ಕ್ಯಾಪ್ಟನ್ಸಿ ಡೇನಲ್ಲಿ ರೋಹಿತ್ ಶರ್ಮಾ ಗರಂ – ಹಿಟ್‌ಮ್ಯಾನ್ ಸಿಟ್ಟು ನೋಡಿ ಪಾಕ್ ಕ್ಯಾಪ್ಟನ್‌ಗೆ ನಗು ತಡೆಯಲಾಗಲಿಲ್ಲ ಯಾಕೆ??
ವರ್ಲ್ಡ್ಕಪ್ ಕ್ರಿಕೆಟ್ ಹಿನ್ನೆಲೆಯಲ್ಲಿ ಕ್ಯಾಪ್ಟನ್ಸಿ ಡೇ ಎಂಬ ಕಾರ್ಯಕ್ರಮದಲ್ಲಿ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಸಿಟ್ಟಾಗಿದ್ದಾರೆ. ಈ ಕಾರ್ಯಕ್ರಮದಲ್ಲಿ ಪತ್ರಕರ್ತರು ಕೂಡ ಹಾಜರಿದ್ದು, ಎಲ್ಲ ತಂಡಗಳ ನಾಯಕರಿಗೆ ಪ್ರಶ್ನೆಗಳನ್ನು ಕೇಳಲಾಯಿತು. ಈ ಸಂದರ್ಭದಲ್ಲಿ ಒಂದು ಪ್ರಶ್ನೆಗೆ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ನೀಡಿದ ಉತ್ತರ ಎಲ್ಲಡೆ ವೈರಲ್ ಆಗುತ್ತಿದೆ. ಅಷ್ಟೇ ಅಲ್ಲ, ಇಲ್ಲಿ ಹಿಟ್‌ಮ್ಯಾನ್ ರೋಹಿತ್ ಶರ್ಮಾ ರೊಚ್ಚಿಗೆದ್ದಿದರೆ, ಇವ್ರ ಜೊತೆ ಮತ್ತೊಂದು ತಂಡದ ಕ್ಯಾಪ್ಟನ್ ಈಗ ಫುಲ್ ಟ್ರೋಲ್ಗೆ ಒಳಗಾಗಿದ್ದಾರೆ.
ಇದನ್ನೂ ಓದಿ:ಸಿನಿಮಾ ಹೀರೋ ರೀತಿ ಮಿಂಚಿದ ಧೋನಿ – ಮಹಿ ಹೊಸ ಲುಕ್‌ಗೆ ಫ್ಯಾನ್ಸ್ ಫಿದಾ
ಎಲ್ಲಾ 10 ತಂಡಗಳ ಕ್ಯಾಪ್ಟನ್ಗಳು ಗುಜರಾತ್ನ ಅಹ್ಮದಾಬಾದ್ನಲ್ಲಿ ಸೇರಿದ್ದರು. ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಸೇರಿದಂತೆ 10 ತಂಡಗಳ ನಾಯಕರು ಒಂದೇ ವೇದಿಕೆಯಲ್ಲಿ ಕಾಣಸಿಕೊಂಡಿದ್ದರು. ವಿಶ್ವಕಪ್ ಕುರಿತು ಏನೆಲ್ಲಾ ಚಾಲೆಂಜ್ಗಳಿವೆ. ತಂಡಗಳು ಎಷ್ಟರ ಮಟ್ಟಿಗೆ ರೆಡಿಯಾಗಿವೆ ಇವೆಲ್ಲದರ ಬಗ್ಗೆ ಸಂವಾದ ಕಾರ್ಯಕ್ರಮವನ್ನ ಹಮ್ಮಿಕೊಳ್ಳಲಾಗಿತ್ತು. ಕಾಮಂಟ್ರೇಟರ್ ರವಿಶಾಸ್ತ್ರಿ, 2019ರಲ್ಲಿ ಇಂಗ್ಲೆಂಡ್ನ ವಿಶ್ವಕಪ್ ವಿನ್ನಿಂಗ್ ಕ್ಯಾಪ್ಟನ್ ಇಯಾನ್ ಮಾರ್ಗನ್ 10 ಮಂದಿ ಕ್ಯಾಪ್ಟನ್ಗಳಿಗೂ ಪ್ರಶ್ನೆಗಳನ್ನು ಕೇಳುತ್ತಿದ್ದರು. ಇವರಿಬ್ಬರು