ಹಣ ಸಂಗ್ರಹಿಸೋ ವಿಚಾರದಲ್ಲೂ ಕಾಂಗ್ರೆಸ್ ಮಹಾ ಎಡವಟ್ಟು! – ಬಿಜೆಪಿ ಆಡಿದ ಗೇಮ್ ಏನು?  

ಹಣ ಸಂಗ್ರಹಿಸೋ ವಿಚಾರದಲ್ಲೂ ಕಾಂಗ್ರೆಸ್ ಮಹಾ ಎಡವಟ್ಟು! – ಬಿಜೆಪಿ ಆಡಿದ ಗೇಮ್ ಏನು?  

ಚುನಾವಣೆ ದೃಷ್ಟಿಯಿಂದ ಎಲ್ಲಾ ಪಕ್ಷಗಳಂತೆ ಕಾಂಗ್ರೆಸ್ ಕೂಡ​ ಜನರಿಂದ ದೇಣಿಗೆ ಸಂಗ್ರಹ ಮಾಡ್ತಿದೆ.. ಅದ್ರೆ ಈ ದೇಣಿಗೆ ಸಂಗ್ರಹವನ್ನಾದ್ರೂ ನೀಟಾಗಿ ಮಾಡ್ಬೇಕಲ್ಲಾ.. ಅಲ್ಲೇ ಎಡವಟ್ಟು ಮಾಡಿದ್ರೆ ಹೇಗೆ? ಮೊದಲೇ ಕೈಯಲ್ಲಿ ಕಾಸಿಲ್ಲ.. ಬರೋ ಹಣವನ್ನ ಕೂಡ ಕಳ್ಕೊಂಡ್ರೆ ಹೇಗೆ. ಈಗ ಕಾಂಗ್ರೆಸ್​​ನದ್ದು ಇಲ್ಲೊಂದು ಕಾಮಿಡಿಯಾಗಿದೆ. ಮಹಾಶಯರೆಲ್ಲಾ ಸೇರ್ಕೊಂಡು ದೇಶಕ್ಕಾಗಿ ದೇಣಿಗೆ ಹೆಸರಲ್ಲಿ ಕ್ಯಾಂಪೇನ್​​ಗೇನೋ ಚಾಲನೆ ಕೊಟ್ರು. ಯಾವಾಗ ಕಾಂಗ್ರೆಸ್ ದೇಣಿಗೆ ಸಂಗ್ರಹ ಕ್ಯಾಂಪೇನ್ ಶುರುವಾಯ್ತೋ ಅತ್ತ, ಇಲ್ಲೂ ತನ್ನ ಎದುರಾಳಿಗೆ ಖೆಡ್ಡಾ ತೋಡಿತ್ತು. ಮುಳುಗುವವನಿಗೆ ಹುಲ್ಲು ಕಡ್ಡಿಯೇ ಆಸರೆ ಅಂತಾದ್ರೆ ಇಲ್ಲಿ ಬಿಜೆಪಿ ಆ ಹುಲ್ಲನ್ನೂ ಬಿಡ್ತಿಲ್ಲ.. ಕಡ್ಡಿಯೂ ಕಾಂಗ್ರೆಸ್ ಕೈಗೆ ಸಿಗದಂತೆ ಮಾಡೋಕೆ ಮುಂದಾಗಿದೆ. ಅದು ಹೇಗೆ ಅನ್ನೋದೆ ತಮಾಷೆಯ ಸಂಗತಿ. ಕಾಂಗ್ರೆಸ್ ದೇಣಿಗೆ ಅಭಿಯಾನ ಶುರುವಾದ ಮರುದಿನವೇ ಅಭಿಯಾನಕ್ಕೆ ಸಂಬಂಧಿಸಿದ ಎರಡು ಡೊಮೇನ್​ಗಳು ಅಂದ್ರೆ ವೆಬ್​​ಸೈಟ್​ಗಳು ಓಪನ್ ಆದ್ವು. ಒಂದು donatefordesh.org ಮತ್ತೊಂದು onatefordesh.com..ಇವೆರಡೂ ಡೊಮೇನ್​ಗಳನ್ನ ಬಿಜೆಪಿ ಮತ್ತು ನ್ಯೂಸ್ ವೆಬ್​ಸೈಟ್ Opindia ರಿಜಿಸ್ಟರ್ ಮಾಡಿಕೊಂಡಿತ್ತು. ಆದ್ರೆ ಇತ್ತ ಕಾಂಗ್ರೆಸಿಗರು ಮಾತ್ರ ಡೊನೇಟ್ ಫಾರ್ ದೇಶ್ ಹೆಸರಲ್ಲಿ ಕ್ಯಾಂಪೇನ್​ಗೆ ಚಾಲನೆ ಕೊಟ್ರೂ ಕೂಡ ತಮ್ಮ ವೆಬ್​ಸೈಟ್​ನ್ನ ರಿಜಿಸ್ಟರ್ ಮಾಡಿಯೇ ಇರಲಿಲ್ಲ. ವೆಬ್​​ಸೈಟ್​​ನ್ನ ರಿಜಿಸ್ಟರ್ ಮಾಡೋಕೆ ಮರೆತುಬಿಟ್ಟಿದ್ದಾರೆ. ವೆಬ್​ಸೈಟ್ ರಿಜಿಸ್ಟರ್ ಮಾಡಿದ್ರೆ ತಾನೆ ಜನರು ಹಾಕಿದ ಹಣ ಕಾಂಗ್ರೆಸ್ ಫಂಡ್ ಸೇರೋದು. ಆದ್ರೆ donatefordesh ಹೆಸರಲ್ಲಿ ಕಾಂಗ್ರೆಸ್ ವೆಬ್​ಸೈಟ್​​ನ್ನೇ ಮಾಡಿರಲಿಲ್ಲ. ಆದ್ರೆ ಬಿಜೆಪಿ ಐಟಿ ಸೆಲ್​​ನಲ್ಲಿರೋ ಕಿಲಾಡಿಗಳು donatefordesh.org ಅಂತಾ ವೆಬ್​​ಸೈಟ್​​ ರಿಜಿಸ್ಟರ್ ಮಾಡಿಕೊಂಡಿತ್ತು.

ಇದನ್ನೂ ಓದಿ: ಮಳೆಯ ಆರ್ಭಟಕ್ಕೆ ನಲುಗಿದ ತಮಿಳುನಾಡು –  ಮಳೆ ನಿಂತರೂ ತಗ್ಗುತ್ತಿಲ್ಲ ಪ್ರವಾಹ ಸ್ಥಿತಿ!

donatefordesh.org ಅಂತಾ ಗೂಗಲ್​ನಲ್ಲಿ ಸರ್ಚ್ ಮಾಡಿದ್ರೆ ಅಕೌಂಟ್ ಓಪನ್ ಆಗುತ್ತೆ. ಅಲ್ಲಿ ಮೇಲ್ಗಡೆ 5 ರೂಪಾಯಿ, 50 ರೂಪಾಯಿ, 500 ರೂಪಾಯಿ, 1000 ರೂಪಾಯಿ ಮತ್ತು 2000 ರೂಪಾಯಿವರೆಗೆ ಡೊನೇಟ್ ಮಾಡಬಹುದು ಅಂತಾ ಮೆನ್ಷನ್ ಆಗಿದೆ. ಹಾಗೆಯೇ ಕೆಳಗಡೆ ಬಾಕ್ಸ್​ನಲ್ಲಿ ನಿಮ್ಮ ಹೆಸರು, ಈ-ಮೇಲ್ ಸೇರಿದಂತೆ ಡಿಟೇಲ್ಸ್ ಕೂಡ ಮೆನ್ಷನ್ ಮಾಡಬೇಕಾಗುತ್ತೆ. ಆದ್ರೆ ವೆಬ್​ಸೈಟ್​ನ ಕೆಳಗಡೆ ಮೇಕ್ ದ ಡೊನೇಷನ್ ಅನ್ನೋ ಹೆಡ್​ಲೈನ್​ನಡಿ ಒಂದು ನೋಟಿಫಿಕೇಶನ್ ಕೂಡ ಇದೆ. I declare that I am an Indian Citizen and I am making this contribution to the BJP out of my free will, from income legally earned/owned by me. The details that I have provided above are true and nothing has been misrepresented. ಟೋಟಲಿ ಇದು ಬಿಜೆಪಿಗೆ ಸೇರಿದ ಅಕೌಂಟ್. ಒಂದು ವೇಳೆ ಕಾಂಗ್ರೆಸ್​ಗೆ ಅಂತಾ ಯಾರಾದ್ರೂ ಈ ವೆಬ್​​ಸೈಟ್​ಗೆ ಹಣ ಹಾಕಿದ್ರೆ ಅದು ನೇರವಾಗಿ ಈಗಾಗ್ಲೇ ತುಂಬಿ ತುಳುಕುತ್ತಿರೋ ಬಿಜೆಪಿ ಖಜಾನೆ ಸೇರಿರುತ್ತೆ.

ಯಾವಾಗ ಬಿಜೆಪಿ donatefordesh ಹೆಸರಲ್ಲಿ ವೆಬ್​ಸೈಟ್ ರಿಜಿಸ್ಟರ್ ಮಾಡಿರೋದು ಗೊತ್ತಾಯ್ತೋ, ಕಾಂಗ್ರೆಸ್ ಅಕ್ಷರಶ: ರೊಚ್ಚಿಗೆದ್ದಿದೆ. ಜನರು ಕಾಂಗ್ರೆಸ್​​ಗೆ ಅಂತಾ ಕೊಡೋ ಹಣವನ್ನ ತನ್ನ ಅಕೌಂಟ್​​ಗೆ ಡೈವರ್ಟ್​ ಮಾಡೋಕೆ ಬಿಜೆಪಿ ಷಡ್ಯಂತ್ರ ಮಾಡಿದೆ. ನಮ್ಮ ಕ್ಯಾಂಪೇನ್​ನನ್ನ ಕಾಪಿ ಮಾಡಿ, ಫೇಕ್ ವೆಬ್​ಸೈಟ್ ಮಾಡಿ ಜನರನ್ನ ಕನ್​ಫ್ಯೂಸ್ ಮಾಡೋಕೆ ಯತ್ನಿಸಿದೆ ಅಂತಾ ಕಾಂಗ್ರೆಸ್​ ವಾಗ್ದಾಳಿ ನಡೆಸಿದೆ. ಅಲ್ದೆ, ಸದ್ಯ ಕಾಂಗ್ರೆಸ್​ನ ದೇಶಕ್ಕಾಗಿ ದೇಣಿಗೆ ವೆಬ್​ಸೈಟ್​​ನ್ನ donateinc.in (ಡೊನೇಟ್ ಐಎನ್​​ಸಿ ಡಾಟ್ ಇನ್) ಅಂತಾ ರಿಜಿಸ್ಟರ್​ ಮಾಡಿಸಿಕೊಂಡಿದೆ. ಈ ವೆಬ್​ಸೈಟ್​ನ್ನ ಓಪನ್​ ಮಾಡಿದ ಕೂಡಲೇ ಕಾಂಗ್ರೆಸ್​ನ ಪೇಜ್ ಓಪನ್​ ಆಗುತ್ತೆ. ಮಹಾತ್ಮಾ ಗಾಂಧೀಜಿ ಫೋಟೋ ಕೂಡ ಕಾಣಿಸುತ್ತೆ. ಆಗಲೇ ಹೇಳಿದ ಹಾಗೆ, 138 ರೂಪಾಯಿ, 1380 ರೂಪಾಯಿ, 13,800 ರೂಪಾಯಿ ಜೊತಗೆ ಅದರ್ಸ್​ ಅಂತಾನೂ ಒಂದು ಆಪ್ಷನ್​ ಇದೆ. ಅದರಲ್ಲಿ ಹೆಚ್ಚಿನ ಹಣವನ್ನ ಡೊನೇಟ್ ಮಾಡಬಹುದು. ಅದು ನೇರವಾಗಿ ಕಾಂಗ್ರೆಸ್​​ನ ಅಕೌಂಟ್​ಗೆ ಸೇರುತ್ತೆ.

