ಮಾಲ್ಡೀವ್ಸ್ ಅಧ್ಯಕ್ಷ ಮುಯಿಜು ಬುಡಕ್ಕೆ ಬೆಂಕಿ..! – ಭಾರತ ಹೆಣೆದಿರುವ ರಣತಂತ್ರ ಏನು?

ಮಾಲ್ಡೀವ್ಸ್ ಅಧ್ಯಕ್ಷ ಮುಯಿಜು ಬುಡಕ್ಕೆ ಬೆಂಕಿ..! – ಭಾರತ ಹೆಣೆದಿರುವ ರಣತಂತ್ರ ಏನು?

ಭಾರತ.. ಚೀನಾ.. ಮಾಲ್ಡೀವ್ಸ್.. ಶ್ರೀಲಂಕಾ.. ಏಷ್ಯಾದ ಈ ನಾಲ್ಕೂ ರಾಷ್ಟ್ರಗಳ ನಡುವೆ ಈಗ ಅತ್ಯಂತ ಮಹತ್ವದ ಬೆಳವಣಿಗೆಗಳು ನಡೀತಾ ಇದೆ. ಇದು ಭಾರತ ಮತ್ತು ಚೀನಾ ನಡುವೆ ನಡೀತಾ ಇರೋ ಪವರ್​​ ಕ್ಲ್ಯಾಶ್ ಆಗಿದ್ರೂ ಕೂಡ ಇಲ್ಲಿ ಮಾಲ್ಡೀವ್ಸ್ ಮತ್ತು ಶ್ರೀಲಂಕಾ ಅನ್ನೋದು ಎರಡು ರಾಷ್ಟ್ರಗಳ ಪಾಲಿಗೆ ದಾಳಗಳಷ್ಟೇ. ಮಾಲ್ಡೀವ್ಸ್​ನ್ನ ಚೀನಾ ಬುಟ್ಟಿಗೆ ಹಾಕಿಕೊಳ್ತಿದ್ರೆ, ಇತ್ತ ಶ್ರೀಲಂಕಾದ ಮೇಲೆ ಭಾರತ ಇನ್​​​ಫ್ಲುಯೆನ್ಸ್​ ಮಾಡ್ತಾ ಇದೆ. ಚೀನಾದ ಹಿಡಿತಕ್ಕೆ ಸಿಲುಕಿರೋ ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಜು ಭಾರತದ ವಿರುದ್ಧ ಈಗಾಗ್ಲೇ ತಿರುಗಿ ಬಿದ್ದಿದ್ದಾರೆ. ನಮ್ಮ ಸೈನಿಕರಿಗೂ ಅಲ್ಲಿಂದ ಜಾಗ ಖಾಲಿ ಮಾಡುವಂತೆ ಅರಚಾಡ್ತಾ ಇದ್ದಾರೆ. ಮತ್ತೊಂದೆಡೆ ಚೀನಾ ಮಾಲ್ಡೀವ್ಸ್​ನತ್ತ ತನ್ನ ಸ್ಪೈ ಶಿಪ್​​ನ್ನ ಕಳುಹಿಸಿಕೊಟ್ಟಿದೆ. ಚೀನಾ ಗೂಢಾಚಾರಿಕೆ ಹಡಗು ತಲುಪೋ ಮುನ್ನವೇ ಮಾಲ್ಡೀವ್ಸ್​ ಸರ್ಕಾರ ವೆಲ್​​ಕಮ್​ ಮಾಡಿಕೊಂಡಿದೆ. ಹಾಗಂತಾ ಭಾರತ ಏನೂ ಸುಮ್ನೆ ಕುಳಿತಿಲ್ಲ. ಶ್ರೀಲಂಕಾದ ಮೂಲಕ ಚೀನಾ ಮತ್ತು ಮಾಲ್ಡೀವ್ಸ್​ಗೆ ಭಾರತ ಕೌಂಟರ್​​ ಸ್ಟ್ರ್ಯಾಟಜಿ ಮಾಡಿದೆ. ಮಾಲ್ಡೀವ್ಸ್ ಅಧ್ಯಕ್ಷ ಮುಯಿಜು ಬುಡಕ್ಕೆ ಬೆಂಕಿ ಬೀಳೋ ಹಾಗೆ ಭಾರತ ರಣತಂತ್ರ ಹೆಣೆದಿದೆ. ಇದ್ರ ಜೊತೆಗೆ 2022ರಲ್ಲಿ ಶ್ರೀಲಂಕಾದಲ್ಲಿ ಜನ ದಂಗೆ ಎದ್ದಂತೆ ಈಗ ಮಾಲ್ಡೀವ್ಸ್​ನಲ್ಲೂ ಕ್ರಾಂತಿಯಾಗುತ್ತಾ ಅನ್ನೋ ಅನುಮಾನ ಎದ್ದಿದೆ.

ಇದನ್ನೂ ಓದಿ: ಚೀನಾದ ಸ್ಪೈ ಶಿಪ್ ಮಾಲ್ಡೀವ್ಸ್‌ನತ್ತ ಹೊರಟಿರೋದ್ಯಾಕೆ? – ಚೀನಾದ ಪ್ಲ್ಯಾನ್ ಏನಿರಬಹುದು?

ಕ್ಸಿಯಾಂಗ್ ಯಾಂಗ್ ಹಾಂಗ್ 03.. ಚೀನಾದ ಈ ಸ್ಪೈ ಶಿಪ್ ಭಾರತದಿಂದ ಕೇವಲ 861 ಕಿಲೋ ಮೀಟರ್​ ದೂರದಲ್ಲಿರೋ ಮಾಲ್ಡೀವ್ಸ್​ನತ್ತ ಹೋಗ್ತಾ ಇದೆ. ಯಾವುದೇ ಕ್ಷಣದಲ್ಲಿ ಬೇಕಾದ್ರೂ ಮಾಲ್ಡೀವ್ಸ್​ನ್ನ ರೀಚ್ ಆಗಬಹುದು. ಹಿಂದೂ ಮಹಾಸಾಗರವನ್ನ ಮ್ಯಾಪಿಂಗ್ ಮಾಡೋದು ಮತ್ತು ಭಾರತ ವಿರುದ್ಧ ಗೂಢಾಚಾರಿಕೆ ಮಾಡೋಕೆ ಅಂತಾನೆ ಚೀನಾ ತನ್ನ ಗೂಢಾಚಾರಿಕೆ ಹಡಗನ್ನ ಮಾಲ್ಡೀವ್ಸ್​​ಗೆ ಕಳುಹಿಸಿದೆ. ಹಿಂದೂ ಮಹಾಸಾಗರದ ಮೂಲಕವೂ ಭಾರತಕ್ಕೆ ಚೀನಾದ ಇಷ್ಟೊಂದು ಥ್ರೆಟ್ ಇರೋವಾಗ ಸುಮ್ನೆ ನೋಡಿಕೊಂಡು ಕುಳಿತುಕೊಳ್ಳೋದಿಕ್ಕಂತೂ ಸಾಧ್ಯವಿಲ್ಲ. ಹೀಗಾಗಿ ಭಾರತ ಸರ್ಕಾರ ನಮ್ಮ ನೌಕಾಪಡೆಯ ಐಎನ್​ಎಸ್ ಕರಂಜ್​ ಸಬ್​​ಮರೀನ್​ನನ್ನ ಶ್ರೀಲಂಕಾಗೆ ಕಳುಹಿಸಿಕೊಟ್ಟಿತ್ತು. ಅತ್ತ ಮಾಲ್ಡೀವ್ಸ್​​ಗೆ ಚೀನಾ ಗೂಢಾಚಾರಿಕೆ ಹಡಗು ನುಗ್ತಾ ಇದ್ರೆ, ಇತ್ತ ಭಾರತದ ಸಬ್​​​ಮರೀನ್ ಶ್ರೀಲಂಕಾಗೆ ಹೋಗಿ ಬಂದಿತ್ತು. ಚೀನಾ ಸ್ಪೈ ಶಿಪ್ ಮಾಲ್ಡೀವ್ಸ್​​ನ್ನ ತಲುಪೋ ಮುನ್ನವೇ ನಮ್ಮ ಐಎನ್​ಎಸ್ ಕರಂಜ್​ ಸಬ್​​ಮರೀನ್​ ಕೊಲಂಬೋದ ಬಂದರನ್ನ ರೀಚ್ ಆಗಿತ್ತು. ಶ್ರೀಲಂಕಾ ನೌಕಾಪಡೆ ನಮ್ಮ ಸಬ್​​ಮರೀನ್​​ಗೆ ಸ್ವಾಗತ ಕೂಡ ಕೂಡ ನೀಡಿತ್ತು. ಕೊಲಂಬೋದಲ್ಲಿರೋ ಭಾರತದ ರಾಯಭಾರ ಅಧಿಕಾರಿ ಸಂತೋಷ್ ಝಾ ನಮ್ಮ ಸಬ್​​ಮರೀನ್​​​ಗೆ ಭೇಟಿ ಕಮಾಂಡರ್​ಗಳ ಜೊತೆಗೆ ಮಾತುಕತೆ ಕೂಡ ನಡೆಸಿದ್ದಾರೆ. ನಮ್ಮ ಸಬ್​ಮರೀನ್​ ಏನು ಶ್ರೀಲಂಕಾದಲ್ಲೇ ದಿನಗಟ್ಟಲೆ ಠಿಕಾಣಿ ಹೂಡಿಲ್ಲ. ಕೇವಲ ಎರಡು ದಿನಗಳಲ್ಲೇ ಅಲ್ಲಿಂದ ವಾಪಸ್ ಹೊರಟಿತ್ತು. ಇಲ್ಲಿ ಹಿಂದೂ ಮಹಾಸಾಗರದ ಮೂಲಕ ಶ್ರೀಲಂಕಾಗೂ ರಕ್ಷಣೆ ನೀಡೋ ಬಗ್ಗೆ ಚೀನಾಗೆ ಮೆಸೇಜ್​ ಪಾಸ್ ಮಾಡೋಕೆ ಅಂತಾನೆ ಭಾರತ ಕೊಲಂಬೋಗೆ ಸಬ್​​ಮರೀನ್​ನನ್ನ ಕಳುಹಿಸಿತ್ತು. ಈಗ ಮಾಲ್ಡೀವ್ಸ್​ ತಲುಪಿರೋ ಚೀನಾದ ಅದೇ ಗೂಢಾಚಾರಿಕೆ ಹಡಗು 2023ರಲ್ಲಿ ಶ್ರೀಲಂಕಾಗೂ ತೆರಳಿತ್ತು. ಸುಮಾರು 17 ದಿನಗಳ ಕಾಲ ಕೊಲಂಬೋ ಬಂದರಿನಲ್ಲೇ ಠಿಕಾಣಿ ಹೂಡಿತ್ತು.  ಭಾರತ ಮತ್ತು ಅಮೆರಿಕದ ಒತ್ತಡಕ್ಕೆ ಬಿದ್ದು ಇನ್ನು ನಾವು ಜಾಗ ಕೊಡಲ್ಲ ಅಂತಾ ಶ್ರೀಲಂಕಾ ಚೀನಾ ಸ್ಪೈ ಶಿಪ್​ಗೆ ಜಾಗ ಖಾಲಿ ಮಾಡೋಕೆ ಸೂಚಿಸಿತ್ತು. ಅಷ್ಟೇ ಅಲ್ಲ ಭವಿಷ್ಯದಲ್ಲೂ ಚೀನಾ ಸೇನಾ ಚಟುವಟಿಕೆಗಳಿಗೆ ಅವಕಾಶ ಕೊಡೋದಿಲ್ಲ ಅಂತಾ ಶ್ರೀಲಂಕಾ ಸರ್ಕಾರ ಹೇಳಿದೆ. ಹೀಗಾಗಿಯೇ ಕ್ಸಿ ಜಿನ್​​​ಪಿಂಗ್ ಈಗ ಮಾಲ್ಡೀವ್ಸ್​ನತ್ತ ಹೊರಳಿರೋದು. ಅಂದು ಚೀನಾ ಸ್ಪೈ ಶಿಪ್​​ ಬಂದಿದ್ದ ಕೊಲಂಬೋ ಬಂದರಿಗೆ ಈಗ ಭಾರತ ತನ್ನ ಸಬ್​​ಮರೀನ್ ಕಳುಹಿಸಿ ಚೀನಾಗೆ ಸಂದೇಶ ರವಾನಿಸಿದೆ.

