ಪ್ರಸಾದ ಸೇವಿಸಿ ಜನ ಅಸ್ವಸ್ಥ ಪ್ರಕರಣ – ಲ್ಯಾಬ್‌ ರಿಪೋರ್ಟ್‌ನಲ್ಲಿ ಬಯಲಾಯ್ತು ಆತಂಕಕಾರಿ ವಿಚಾರ!

ಪ್ರಸಾದ ಸೇವಿಸಿ ಜನ ಅಸ್ವಸ್ಥ ಪ್ರಕರಣ – ಲ್ಯಾಬ್‌ ರಿಪೋರ್ಟ್‌ನಲ್ಲಿ ಬಯಲಾಯ್ತು ಆತಂಕಕಾರಿ ವಿಚಾರ!

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯಲ್ಲಿ ಪ್ರಸಾದ ಸೇವಿಸಿ ಓರ್ವ ಮಹಿಳೆ ಮೃತಪಟ್ಟಿದ್ದು, ಹಾಗೂ 271 ಜನ ಅಸ್ವಸ್ತಗೊಂಡಿದ್ದರು. ಇದೀಗ ಈ ವಿಷ ಪ್ರಸಾದ ದುರಂತದ ಹಿಂದಿನ ಸತ್ಯ ಇದೀಗ ಬಯಲಾಗಿದೆ. ಪ್ರಸಾದ ವಿಷವಾಗಲು ನೀರು ಕಾರಣವಾಗಿದೆ ಎಂದು ಪ್ರಸಾದ ದುರಂತದಿಂದ ಅಸ್ವಸ್ಥರಾದವರ ಲ್ಯಾಬ್ ರಿಪೋರ್ಟ್​ನಲ್ಲಿ ಈ ಆತಂಕಕಾರಿ ಅಂಶ ಬಯಲಾಗಿದೆ.

ಇದನ್ನೂ ಓದಿ: ರಿಷಬ್ ಪಂತ್ CSK ಕ್ಯಾಪ್ಟನ್ ಆಗ್ತಾರಾ? – ಶಿಷ್ಯನಿಗೆ ಪಟ್ಟ ಕಟ್ತಾರಾ ಧೋನಿ?

ಪ್ರಸಾದ ಸೇವಿಸಿ ಅಸ್ವಸ್ಥರಾದವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಈ ವೇಳೆ ಎಲ್ಲರನ್ನು ಪರೀಕ್ಷಿಸಿ, ಅವರ ಮಾದರಿಗಳನ್ನು ಸಂಗ್ರಸಿ ಲ್ಯಾಬ್‌ಗೆ ಕಳುಹಿಸಲಾಗಿತ್ತು. ಇದೀಗ ಎಲ್ಲರ ಲ್ಯಾಬ್ ರಿಪೋರ್ಟ್​ ಬಂದಿದ್ದು. ಇದರಲ್ಲಿಆತಂಕಕಾರಿ ವಿಚಾರ ಬಯಲಾಗಿದೆ. ಲ್ಯಾಬ್‌ ರಿಪೋರ್ಟ್‌ನಲ್ಲಿ ಆಸ್ಪತ್ರೆಗೆ ದಾಖಲಾಗಿದ್ದವರಲ್ಲಿ ಕಾಲರಾ ಅಂಶ ಇರುವುದು‌ ಪತ್ತೆ ಆಗಿದೆ. ಕಾಲರಾದಿಂದಲೇ ನೂರಾರು ಜನರಿಗೆ ವಾಂತಿ ಬೇದಿ ಶುರುವಾಗಿದೆ. ನಗರದಲ್ಲಿ ಸ್ವಚ್ಚತೆಯಿಲ್ಲದ ಕಾರಣ ಕಾಲರಾ ಹರಡಿರುವ ಭೀತಿ ಎದುರಾಗಿದೆ.

ಸದ್ಯ ಲ್ಯಾಬ್ ರಿಪೋರ್ಟ್ ಜಿಲ್ಲಾಡಳಿತ ಆರೋಗ್ಯ ಇಲಾಖೆ ಹಾಗೂ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಕಡಿಮೆ ಪ್ರಮಾಣದಲ್ಲಿ ಕಾಲರಾ ಇರುವುದು ಸ್ವಲ್ಪ ಸಮಾಧಾನವಾಗಿದೆ. ಕಾಲರಾ‌ ಅಂಶ ತಿಳಿಯಲು‌ ನೀರಿನ ಮಾದರಿ ಸಂಗ್ರಹಕ್ಕೆ ಆರೋಗ್ಯ ಇಲಾಖೆ ಮುಂದಾಗಿದೆ. ಎಷ್ಟು ಪ್ರಮಾಣದಲ್ಲಿ ಎಲ್ಲೆಲ್ಲಿ ಕಾಲರಾ ಹಬ್ಬಿದೆ ಅಂತ ಅಧಿಕಾರಿಗಳಿಂದ ತನಿಖೆ ಮಾಡಲಾಗುತ್ತಿದೆ.

Shwetha M