ದೇಶದ ಅತ್ಯಂತ ಹಿರಿಯ ಸಿಂಹಿಣಿ ಸಾವು – ಸಿಂಹಗಳ ಜೀವನ ಶೈಲಿ, ಜೀವಿತಾವಧಿ ಎಷ್ಟು ಗೊತ್ತಾ?

ದೇಶದ ಅತ್ಯಂತ ಹಿರಿಯ ಸಿಂಹಿಣಿ ಸಾವು – ಸಿಂಹಗಳ ಜೀವನ ಶೈಲಿ, ಜೀವಿತಾವಧಿ ಎಷ್ಟು ಗೊತ್ತಾ?

ಕಾಡಿನಲ್ಲಿ ಹತ್ತು ಹಲವು ಬಗೆಯ ಮೃಗಗಳು ಇರುತ್ತವೆ. ಸಸ್ಯಾಹಾರಿ ಹಾಗೂ ಮಾಂಸಾಹಾರಿ ಪ್ರಾಣಿಗಳು ವಾಸಿಸುತ್ತವೆ. ಅದ್ರಲ್ಲೂ ಸಿಂಹವನ್ನು ಕಾಡಿನ ರಾಜ ಎಂದೇ ಕರೆಯಲಾಗುತ್ತೆ. ಏಷ್ಯಾದಲ್ಲಿ ಸಿಂಹಗಳು ಹೆಚ್ಚಾಗಿ ಕಂಡುಬರುತ್ತವೆಯಾದರೂ, ಆಫ್ರಿಕಾದಲ್ಲಿ ಕಂಡುಬರುವ ಸಿಂಹಗಳನ್ನು ಅತ್ಯಂತ ವಿಶೇಷ ಎಂದು ಪರಿಗಣಿಸಲಾಗಿದೆ. ಇನ್ನು ಸಿಂಹಗಳು ಗುಂಪುಗಳಲ್ಲಿ ಮಾತ್ರ ವಾಸಿಸಲು ಬಯಸುತ್ತಾರೆ. ಅವುಗಳ ಹಿಂಡಿನಲ್ಲಿ 15 ಸಿಂಹಗಳಾದ್ರು ಇದ್ದೇ ಇರುತ್ತವೆ, ಅವುಗಳಲ್ಲಿ ಒಂದು ಅವುಗಳ ಮುಖ್ಯಸ್ಥನಾಗಿರುತ್ತೆ. ಇನ್ನು ಸಿಂಹಗಳನ್ನು ಮೃಗಾಲಯಗಳಲ್ಲೂ ನೋಡಬಹುದಾಗಿದೆ. ಇದೀಗ ದೇಶದ ಅತ್ಯಂತ ಹಿರಿಯ ಸಿಂಹಿಣಿ ಅಂತಾ ಕರೆಸಿಕೊಂಡಿದ್ದ ಸಿಂಹ ಸಾವನ್ನಪ್ಪಿದೆ.