ಮಾಲ್ಡೀವ್ಸ್ ರಾಜಧಾನಿ ಮಾಲೆಯ ಬಂದರಿನಲ್ಲಿ ಚೀನಾದ ಗೂಢಾಚಾರಿಕೆ ಹಡಗು ಈಗ ಠಿಕಾಣಿ ಹೂಡ್ತಾ ಇದೆ. ಹೀಗಾಗಿ ಭಾರತೀಯ ನೌಕಾಪಡೆ ಈಗ ಚೀನಾ ಸ್ಪೈಶಿಪ್​ ಮೇಲೆ ತೀವ್ರ ನಿಗಾ ವಹಿಸಿದೆ. ಚೈನೀಸ್ ಹಡಗನ್ನ ನಿರಂತರವಾಗಿ ಟ್ರ್ಯಾಕ್ ಮಾಡಲಾಗ್ತಿದೆ. ಹಿಂದೂ ಮಹಾಸಾಗರದ ಮೇಲೆ ಹಿಡಿತ ಸಾಧಿಸೋದಕ್ಕಾಗಿ ಚೀನಾ ಇನ್ನಿಲ್ಲದ ಸರ್ಕಸ್ ಮಾಡ್ತಿದೆ. ಭಾರತದ ಸುತ್ತಲಿರೋ ರಾಷ್ಟ್ರಗಳನ್ನ ತನ್ನ ಕಂಟ್ರೋಲ್​​ನಲ್ಲಿಟ್ಟುಕೊಳ್ಳೋಕೆ ಪ್ರಯತ್ನಿಸ್ತಿದೆ. ಇದೇ ಕಾರಣಕ್ಕೆ ಹಿಂದೂ ಮಹಾಸಾಗರದಲ್ಲಿ ಚೀನಾ ಏನೇ ಕಾರುಬಾರು ಮಾಡೋಕೆ ಮುಂದಾದ್ರೂ ಭಾರತ ಹೈಅಲರ್ಟ್ ಆಗುತ್ತೆ.

