ಜೈಲರ್ ಸಿನಿಮಾ ರಿಲೀಸ್ ದಿನ ಅಭಿಮಾನಿಗಳಿಗೆ ಹಬ್ಬ – ರಜೆ ಘೋಷಣೆ ಮಾಡಿದ ಕೆಲ ಖಾಸಗಿ ಕಂಪನಿಗಳು

ಜೈಲರ್ ಸಿನಿಮಾ ರಿಲೀಸ್ ದಿನ ಅಭಿಮಾನಿಗಳಿಗೆ ಹಬ್ಬ – ರಜೆ ಘೋಷಣೆ ಮಾಡಿದ ಕೆಲ ಖಾಸಗಿ ಕಂಪನಿಗಳು

ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ‘ಜೈಲರ್’ ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ರಜನಿಕಾಂತ್ ಅಭಿಮಾನಿಗಳಂತೂ ಚಿತ್ರ ಬಿಡುಗಡೆಗೆ ಕಾಯುತ್ತಿದ್ದಾರೆ. ಆಗಸ್ಟ್ 10ರಂದು ಜೈಲರ್ ಸಿನಿಮಾ ರಿಲೀಸ್ ಆಗಲಿದ್ದು, ಕೆಲವು ಖಾಸಗಿ ಕಂಪನಿಗಳು ರಜೆ ಘೋಷಿಸಿವೆ.

ಇದನ್ನೂ ಓದಿ: ಚಿನ್ನಾರಿಮುತ್ತನ ಬಾಳಸಂಗಾತಿ ಸ್ಪಂದನಾ ಇನ್ನಿಲ್ಲ – ಮುದ್ದಿನ ಮಡದಿಯ ಅಗಲಿಕೆಯ ನೋವಿನಲ್ಲಿ ವಿಜಯ್ರಾಘವೇಂದ್ರ

ನಟ ರಜನಿಕಾಂತ್ ಭಾರತ ಚಿತ್ರರಂಗ ಕಂಡ ಸೂಪರ್ ಸ್ಟಾರ್. ಸ್ಟೈಲ್ ಕಿಂಗ್ ರಜನಿಕಾಂತ್ ಅವ್ರಿಗೆ ಬಾಲಕರಿಂದ ಹಿಡಿದು ವೃದ್ಧರವರೆಗೂ ಅಭಿಮಾನಿಗಳಿರುವುದು ಅಷ್ಟೇ ಸತ್ಯ. ಇನ್ನು ರಜನಿಕಾಂತ್ ಸಿನಿಮಾ ರಿಲೀಸ್ ಅಂದರೆ ಆ ದಿನ ಅಭಿಮಾನಿಗಳಿಗೆ ಹಬ್ಬವೇ. ಹಬ್ಬ ಅಂದ ಮೇಲೆ ರಜೆ ಇಲ್ಲದಿದ್ದರೆ ಹೇಗೆ. ಹೀಗಾಗಿ ಆಗಸ್ಟ್ 10ರಂದು ರಜನಿಕಾಂತ್ ನಟನೆಯ ‘ಜೈಲರ್’ ಸಿನಿಮಾ ಬಿಡುಗಡೆ ದಿನ ಕೆಲವು ಖಾಸಗಿ ಕಂಪನಿಗಳು ರಜೆ ಘೋಷಣೆ ಮಾಡಿವೆ.

