ನವರಾತ್ರಿಯ ಆರನೇ ದಿನ ಕಾತ್ಯಾಯಿನಿ ದೇವಿಯ ಆರಾಧನೆ- ಚಿನ್ನದಂತೆ ಪ್ರಕಾಶಮಾನವಾಗಿ ಹೊಳೆಯುವ ದೇವಿಯ ವಿಶೇಷತೆಗಳೇನು?

ನವರಾತ್ರಿಯ ಆರನೇ ದಿನ ಕಾತ್ಯಾಯಿನಿ ದೇವಿಯ ಆರಾಧನೆ- ಚಿನ್ನದಂತೆ ಪ್ರಕಾಶಮಾನವಾಗಿ ಹೊಳೆಯುವ ದೇವಿಯ ವಿಶೇಷತೆಗಳೇನು?

ನವರಾತ್ರಿಯ ಆರನೇ ದಿನ ಕಾತ್ಯಾಯಿನಿ ದೇವಿಯನ್ನು ಪೂಜಿಸಲಾಗುತ್ತದೆ. ನವರಾತ್ರಿ ಆರನೇ ದಿನದಂದು ಕಾತ್ಯಾಯಿನಿ ದೇವಿಯನ್ನು ಪೂಜಿಸುವುದು ಹೇಗೆ..? ಶುಭ ಮುಹೂರ್ತ ಯಾವುದು..? ದೇವಿಯ ಮಂತ್ರ, ಮಹತ್ವ, ಸ್ವರೂಪ ಮತ್ತು ಕಥೆಗಳ ಬಗ್ಗೆ ಇಲ್ಲಿದೆ ವಿವರ.

ಇದನ್ನೂ ಓದಿ: ನವರಾತ್ರಿಯ 5ನೇ ದಿನ ಸ್ಕಂದಮಾತೆಯ ಆರಾಧನೆ – ಈ ತಾಯಿಯನ್ನು ಪೂಜಿಸಿದರೆ ಮನೆಯಲ್ಲಿ ಸಂಪತ್ತು ಹೆಚ್ಚಾಗುತ್ತದೆ..

