಾಲ್ಡೀವ್ಸ್ ಈಗ ಭಾರತವನ್ನೇ ಬಹಿಷ್ಕರಿಸಿ ಚೀನಾದತ್ತ ಮುಖ ಮಾಡಿದೆ. ಯಾಕಂದ್ರೆ ಮಾಲ್ಡೀವ್ಸ್​ಗೆ ಈಗ ಬೇಕಾಗಿರೋದು ಹಣ. ಯಾರು ತನಗೆ ಭರಪೂರ ನೆರವು ಕೊಡ್ತಾರೋ ಅವರ ಕಡೆಗೆ ಮೊಹಮ್ಮದ್ ಮೊಯಿಜು ತಿರುಗಿ ನಿಲ್ತಾ ಇದ್ದಾರೆ. ಚೀನಾ ಈಗ ಮಾಲ್ಡೀವ್ಸ್ ಮೇಲೆ ಹಣ ಸುರಿಯೋಕೆ ಮುಂದಾಗಿದೆ. ಸಾಲ ಕೊಟ್ಟು ಕೊಟ್ಟು ಕೊನೆಗೆ ಮಾಲ್ಡೀವ್ಸ್​ನ್ನ ತನ್ನ ಶೂಲದಲ್ಲಿ ಸಿಲುಕಿಸೋದು ಚೀನಾ ಷಡ್ಯಂತ್ರ. ಈಗಾಗ್ಲೇ ಶ್ರೀಲಂಕಾವನ್ನೂ ಇದೇ ರೀತಿ ಮಾಡಿ ತನ್ನ ಮುಷ್ಠಿಯೊಳಗಿಟ್ಟುಕೊಂಡಿದೆ. ಮುಂದೆ ಮಾಲ್ಡೀವ್ಸ್ ವಿಚಾರದಲ್ಲೂ ಆಗೋದು ಇದೇ. ಇಲ್ಲಿ ಮಾಲ್ಡೀವ್ಸ್​ ಮೇಲೆ ಚೀನಾ ಕಣ್ಣು ಬೀಳೋಕೆ ಕೆಲ ಪ್ರಮುಖ ಕಾರಣಗಳೂ ಇದೆ. ಸಮುದ್ರ ಮಾರ್ಗವಾಗಿ ಜಾಗತಿಕ ವ್ಯಾಪಾರ ವಹಿವಾಟಿನಲ್ಲಿ ಮಾಲ್ಡೀವ್ಸ್​ನದ್ದು ಅತ್ಯಂತ ಪ್ರಮುಖ ರೋಲ್ ಇದೆ. ಬಹುತೇಕ ಎಲ್ಲಾ ಗೂಡ್ಸ್ ಹಡಗುಗಳೂ ಹಿಂದೂ ಮಹಾಸಾಗರದ ಮೂಲಕ ಮಾಲ್ಡೀವ್ಸ್​​ ಸಮುದ್ರ ಮಾರ್ಗವನ್ನ ದಾಟಿಯೇ ಹಾದು ಹೋಗುತ್ತವೆ. ಚೀನಾಗೆ ಸಪ್ಲೈ ಆಗೋ ಪೆಟ್ರೋಲ್, ಡೀಸೆಲ್​ ಸೇರಿದಂತೆ ತೈಲೋತ್ಪನ್ನಗಳು ಕೂಡ ರವಾನೆಯಾಗೋದೂ ಮಾಲ್ಡೀವ್ಸ್ ಸಮೀಪದಲ್ಲೇ. ಇಲ್ಲಿ ಮಾಲ್ಡೀವ್ಸ್ ಸಮೀಪವೇ ಹಾದು ಹೋಗೋಕೆ ಒಂದು ಇಂಟ್ರೆಸ್ಟಿಂಗ್ ರೀಸನ್ ಕೂಡ ಇದೆ. ಮಾಲ್ಡೀವ್ಸ್ ಸಮುದ್ರ ಭಾಗದ ಕೆಳಗೆ ಒಂದು ಪರ್ವತ ಶ್ರೇಣಿ ಇದೆ. ಹೇಗೆ ಭೂಮಿ ಮೇಲೆ ಪರ್ವತಗಳಿರುತ್ತೋ ಅದೇ ರೀತಿ ಸಮುದ್ರದಾಳದಲ್ಲೂ ಪರ್ವತಗಳಿರುತ್ತೆ. ಪ್ರಾಕೃತಿವಾಗಿ ನಿರ್ಮಾಣವಾದ ತಡೆಗೋಡೆಗಳಿರುತ್ತೆ. ಇಲ್ಲೂ ಅಂಥದ್ದೇ ಒಂದು ಪರ್ವತ ಶ್ರೇಣಿ ಇದೆ. ಇದ್ರ ಮಧ್ಯೆ ಎರಡು ಪ್ಯಾಸೇಜ್​​ಗಳಷ್ಟೇ ಇದೆ. ಮಾಲ್ಡೀವ್ಸ್​ನ ಉತ್ತರ ಮತ್ತು ದಕ್ಷಿಣ ಭಾಗದಲ್ಲಿ ಪ್ಯಾಸೇಜ್ ಇದೆ. ಈ ಪ್ಯಾಸೇಜ್ ಮೂಲಕವೇ ಹಡಗುಗಳು ಪಾಸ್ ಆಗೋದು. ಚೀನಾದ ಹಡಗುಗಳೂ ಇಲ್ಲೇ ಹಾದು ಹೋಗಬೇಕು. ಆದ್ರೆ ಇಂಥಾ ಹಿಂದೂ ಮಹಾಸಾಗರದ ಮೇಲೆ ಭಾರತ ಹೆಚ್ಚಿನ ಹಿಡಿತ ಸಾಧಿಸ್ತಾ ಇದೆ. ಇದನ್ನ ಚೀನಾಗೆ ಸಹಿಸಿಕೊಳ್ಳೋಕೆ ಆಗ್ತಾ ಇಲ್ಲ. ಸಿಂಪಲ್ ಆಗಿ ಹೇಳೋದಾದ್ರೆ, ಹಿಂದೂಮಹಾಸಾಗರ ಅನ್ನೋದು ಒಂಥರಾ ಬ್ಯುಸಿ ಹೈವೇ ಇದ್ದಂತೆ. ಮಧ್ಯದಲ್ಲಿರೋ ಮಾಲ್ಡೀವ್ಸ್​​ ಟೋಲ್​​ ಗೇಟ್ ಇದ್ದಂತೆ. ಟೋಲ್​ಗೇಟ್​​ನ್ನ ಯಾರು ಕಂಟ್ರೋಲ್​ಗೆ ತೆಗೆದುಕೊಳ್ತಾರೋ ಅವರು ಇಡೀ ಹೈವೆಯನ್ನ ಅಂದ್ರೆ ಇಲ್ಲಿ ಹಿಂದೂಮಹಾಸಾಗರವನ್ನ ಹಿಡಿತದಲ್ಲಿಟ್ಟುಕೊಳ್ಳಬಹುದು. ಇದೇ ಮಾಲ್ಡೀವ್ಸ್​ನ್ನ ಚೀನಾ ಈ ಲೆವೆಲ್​ಗೆ ಟಾರ್ಗೆಟ್ ಮಾಡಿರೋದು.​ ನಾಳೆ ಒಂದು ವೇಳೆ ಭಾರತ-ಚೀನಾ ಸಂಬಂಧ ಇನ್ನಷ್ಟು ಹದಗೆಟ್ರೆ, ಆಗ ಮಾಲ್ಡೀವ್ಸ್​ ಭಾರತವನ್ನ ಬೆಂಬಲಿಸಿದ್ರೆ ಅದ್ರಿಂದ ಸಮುದ್ರ ಮಾರ್ಗದಲ್ಲಿ ಚೀನಾದ ವಹಿವಾಟಿಗೆ ಹೊಡೆತ ಬೀಳುತ್ತೆ. ಸೋ ಈಗ ಮಾಲ್ಡೀವ್ಸ್​ನ್ನ ಕೂಡ ಕಸಿದುಕೊಂಡು ಸುತ್ತಲೂ ಭಾರತಕ್ಕೆ ಚೆಕ್​ಮೇಟ್ ಇಡೋಕೆ ಚೀನಾ ಮುಂದಾಗಿದೆ. ಈಗಾಗ್ಲೇ ಪಾಕಿಸ್ತಾನ ಚೀನಾದ ತೆಕ್ಕೆಯಲ್ಲಿದೆ. ಶ್ರೀಲಂಕಾವನ್ನ ಕೂಡ ಸಾಲದ ಸುಳಿಯಲ್ಲಿ ಸಿಲುಕಿಸಿದೆ. ಅವರ ಬಂದರನ್ನೇ 90 ವರ್ಷಗಳ ಕಾಲ ಲೀಸ್​ಗೆ ಪಡೆದಿದೆ. ಬಾಂಗ್ಲಾದೇಶವೂ ಅಷ್ಟೇ, ಚೀನಾದ ಜೊತೆಗೂ ಚೆನ್ನಾಗಿಯೇ ಇದೆ. ಭವಿಷ್ಯದಲ್ಲಿ ಭಾರತಕ್ಕೆ ಚಾಕು ಇರಿದ್ರೂ ಆಶ್ಚರ್ಯ ಇಲ್ಲ. ಇನ್ನು ಮಯನ್ಮಾರ್ ಸರ್ಕಾರ ಕೂಡ ಚೀನಾ ನುಡಿದಂತೆ ನಡೀತಾ ಇದೆ. ಈಗ ಮಾಲ್ಡೀವ್ಸ್​ನ್ನ ಕೂಡ ಕಂಟ್ರೋಲ್​ಗೆ ತಗೊಂಡ್ರೆ, ಭಾರತದ ಸುತ್ತಲೂ ಚೀನಾ ತನ್ನ ಚಕ್ರವ್ಯೂಹವನ್ನ ರಚಿಸಿದಂತಾಗುತ್ತೆ.

2011ರ ಮೊದಲು ಮಾಲ್ಡೀವ್ಸ್ ಐಎಂಎಫ್​​ನ least developed countries ಅಂದ್ರೆ ಕಡಿಮೆ ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಲಿಸ್ಟ್​ನಲ್ಲಿತ್ತು. ಆದ್ರೆ ಈಗ ಎಲ್​ಡಿಸಿ ಲಿಸ್ಟ್​ನಿಂದ ಮಾಲ್ಡೀವ್ಸ್ ಹೊರಕ್ಕೆ ಬಂದಿದೆ. ಹೀಗಾಗಿ ಮಾಲ್ಡೀವ್ಸ್​ಗೆ ಹೆಚ್ಚಿನ ಹಣಕಾಸಿನ ನೆರವಿನ ಅಗತ್ಯ ಇಲ್ಲ ಅನ್ನೋ ನಿರ್ಧಾರಕ್ಕೆ ಐಎಂಎಫ್ ಬಂದಿತ್ತು. ಜಾಗತಿಕ ಹಣಕಾಸು ನೆರವು ನಿಲ್ಲುತ್ತಲೇ ಮಾಲ್ಡೀವ್ಸ್​​ ಅಭಿವೃದ್ಧಿಗೆ ಸಮಸ್ಯೆಯಾಗುತ್ತೆ. ಹೀಗಾಗಿ ಮಾಲ್ಡೀವ್ಸ್ ಹಣಕ್ಕಾಗಿ ಬೇರೆ ದೇಶಗಳ ಮೊರೆ ಹೋಗೋಕೆ ನಿರ್ಧರಿಸಿತ್ತು. ಅಷ್ಟೊತ್ತಿಗಾಗಲೇ ಜಿನ್​ಪಿಂಗ್​ ಅಣ್ಣನ ಎಂಟ್ರಿಯಾಯ್ತು ನೋಡಿ. ಅಸಾಮಿ ಬಕಪಕ್ಷಿಯಂತೆ ಕಾಯ್ತಾ ಇತ್ತು..