ಬಹುನಿರೀಕ್ಷಿತ ‘ಜೈಲರ್’ ಸಿನಿಮಾದಲ್ಲಿ ಶಿವರಾಜ್‌ಕುಮಾರ್ ಕೂಡ ನಟಿಸಿದ್ದಾರೆ. ಹಾಗಾಗಿ ಕರ್ನಾಟಕದಲ್ಲೂ ಈ ಸಿನಿಮಾದ ಬಗ್ಗೆ ನಿರೀಕ್ಷೆ ಹೆಚ್ಚಿದೆ. ಖಾಸಗಿ ಕಂಪನಿಯೊಂದು ತನ್ನ ಉದ್ಯೋಗಿಗಳಿಗೆ ರಜೆ ನೀಡಿರುವ ಆದೇಶ ಪತ್ರದ ಫೋಟೋ ವೈರಲ್ ಆಗಿದೆ. ‘ಆಗಸ್ಟ್ 10ರಂದು ರಜನಿಕಾಂತ್ ಅಭಿನಯದ ಜೈಲರ್ ಸಿನಿಮಾ ಬಿಡುಗಡೆ ಪ್ರಯುಕ್ತ ನಾವು ರಜೆ ಘೋಷಿಸಿದ್ದೇವೆ. ಉಚಿತ ಟಿಕೆಟ್ ಕೂಡ ನೀಡುತ್ತಿದ್ದೇವೆ. ನಮ್ಮ ತಾತನ ಕಾಲಕ್ಕೆ, ತಂದೆಯ ಕಾಲಕ್ಕೆ, ನಮ್ಮ ಕಾಲಕ್ಕೆ, ನಮ್ಮ ಮಕ್ಕಳ ಮತ್ತು ಮೊಮ್ಮಕ್ಕಳ ಕಾಲಕ್ಕೆ ಒಬ್ಬರೇ ಸೂಪರ್ ಸ್ಟಾರ್’ ಎಂದು ಬರೆದಿರುವ ನೋಟೀಸ್ ವೈರಲ್ ಆಗಿದೆ. ಈ ಕಂಪನಿಯ ಚೆನೈ, ಬೆಂಗಳೂರು ಮುಂತಾದ ಪ್ರದೇಶಗಳ ಶಾಖೆಗಳಿಗೂ ರಜೆ ಅನ್ವಯ ಆಗುತ್ತದೆ ಎಂದು ಈ ನೋಟೀಸ್‌ನಲ್ಲಿ ತಿಳಿಸಲಾಗಿದೆ.

‘ಜೈಲರ್’ ಸಿನಿಮಾದ ‘ಕಾವಾಲಾ..’ ಹಾಡು ಈಗಾಗಲೇ ಸೂಪರ್ ಹಿಟ್ ಆಗಿದೆ. ಈ ಹಾಡಿನಲ್ಲಿ ರಜನಿಕಾಂತ್ ಜೊತೆ ತಮನ್ನಾ ಭಾಟಿಯಾ ಅವರು ಬಿಂದಾಸ್ ಆಗಿ ಕಾಣಿಸಿಕೊಂಡಿದ್ದಾರೆ. ನೆಲ್ಸನ್ ಅವರು ‘ಜೈಲರ್’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಸನ್ ಪಿಕ್ಚರ್ಸ್ ಮೂಲಕ ಅದ್ದೂರಿಯಾಗಿ ಈ ಸಿನಿಮಾ ನಿರ್ಮಾಣ ಆಗಿದೆ. ಅನಿರುದ್ಧ್ ರವಿಚಂದರ್ ಅವರು ಈ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದಾರೆ. ರಮ್ಯಾ ಕೃಷ್ಣನ್, ಜಾಕಿ ಶ್ರಾಫ್, ಮೋಹನ್‌ಲಾಲ್, ಶಿವರಾಜ್‌ಕುಮಾರ್ ಮುಂತಾದ ಘಟಾನುಘಟಿಗಳು ಈ ಚಿತ್ರದಲ್ಲಿ ನಟಿಸಿರುವುದರಿಂದ ಸಹಜವಾಗಿಯೇ ನಿರೀಕ್ಷೆ ಹೆಚ್ಚಿದೆ. ಈಗಾಗಲೇ ಬುಕಿಂಗ್ ಓಪನ್ ಆಗಿದ್ದು, ಅನೇಕ ಶೋಗಳ ಟಿಕೆಟ್‌ಗಳು ಸೋಲ್ಡ್ ಔಟ್ ಆಗಿವೆ.

suddiyaana