ಈ ಎಲ್ಲಾ ಬೆಳವಣಿಗೆಗಳ ನಡುವೆಯೇ ಇಲ್ಲೊಂದು ಸೂಕ್ಷ್ಮ ಸ್ಟ್ರ್ಯಾಟಜಿಕಲ್​​ ಬದಲಾವಣೆಯಾಗಿರೋದನ್ನ ನಾವು ಗಮನಿಸಲೇಬೇಕು. ವರ್ಷದ ಹಿಂದೆ ಇದೇ ಶ್ರೀಲಂಕಾ ಚೀನಾದ ಕೈಗೊಂಬೆಯಾಗಿತ್ತು. ಚೀನಾ ತಾಳಕ್ಕೆ ತಕ್ಕಂತೆ ಕುಣಿಯುತ್ತಿತ್ತು. ಈಗಲೂ ಅಷ್ಟೇ, ಚೀನಾದ ಕಪಿಮುಷ್ಠಿಯಿಂದ ಸಂಪೂರ್ಣವಾಗಿ ಹೊರ ಬರೋಕೆ ಶ್ರೀಲಂಕಾಗೆ ಸಾಧ್ಯವಾಗಿಲ್ಲ. ಸದ್ಯಕ್ಕಂತೂ ಆಗೋದೆ ಇಲ್ಲ ಬಿಡಿ. ಯಾಕಂದ್ರೆ ಅಷ್ಟರ ಮಟ್ಟಿಗೆ ಶ್ರೀಲಂಕಾ ಚೀನಾದ ಜೊತೆ ಸಾಲ ಮಾಡಿಕೊಂಡಿದೆ. ಸಾಲದ ಸುಳಿಯಲ್ಲಿ ಸಿಲುಕಿ ಆಳಕ್ಕೆ ಹೋಗಿದೆ. ಸಾಲವಷ್ಟೇ ಸಾಲದ್ದಕ್ಕೆ ಶ್ರೀಲಂಕಾ ತನ್ನ ಒಂದು ಬಂದರನ್ನ ಕೂಡ ಚೀನಾಗೆ 99 ವರ್ಷಗಳ ಕಾಲ ಲೀಸ್​ಗೆ ಕೊಟ್ಟಿದೆ. ಆದ್ರೂ ತನ್ನ ನೆಲದಲ್ಲಿ ಚೀನಾದ ಸೇನಾ ಚಟುವಟಿಕೆಗೆ ಅವಕಾಶ ನೀಡಬಾರದು ಅಂತಾ ಶ್ರೀಲಂಕಾ ಒಂದಷ್ಟು ಹೋರಾಟ ಮಾಡೋ ಪ್ರಯತ್ನ ಮಾಡ್ತಿದೆ. ಚೀನಾವನ್ನೇ ಸಂಪೂರ್ಣ ಡಿಪೆಂಡ್ ಆಗದೆ ಇರೋಕೆ ಯತ್ನಿಸ್ತಿದೆ. ನಿಮಗೆ ನೆನಪಿರಬಹುದು, 2022-2023ರಲ್ಲಿ ಆರ್ಥಿಕವಾಗಿ ಶ್ರೀಲಂಕಾ ಪಾತಾಳಕ್ಕೆ ಕುಸಿದಿತ್ತು. ಪೆಟ್ರೋಲ್​, ಆಹಾರ ಪದಾರ್ಥ ಎಲ್ಲದರ ಬೆಲೆಗೂ ದುಪ್ಪಟ್ಟಾಗಿತ್ತು. ಒಂದು ಹೊತ್ತಿನ ಊಟಕ್ಕೂ ಲಂಕನ್ನರು ಒದ್ದಾಡಿದ್ರು. ಸರ್ಕಾರದ ವಿರುದ್ಧ ರೊಚ್ಚಿಗೆದ್ದು, ಅಧ್ಯಕ್ಷರು, ಪ್ರಧಾನಿಯ ಮನೆಗೆ ಮುತ್ತಿಗೆ ಹಾಕಿದ್ರು. ಜನರ ಆಕ್ರೋಶಕ್ಕೆ ಇಡೀ ಲಂಕೆಯೇ ಹೊತ್ತಿ ಉರಿದಿತ್ತು. ಚೀನಾದಿಂದ ಹಿಡಿದು ಜಗತ್ತಿನ ಎಲ್ಲಾ ಸೋ ಕಾಲ್ಡ್ ಘಟಾನುಘಟಿ ರಾಷ್ಟ್ರಗಳು ಕೂಡ ಶ್ರೀಲಂಕಾದತ್ತ ತಿರುಗಿ ನೋಡಿಯೇ ಇಲ್ಲ. ಯಾರೂ ಕೂಡ ಲಂಕನ್ನರಿಗೆ ನೆರವು ನೀಡೋಕೆ ಮುಂದಾಗಿರಲಿಲ್ಲ. ಈ ಸಂದರ್ಭದಲ್ಲಿ ಮೊದಲಿಗೆ ಶ್ರೀಲಂಕಾಗೆ ಸಹಾಯ ಹಸ್ತ ಚಾಚಿದ್ದೇ ಭಾರತ. ಸುಮಾರು 4.5 ಬಿಲಿಯನ್ ಡಾಲರ್ ಮೊತ್ತದ ನೆರವನ್ನ ಭಾರತ ನೀಡಿದೆ. ಆಹಾರ ಸಾಮಗ್ರಿಗಳನ್ನೂ ಪೂರೈಸಿತ್ತು. ಅಷ್ಟೇ ಅಲ್ಲ, ಇತ್ತೀಚೆಗಷ್ಟೇ ವಿದೇಶಾಂಗ ಸಚಿವ ಎಸ್.ಜೈಶಂಕರ್​ ಶ್ರೀಲಂಕಾ ಪ್ರವಾಸ ಕೈಗೊಳ್ಳುವಂತೆ ಭಾರತೀಯರಿಗೆ ಸಲಹೆ ನೀಡಿದ್ರು. ಶ್ರೀಲಂಕಾ ಮೂಲಕವೂ ಮಾಲ್ಡೀವ್ಸ್​ಗೆ ಕೌಂಟರ್​​​​ ಕೊಡೋ ಪ್ಲ್ಯಾನ್ ಇದು. ಈಗಾಗ್ಲೇ ಇದ್ರ ಪರಿಣಾಮ ಕೂಡ ಗೊತ್ತಾಗ್ತಾ ಇದೆ. ಶ್ರೀಲಂಕಾಗೆ ತೆರಳೋ ಭಾರತೀಯ ಟೂರಿಸ್ಟ್​ಗಳ ಸಂಖ್ಯೆ ಇದ್ದಕ್ಕಿದ್ದಂತೆ ಹೆಚ್ಚಾಗಿದೆ. ಜನವರಿಯಲ್ಲಿ ಮಾಲ್ಡೀವ್ಸ್​ಗಿಂತಲೂ ಹೆಚ್ಚು ಪ್ರವಾಸಿಗರು ಶ್ರೀಲಂಕಾಗೆ ಭೇಟಿ ನೀಡಿದ್ದಾರೆ. 2023ರ ಜನವರಿಯಲ್ಲಿ ಶ್ರೀಲಂಕಾಗೆ 13,759 ಮಂದಿ ಭಾರತೀಯರು ಪ್ರವಾಸ ಕೈಗೊಂಡಿದ್ರೆ. ಅದೇ 2024ರ ಜನವರಿಯಲ್ಲಿ 34,399 ಮಂದಿ ಭಾರತೀಯರು ಶ್ರೀಲಂಕಾಗೆ ತೆರಳಿದ್ದಾರೆ. ಅಂತೂ ಭಾರತೀಯರಿಂದ ಶ್ರೀಲಂಕಾದ ಪ್ರಮೋಷನ್ ಕಾರ್ಯ ಜೋರಾಗಿ ನಡೀತಾ ಇದೆ. ಅತ್ತ ಶ್ರೀಲಂಕಾದ ಜನರೂ ಅಷ್ಟೇ ಭಾರತೀಯರ ಬಗ್ಗೆ ವಿಶೇಷ ಕಾಳಜಿ ವಹಿಸ್ತಾ ಇದ್ದಾರೆ. ಎಸ್​.ಜೈಶಂಕರ್ ಅವರಂತೂ ಶ್ರೀಲಂಕಾಗೆ ಹೋಗಿ ಅಲ್ಲಿ ಭಾರತದ ಬಗ್ಗೆ ಜನರನ್ನ ಕೇಳಿ. ನೀವು ಹೆಮ್ಮೆ ಪಟ್ಟುಕೊಳ್ಳುವಂತೆ ಮಾತನಾಡ್ತಾರೆ ಅನ್ನೋ ಸ್ಟೇಟ್​ಮೆಂಟ್​ ಕೂಡ ಕೊಟ್ಟಿದ್ದಾರೆ. ಅಷ್ಟರ ಮಟ್ಟಿಗೆ ಮಾಲ್ಡೀವ್ಸ್​ಗೆ ಕೌಂಟರ್​​ ಆಗಿ ಶ್ರೀಲಂಕಾವನ್ನ ಪ್ರಮೋಟ್ ಮಾಡೋ ಕೆಲಸ ಸರ್ಕಾರದಿಂದಲೇ ನಡೀತಿದೆ.

ಇನ್ನು ಮಾಲ್ಡೀವ್ಸ್​ನಲ್ಲಿರೋ 75 ಮಂದಿ ಭಾರತೀಯ ಸೈನಿಕರನ್ನ ಕೂಡಲೇ ವಾಪಸ್ ಕರೆಸಿಕೊಳ್ಳುವಂತೆ ಮೊಹಮ್ಮದ್ ಮುಯಿಜು ಫೋರ್ಸ್ ಮಾಡ್ತಾನೆ ಇದ್ದಾರೆ. ಇದಕ್ಕೆ ಭಾರತ ಸರ್ಕಾರ ಕೂಡ ಒಪ್ಪಿದೆ. ಹಾಗಂದ ಮಾತ್ರಕ್ಕೆ ಮಾಲ್ಸೀವ್ಸ್​​ನಲ್ಲಿ ಭಾರತೀಯ ಸೇನೆಯ ಅಸ್ತಿತ್ವವೇ ಇರಲ್ಲ ಅಂತೇನಲ್ಲ. ಯಾಕಂದ್ರೆ ನಾವು ಕೊಟ್ಟಿರೋ ಹೆಲಿಕಾಪ್ಟರ್​, ಸೇನಾ ವಿಮಾನ, ರಕ್ಷಣಾ ಸಾಮಗ್ರಿಗಳನ್ನೇ ಮಾಲ್ಡೀವ್ಸ್ ಬಳಸ್ತಾ ಇರೋದು. ಅವುಗಳನ್ನ ಮೇಂಟೇನ್​ ಮಾಡೋಕೆ ನಮ್ಮವರು ಅಲ್ಲಿ ಇರಲೇಬೇಕಾಗುತ್ತೆ. ಹೀಗಾಗಿ ಸೈನಿಕರನ್ನ ವಾಪಸ್ ಕರೆಸಿ ಸಮರ್ಥ ಟೆಕ್ನಿಕಲ್​ ಟೀಮ್​​​ನ್ನೇ ಮಾಲ್ಡೀವ್ಸ್​ನಲ್ಲಿ ನಿಯೋಜಿಸೋಕೆ ಭಾರತ ಸರ್ಕಾರ ತೀರ್ಮಾನಿಸಿದೆ. ಇಲ್ಲಿ ಸಮರ್ಥ ಅಂದ್ರೆ ಈ ಟೆಕ್ನಿಕಲ್ ಟೀಮ್ ಸೇನಾ ಚಟುವಟಿಕೆ ವಿಚಾರದಲ್ಲೂ ಸಮರ್ಥರಾಗಿಯೇ ಇರ್ತಾರೆ. ನಮ್ಮ ಸೈನಿಕರು ಅಲ್ಲಿ ಇರೋದಿಲ್ಲ ಅನ್ನೋದನ್ನ ಬಿಟ್ರೆ ಹೆಚ್ಚೇನೂ ವ್ಯತ್ಯಾಸ ಆಗೋದಿಲ್ಲ.