ಮಾಲ್ಡೀವ್ಸ್​ಗೆ ಕಾಸು ಬೇಕಿತ್ತು. ಸರ್ವಾಧಿಕಾರಿ ಹಣ ಚೆಲ್ಲೋಕೆ ರೆಡಿಯಾದ. ಚೀನಾ-ಮಾಲ್ಡೀವ್ಸ್ ಫ್ರೆಂಡ್​ಶಿಪ್​ ಬ್ರಿಡ್ಜ್ ಹೆಸರಲ್ಲಿ ಮಾಲ್ಡೀವ್ಸ್​ನಲ್ಲಿ ಸುಮಾರು 200 ಮಿಲಿಯನ್ ಡಾಲರ್​ ಖರ್ಚು ಮಾಡಿ ಸೇತುವೆಯೊಂದನ್ನ ನಿರ್ಮಾಣ ಮಾಡಲಾಗುತ್ತೆ. ಇದು ಚೀನಾ ಕೊಟ್ಟ ಸಾಲದ ಹಣ. ಜೊತೆಗೆ 2017ರಲ್ಲಿ ಮಾಲ್ಡೀವ್ಸ್ ಜೊತೆಗೆ ಚೀನಾ ಫ್ರೀ ಟ್ರೇಡ್ ಒಪ್ಪಂದಕ್ಕೂ ಸಹಿ ಹಾಕುತ್ತೆ. ಅಸಲಿಗೆ ಮಾಲ್ಡೀವ್ಸ್​ನ ಜಿಡಿಪಿ ಇರೋದೆ 5 ಬಿಲಿಯನ್ ಡಾಲರ್. ಆದ್ರೆ ಚೀನಾದ ಜೊತೆಗೆ ಮಾಡಿಕೊಂಡಿರುವ ಸಾಲವೇ ಈಗ ಮಾಲ್ಡೀವ್ಸ್​​ನ ಜಿಡಿಪಿಯ 5ನೇ ಒಂದು ಭಾಗದಷ್ಟಾಗಿದೆ. ಇದ್ರ ಅರ್ಥ, ಶೀಘ್ರವೇ ಮಾಲ್ಡೀವ್ಸ್ ಚೀನಾದ ಸಾಲದ ಸುಳಿಯೊಳಕ್ಕೆ ಬೀಳುತ್ತೆ. ಬೀಳುತ್ತೆ ಅಲ್ಲ ಆಲ್​ರೆಡಿ ಬಿದ್ದಾಗಿದೆ. ಇದು ಚೀನಾದ ಮಾಸ್ಟರ್ ಪ್ಲ್ಯಾನ್. ಮಿಲಿಯನ್​ ಡಾಲರ್​ಗಟ್ಟಲೆ ಸಾಲ ಕೊಡೋದು. ಅಮೇಲೆ ಅವರಿಗೆ ಸಾಲ ತೀರಿಸೋಕೂ ಆಗಲ್ಲ ಅಂದಾಗ ಆ ದೇಶದ ಎಲೆಕ್ಷನ್​​ನಲ್ಲಿ ಇಂಟರ್​​​ಫೀಯರ್ ಆಗಿ. ತನ್ನ ಪರವಾದ ಸರ್ಕಾರವನ್ನ ರಚಿಸಿಕೊಂಡು, ವಿದೇಶಿ ನೀತಿಯನ್ನೂ ಬದಲಾಯಿಸಿ ಇಡೀ ದೇಶವನ್ನ ತನ್ನ ಕಂಟ್ರೋಲ್​​ನಲ್ಲಿಟ್ಟುಕೊಳ್ಳೋದು ಚೀನಾ ಕುತಂತ್ರ.