ಅಂತೂ ಕಾಂಗ್ರೆಸ್​ ಡೊನೇಷನ್ ಕ್ಯಾಂಪೇನ್​ ಆರಂಭದಲ್ಲೇ ಎಡವಟ್ಟು ಮಾಡಿಕೊಂಡಂತೆ ಕಾಣ್ತಿದೆ. ಬಿಜೆಪಿ ಐಟಿ ಸೆಲ್​ನ ಕೌಂಟರ್​​ ಸ್ಟ್ರ್ಯಾಟಜಿಗೆ ಕಾಂಗ್ರೆಸ್​ಗೆ ಮೋಯೆ ಮೋಯೆ ಮೂಮೆಂಟ್ ಆಗಿರೋದಂತೂ ಸುಳ್ಳಲ್ಲ. ಆದ್ರೆ ಡೊನೇಟ್ ಫಾರ್ ದೇಶ್ ಕ್ಯಾಂಪೇನ್​ನಿಂದ ಕಾಂಗ್ರೆಸ್​ಗೆ ಒಂದು ದಿನದಲ್ಲೇ 1.5 ಕೋಟಿ ರೂಪಾಯಿ ದೇಣಿಗೆ ಬಂದಿದ್ಯಂತೆ. ಮಹಾರಾಷ್ಟ್ರ, ರಾಜಸ್ಥಾನ, ಉತ್ತರಪ್ರದೇಶ, ದೆಹಲಿ ಮತ್ತು ಕರ್ನಾಟಕದಿಂದ ಅತೀ ಹೆಚ್ಚು ಹಣ ಹರಿದು ಬಂದಿದೆ. ಇವೆಲ್ಲದ್ರ ಮಧ್ಯೆ ಕಾಂಗ್ರೆಸ್ ಡೊನೇಷನ್ ಕ್ಯಾಂಪೇನ್ ವಿರುದ್ಧ ಬಿಜೆಪಿ ಸಮರ ಸಾರಿದೆ. ದೇಶಕ್ಕಾಗಿ ದೇಣಿಗೆ ಹೆಸರಲ್ಲಿ ಕಾಂಗ್ರೆಸ್ ಜನಸಾಮಾನ್ಯರನ್ನ ಮಂಗ ಮಾಡ್ತಿದೆ. ಈ ಹಣ ನೇರವಾಗಿ ಗಾಂಧಿ ಪರಿವಾರಕ್ಕೆ ಹೋಗುತ್ತೆ. ಕುಟುಂಬ ರಾಜಕಾರಣ ಮಾಡುವವರಿಗೆ ದೇಣಿಗೆ ನೀಡಬೇಡಿ ಬಿಜೆಪಿ ಹೊಸ ಕ್ಯಾಂಪೇನ್​ನನ್ನೇ ಶುರು ಮಾಡಿದೆ. ಆದ್ರೆ ಇದೇ ಬಿಜೆಪಿ ಕೂಡ ಜನರಿಂದ ದೇಣಿಗೆ ಸಂಗ್ರಹಿಸ್ತಾ ಇದೆ. ಜನರು ಕೊಟ್ಟ ದುಡ್ಡಿನಿಂದಾಗಿ ಅತ್ಯಂತ ಶ್ರೀಮಂತ ಪಕ್ಷವಾಗಿದೆ ಅನ್ನೋದನ್ನ ಮರೆಯುವಂತಿಲ್ಲ. ಚುನಾವಣಾ ಬಾಂಡ್​ಗಳ ಮೂಲಕವೇ ಬಿಜೆಪಿಗೆ ಭಾರಿ ಪ್ರಮಾಣದಲ್ಲಿ ಹಣ ಹರಿದು ಬರ್ತಿದೆ. ಇತ್ತೀಚೆಗಷ್ಟೇ ನಡೆದ ಪಂಚರಾಜ್ಯ ಚುನಾವಣೆ ವೇಳೆ ಕೂಡ ಚುನಾವಣಾ ಬಾಂಡ್​ಗಳ ಮೂಲಕ ಸಾಕಷ್ಟು ಹಣ ಬಿಜೆಪಿ ಬೊಕ್ಕಸ ಸೇರಿತ್ತು. ಚುನಾವಣಾ ಬಾಂಡ್​ಗಳ ಮೂಲಕ ಅತೀ ಹೆಚ್ಚು ಹಣ ಸಂಗ್ರಹಿಸ್ತಿರೋ ಪಕ್ಷ ಅಂದ್ರೆ ಅದು ಬಿಜೆಪಿಯೇ. 