ವ್ಯಕ್ತಿಯ ಹತ್ತಿರದಿಂದಲೇ ಪಾಸ್‌ ಆಯ್ತು ದೈತ್ಯ ಹುಲಿ! – ಅಬ್ಬಬ್ಬಾ.. ಬೆಚ್ಚಿ ಬೀಳಿಸುವ ದೃಶ್ಯವಿದು!

ವ್ಯಕ್ತಿಯ ಹತ್ತಿರದಿಂದಲೇ ಪಾಸ್‌ ಆಯ್ತು ದೈತ್ಯ ಹುಲಿ! – ಅಬ್ಬಬ್ಬಾ.. ಬೆಚ್ಚಿ ಬೀಳಿಸುವ ದೃಶ್ಯವಿದು!

ಕಾಡು ಪ್ರಾಣಿಗಳು ಜನವಸತಿ ಪ್ರದೇಶಕ್ಕೆ ಸುಳಿದಾಡುವುದು ಹೊಸದೇನಲ್ಲ. ಆಹಾರ ಅರಸುತ್ತಾ ಪ್ರಾಣಿಗಳು ಗ್ರಾಮೀಣ ಪ್ರದೇಶಗಳಿಗೆ ಬರುತ್ತವೆ. ಇತ್ತೀಚೆಗೆ ಕಾಡು ಪ್ರಾಣಿಗಳು ನಗರ ಪ್ರದೇಶಕ್ಕೂ ಬರುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಲೇ ಇದೆ. ನಗರ ಪ್ರದೇಶಕ್ಕೆ ಬಂದು ಮನುಷ್ಯರ ಮೇಲೆ ದಾಳಿ ಮಾಡುತ್ತಿವೆ. ಕಾಡು ಪ್ರಾಣಿಗಳ ದಾಳಿಯಿಂದಾಗಿ ನೂರಾರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಸಾವಿರಾರು ಮಂದಿ ಗಾಯಗೊಂಡಿದ್ದಾರೆ.ಇದೀಗ ಇಲ್ಲೊಂದು ಹುಲಿಯೊಂದು ಜನವಸತಿ ಪ್ರದೇಶಕ್ಕೆ ಬಂದಿದೆ. ಹುಲಿ ಸನಿಹದಲ್ಲಿದ್ದರೂ ವ್ಯಕ್ತಿಯೊಬ್ಬರು ಬಚಾವ್‌ ಆಗಿದ್ದಾರೆ. ಇದರ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಭಾರಿ ವೈರಲ್‌ ಆಗಿದೆ.

ಇದನ್ನೂ ಓದಿ: ಹಣೆ ಮೇಲೆ ನೀರು ತುಂಬಿದ ಗ್ಲಾಸ್‌ ಇಟ್ಟು ಬ್ಯಾಲೆನ್ಸ್‌ ಮಾಡಿಕೊಂಡು ನಡೆದ ಶ್ವಾನ!

ರಕ್ಷಿತಾರಣ್ಯದ ಸನಿಹದಲ್ಲಿ ಅಥವಾ ಕಾಡಂಚಿನ ಗ್ರಾಮಗಳಲ್ಲಿ ಹುಲಿಗಳು ಗ್ರಾಮಕ್ಕೆ ಭೇಟಿ ನೀಡಿ ಭಯ ಮೂಡಿಸುವ ಘಟನೆಗಳು ಆಗಾಗ ನಡೆಯುತ್ತವೆ. ಕೆಲವೊಮ್ಮೆ ಹುಲಿಗಳು ಜನರ ಜೀವ ತೆಗೆದ ಉದಾಹರಣೆಗಳೂ ಬಹಳಷ್ಟಿವೆ. ಆದರೆ, ಒಂದಷ್ಟು ಸಂದರ್ಭದಲ್ಲಿ ಹುಲಿ ಸನಿಹದಲ್ಲಿ ಇದ್ದರೂ ಜೀವ ಉಳಿಸಿಕೊಂಡ ಅದೃಷ್ಟವಂತರೂ ಇದ್ದಾರೆ. ಅದಕ್ಕೆ ಸಾಕ್ಷಿ ಎಂಬಂತೆ ಇಲ್ಲೊಂದು ವಿಡಿಯೋ ಭಾರಿ ವೈರಲ್‌ ಆಗುತ್ತಿದೆ.

ಭಾರತೀಯ ಅರಣ್ಯ ಸೇವೆಗಳ ಅಧಿಕಾರಿ ಪರ್ವೀನ್ ಕಸ್ವಾನ್ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ವ್ಯಕ್ತಿಯೊಬ್ಬರು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವ ದೃಶ್ಯದ ಮೂಲಕ 41 ಸೆಕೆಂಡುಗಳ ಈ ಕ್ಲಿಪ್ ಶುರುವಾಗುತ್ತದೆ. ಹೀಗೆ ನಡೆದು ಕೊಂಡು ಹೋಗುವಾಗ ಈ ವ್ಯಕ್ತಿ ದಿಗಿಲುಗೊಳ್ಳುವ ಕ್ಷಣವೊಂದು ಎದುರಾಗುತ್ತದೆ. ಅದೇನೆಂದರೆ ಆ ವ್ಯಕ್ತಿಯ ಎದುರಿನಲ್ಲಿಯೇ ಹುಲಿಯೊಂದು ವೇಗವಾಗಿ ರಸ್ತೆ ದಾಡುತ್ತದೆ. ತನ್ನ ಸನಿಹದಲ್ಲಿಯೇ ಹುಲಿಯನ್ನು ಕಂಡ ತಕ್ಷಣ ಆ ವ್ಯಕ್ತಿ ಒಂದು ಕ್ಷಣ ಹಿಂದಕ್ಕೆ ಓಡಿ ಬರುತ್ತಾರೆ. ಆದರೆ, ಹುಲಿ ಮಾತ್ರ ಈ ವ್ಯಕ್ತಿಯತ್ತ ಗಮನವನ್ನು ಕೊಡದೆ ತನ್ನ ಪಾಡಿಗೆ ತಾನು ರಸ್ತೆ ದಾಟಿ ಮುಂದೆ ಸಾಗಿದೆ. `ಇವರು ಅದೃಷ್ಟಶಾಲಿ ವ್ಯಕ್ತಿ’ ಎಂದು ಕಸ್ವಾನ್ ಕ್ಯಾಪ್ಶನ್‌ನಲ್ಲಿ ಉಲ್ಲೇಖಿಸಿದ್ದಾರೆ.

ಸಹಜವಾಗಿಯೇ ಈ ವಿಡಿಯೋ ಎಲ್ಲರ ಗಮನ ಸೆಳೆದಿದೆ. ಹುಲಿ ಸನಿಹದಲ್ಲಿಯೇ ಸಾಗಿದರೂ ವ್ಯಕ್ತಿ ಅಪಾಯದಿಂದ ಪಾರಾಗಿದ್ದಕ್ಕೆ ಎಲ್ಲರೂ ಸಮಾಧಾನ ವ್ಯಕ್ತಪಡಿಸಿದ್ದಾರೆ. ಕೆಲವರು ಎಮೋಜಿಗಳ ಮೂಲಕ ತಮ್ಮ ಅಭಿಪ್ರಾಯವನ್ನು ಸೂಚಿಸಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಭಾರಿ ವೈರಲ್‌ ಆಗುತ್ತಿದೆ.

Shwetha M