ಹಳಸಿ ಹೋಯ್ತಾ ಸುಮಲತಾ – ದರ್ಶನ್ ಸಂಬಂಧ? – ಭವಿಷ್ಯದ ಯೋಚನೆ, ಸರ್ಜರಿ ಬೇಡವೆಂದ D-BOSS
ಚಾಲೆಂಜಿಂಗ್ ಸ್ಟಾರ್ ದರ್ಶನ್ ನೇರಾ ನೇರ ನಡವಳಿಕೆಗೆ ಹೆಸರಾದವರು. ಸ್ಯಾಂಡಲ್‌ವುಡ್‌ನಲ್ಲಿ ತನ್ನದೇ ಆದ ಬ್ರ್ಯಾಂಡ್ ಹುಟ್ಟು ಹಾಕಿದವರು.. ನೇರ ನುಡಿಯ ಜೊತೆಗೆ ಹೃದಯವಂತಿಕೆಯಿಂದ ಅಭಿಮಾನಿಗಳ ಹೃದಯದಲ್ಲಿ ಮನೆ ಮಾಡಿದ್ದಾರೆ. ತಾನು ಬೆಳೆಯುತ್ತಲೇ ಇತರರನ್ನೂ ಬೆಳೆಸಬೇಕೆಂಬ ಇರಾದೆ ದರ್ಶನ್‌ಗಿಂತು. ಸಾಕಷ್ಟು ಜನ ಹೀರೋಗಳು ಅವರ ಹಿಂದೆ ಇರೋದನ್ನ ನೋಡಿದ್ರೆ ಗೊತ್ತಾಗುತ್ತೆ ಅವರ ಬೆಳವಣಿಗೆಗೆ ದರ್ಶನ್ ಕಾರಣವಂತ.. ಆದ್ರೆ ಒಂದೇ ಒಂದು ತಪ್ಪು ದರ್ಶನ್ ಬದಕನ್ನ ಬದಲಾಯಿಸಿ ಬಿಟ್ಟಿದೆ. ಕೊಲೆ ಕೇಸ್‌ನಲ್ಲಿ ದಾಸ ಜೈಲು ಸೇರಿದಾಗ ಅನೇಕರು ಜೈಲಿಗೆ ತೆರಳಿ ದರ್ಶನ ಪಡೆದು ಬಂದರು. ಆದರೆ. ದರ್ಶನ್ ಅವರ ಮದರ್ ಇಂಡಿಯಾ ಸುಮಲತಾ ಮಾತ್ರ ಜೈಲಿನ ಸುತ್ತ ಮುತ್ತ ಕಾಣಿಸಲಿಲ್ಲ. ಮಗನ ಮುಖ ನೋಡಲು ಕೂಡ ಬರಲಿಲ್ಲ. ಅಷ್ಟೇ ಅಲ್ಲ ದರ್ಶನ್ ಮಧ್ಯಂತರ ಜಾಮೀನು ಪಡೆದು ಹೊರ ಬಂದ್ರು ದರ್ಶನ್‌ನನ್ನ ಸುಮಲತಾ ನೋಡಿಲ್ಲ.. ಹಾಗಿದ್ರೆ ಸಮಲತಾ ದರ್ಶನ್ ಸಂಬಂಧ ಹಳಸಿ ಹೋಯ್ತಾ..? ದರ್ಶನ್ ಸರ್ಜರಿ ಯಾವಾಗ ಅನ್ನೋ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಹರಿಣಗಳ ಬೆಂಡೆತ್ತಿದ ಭಾರತ – 10 ಸಿಕ್ಸ್.. 7 ಫೋರ್.. ಸಂಜು ಹೀರೋ
ಬೆನ್ನು ನೋವಿಗೆ ಚಿಕಿತ್ಸೆ ಪಡೆಯುವ ಸಲುವಾಗಿ ದರ್ಶನ್ ಅವರಿಗೆ ಜಾಮೀನು ನೀಡಲಾಗಿದ್ದು, ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಆದ್ರೆ ದರ್ಶನ್ ಜೈಲಿನಲ್ಲಿರುತ್ತಾ ಅವರ ಆಪ್ತರು ದರ್ಶನ್‌ನ್ನ ಮೀಟ್ ಆಗಿದ್ರು. ಆದ್ರೆ ದರ್ಶನ್ ನನ್ನ ಮಗ ಅಂತಾ ಹೇಳುವ ಸುಮಲತಾ ಯಾಕೆ ದರ್ಶನ್‌ನನ್ನ ಇನ್ನೂ ಭೇಟಿ ಆಗಿಲ್ಲ.. ಎಲ್ಲರಂತೆ ದರ್ಶನನ್ನ ಸಮಲತಾ ಯ್ಯೂಸ್ ಮಾಡಿಕೊಂಡು ಬಿಟ್ರಾ ಅನ್ನೋ ಪ್ರಶ್ನೆಗಳು ಎದ್ದಿವೆ. ಆದ್ರೆ ಅದಕ್ಕೆ ಸಮಲತಾ ಅವರೇ ಈಗ ಉತ್ತರ ಕೊಟ್ಟಿದ್ದಾರೆ.