ನವರಾತ್ರಿಯ ಆರನೇ ದಿನವನ್ನು ಕಾತ್ಯಾಯಿನಿ ದೇವಿ ಎಂದು ಕರೆಯಲ್ಪಡುವ ದುರ್ಗಾ ದೇವಿಯ ಉಗ್ರ ಯೋಧ ಅವತಾರಕ್ಕೆ ಸಮರ್ಪಿಸಲಾಗಿದೆ. ಸಿಂಹದ ಮೇಲೆ ಸವಾರಿ ಮಾಡುವ ಮತ್ತು ಕಮಲದ ಹೂವು, ಖಡ್ಗ ಮತ್ತು ಶಿವನ ತ್ರಿಶೂಲ ಸೇರಿದಂತೆ ಬಹು ಆಯುಧಗಳನ್ನು ತನ್ನ ಕೈಗಳಲ್ಲಿ ಹಿಡಿದಿರುವ ಮಹಿಷಾಸುರಮರ್ದಿನಿಯನ್ನು ಷಷ್ಠಿಯಂದು ಅಂದರೆ ನವರಾತ್ರಿ ಹಬ್ಬದ 6ನೇ ದಿನದಂದು ಪೂಜಿಸಲಾಗುತ್ತದೆ. ದುರ್ಗಾ ದೇವಿಯ ಆರನೇ ಅವತಾರವಾದ ಕಾತ್ಯಾಯಿನಿ ದೇವಿಯನ್ನು ಬ್ರಿಜ್ ಮಂಡಲದ ಅಧಿದೇವತೆ, ಆಕೆಯನ್ನು ಯುದ್ಧದ ದೇವತೆ ಎಂದೂ ಕರೆಯುತ್ತಾರೆ. ತಾಯಿಯ ರೂಪವು ಚಿನ್ನದಂತೆ ಪ್ರಕಾಶಮಾನವಾಗಿದೆ ಮತ್ತು ಅತ್ಯಂತ ದೈವಿಕವಾಗಿದೆ. ತಾಯಿಗೆ ನಾಲ್ಕು ತೋಳುಗಳಿವೆ, ಆಕೆ ತನ್ನ ನಾಲ್ಕು ಕೈಗಳಲ್ಲಿ ಒಂದು ಕೈಯಲ್ಲಿ ಕಮಲದ ಹೂವನ್ನು, ಮತ್ತೊಂದರಲ್ಲಿ ಖಡ್ಗವನ್ನು ಮತ್ತು ಇನ್ನೆರೆಡು ಕೈಗಳಲ್ಲಿ ಭಕ್ತರಿಗೆ ಆಶೀರ್ವಾದವನ್ನು ಸುರಿಸುವ ಮುದ್ರೆಯನ್ನು ಹೊಂದಿದ್ದು, ಸಿಂಹಾಸನರೂಢಳಾಗಿದ್ದಾಳೆ. ತಾಯಿಗೆ ಹಳದಿ ಬಣ್ಣ ಎಂದರೆ ತುಂಬಾ ಇಷ್ಟ. ಶಾಸ್ತ್ರಗಳ ಪ್ರಕಾರ ತಾಯಿಯನ್ನು ಪೂಜಿಸಿದರೆ ಹೆಣ್ಣು ಮಕ್ಕಳ ವಿವಾಹವು ಶೀಘ್ರದಲ್ಲೇ ಪೂರ್ಣಗೊಳ್ಳುತ್ತದೆ ಮತ್ತು ಸೂಕ್ತ ವರ ದೊರೆಯುತ್ತಾನೆ ಎನ್ನುವ ನಂಬಿಕೆಯಿದೆ. ದೇವಿಯ ಆರನೇ ರೂಪವಾದ ತಾಯಿ ಕಾತ್ಯಾಯಿನಿಯನ್ನು ಶ್ರೀ ರಾಮ ಮತ್ತು ಶ್ರೀ ಕೃಷ್ಣ ಇಬ್ಬರೂ ಪೂಜಿಸುತ್ತಿದ್ದರು. ಶ್ರೀಕೃಷ್ಣನನ್ನು ಪಡೆಯಲು ಬ್ರಜ್ನ ಗೋಪಿಗಳು ಈ ದೇವಿಯನ್ನು ಪೂಜಿಸಿದರು ಎಂಬ ದಂತಕಥೆಯಿದೆ. ಕತ್ಯಾಯಿನಿ ದೇವಿಯ ಕಥೆ ಭಾಗವತ, ಮಾರ್ಕಂಡೇಯ ಮತ್ತು ಸ್ಕಂದ ಪುರಾಣಗಳಲ್ಲಿ ಉಲ್ಲೇಖವಾಗಿದೆ. ದೇವಿ ದುರ್ಗೆಯ ಪರಮ ಭಕ್ತನಾದ ಮಹರ್ಷಿ ಕಾತ್ಯಾಯಿನ ದಂಪತಿಗೆ ಮಕ್ಕಳಿರಲಿಲ್ಲ. ಅವರು ದೇವಿಯನ್ನು ಕುರಿತು ತಪಸ್ಸು ಕೈಗೊಂಡಾಗ ಆಕೆ ಪ್ರತ್ಯಕ್ಷವಾಗಿ ತಾನು ಕಾತ್ಯಾಯನ ಮಹರ್ಷಿಯ ಮಗಳಾಗಿ ಜನಿಸುವುದಾಗಿ ಆಶೀರ್ವಾದ ಮಾಡಿದಳು ಎಂದು ಪುರಾಣದ ಕಥೆ ಹೇಳುತ್ತದೆ. ತಾಯಿ ಕಾತ್ಯಾಯನಿ ದೇವಿಯ ಅವತಾರದ ಉದ್ದೇಶವು ಮಹಿಷಾಸುರನನ್ನು ಸಂಹಾರ ಮಾಡುವುದಾಗಿತ್ತು. ಋಷಿಮುನಿಗಳು ಪೂಜಿಸಿದ ನಂತರ ಅವತಾರ ಎತ್ತಿದ ತಾಯಿ ಕಾತ್ಯಾಯನಿಯು ಅಶ್ವಿನಿ ಮಾಸದ ಶುಕ್ಲ ನವಮಿ ತಿಥಿಯಲ್ಲಿ ಮಹಿಷನೊಂದಿಗೆ ಯುದ್ಧ ಮಾಡಿ ಸಂಹಾರ ಮಾಡಿದಳು. ದಶಮಿ ದಿನದಂಧು ದೇವಿಯು ಜೇನುತುಪ್ಪ ತುಂಬಿದ ವೀಳ್ಯದ ಎಲೆಯನ್ನು ಸೇವಿಸಿ ನಂತರ ಮಹಿಷನನ್ನು ಕೊಂದಳು ಎಂದು ಪುರಾಣದ ಕಥೆಗಳು ಹೇಳುತ್ತವೆ. ಇದಾದ ನಂತರ ತಾಯಿಯನ್ನು ಮಹಿಷಾಸುರ ಮರ್ದಿನಿ ಎನ್ನುವ ಹೆಸರಿನಿಂದ ಕರೆಯಲಾಯಿತು. ಧಾರ್ಮಿಕ ಪುರಾಣಗಳ ಪ್ರಕಾರ, ಕಾತ್ಯಾಯಿನಿಯು ದೇವತೆಗಳ ಸಂಯೋಜಿತ ಶಕ್ತಿಗಳಿಂದ ಪ್ರಕಟವಾದವಳು. ಸಾವಿರ ಸೂರ್ಯರು, ಮೂರು ಕಣ್ಣುಗಳು, ಕಪ್ಪು ಕೂದಲು ಮತ್ತು ಬಹು ಕೈಗಳ ಶಕ್ತಿಯೊಂದಿಗೆ, ಕಾತ್ಯಾಯಿನಿ ದೇವಿಯು ಮಹಿಷಾಸುರ ಎಂಬ ರಾಕ್ಷಸನನ್ನು ವಧಿಸಲು ಭೂಮಿಗೆ ಇಳಿದಳು. ಹಿಂದೂ ಧರ್ಮದಲ್ಲಿ, ಮಹಿಷಾಸುರನು ಶಕ್ತಿಯುತ ಅರ್ಧ-ಮಾನವ ಅರ್ಧ-ಎಮ್ಮೆ ರಾಕ್ಷಸನಾಗಿದ್ದನು, ಅವನು ತನ್ನ ಆಕಾರವನ್ನು ಬದಲಾಯಿಸುವ ಸಾಮರ್ಥ್ಯವನ್ನು ಕೆಟ್ಟ ಕಾರ್ಯಕ್ಕಾಗಿ ಬಳಸಿದನು. ಅವನ ಕಿರುಕುಳದಿಂದ ಕೋಪಗೊಂಡ ಎಲ್ಲಾ ದೇವರುಗಳು ಕಾತ್ಯಾಯಿನಿಯನ್ನು ಸೃಷ್ಟಿಸಲು ತಮ್ಮ ಶಕ್ತಿಯನ್ನು ಒಂದುಗೂಡಿಸಿದರು ಮತ್ತು ದೇವಿ ಮತ್ತು ರಾಕ್ಷಸನ ನಡುವಿನ ಯುದ್ಧವನ್ನು ‘ಕೆಟ್ಟದ ಮೇಲೆ ಒಳ್ಳೆಯದ ವಿಜಯ’ ಎಂದು ಗುರುತಿಸಲಾಗಿದೆ. ವಂಚಕ ರಾಕ್ಷಸನ ಸಂಹಾರಕಿ ಕಾತ್ಯಾಯಿನಿಯನ್ನು ಮಹಿಷರ್ಸುರಮರ್ದಿನಿ ಎಂದೂ ಕರೆಯಲಾಯಿತು ಮತ್ತು ಈ ಘಟನೆಯು ಹಿಂದೂ ಧರ್ಮದಲ್ಲಿ ಆಳವಾದ ಸಂಕೇತವನ್ನು ಹೊಂದಿದೆ. ಕಾತ್ಯಾಯಿನಿ ದೇವಿಗೆ ಬಹು ಕೈಗಳಿವೆ ಎಂದು ಹೇಳಲಾಗುತ್ತದೆ. ಶಿವನು ಅವಳಿಗೆ ತ್ರಿಶೂಲವನ್ನು ಕೊಟ್ಟರೆ, ಭಗವಾನ್ ವಿಷ್ಣುವು ಸುದರ್ಶನ ಚಕ್ರವನ್ನು, ಅಗ್ನಿ ದೇವನು ಬಾಣವನ್ನು, ವಾಯುದೇವನು ಬಿಲ್ಲು, ಇಂದ್ರ ದೇವನು ಒಂದು ಗುಡುಗು, ಬ್ರಹ್ಮದೇವನು ನೀರಿನ ಕಲಶದೊಂದಿಗೆ ರುದ್ರಾಕ್ಷಿಯನ್ನು ನೀಡಿದರು.

Sulekha