ಸೀರೆ ಸೆರಗಿಗೆ ಪಿನ್ ಹಾಕಿಲ್ವಾ ರಾಖಿ? – ಸೆರಗು ಜಾರಿಸಿ ವಿಮಾನ ನಿಲ್ದಾಣದಲ್ಲಿ ಡ್ರಾಮಾ ಕ್ವೀನ್ ಡ್ಯಾನ್ಸ್!
ಡ್ರಾಮಾ ಕ್ವೀನ್ ಎಂದೇ ಫೇಮಸ್ ಆಗಿರುವ ನಟಿ ರಾಖಿ ಸಾವಂತ್ ಸದಾ ಒಂದಿಲ್ಲೊಂದು ವಿವಾದಗಳಿಂದ ಸುದ್ದಿಯಲ್ಲಿ ಇದ್ದೇ ಇರುತ್ತಾರೆ. ಚಿತ್ರಗಳಲ್ಲಿ ನಟಿಸಲು ಅವಕಾಶವಿಲ್ಲದ ಈ ನಟಿಗೆ ಅದಕ್ಕಿಂತಲೂ ಹೆಚ್ಚಿಗೆ ಪ್ರಚಾರ ಸಿಗುವುದು ಸೋಶಿಯಲ್ ಮೀಡಿಯಾದಲ್ಲಿ. ಆಕೆ ಸುದ್ದಿಯಾಗುವ ಸಲುವಾಗಿಯೇ ವಿವಾದ ಸೃಷ್ಟಿಸಿಕೊಳ್ಳುತ್ತಾರೆ, ವಿವಾದಾತ್ಮಕ ಹೇಳಿಕೆ ನೀಡುತ್ತಾರೆ. ಇದೀಗ ರಾಖಿ ಸಾವಂತ್ ಸೀರೆ ಉಟ್ಟು ಸಖತ್ ಸುದ್ದಿಯಾಗಿದ್ದಾರೆ.
ಇದನ್ನೂ ಓದಿ: ‘ನನ್ನ ಬಯಸುವಂತಹ ಪ್ರೀತಿ’ ಎಂದು ಸಮಂತಾ ಜೊತೆ ಬೆಡ್‌ರೂಮ್ ಫೋಟೋ ಹಂಚಿಕೊಂಡ ಖ್ಯಾತ ನಟ..!
ಡ್ರಾಮಾ ಕ್ವೀನ್ ಇತ್ತೀಚೆಗಷ್ಟೇ 15 ದಿನಗಳಲ್ಲಿ ಟೊಮ್ಯಾಟೊ ಬೆಳೆಯುವುದು ಹೇಗೆ ಎಂದು ವಿಡಿಯೋ ಮಾಡಿ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಸುದ್ದಿಯಾಗಿದ್ದರು. ಈ ವಿಡಿಯೋ ನೋಡಿ ನೆಟ್ಟಿಗರು ಹಿಗ್ಗಾಮುಗ್ಗಾ ಟ್ರೋಲ್ ಮಾಡಿದ್ದರು. ಈ ಬೆನ್ನಲ್ಲೇ ರಾಖಿ ಸಾವಂತ್ ಅವರು ಸೀರೆಯುಟ್ಟು ಡ್ಯಾನ್ಸ್ ಮಾಡಿರುವ ವಿಡಿಯೋವನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.
ರಾಖಿ ಸಾವಂತ್ ಈ ವಿಡಿಯೋದಲ್ಲಿ ಹಸಿರು ಬಣ್ಣದ ಸೀರೆಗೆ ಸ್ಲೀವ್ ಲೇಸ್ ಬ್ಲೌಸ್ ಧರಿಸಿದ್ದಾರೆ. ಆಕೆ ಸೆರಗಿಗೆ ಪಿನ್ ಹಾಕಿಕೊಳ್ಳದೇ ವಿಮಾನ ನಿಲ್ದಾಣದಲ್ಲಿ ಡಾನ್ಸ್ ಮಾಡಿ ತನ್ನ ಮೈಮಾಟ ಪ್ರದರ್ಶಿಸಿದ್ದಾರೆ. 1996 ರಲ್ಲಿ ಬಿಡುಗಡೆಯಾಗಿರುವ ಮೇರಾ ಸಾಯಾ ಚಿತ್ರದ ಫೇಮಸ್ ಗಾಯನವಾಗಿರುವ ಝುಮ್ಕಾ ಗಿರಾ ರೇ ಹಾಡಿಗೆ ರಾಖಿ ಡಾನ್ಸ್ ಮಾಡಿದ್ದಾರೆ. ಸಹಜವಾಗಿ ಈ ಡಾನ್ಸ್ ಮಾಡುವಾಗ ಅವರ ಸೆರಗು ಜಾರಿಗೆ. ತಾವೇ ಹಾಡು ಹೇಳುತ್ತಾ ಈ ಡಾನ್ಸ್ ಮಾಡಿದ್ದಾರೆ. ಅಸಲಿಗೆ ಹಾಡಿನಲ್ಲಿ ಝುಮಕಿ ಬೀಳುತ್ತದೆ ಎಂದಿದ್ದರೂ ಅಲ್ಲಿ ಬಿದ್ದುದು ಪಿನ್ ಹಾಕದ ಅವರ ಸೀರೆಯ ಸೆರಗು. ಇದರಿಂದ ರಾಖಿ (ಅವರ ಇಷ್ಟದಂತೆ?) ಪುನಃ ಟ್ರೋಲ್‌ಗೆ ಒಳಗಾಗಿದ್ದಾರೆ.
ಈ ವಿಡಿಯೋವನ್ನು ನೋಡಿದ ನೆಟ್ಟಿಗರು ರಾಖಿ ಸಾವಂತ್ ಅನ್ನು ಹಿಗ್ಗಾ ಮುಗ್ಗಾ ಕ್ಲಾಸ್ ತೆಗೆದುಕೊಂಡಿದ್ದಾರೆ. ಝುಮ್ಕಾ ಗಿರಾ ರೇ ಎನ್ನುತ್ತ ಸೀರೆಯ ಸೆರಗನ್ನೇ ಬೀಳಿಸ್ತಿದ್ದರಲ್ಲಾ ಮೇಡಂ ಎಂದು ಹಲವರು ಕೇಳಿದ್ದರೆ, ಸೇಫ್ಟಿ ಪಿನ್ ಹಾಕದೇ ಯಾರೂ ಸೀರೆ ಉಡೋಲ್ಲ ಎಂದು ಇನ್ನು ಕೆಲವರು ರಾಖಿಗೆಫ್ಯಾಷನ್ ಪಾಠ ಮಾಡಿದ್ದಾರೆ. ಎಲ್ಲವನ್ನೂ ತೋರಿಸುವುದಕ್ಕಾಗಿಯೇ, ತಮ್ಮ ದೇಹವನ್ನು ಪ್ರದರ್ಶನ ಮಾಡುವುದಕ್ಕಾಗಿಯೇ ಸೇಫ್ಟಿ ಪಿನ್ ಹಾಕಿಲ್ಲ ಎನ್ನುವುದು ಸ್ಪಷ್ಟವಾಗಿದೆ ಎಂದೂ ಕೆಲವರು ಹೇಳಿದ್ದು, ಇನ್ನು ಕೆಲವು ರಾಖಿ ಫ್ಯಾನ್ಸ್ ಈಕೆಯ ಎನರ್ಜಿಯನ್ನು ಕೊಂಡಾಡಿದ್ದಾರೆ.