ದರ್ಶನ್ ಯಾವತ್ತು ಇದ್ದರೂ ನನ್ನ ಮಗನೇ
ಅಭಿಮಾನಿಗಳು ರೊಚ್ಚಿಗೆಳುತ್ತಿದ್ದಂತೆ ಸುಮಲತಾ ಈಗ ದರ್ಶನ್ ಕುರಿತು ಮಾತನಾಡಿದ್ದಾರೆ. ದರ್ಶನ್ ಯಾವತ್ತು ಇದ್ದರೂ ನನ್ನ ಮಗನೇ ಎಂದು ಹೇಳಿದ್ದಾರೆ. ಈ ಕುರಿತು ಮಂಡ್ಯದಲ್ಲಿ ಮಾತನಾಡಿರುವ ಸುಮಲತಾ, ದರ್ಶನ್ ಕೈಯಲ್ಲಿ ಫೋನ್ ಇಲ್ಲ ಈ ಕಾರಣಕ್ಕೆ ವಿಜಯಲಕ್ಷ್ಮಿ ಜೊತೆ ಮಾತನಾಡಿಯೇ ವಿಚಾರವನ್ನು ನಾವು ತಿಳಿದುಕೊಳ್ಳುತ್ತಿದ್ದೇವೆ ಎಂದು ಹೇಳಿದ್ದಾರೆ. ದರ್ಶನ್ ಜೈಲಿನಲ್ಲಿರುವಾಗ ಅಭಿ ಹೋಗಿ ಮಾತನಾಡಿಸಿಕೊಂಡು ಬಂದಿದ್ದ ಎಂದಿರುವ ಸುಮಲತಾ ಸದ್ಯ ದರ್ಶನ್ ಕೂಡ ಈ ಪ್ರಕರಣದ ಕುರಿತು ಯಾರ ಜೊತೆ ಮಾತನಾಡುವಂತೆ ಇಲ್ಲ ಹೀಗಾಗಿ ನಾವು ಈ ಪ್ರಕರಣದ ಬಗ್ಗೆ ಹೆಚ್ಚೇನು ಮಾತನಾಡುವುದಿಲ್ಲ ಎಂದಿದ್ದಾರೆ.
ದರ್ಶನ್ ಸರ್ಜರಿ ಇಷ್ಟ ಇಲ್ವಂತೆ..!
ಅಷ್ಟೇ ಅಲ್ಲ ದರ್ಶನ್ ಅವರ ಆರೋಗ್ಯದ ಬಗ್ಗೆ ಸುಮಲತಾ ಅಪ್ಡೇಟ್ ನೀಡಿದ್ದಾರೆ. ದರ್ಶನ್‌ಗೆ ಸರ್ಜರಿ ಇಷ್ಟ ಇಲ್ಲ ಎಂಬ ವಿಷಯವನ್ನು ಅವರು ಬಹಿರಂಗಪಡಿಸಿದ್ದಾರೆ. ದರ್ಶನ್‌ಗೆ ‘ಬೆನ್ನು ನೋವು ತುಂಬಾ ಇದೆ. ಆದರೆ ಸರ್ಜರಿ ಅವರಿಗೆ ಇಷ್ಟ ಇಲ್ಲ ಅಂತ ನಾನು ಕೇಳ್ಪಟ್ಟೆ. ದರ್ಶನ್ ಸರ್ಜರಿಗೆ ಹೆದುರುತ್ತಿದ್ದಾರೆಂದು ಸಮಲತಾ ತಿಳಿಸಿದ್ದಾರೆ. ಹಾಗಿದ್ರೆ ದರ್ಶನ್ ಯಾಕೆ ಸರ್ಜರಿಗೆ ಹೆದುರುತ್ತಿದ್ದಾರೆ, ಶಸ್ತ್ರಚಿಕಿತ್ಸೆಯ ಬಗ್ಗೆ ದರ್ಶನ್‌ಗೆ ಇರುವ ಆಯ್ಕೆಗಳೇನು? ಅನ್ನೋ ವಿವರ ಇಲ್ಲಿದೆ.
