ಇಂಡಿಯಾ ಮೈತ್ರಿ ಕೂಟ ಛಿದ್ರಛಿದ್ರ? -ಮೈತ್ರಿ ಪಕ್ಷಗಳ ನಿರ್ಧಾರ..‘ಕೈ’ಗೆ ಶಾಕ್
ಕಾಂಗ್ರೆಸ್​​​ ಹಠ ‘I.N.D.I.A’ಗೆ ಎಫೆಕ್ಟ್

ಇಂಡಿಯಾ ಮೈತ್ರಿ ಕೂಟ ಛಿದ್ರಛಿದ್ರ? -ಮೈತ್ರಿ ಪಕ್ಷಗಳ ನಿರ್ಧಾರ..‘ಕೈ’ಗೆ ಶಾಕ್ಕಾಂಗ್ರೆಸ್​​​ ಹಠ ‘I.N.D.I.A’ಗೆ ಎಫೆಕ್ಟ್

ಹೇಗಾದ್ರೂ ಮಾಡಿ ಮೋದಿ ಓಟಕ್ಕೆ ಬ್ರೇಕ್ ಹಾಕಬೇಕು.. ಬಿಜೆಪಿ ಸರ್ಕಾರವನ್ನ ಕೇಂದ್ರದಿಂದ ಕಳಗಿಳಿಸಬೇಕು.. ನಾವು ಒಂದಾಗಿಲ್ಲ ಅಂದ್ರೆ ಮುಂದೆ ಸಮಸ್ಯೆ ಆಗುತ್ತೆಂದು ರೂಪುಗೊಂಡಿದ್ದೇ ಇಂಡಿಯಾ ಮೈತ್ರಿಕೂಟ.. ಕಾಂಗ್ರೆಸ್ ಸೇರಿ ಒಟ್ಟು 38 ಪಕ್ಷಗಳು ಇಂಡಿಯಾ ಮೈತ್ರಿಕೂಟದ ಭಾಗವಾಗಿವೆ. ಆದ್ರೆ ಇವರಲ್ಲಿ ಯಾವುದೂ ಸರಿಯಿಲ್ಲ ಅನ್ನೋದು ಗೊತ್ತಾಗುತ್ತಿದೆ. 38 ಪಕ್ಷಗಳಲ್ಲಿ ಸಾಕಷ್ಟು ಪಕ್ಷಗಳು ಕಾಂಗ್ರೆಸ್‌ ಜೊತೆ ಕೈ ಜೋಡಿಸಿದೇ ಪ್ರತ್ಯೇಕವಾಗಿ ಕಣಕ್ಕಿಳಿಯುತ್ತಿವೆ. ಹಾಗಿದ್ರೆ ಇವರ ಬಿರುಕಿಗೆ ಕಾರಣವೇನು..? ಯಾಕೆ ಮೈತ್ರಿ ಮುರಿದು ಪ್ರತ್ಯೇಕ್ಷವಾಗಿ ಸ್ಪರ್ಧೆ ಮಾಡುತ್ತಿದ್ದಾರೆ ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಬಿಗ್​ಬಾಸ್​ನಲ್ಲಿ ಅವಮಾನ ಆಗಿದ್ದು ನಿಜನಾ? – ಮೌನ ಮುರಿದ ಕಿಚ್ಚ ಸುದೀಪ್‌!

ಮೈತ್ರಿಕೂಟದ ಪ್ರಮುಖ ಪಕ್ಷಗಳಾದ ಕಾಂಗ್ರೆಸ್, ಆಪ್  ಮತ್ತು ಸಮಾಜವಾದಿ ಪಕ್ಷಗಳ ನಡುವಿನ ಬಿರುಕು ಹರ್ಯಾಣ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ತೀವ್ರವಾಗಿತ್ತು. ಹರಿಯಾಣದಲ್ಲಿ ಕಾಂಗ್ರೆಸ್​​ಗೆ ಮೈತ್ರಿ ಮಾಡಿಕೊಂಡು ಅಖಾಡಕ್ಕೆ ಇಳಿಯುವ ಮನಸ್ಸು ಮಾಡಿರಲಿಲ್ಲ. ಹೀಗಾಗಿ ಅದು ಆಪ್‌ಗೆ ಸ್ಥಾನಗಳನ್ನು ಬಿಟ್ಟುಕೊಡದೇ ಏಕಾಂಗಿಯಾಗಿ ಸ್ಪರ್ಧೆ ಮಾಡಿತ್ತು. ಆದರೆ, ಪಕ್ಷ ಆಡಳಿತ ವಿರೋಧಿ ಅಲೆಯನ್ನು ಮೀರಿ ಅಧಿಕಾರಕ್ಕೆ ಬರುವಲ್ಲಿ ವಿಫಲವಾಗಿತ್ತು.