ತಿರುಪತಿ ಶ್ರೀ ವೆಂಕಟೇಶ್ವರ ಮೃಗಾಲಯದಲ್ಲಿ ಮತ್ತೊಂದು ಸಿಂಹ ಸಾವನ್ನಪ್ಪಿದೆ. ನಾಲ್ಕು ದಿನಗಳ ಹಿಂದೆಯಷ್ಟೇ ಇದೇ ಮೃಗಾಲಯದ ಅನುರಾಗ್ ಎಂಬ ಗಂಡು ಸಿಂಹ ಸಾವನ್ನಪ್ಪಿತ್ತು. ಇದೀಗಾ ಇಪ್ಪತ್ಮೂರು ವರ್ಷದ ಹಿರಿಯ ಸಿಂಹಿಣಿ ಸೀತಾ ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದು, ಶುಕ್ರವಾರ(ಡಿ.22) ತಿರುಪತಿಯ ಶ್ರೀ ವೆಂಕಟೇಶ್ವರ ಝೂಲಾಜಿಕಲ್ ಪಾರ್ಕ್‌ನಲ್ಲಿ ಕೊನೆಯುಸಿರೆಳೆದಿದ್ದಾಳೆ ಎಂದು ಮೃಗಾಲಯದ ಮೇಲ್ವಿಚಾರಕರಾದ ಸೆಲ್ವಂ ಮಾಹಿತಿ ನೀಡಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಸಿಂಹಿಣಿಯ ಆಹಾರಕ್ರಮದಲ್ಲಿ ಬದಲಾವಣೆ ಮಾಡಿದರೂ ಕೂಡ ಕೆಲ ದಿನಗಳ ಹಿಂದಿನಿಂದ ಆಹಾರ ಸೇವಿಸುವುದನ್ನು ಬಿಟ್ಟಿದ್ದಳು. ಆದ್ದರಿಂದ ಆರೋಗ್ಯ ಮತ್ತಷ್ಟು ಹದಗೆಟ್ಟಿ ಸಾವನ್ನಪ್ಪಿದೆ ಎಂದು ತಿಳಿದುಬಂದಿದೆ. 2001ರಲ್ಲಿ ಸರ್ಕಸ್ ಕಂಪನಿಯಿಂದ ಎಸ್ ವಿ ಮೃಗಾಲಯಕ್ಕೆ ವರ್ಗಾವಣೆಗೊಂಡ 82 ಸಿಂಹಗಳಲ್ಲಿ ಸೀತಾ ಕೂಡ ಒಂದು. ಆದರೆ 82 ಸಿಂಹಗಳಲ್ಲಿ ಎರಡು ದಶಕಗಳ ವರೆಗೆ ಬದುಕುಳಿದ ಏಕೈಕ ಸಿಂಹಿಣಿ ಈ ಸೀತಾ. ಸೀತಾ ಸಾವಿಗೆ ನಿಖರ ಕಾರಣ ತಿಳಿಯಲು ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ. ಇನ್ನೂ ಸರಾಸರಿ ಸಿಂಹಗಳ ಜೀವಿತಾವಧಿಯ ಬಗ್ಗೆ ಹೇಳುವುದಾದರೆ ಸಾಮಾನ್ಯವಾಗಿ ಸೆರೆಯಲ್ಲಿ ಇರಿಸಲಾದ ಸಿಂಹದ ಸರಾಸರಿ ಜೀವಿತಾವಧಿಯು ಅಪರೂಪವಾಗಿ 18 ರಿಂದ 20 ವರ್ಷಗಳನ್ನು ಮೀರುತ್ತದೆ. ಆದರೆ ಕಾಡಿನಲ್ಲಿ ಅಂತಹ ಪ್ರಾಣಿಗಳ ಸರಾಸರಿ ಜೀವಿತಾವಧಿ 12 ರಿಂದ 16 ವರ್ಷಗಳ ನಡುವೆ ಇರುತ್ತದೆ ಎಂದು ತಜ್ಞರು ಹೇಳುತ್ತಾರೆ.

ಇದನ್ನೂ ಓದಿ : ಬೆಕ್ಕು ಕಂಡರೆ ವಾಹನ ನಿಲ್ಲಿಸೋದ್ಯಾಕೆ – ಅಪಶಕುನ ಎಂಬ ನಂಬಿಕೆ ಹಿಂದಿನ ವೈಜ್ಞಾನಿಕ ಕಾರಣವೇನು?

ದೇಶದಲ್ಲೇ ಅತ್ಯಂತ ಹಿರಿಯ ವಯಸ್ಸಿನ ಸಿಂಹಿಣಿಗಳಲ್ಲಿ ಒಂದಾದ 23ವರ್ಷದ ಸಿಂಹಿಣಿ ಸೀತಾ. ಇದಲ್ಲದೇ ಬಾಂಧವಗಢದ ರಕ್ಷಣಾ ಕೇಂದ್ರದಲ್ಲಿ 30 ವರ್ಷ ಬದುಕಿದ್ದ ರಾಜನಂತಹ ದೀರ್ಘಾಯುಷ್ಯ ಸಿಂಹಗಳ ಸಾಲಿಗೆ ಸೀತೆ ಸೇರುತ್ತಾಳೆ. ಜೈಪುರ ಮೃಗಾಲಯದಲ್ಲಿ 28 ವರ್ಷ ಬದುಕಿದ್ದ ಬಾದ್‌ಶಾ 2014 ರಲ್ಲಿ ನಿಧನವಾಗಿತ್ತು. ರಾಯ್‌ಪುರದ ನಂದನ್ ವಾನ್ ಮೃಗಾಲಯದಲ್ಲಿ, ರಾಜಾ ಎಂಬ ಹೆಸರಿನ ಮತ್ತೊಂದು ಸಿಂಹವು 2016 ರಲ್ಲಿ ಸಾವನ್ನಪ್ಪಿತ್ತು,ಈ ಮೂಲಕ 25 ವರ್ಷಗಳ ಕಾಲ ಬದುಕಿತ್ತು.