ಪ್ರಶ್ನೆಗಳನ್ನು ಕೇಳುವಾಗ ಎಲ್ಲವೂ ಸರಿಯಾಗಿಯೇ ಇತ್ತು. ರೋಹಿತ್ ಶರ್ಮಾ ಕೂಡ ಕೂಲ್ ಆಗಿಯೇ ಇದ್ರು. ಈ ನಡುವೆ ಅಲ್ಲಿ ಸೇರಿದ್ದ ಪತ್ರಕರ್ತರಿಗೂ ಪ್ರಶ್ನೆ ಕೇಳಲು ಅವಕಾಶ ನೀಡಲಾಗಿತ್ತು. ಆಗ ಪತ್ರಕರ್ತರೊಬ್ಬರು ರೋಹಿತ್ ಶರ್ಮಾಗೆ ಒಂದು ಪ್ರಶ್ನೆ ಕೇಳುತ್ತಾರೆ. ಇದು ಹಿಟ್‌ಮ್ಯಾನ್ ರೊಚ್ಚಿಗೇಳುವಂತೆ ಮಾಡಿದೆ. 2019ರ ವಿಶ್ವಕಪ್ ಫೈನಲ್ನಲ್ಲಿ ಮ್ಯಾಚ್ ಟೈ ಆಗಿತ್ತು. ಬಳಿಕ ಸೂಪರ್ ಓವರ್ ನಡೆಸಿದಾಗ ಅಲ್ಲೂ ಕೂಡ ಮತ್ತೊಮ್ಮೆ ಟೈ ಆಯ್ತು. ಪಂದ್ಯ ಟೈ ಆದರೂ ಕೂಡ ಇಂಗ್ಲೆಂಡ್ ತಂಡವನ್ನ ವಿಜಯಿ ಅಂತಾ ಘೋಷಿಸಿದ್ದು ಸರೀನಾ? ಈ ನಿರ್ಧಾರದ ಬಗ್ಗೆ ಏನಂತೀರಾ ಅಂತಾ ಆ ಪತ್ರಕರ್ತ ರೋಹಿತ್ ಶರ್ಮಾರನ್ನ ಪ್ರಶ್ನಿಸಿದ್ದಾರೆ. ಇದು ರೋಹಿತ್ ಶರ್ಮಾಗೆ ಸಿಟ್ಟು ನೆತ್ತಿಗೇರುವಂತೆ ಮಾಡಿದೆ. ಅದೇನ್ ಯೂಸ್ಲೆಸ್ ಪ್ರಶ್ನೆ ಕೇಳ್ತೀರಾ. ಪಂದ್ಯ ಟೈ ಆದಾಗ ರಿಸಲ್ಟ್ ಏನಾಗಬೇಕು ಅನ್ನೋದನ್ನ ಡಿಸೈಡ್ ಮಾಡೋದು ನನ್ನ ಕೆಲಸ ಅಲ್ಲ ಅಂತಾ ರೋಹಿತ್ ಶರ್ಮಾ ಹೇಳಿದ್ದಾರೆ. ಪತ್ರಕರ್ತ ಮತ್ತು ರೋಹಿತ್ ನಡುವಿನ ಈ ಒಂದು ಸಂಭಾಷಣೆ ಹಿಂದಿಯಲ್ಲೇ ನಡೆದಿದ್ರಿಂದ ವೇದಿಕೆಯಲ್ಲಿದ್ದ ಪಾಕ್ ಕ್ಯಾಪ್ಟನ್ ಬಾಬರ್ ಆಜಂ ಮತ್ತು ಬಾಂಗ್ಲಾ ನಾಯಕ ಶಕಿಬುಲ್ ಹಸನ್ಗೆ ಮಾತ್ರ ಅರ್ಥವಾಗಿತ್ತು. ರೋಹಿತ್ ಶರ್ಮಾ ಸಿಟ್ಟಿನಿಂದ ಪತ್ರಕರ್ತನಿಗೆ ಕೌಂಟರ್ ಕೊಡುತ್ತಲೇ ಬಾಬರ್ ಆಜಂ ಮತ್ತು ಶಕೀಬಲ್ ಹಸನ್ ನಗಲು ಶುರು ಮಾಡ್ತಾರೆ. ಈ ವೇಳೆ ಬಾಬರ್ ಪಕ್ಕದಲ್ಲೇ ಕುಳಿತಿದ್ದ ಇಂಗ್ಲೆಂಡ್ ಕ್ಯಾಪ್ಟನ್ ಜಾಸ್ ಬಟ್ಲರ್ ಏನಾಯ್ತು ಅಂತಾ ಕೇಳಿದಾಗ, ಬಾಬರ್ ಪತ್ರಕರ್ತನ ಪ್ರಶ್ನೆ ಮತ್ತು ರೋಹಿತ್ ಆನ್ಸರ್ ಬಗ್ಗೆ ವಿವರಿಸಿ ಇಬ್ಬರೂ ನಗಲು ಶುರು ಮಾಡ್ತಾರೆ.