ಇಲ್ಲಿ ಇನ್ನೊಂದು ಸಂಗತಿಯನ್ನ ಹೇಳಲೇಬೇಕು. ಭಾರತವನ್ನ ಎದುರು ಹಾಕ್ಕೊಂಡು ಚೀನಾ ತಾಳಕ್ಕೆ ತಕ್ಕಂತೆ ಕುಣೀತಾ ಇರೋ ಮಾಲ್ಡೀವ್ಸ್​ ಈಗ ಆರ್ಥಿಕವಾಗಿ ಅಧ:ಪತನವಾಗ್ತಾ ಇದೆ. ಈಗಾಗ್ಲೇ ಮಾಲ್ಡೀವ್ಸ್ ಅಧ್ಯಕ್ಷ ಮುಯಿಜು ನಮ್ಮ ಬಳಿ ದುಡ್ಡಿಲ್ಲ ಅಂತಾ ಅರಚಾಡ್ತಾ ಇದ್ದಾರೆ. ಇದ್ರ ಮೇಲಿಂದ ಚೀನಾದ ಬಳಿಕ ಬಿಲಿಯನ್ ಡಾಲರ್​​​ಗಟ್ಟಲೆ ಸಾಲ ಮಾಡಿಕೊಂಡಿದೆ. ಒಟ್ಟು ಮಾಲ್ಡೀವ್ಸ್​ಗೆ ಇರೋ ಸಾಲದ ಪೈಕಿ ಶೇಕಡಾ 43ರಷ್ಟು ಚೀನಾದ್ದೇ. ಅಂದ್ರೆ, ಈ ಹಿಂದೆ ಶ್ರೀಲಂಕಾದಂತೆ ಈಗ ಮಾಲ್ಡೀವ್ಸ್​ ಕೂಡ ಸಾಲದ ಸುಳಿಗೆ ಬಿತ್ತು ಅಂತಾನೆ ಅರ್ಥ.

ಈಗಾಗ್ಲೇ ಐಎಂಎಫ್ ಕೂಡ ಮಾಲ್ಡೀವ್ಸ್ ಸರ್ಕಾರಕ್ಕೆ ವಾರ್ನಿಂಗ್ ಮಾಡಿದೆ. ಪರಿಸ್ಥಿತಿ ಹೀಗೆ ಮುಂದುವರಿದ್ರೆ ಶ್ರೀಲಂಕಾದಲ್ಲಿ ಜನರು ದಂಗೆಯೆದ್ದಂತೆ, ಅಧ್ಯಕ್ಷ ಮೊಹಮ್ಮದ್ ಮುಯಿಜು ವಿರುದ್ಧ ಜನಕ್ರಾಂತಿಯಾದ್ರೂ ಆಶ್ಚರ್ಯ ಇಲ್ಲ. ಈಗಾಗ್ಲೇ ಮುಯಿಜು ಸರ್ಕಾರದ ಕೆಲ ಮಂದಿ ಮತ್ತು ವಿಪಕ್ಷಗಳೆಲ್ಲಾ ರೊಚ್ಚಿಗೆದ್ದಿವೆ. ನಿಧಾನಕ್ಕೆ ಮಾಲ್ಡೀವ್ಸ್​​ನಲ್ಲಿ ಮಹಾ ಬದಲಾವಣೆಯಾಗೋ ಎಲ್ಲಾ ಲಕ್ಷಣಗಳು ಕಾಣ್ತಾ ಇದೆ. ಭಾರತದ ವಿರೋಧ ಕಟ್ಟಿಕೊಂಡ್ರೆ, ಚೀನಾದ ಸಹವಾಸ ಮಾಡಿದ್ರೆ ಇದೇ ಆಗೋದು ಅನ್ನೋ ಸಂದೇಶ ಇನ್ನಷ್ಟು ಬಲವಾಗುತ್ತೆ.

 

Sulekha