ಸೀಟು ಹಂಚಿಕೆಯೇ ‘ಮಹಾ’ ಸವಾಲು

ವಿಶೇಷವಾಗಿ ಮಹಾರಾಷ್ಟ್ರ ಮತ್ತು ಜಾರ್ಖಂಡ್‌ನಲ್ಲಿ ಇನ್ನೇನು ಚುನಾವಣೆ ದಿನಾಂಕ ಘೋಷಣೆಗೆ ಆಗಿದೆ. ಈ ಹಿನ್ನೆಲೆಯಲ್ಲಿ ಮೈತ್ರಿಕೂಟದ ನಾಯಕರು ಯಾವ ರೀತಿಯಲ್ಲಿ ಸೀಟು ಹಂಚಿಕೆ ನಿರ್ಣಯ ಮಾಡಲಿದ್ದಾರೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ. ನಿರ್ಣಾಯಕ ಸೀಟು ಹಂಚಿಕೆ ಮಾತುಕತೆಗಳ ಸಮಯದಲ್ಲಿ ಸವಾಲುಗಳು ಎದುರಾಗುವ ಸಾಧ್ಯತೆಗಳಿವೆ ಎಂಬ ಮಾತು ಕೇಳಿ ಬರ್ತಿದೆ. ಮಹಾರಾಷ್ಟ್ರದ ಪ್ರಮುಖ ಪಾಲುದಾರರಾದ ಶಿವಸೇನೆ ಮತ್ತು ಎನ್‌ಸಿಪಿ ಅಲ್ಲಿಯ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಸೀಟು ಹಂಚಿಕೆಗೆ ಕಾಂಗ್ರೆಸ್‌ನ ಬೇಡಿಕೆಗಳನ್ನು ಒಪ್ಪಿಕೊಳ್ಳುತ್ತಿಲ್ಲ.  ಅದೇ ರೀತಿ, JMM ಮತ್ತು ಕಾಂಗ್ರೆಸ್ ನಡುವಿನ ಮಾತುಕತೆಗಳು ಜಾರ್ಖಂಡ್‌ನಲ್ಲಿ ಕಷ್ಟಕರವಾಗಬಹುದು.

ಕಾಂಗ್ರೆಸ್​​​ ಹಠ ಎಫೆಕ್ಟ್ ಆಗುತ್ತಿದ್ಯಾ?

ಕಾಂಗ್ರೆಸ್​ನ ಹಠಮಾರಿತನವು ಇಂಡಿಯಾ ಒಕ್ಕೂಟದ ವಿಭಜನೆ ಮತ್ತಷ್ಟು ಹೆಚ್ಚಾಗಲು ಕಾರಣ ಅನ್ನೋ ಮಾತುಗಳು ಕೇಳಿ ಬರ್ತಿದೆ. ವಿರೋಧ ಪಕ್ಷಗಳು ಎದುರಾಳಿ ಬಿಜೆಪಿ ವಿರುದ್ಧ ಒಂದಾಗುವ ಬದಲು ಸಾರ್ವಜನಿಕವಾಗಿ ಒಟ್ಟಾಗಿರಲ್ಲ ಅನ್ನೋ ಘರ್ಷಣೆ ಮಾಡುತ್ತಿವೆ. ಇದು ಎದುರಾಳಿಗೇ ವರವಾಗುವ ಸಾಧ್ಯತೆಗಳು ಹೆಚ್ಚಾಗಿವೆ. ಅಲ್ಲದೇ ಬಣ ರಚನೆಗೆ ಪ್ರಯತ್ನ ಆರಂಭಿಸಿದ್ದ ಜೆಡಿಯು ನಾಯಕ ನಿತೀಶ್‌ ಕುಮಾರ್‌, ಕಾಂಗ್ರೆಸ್‌ ಧೋರಣೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ, ಅಲ್ಲಿಂದ ಹೊರ ಬಂದಿದ್ದರು.

ಹರಿಯಾಣ ರಿಸಲ್ಟ್.. ‘ಇಂಡಿಯಾ’ಗೆ ಎಫೆಕ್ಟ್ 

ಮೊನ್ನೆ ಮೊನ್ನ ಬಂದ ಹರಿಯಾಣದ ರಿಸಲ್ಟ್ ಇಂಡಿಯಾ ಒಕ್ಕೂಟಕ್ಕೆ ಎಚ್ಚರಿಕೆಯ ಗಂಟೆಯಾಗಿದೆ.  ಕಾಂಗ್ರೆಸ್ ಸೋಲು, ಅವರದ್ದೇ ಮಿತ್ರ ಪಕ್ಷಗಳಿಂದ ಭಾರಿ ಟೀಕೆಗೆ ಒಳಗಾಗುವಂತೆ ಮಾಡಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್​ ಕೇವಲ ಆರು ಸ್ಥಾನಗಳನ್ನು ಗೆದ್ದಿದೆ. ಈ ಫಲಿತಾಂಶಗಳ ನಂತರ, ಬಿಜೆಪಿಯನ್ನು ಸಮರ್ಥವಾಗಿ ಎದುರಿಸಲು ಮಿತ್ರಪಕ್ಷಗಳ ಅಗತ್ಯವಿದೆ ಎಂಬುದನ್ನು ಫಲಿತಾಂಶಗಳು ತೋರಿಸಿಕೊಟ್ಟಿವೆ.  ಈ ಎಲ್ಲಾ ಅಂಶಗಳು  ಮಹಾರಾಷ್ಟ್ರ, ಜಾರ್ಖಂಡ್ ಮತ್ತು ದೆಹಲಿಯಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗಳ ಮೇಲೆ ಪರಿಣಾಮ ಬೀರುತ್ತದೆ. ದೆಹಲಿ ಮತ್ತು ಪಂಜಾಬ್‌ನಲ್ಲಿ ಕಾಂಗ್ರೆಸ್ ಜೊತೆ ಚುನಾವಣಾ ಒಪ್ಪಂದ ಮಾಡಿಕೊಳ್ಳುವುದಿಲ್ಲ ಎಂದು ಆಪ್ ಈಗಾಗಲೇ ಘೋಷಿಸಿದೆ. ಇದನ್ನೇಲ್ಲಾ ನೋಡಿದ್ರೆ ಇಂಡಿಯಾ ಒಕ್ಕೂಟದಲ್ಲಿ ಯಾವುದು ಸರಿಯಿಲ್ಲ ಅನ್ನೋದು ಗೊತ್ತಾಗುತ್ತೆ.

Shwetha M