2023ರ ಜನವರಿಯಲ್ಲಿ ಎಲೆಕ್ಷನ್ ಕಮಿಷನ್ ರಿಲೀಸ್ ಮಾಡಿದ್ದ ರಿಪೋರ್ಟ್ ಪ್ರಕಾರ 2021-22ರ ಆರ್ಥಿಕ ವರ್ಷದಲ್ಲಿ 1,917 ಕೋಟಿ ರೂಪಾಯಿ ಹಣ ಬಿಜೆಪಿ ಬೊಕ್ಕಸ ಸೇರಿತ್ತು. ಈ ಪೈಕಿ 1033 ಕೋಟಿ ಚುನಾವಣಾ ಬಾಂಡ್​ ಮೂಲಕವೇ ಹರಿದು ಬಂದಿತ್ತು. 2ನೇ ಸ್ಥಾನದಲ್ಲಿರೋ ಟಿಎಂಸಿ 545 ಕೋಟಿ ರೂಪಾಯಿ ದೇಣಿಗೆ ಸಂಗ್ರಹಿಸಿತ್ತು. ಕಾಂಗ್ರೆಸ್ 541 ಕೋಟಿ ರೂಪಾಯಿ ಸಂಗ್ರಹಿಸಿತ್ತು. ಆದ್ರೆ ಚುನಾವಣಾ ಬಾಂಡ್​ ಮೂಲಕ ಕಾಂಗ್ರೆಸ್​ಗೆ ಸಿಕ್ಕಿರೋದು 95 ಕೋಟಿ ರೂಪಾಯಿ ಮಾತ್ರ. ಹೀಗಾಗಿ ಕಾಂಗ್ರೆಸ್ ಪಾಲಿಗೆ ಎಲ್ಲಾ ರೀತಿಯಲ್ಲೂ ಜನರೇ ಜನಾರ್ಧನ. ವೋಟು ಮಾತ್ರವಲ್ಲ ಧನವೂ ಜನರಿಂದಲೇ ಸಿಗ್ತಾ ಇರೋದು. ಹೀಗಾಗಿ ಈಗ ಲೋಕಸಭೆ ಚುನಾವಣೆಗಾಗಿ ಕಾಂಗ್ರೆಸ್​ಗೆ ಹಣದ ಅನಿವಾರ್ಯತೆ ಎದುರಾಗಿದೆ. ಹೀಗಾಗಿ ವೋಟು ಕೇಳೋ ಮುನ್ನ ಜನರ ಬಳಿ ದೇಣಿಗೆ ಕೇಳ್ತಾ ಇದೆ. ಆದ್ರೆ ಈ ದೇಣಿಗೆ ಕೇಳೋದ್ರಲ್ಲೂ ಎಡವಟ್ಟು ಮಾಡಿದ್ರೆ ಹೇಗೆ? ಎದುರಾಳಿ ಬಿಜೆಪಿಯಂಥಾ ಪಾರ್ಟಿ ಇರೋವಾಗ ವೆಬ್​ಸೈಟ್ ಕೂಡ ರಿಜಿಸ್ಟರ್ ಮಾಡದೆ ಹಣ ಕೇಳಿದ್ರೆ ಕೇಸರಿ ಕಲಿಗಳು ಬಿಡ್ತಾರಾ? ಅಂತೂ ದೇಣಿಗೆ ಸಂಗ್ರಹ ವಿಚಾರದಲ್ಲೂ ಕಾಂಗ್ರೆಸ್​ ಈಗ ಬಿಜೆಪಿಯಿಂದಲೇ ಪಾಠ ಕಲಿಯುವಂತಾಗಿದೆ.

Shwetha M