ಇನ್ನೇನು ವರ ತಾಳಿ ಕಟ್ಟಬೇಕು ಅನ್ನುವಾಗಲೇ ಉಲ್ಟಾ ಹೊಡೆದ ವಧು – ಮಂಟಪದಲ್ಲೇ ಮದುವೆಗೆ ನಿರಾಕರಿಸಿದ್ದೇಕೆ ಗೊತ್ತಾ?

ಇನ್ನೇನು ವರ ತಾಳಿ ಕಟ್ಟಬೇಕು ಅನ್ನುವಾಗಲೇ ಉಲ್ಟಾ ಹೊಡೆದ ವಧು – ಮಂಟಪದಲ್ಲೇ ಮದುವೆಗೆ ನಿರಾಕರಿಸಿದ್ದೇಕೆ ಗೊತ್ತಾ?

ಮದುವೆ ವಯಸ್ಸಿಗೆ ಬಂದಿದ್ದ ಮಗ ವಿದೇಶದಿಂದ ಊರಿಗೆ ಬಂದಿದ್ದ. ಆತನಿಗೆ  ನೆರೆಮನೆಯ ಯುವತಿ ಇಷ್ಟವಾಗಿದ್ದಾಳೆ. ಹೀಗಾಗಿ ಆಕೆಯನ್ನು ಮದುವೆಯಾಗಲು ಬಯಸಿದ್ದಾನೆ. ಆತನ ಆಸೆಯಂತೆ ಕುಟುಂಬಸ್ಥರೆಲ್ಲರೂ ಮದುವೆ ನಿಶ್ವಯ ಮಾಡಿದ್ದಾರೆ. ಮದುವೆಗೆ ಬೇಕಾದ ಎಲ್ಲಾ ಸಿದ್ದತೆಗಳನ್ನು ಮಾಡಿದ್ದಾರೆ. ಇನ್ನೇನು ಆತ ಯುವತಿಗೆ ತಾಳಿ ಕಟ್ಟಬೇಕು ಅನ್ನುವಾಗಲೇ ಆಕೆ ದೊಡ್ಡ ಶಾಕ್‌ ನೀಡಿದ್ದಾಳೆ.

ತಮಿಳುನಾಡಿನ ರಾಮನಾಥಪುರಂ ತಿರುವಡನೈ ಸಮೀಪದ ಗ್ರಾಮದ ಯುವಕ ನೆರೆಮನೆಯವಳನ್ನು ಮದುವೆಯಾಗಲು ಬಯಸಿದ್ದ. ಅದರಂತೆ ತಿರುವಡನೈನ ದೇವಸ್ಥಾನವೊಂದರಲ್ಲಿ ಮದುವೆಗೆ ವ್ಯವಸ್ಥೆ ಮಾಡಲಾಗಿದ್ದು, ಈ ಹಿನ್ನೆಲೆಯಲ್ಲಿ ವಧು-ವರರ ಕುಟುಂಬದವರು, ಸಂಬಂಧಿಕರು, ಸ್ನೇಹಿತರು ದೇವಸ್ಥಾನಕ್ಕೆ ಆಗಮಿಸಿದ್ದರು. ನಂತರ ಇಬ್ಬರು ಮದುವೆ ರಿಜಿಸ್ಟರ್‌ಗೆ ಸಹಿ ಹಾಕಿ ಹೂ ವಿನಿಮಯ ಮಾಡಿಕೊಂಡಿದ್ದಾರೆ. ಇನ್ನೇನು ಮದುವೆ ನಡೆಯಿತು ಎನ್ನುವಷ್ಟರಲ್ಲಿ ಯುವತಿಯು ಎಲ್ಲರಿಗೂ ಶಾಕ್​ ನೀಡಿದ್ದಾಳೆ.

ಇದನ್ನೂ ಓದಿ: ಭಿಕ್ಷಾಟನೆಯೇ ಇವರ ಬ್ಯುಸಿನೆಸ್‌.. ಲಕ್ಷಾಂತರ ರೂಪಾಯಿ ಮೌಲ್ಯದ ಆಸ್ತಿ ಒಡೆಯರು ಈ ಖತರ್ನಾಕ್‌ ಸಹೋದರರು!

ವಧುವಿನ ಕೊರಳಿಗೆ ತಾಳಿ ಕಟ್ಟಲು ಮುಂದಾಗಿದ್ದ ಯುವಕನ ಕೈಯಲ್ಲಿದ್ದ ಮಾಂಗಲ್ಯವನ್ನು ಕಿತ್ತುಕೊಂಡು ಮದುವೆ ಬೇಡ ಎಂದು ಹೇಳಿ, ದೇವರ ಹುಂಡಿಯಲ್ಲಿ ತಾಳಿಯನ್ನು ಹಾಕಲು ಯತ್ನಿಸಿದ್ದಾಳೆ. ಈ ದಿಢೀರ್ ಘಟನೆಯಿಂದ ವರ ಸೇರಿದಂತೆ ಸಂಬಂಧಿಕರು ಆಘಾತಕ್ಕೊಳಗಾಗಿದ್ದಾರೆ. ಆಕೆಗೆ ಬುದ್ದಿ ಹೇಳಲು ಯತ್ನಿಸಿದ್ದಾರೆ. ಆದರೆ ವಧು, ಮಾತ್ರ ತನ್ನ ನಿರ್ಧಾರ

ಕೊನೆಗೆ ವರನ ಮನೆಯವರು ಪೊಲೀಸರಿಗೆ ದೂರು ನೀಡಿದ್ದು, ಅಧಿಕಾರಿಗಳು ಮಧ್ಯ ಪ್ರವೇಶಿಸಿ ಯುವತಿಯೊಂದಿಗೆ ಪ್ರತ್ಯೇಕವಾಗಿ ಮಾತನಾಡಿದ್ದಾರೆ. ಈ ವೇಳೆ ಆಕೆ, ಪೋಷಕರ ಒತ್ತಾಯಕ್ಕೆ ಮಣಿದು ಮದುವೆಗೆ ಒಪ್ಪಿಗೆ ಸೂಚಿಸಿದ್ದಾಗಿಯೂ, ತನಗೆ ಈ ಮದುವೆ ಬೇಡ ಎಂದಿದ್ದಾಳೆ. ಇತ್ತ, ವಧುವಿಗೆ ಬಲವಂತವಾಗಿ ಮದುವೆ ಮಾಡಿಸಲು ಮುಂದಾಗಿದ್ದಾರೆ ಎಂದು ತಿಳಿದ ವರನ ಮನೆಯವರು ಹತಾಶೆಯಿಂದ ಮದುವೆ ಮಂಟಪದಿಂದ ಹೊರನಡೆದಿದ್ದಾರೆ.

suddiyaana