ಕಚಗುಳಿ ಮಾಡುವಾಗ ನಗು – ಕೋಪ ಬರಲು ಇದೇ ಕಾರಣ!
ಸಾಮಾನ್ಯವಾಗಿ ದೊಡ್ಡವರಿಂದ ಹಿಡಿದು ಸಣ್ಣ ಮಕ್ಕಳವರೆಗೂ ಕಚಗುಳಿ ಮಾಡಿದ್ರೆ ಜೋರಾದ ನಗು ಬರುತ್ತೆ. ಇನ್ನೂ ಕೆಲವರಿಗೆ ಸಿಟ್ಟು ಬರುತ್ತದೆ. ಆದರೆ ನಿಮ್ಮ ಸ್ವಂತ ಕೈಗಳಿಂದ ನೀವು ಕಚಗುಳಿ ಇಟ್ಟುಕೊಂಡರೆ ನಗು ಬರುವುದಿಲ್ಲ ಎಂಬುದನ್ನು ನೀವು ಗಮನಿಸಿದ್ದೀರಾ? ನಿಮ್ಮ ಕೈಗಳಿಂದ ನಿಮ್ಮ ದೇಹವನ್ನು ಸ್ಪರ್ಶಿಸಲು ನೀವು ಪ್ರಯತ್ನಿಸಿದಾಗ, ನೀವು ನಗುವುದಿಲ್ಲ! ಯಾಕೆ ಹೀಗಾಗುತ್ತಿದೆ, ಅದರ ಹಿಂದಿನ ಕಾರಣ ಏನು..? ಅದರ ಬಗ್ಗೆ ಈ ಲೇಖನದಲ್ಲಿ ಮಾಹಿತಿಯಿದೆ.
ಇದನ್ನೂ ಓದಿ: ಬಿಳಿ ಕುಂಬಳಕಾಯಿಯಲ್ಲಿ ಅಡಗಿದೆ ಆರೋಗ್ಯದ ಗುಟ್ಟು – ರಸ ಸೇವನೆಯಿಂದಲೂ ಹತ್ತಾರು ಲಾಭ
ಕಚಗುಳಿ ಇಟ್ಟಾಗ ನಗು ಮತ್ತು ಕೋಪ ಬರುವುದರ ಹಿಂದೆ ವೈಜ್ಞಾನಿಕ ಕಾರಣವಿದೆ. ನರವಿಜ್ಞಾನಿಗಳು ಹೇಳೋ ಪ್ರಕಾರ, ನಮ್ಮ ಮೆದುಳಿನ ಎರಡು ಭಾಗಗಳೇ ಕಚಗುಳಿ ಇಡುವ ಸಂವೇದನೆಗೆ ಕಾರಣವಾಗಿವೆ. ಮೊದಲನೆಯದು ಸೊಮಾಟೊಸೆನ್ಸರಿ ಕಾರ್ಟೆಕ್ಸ್. ಇದು ಸ್ಪರ್ಶವನ್ನು ಗ್ರಹಿಸುವ ಭಾಗವಾಗಿದೆ. ಎರಡನೆಯದು ಮೆದುಳಿನ ಮುಂಭಾಗದ ಸಿಂಗ್ಯುಲೇಟ್ ಕಾರ್ಟೆಕ್ಸ್. ಇದು ಸಂತೋಷ, ಭಾವನೆಯನ್ನು ಅರ್ಥ ಮಾಡಿಕೊಳ್ಳಲು ಕೆಲಸ ಮಾಡುತ್ತೆ. ನಮಗೆ ಕಚಗುಳಿ ಇಟ್ಟಾಗ ಮೆದುಳಿನ ಹೈಪೋಥಾಲಮಸ್ ಪ್ರದೇಶವು ಮೃದುವಾದ ಸ್ಪರ್ಶವನ್ನು ಅನುಭವಿಸಿದಾಗ ನಗುವ ಆಜ್ಞೆಯನ್ನು ನೀಡುತ್ತದೆ. ಅದಕ್ಕೆ ಜೋರಾಗಿ ನಗುತ್ತೇವೆ. ಕೆಲವರು ಕಚಗುಳಿ ಇಡುವುದನ್ನು ಇಷ್ಟಪಡುವುದಿಲ್ಲ. ಅವರಲ್ಲಿನ ನರಗಳು ತೀವ್ರವಾದ ಒತ್ತಡದಲ್ಲಿರುತ್ತವೆ. ಹೀಗಾಗಿ ಕೋಪವನ್ನು ತರಿಸುತ್ತವೆ.
ಇನ್ನು ನಮಗೆ ನಾವೇ ಕಚಗುಳಿ ಇಡುವಂತಿಲ್ಲ. ಮಿದುಳಿನ ಹಿಂಭಾಗದಲ್ಲಿರುವ ಸೆರೆಬೆಲ್ಲಮ್ ಮೆದುಳಿಗೆ ನೀವೇ ಸ್ಕ್ರಾಚ್ ಮಾಡಲಿದ್ದೀರಿ ಎಂದು ಮುಂಚಿತವಾಗಿ ಸಂಕೇತಿಸುತ್ತದೆ. ಇದರಿಂದಾಗಿ ಮೆದುಳು ಸರಿಯಾದ ಸಂಕೇತಗಳನ್ನು ನೀಡುವುದಿಲ್ಲ. ಅದಕ್ಕೇ ನಾವು ನಮ್ಮನ್ನು ನೋಡಿ ನಗುವುದಿಲ್ಲ.