ದರ್ಶನ್‌ಗೆ ಯಾವ ಆಯ್ಕೆ ಸರಿ?
ದರ್ಶನ್ ಈಗ ಬೆನ್ನು ನೋವಿನ ಸರ್ಜರಿ ಮಾಡಿಸಿಕೊಳ್ಳೋಕೆ ಭಯ ಪಡುತ್ತಿದ್ದಾರೆ. ಒಂದು ವೇಳೆ ಶಸ್ತ್ರಚಿಕಿತ್ಸೆ ಮಾಡಿ ಅದು ವಿಫಲವಾದರೆ ಜೀವನ ಪರ್ಯಂತ ಬೆಡ್ರೆಸ್ಟ್ ಮಾಡಬೇಕಾಗುತ್ತೆ. ಲೈಫ್ ಹಾಳಾಗಿ ಹೋಗುತ್ತೆ. ರಿಕವರಿ ಸಮಯ ತುಂಬ ಬೇಕಾಗುತ್ತೆ. ಶೂಟಿಂಗ್ ಅರ್ಧಕ್ಕೆ ನಿಂತಿದೆ. ಸಿನಿಮಾ ಇಂಡಸ್ಟ್ರಿಗೆ ನಷ್ಟವಾಗಬಹುದು. ಆದ್ರೆ ಶಸ್ತ್ರಚಿಕಿತ್ಸೆ ಸಫಲವಾದರೆ ಯಾವತ್ತೂ ತೊಂದರೆ ಬರಲ್ಲ. ಶಸ್ತ್ರಚಿಕಿತ್ಸೆ ಸಫಲವಾದ್ರೂ ಮುಂದೆ ಸೈಡ್ ಎಫೆಕ್ಟ್ ಆಗುವ ಚಾನ್ಸ್ ಇರುತ್ತೆ.. ಒಂದು ವೇಳೆ ಶಸ್ತ್ರ ಚಿಕಿತ್ಸೆ ಬೇಡ ಅಂದ್ರೆ ಫಿಸಿಯೋಥೆರಪಿ ಆಯ್ಕೆ ದರ್ಶನ್ ಮಂದಿದೆ. ಡಾಕ್ಟರ್ ಕೂಡ ಕೋರ್ಟ್‌ಗೆ ಸಲ್ಲಿಸಿರೋ ರಿಪೋರ್ಟ್‌ನಲ್ಲಿ ಸರ್ಜರಿ ಅಥವಾ ಫಿಸಿಯೋಥೆರಪಿ ಎಂದು ಹೇಳಿದ್ದಾರೆ. ಆದ್ರೆ ಜೈಲಿಗೆ ಹೋಗಬೇಕಾಗುತ್ತೆ. ಹೀಗೆ ದರ್ಶನ್‌ಗೆ ಸಾಲು ಸಾಲು ಸಂಕಷ್ಟ ಎದುರಾಗಿದೆ.. ಧೈರ್ಯ ಮಾಡಿ ಸರ್ಜರಿ ಮಾಡಿಕೊಂಡ್ರೆ ಓಡಾಡಲಾಗದ ಸ್ಥಿತಿಗೆ ಹೋದ್ರೆ ಅನ್ನೋ ಭಯ ದರ್ಶನ್‌ನನ್ನ ಕಾಡ್ತಾ ಇರೋದಂತು ಸತ್ಯ. ಹೀಗಾಗಿ ದರ್ಶನ್ ಆಯ್ಕೆ ಮೇಲೆ ಅವರ ಭವಿಷ್ಯ ನಿಂತಿದೆ.