ಸೀರಿಯಲ್, ಸಿನಿಮಾ ನೋಡುವಾಗ ಅಳು ಬರುತ್ತದೆಯಾ – ಸಣ್ಣ ಪುಟ್ಟ ವಿಚಾರಗಳಿಗೂ ಕಣ್ಣೀರು ಹಾಕುತ್ತೀರಾ?

ಸೀರಿಯಲ್, ಸಿನಿಮಾ ನೋಡುವಾಗ ಅಳು ಬರುತ್ತದೆಯಾ – ಸಣ್ಣ ಪುಟ್ಟ ವಿಚಾರಗಳಿಗೂ ಕಣ್ಣೀರು ಹಾಕುತ್ತೀರಾ?

ಕೆಲವರು ಎಂತೆಂಥಾ ವಿಚಾರಗಳನ್ನು ಎದುರಿಸುತ್ತಾರೆ. ಆದರೆ ಸಣ್ಣ ಪುಟ್ಟ ವಿಚಾರಗಳಿಗೆ ಎಮೋಷನಲ್ ಆಗಿ ಬಿಡುತ್ತಾರೆ. ಚಿಕ್ಕ ಪುಟ್ಟ ವಿಚಾರಗಳನ್ನು ಮನಸಿಗೆ ತೆಗೆದುಕೊಂಡು ಸಂಕಟ ಪಡುತ್ತಾರೆ.

ಇದನ್ನೂ ಓದಿ : ಅದೃಷ್ಟ ಅಂದ್ರೆ ಇದಪ್ಪ.. ನಾಲ್ವರನ್ನ ಮದುವೆಯಾದ ಭೂಪ – ಒಂದೇ ಮಂಟಪದಲ್ಲಿ ವಧುಗಳ ಜೊತೆ ಸಪ್ತಪದಿ!

ಕೆಲವ್ರು ಎಂಥಾ ಪರಿಸ್ಥಿತಿಯಲ್ಲೂ ಕಣ್ಣೀರು ಹಾಕಲ್ಲ. ಇನ್ನೂ ಕೆಲವ್ರು ಸಣ್ಣಪುಟ್ಟ ವಿಚಾರಗಳಿಗೂ ಅಳ್ತಾರೆ. ಸ್ವಲ್ಪ ದಪ್ಪ ಆಗಿದ್ದೀಯಾ ಅಥವಾ ಸಣ್ಣ ಆಗಿದ್ದೀಯಾ ಅಂದ್ರೂ ಕಣ್ಣೀರಾಕ್ತಾರೆ. ಅಷ್ಟೇ ಯಾಕೆ ಬೇರೆಯವರು ತಮ್ಮ ಕಷ್ಟ ಹೇಳಿಕೊಂಡ್ರೂ ಸಂಕಟ ಪಡ್ತಾರೆ. ಇನ್ನು ಸೀರಿಯಲ್, ಸಿನಿಮಾಗಳಲ್ಲಿ ಎಮೋಷನ್ ಸೀನ್ ಬಂದ್ರಂತೂ ಕಣ್ಣಲ್ಲಿ ಗಂಗಾಮಾತೆ ಹರಿದು ಹೋಗ್ತಾಳೆ. ಇಂಥವ್ರು ತಮಗಾದ ನೋವನ್ನು ಮರೆಯಲು ವರ್ಷಗಟ್ಟಲೇ ತೆಗೆದುಕೊಳ್ಳುತ್ತಾರೆ. ಚಿಂತೆ ಮಾಡುತ್ತಾರೆ. ಹೆಚ್ಚಿನ ಸಮಯವನ್ನು ಹಳೆಯ ನೆನಪಿನಲ್ಲೇ ಕಳೆಯಲು ಇಷ್ಟಪಡ್ತ್ತಾರೆ. ಹಾರ್ಮೋನ್​ಗಳ ಬದಲಾವಣೆ ಹಾಗೂ ಹಾರ್ಮೋನುಗಳ ಏರಿಳಿತಗಳಂತಹ ಜೈವಿಕ ಅಂಶಗಳು ಆಗಾಗ ಅಳುವಂತೆ ಮಾಡುತ್ತದೆ. ಹಾರ್ಮೋನುಗಳ ಬದಲಾವಣೆಯಿಂದಾಗಿಯೇ ಮಹಿಳೆಯರು ಹೆಚ್ಚು ಕಣ್ಣೀರಾಕುತ್ತಾರೆ.  ವಿಶೇಷವಾಗಿ ಋತುಚಕ್ರ, ಗರ್ಭಾವಸ್ಥೆ  ಹಂತಗಳಲ್ಲಿ ಹೆಚ್ಚು ಭಾವುಕರಾಗುತ್ತಾರೆ. ಇನ್ನು ಖಿನ್ನತೆಗೆ ಒಳಗಾಗಿರುವವರು ಅಳುವುದು ಸಾಮಾನ್ಯವಾಗಿರುತ್ತೆ. ಒಬೊಬ್ಬರೇ ಇದ್ದಾಗ ಹಾಡುಗಳನ್ನ ಕೇಳುತ್ತಾ, ಹಳೆಯ ಘಟನೆಗಳನ್ನ ನೆನೆಸಿಕೊಂಡು ದುಃಖ ಪಡ್ತಾರೆ. ಆದ್ರೆ ಇವ್ರು ಬೇರೆಯವ್ರ ಮುಂದೆ ತಮ್ಮ ನೋವನ್ನ ತೋರಿಸಿಕೊಳ್ಳಲ್ಲ.

Shantha Kumari