ಎಟಿಎಂನಲ್ಲಿ ಕಾರ್ಡ್ ಹಾಕಿದ್ರೆ ಬರುತ್ತೆ ಚಿನ್ನ – ದೇಶದಲ್ಲೇ ಮೊದಲ ಚಿನ್ನದ ಎಟಿಎಂ!

ಎಟಿಎಂನಲ್ಲಿ ಕಾರ್ಡ್ ಹಾಕಿದ್ರೆ ಬರುತ್ತೆ ಚಿನ್ನ – ದೇಶದಲ್ಲೇ ಮೊದಲ ಚಿನ್ನದ ಎಟಿಎಂ!

ಹೈದರಾಬಾದ್: ಎಟಿಎಂ ಯಂತ್ರದಿಂದ ಹಣ ಡ್ರಾ ಮಾಡುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಆದರೆ, ಎಟಿಎಂನಲ್ಲಿ ಚಿನ್ನ ಡ್ರಾ ಮಾಡಬಹುದಾ..? ಹೈದರಾಬಾದ್‌ನ ಎಟಿಎಂನಲ್ಲಿ ಇದು ಕೂಡಾ ಸಾಧ್ಯವಾಗಿದೆ. ಹೈದರಾಬಾದ್‌ನ ಬೇಗಂಪೇಟೆಯಲ್ಲಿ ದೇಶದಲ್ಲೇ ಮೊಟ್ಟ ಮೊದಲ ಬಾರಿಗೆ ಚಿನ್ನದ ಎಟಿಎಂನ್ನು ಉದ್ಘಾಟಿಸಲಾಗಿದೆ. ಇಲ್ಲಿ ಕ್ರೆಡಿಟ್ ಕಾರ್ಡ್ ಮತ್ತು ಡೆಬಿಟ್ ಕಾರ್ಡ್ ಇದ್ರೆ ನೀವು ಬಯಸಿದ ಚಿನ್ನವನ್ನು ಡ್ರಾ ಮಾಡಿಕೊಳ್ಳಬಹುದು. ಇದು ದೇಶದ ಮೊದಲ ಚಿನ್ನದ ಎಟಿಎಂ ಮಾತ್ರವಲ್ಲ. ಜಗತ್ತಿನಲ್ಲೇ ಮೊದಲ ರಿಯಲ್ ಟೈಮ್ ಚಿನ್ನದ ಎಟಿಎಂ ಎನ್ನಲಾಗಿದೆ. 0.5 ಗ್ರಾಂ, 1 ಗ್ರಾಂ ಸೇರಿದಂತೆ 100 ಗ್ರಾಂಗಳವರೆಗೆ ಚಿನ್ನದ ನಾಣ್ಯಗಳನ್ನು ಎಟಿಎಂನಿಂದ ಡ್ರಾ  ಮಾಡಬಹುದು ಎಂದು ಗೋಲ್ಡ್ ಸಿಕ್ಕಾ ಪ್ರೈವೇಟ್ ಲಿಮಿಟೆಡ್ ತಿಳಿಸಿದೆ.

ಇದನ್ನೂ ಓದಿ:  ಬೆಳಗ್ಗೆ 8.30ರ ನಂತರ ಶಾಲಾ ವಾಹನ ಸಂಚಾರ ನಿಷೇಧ – ‘ಟ್ರಾಫಿಕ್’ ಪರಿಹಾರಕ್ಕೆ ಪೊಲೀಸರ ಟಾನಿಕ್

ಇಲ್ಲಿ ಸಿಗುವುದು ಪರಿಶುದ್ಧ ಚಿನ್ನ. ಇದರ ಗುಣಮಟ್ಟ ಪರಿಶೀಲಿಸಲು ಸೂಕ್ತ ದಾಖಲೆಗಳನ್ನೂ ಕೊಡುತ್ತೇವೆ ಎಂದು ಕಂಪನಿ ತಿಳಿಸಿದೆ.  ಇಲ್ಲಿ ಯಂತ್ರದ ಸ್ಕ್ರೀನ್‌ನಲ್ಲಿ ಚಿನ್ನದ ನಾಣ್ಯಗಳ ವಿವರಗಳು ಕಾಣಿಸಲಿವೆ. ಕಾರ್ಡ್ ಮೂಲಕ ಪಾವತಿ ಮಾಡಿ ಚಿನ್ನದ ನಾಣ್ಯಗಳನ್ನು ಡ್ರಾ ಮಾಡಬಹುದು. ಟ್ಯಾಂಪರ್ ಪ್ರೂಫ್ ಪ್ಯಾಕೆಟ್‌ಗಳಲ್ಲಿ ನಾಣ್ಯಗಳು ಯಂತ್ರದಿಂದ ಹೊರಬರಲಿವೆ. ಚಿನ್ನ ಕೊಡುವ ಇನ್ನೂ 3 ಎಟಿಎಂಗಳನ್ನ ವಾರಂಗಲ್, ಕರೀಮ್‌ ನಗರ ಹಾಗೂ ಹೈದರಾಬಾದ್ ವಿಮಾನ ನಿಲ್ದಾಣದ ಬಳಿ ಶೀಘ್ರದಲ್ಲೇ ಸ್ಥಾಪಿಸಲಿದ್ದೇವೆ ಅಂತಾ ಗೋಲ್ಡ್ ಸಿಕ್ಕಾ ಪ್ರೈವೇಟ್ ಲಿಮಿಟೆಡ್ ತಿಳಿಸಿದೆ. ದಿನದ 24 ಗಂಟೆಯೂ ಈ ಚಿನ್ನದ ಎಟಿಎಂ ಕಾರ್ಯ ನಿರ್ವಹಿಸಲಿದೆ.

suddiyaana