ಅಂದು ಫೈನಲ್ನಲ್ಲಿ ಆಡಿದ್ದು ಇಂಗ್ಲೆಂಡ್ ಮತ್ತು ನ್ಯೂಜಿಲ್ಯಾಂಡ್ ತಂಡಗಳು. ಆಗ ಇದ್ದ ಐಸಿಸಿ ರೂಲ್ಸ್ ಪ್ರಕಾರ, ಸೂಪರ್ ಓವರ್ನಲ್ಲಿ ಕೂಡ ಮ್ಯಾಚ್ ಟೈ ಆಯ್ತು ಅಂದ್ರೆ, ಯಾರು ಅತೀ ಹೆಚ್ಚು ಬೌಂಡರಿ ಬಾರಿಸಿರ್ತಾರೋ ಅವರನ್ನ ವಿಜಯಿ ಘೋಷಿಸಲಾಗುತ್ತೆ ಅನ್ನೋ ರೂಲ್ಸ್ ಇತ್ತು. ಹೀಗಾಗಿ ನ್ಯೂಜಿಲ್ಯಾಂಡ್ಗಿಂತ ಇಂಗ್ಲೆಂಡ್ ಹೆಚ್ಚು ಬೌಂಡರಿ ಹೊಡೆದಿದ್ರಿಂದ ಇಂಗ್ಲೆಂಡ್ನ್ನ ವಿನ್ನರ್ ಅಂತಾ ಘೋಷಿಸಲಾಗಿತ್ತು. ಪಂದ್ಯ ಟೈ ಆದಾಗ ಮುಂದೆ ಏನು ಮಾಡಬೇಕು ಅನ್ನೋದನ್ನ ನಿರ್ಧರಿಸುವ ಹಕ್ಕು ಯಾವುದೇ ಕ್ಯಾಪ್ಟನ್ಗಳಿಗಾಗಲಿ, ಪ್ಲೇಯರ್ಸ್ಗಳಿಗಾಗಲಿ, ಟೀಮ್ ಗಾಗಲಿ ಇರುವುದಿಲ್ಲ. ಐಸಿಸಿ ರೂಲ್ಸ್ನಲ್ಲಿ ಏನಿದೆಯೋ ಅದನ್ನೇ ಎಲ್ಲರೂ ಪಾಲಿಸಬೇಕಾಗುತ್ತೆ. ಇದೇ ಕಾರಣಕ್ಕೆ ಸೂಪರ್ ಓವರ್ನಲ್ಲಿ ಟೈ ಆದಾಗ ಏನು ಮಾಡಬೇಕು ಅನ್ನೋದನ್ನ ನಿರ್ಧರಿಸೋದು ನನ್ನ ಕೆಲಸ ಅಲ್ಲ ಅಂತಾ ರೋಹಿತ್ ಶರ್ಮಾ ನೇರವಾಗಿಯೇ ಹೇಳಿದ್ದಾರೆ.
ವಿಶ್ವಕಪ್ ಟೀಂನ ಕ್ಯಾಪ್ಟನ್ಗಳ ಜೊತೆಗೆ ಸಂವಾದದ ವೇಳೆ ಒಂದು ಸ್ವಾರಸ್ಯಕರ ಘಟನೆಯೂ ನಡೆದಿದೆ. ವೇದಿಕೆಯಲ್ಲಿ ಕುಳಿತಿದ್ದ ದಕ್ಷಿಣ ಆಫ್ರಿಕಾ ತಂಡದ ನಾಯಕ ಟೆಂಬಾ ಬವುಮಾ, ಕಾರ್ಯಕ್ರಮದ ಮಧ್ಯೆ ಕುಳಿತಲ್ಲೇ ನಿದ್ದೆ ಹೋಗಿದ್ದರು. ತಲೆ ಕೆಳಗೆ ಹಾಕಿ ಗಟ್ಟಿ ನಿದ್ರೆ ಮಾಡುತ್ತಿದ್ದರು. ಈ ವಿಡಿಯೋ ಮತ್ತು ಫೋಟೋ ಈಗ ಫುಲ್ ವೈರಲ್ ಆಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ದಕ್ಷಿಣ ಆಫ್ರಿಕಾ ಕ್ಯಾಪ್ಟನ್, ನಾನು ನಿದ್ರೆ ಮಾಡಿರಲಿಲ್ಲ. ಕ್ಯಾಮರಾ ಆ್ಯಂಗಲ್ ಸರಿ ಇರಲಿಲ್ಲ ಅಷ್ಟೇ ಅಂತಾ ತೇಪೆ ಹಚ್ಚಿದ್ದಾರೆ. ಅಂತೂ ತಾವು ನಿದ್ರೆ ಮಾಡಿದ್ದಕ್ಕೆ ಕ್ಯಾಮರಾಮನ್ ಮೇಲೆ ಗೂಬೆ ಕೂರಿಸಿದ್ದಾರೆ.