ಸಿಂಹಗಳ ಜೀವನ ಶೈಲಿಯ ಬಗ್ಗೆ ನೋಡೋದಾದ್ರೆ ಸಿಂಹಗಳು ಗಂಟೆಗೆ 50 ಮೀಟರ್ ವೇಗದಲ್ಲಿ ಓಡಬಲ್ಲವು, ಆದರೆ ಅವುಗಳ ಉದ್ದದ ಜಿಗಿತವು 36 ಅಡಿಗಳವರೆಗೆ ಇರುತ್ತದೆ. ಅದರ ತೂಕವು ಆರಾಮದಾಯಕವಾಗಿ 170 ರಿಂದ 230 ಕೆ.ಜಿಯಷ್ಟು ಇರುತ್ತದೆ. ಹಾಗೆಯೇ ಸಿಂಹಿಣಿಗಳು ಇದಕ್ಕಿಂತ ಕಡಿಮೆ ಭಾರವನ್ನು ಹೊಂದಿರುತ್ತವೆ ಮತ್ತು 120 ರಿಂದ 180 ಕೆಜಿ ತೂಕವಿರುತ್ತವೆ. ಸಿಂಹದ ಘರ್ಜನೆಯು 5 ಮೈಲಿ ಅಂದರೆ 8 ಕಿಲೋಮೀಟರ್ ದೂರದಿಂದ ಕೇಳಬಹುದು, ಆದರೆ ಹುಲಿಯ ಘರ್ಜನೆಯು ಇದಕ್ಕಿಂತ ಕಡಿಮೆಯಿರುತ್ತದೆ, ಇದು 3 ಕಿಲೋಮೀಟರ್ ದೂರದಿಂದ ಕೇಳುತ್ತದೆ. ಸಿಂಹಗಳನ್ನು ಖಂಡಿತವಾಗಿ ಕಾಡಿನ ರಾಜ ಎಂದು ಕರೆಯಲಾಗುತ್ತದೆ, ಆದರೆ ಅವು ಕಾಡಿಗಿಂತ ಬಯಲು ಪ್ರದೇಶದಲ್ಲಿ ವಾಸಿಸಲು ಬಯಸುತ್ತವೆ ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗಬಹುದು. ಆಫ್ರಿಕಾವು ಕಾಡಿನೊಂದಿಗೆ ಸಂಬಂಧ ಹೊಂದಿರುವುದರಿಂದ ಬಹುಶಃ ಇದೇ ಕಾರಣಕ್ಕೆ ಇಲ್ಲಿ ಸಿಂಹಗಳು ಹೆಚ್ಚಿವೆ ಎನ್ನಬಹುದು. ಆದರೆ ಇಲ್ಲಿ ಕಾಡು ಎಂದರೆ ದಟ್ಟವಾದ ಅರಣ್ಯವಲ್ಲ. ಸಿಂಹಗಳ ವಯಸ್ಸನ್ನು ಅವುಗಳ ಮುಖದ ಸುತ್ತ ಇರುವ ದೊಡ್ಡ ಕೂದಲಿನಿಂದ ನಿರ್ಧರಿಸಬಹುದು. ಸಿಂಹವು ನಡೆಯುವಾಗ, ಅದರ ಹಿಮ್ಮಡಿ ಎಂದಿಗೂ ನೆಲವನ್ನು ಮುಟ್ಟುವುದಿಲ್ಲ, ಆದರೆ ಅದು ದಿನದ 24 ಗಂಟೆಗಳಲ್ಲಿ 20 ಗಂಟೆಗಳ ಕಾಲ ಮಲಗುತ್ತದೆ. 4 ಗಂಟೆ ಮಾತ್ರ ಮಲಗುವುದಿಲ್ಲ.

Shantha Kumari