ಹೋಗ್ಲಿ.. ಮಾಲ್ಡೀವ್ಸ್​ ಕಥೆ ಏನು ಬೇಕಾದ್ರೂ ಆಗಲಿ ಅಂತಾ ನಾವೇನು ಸುಮ್ನಿರೋಕೂ ಆಗಲ್ಲ. ಯಾಕಂದ್ರೆ ಇದು ಭಾರತಕ್ಕೆ ಬಾರಿಸಿರೋ ಮತ್ತೊಂದು ಎಚ್ಚರಿಕೆ ಗಂಟೆಯೇ. ಮಾಲ್ಡೀವ್ಸ್ ಚೀನಾ ತೆಕ್ಕೆಗೆ ಬಿದ್ದಿದೆ ಅಂದ್ರೆ, ನಮ್ಮ ಬುಡಕ್ಕೆ ಬೆಂಕಿ ಬಿದ್ದಿದೆ ಅಂತಾನೆ ಅರ್ಥ. ಭಾರತದ ಸುತ್ತಲೂ ಚೀನಾ ಬಾಹುವನ್ನ ವಿಸ್ತರಿಸ್ತಾನೆ ಇದೆ.

ಲಕ್ಷದ್ವೀಪದಲ್ಲಿ ಸೇನೆಯನ್ನ ಕೂಡ ನಿಯೋಜಿಸಿ, ಹಿಂದೂ ಮಹಾಸಾಗರದ ಮೇಲಿನ ಭದ್ರತೆಯನ್ನ ಬಲಪಡಿಸಲೇಬೇಕಿದೆ. ಇದೇ ಕಾರಣಕ್ಕೆ ಪ್ರಧಾನಿ ಮೋದಿ ಜನವರಿ 2ರಂದು ಲಕ್ಷಾದ್ವೀಪಕ್ಕೆ ಭೇಟಿ ನೀಡಿರೋದು. ಸುಮ್ನೆ ನೀರಲ್ಲಿ ಮುಳುಗಿ, ಫೋಟೋಗೆ ಪೋಸ್​ ಕೊಟ್ಟು, ಸೋಷಿಯಲ್​​ ಮೀಡಿಯಾದಲ್ಲಿ ಅಪ್ಲೋಡ್​​ ಮಾಡೋಕೆ ಹೋಗಿರೋದಲ್ಲ. ಇವೆಲ್ಲವೂ ಭಾರತದ ಸ್ಟ್ರ್ಯಾಟಜಿಯ ಸಣ್ಣ ಭಾಗವಷ್ಟೇ. ಮಾಲ್ಡೀವ್ಸ್​​ಗೆ ಪರ್ಯಾಯವಾಗಿ ನಮ್ಮಲ್ಲೂ ಟೂರಿಸ್ಟ್ ಡೆಸ್ಟಿನೇಶನ್ ಇದೆ ಅನ್ನೋ ಮೆಸೇಜ್ ಪಾಸ್ ಮಾಡಿ ಈಗಾಗ್ಲೇ ಮಾಲ್ಡೀವ್ಸ್​​ ಪ್ರವಾಸೋದ್ಯಮಕ್ಕೆ ಹೊಡೆತ ಕೊಟ್ಟಾಗಿದೆ. ಆದ್ರೆ, ಅಸಲಿ ಆಟ ಈಗಷ್ಟೇ ಶುರುವಾಗಿದ್ದು, ಮುಂದಿನ ದಿನಗಳಲ್ಲಿ ಭಾರತ ಮತ್ತು ಚೀನಾ ಮಧ್ಯೆ ಸಾಕಷ್ಟು ಡೆವಲಪ್​ಮೆಂಟ್​ಗಳಾಗಲಿದೆ. ಹಿಂದೂ ಮಹಾಸಾಗರದ ಅಧಿಪತ್ಯಕ್ಕಾಗಿ ಏಷ್ಯಾದ ಎರಡು ಬಲಿಷ್ಠ ರಾಷ್ಟ್ರಗಳ ನಡುವಿನ ಈ ಗುದ್ದಾಟ ಇನ್ನೊಂದು ಲೆವೆಲ್​ಗೆ ತಲುಪೋದ್ರಲ್ಲಿ ಯಾವುದೇ ಅನುಮಾನ ಇಲ್ಲ.

Sulekha