ಅಭಿಷೇಕ್ ಅಫೇರ್.. ಕಣ್ಣಾರೆ ಕಂಡ ಐಶ್ – ಬಚ್ಚನ್ – ಕೌರ್ ಪ್ರೇಮ ಪುರಾಣ
ಐಶ್ವರ್ಯಾ ಕಾಯಿಲೆಗೂ ಇದೇ ಕಾರಣ..!

ಅಭಿಷೇಕ್ ಅಫೇರ್.. ಕಣ್ಣಾರೆ ಕಂಡ ಐಶ್ – ಬಚ್ಚನ್ – ಕೌರ್ ಪ್ರೇಮ ಪುರಾಣಐಶ್ವರ್ಯಾ ಕಾಯಿಲೆಗೂ ಇದೇ ಕಾರಣ..!

ಬಾಲಿವುಡ್‌ನಲ್ಲಿ ಬಿಗ್‌ ಬಿ ಫ್ಯಾಮಿಲಿಗೆ ತನ್ನದೇ ಆದ ವರ್ಚಸ್ಸು ಇದೆ. ಬಚ್ಚನ್ ಕುಟುಂಬಕ್ಕೆ ತನ್ನದೇ ಆದ ಗೌರವ ವಿದೆ. ಆದ್ರೆ, ಬಚ್ಚನ್ ಫ್ಯಾಮಿಲಿಗೆ ಕಪ್ಪು ಚುಕ್ಕೆ ಇಟ್ರಾ ಅಭಿಶೇಕ್ ಬಚ್ಚನ್ ಎಂಬ ಡೌಟ್ ಶುರುವಾಗಿದೆ. ಮನೆಯಲ್ಲಿ ಮುತ್ತಿನಂಥಾ ಹೆಂಡತಿಯಿದ್ರೂ ಬೇರೆ ಅಫೇರ್ ಇಟ್ಟುಕೊಂಡಿದ್ಯಾಕೆ ಅಭಿಶೇಕ್ ಬಚ್ಚನ್ ಎಂಬ ಚರ್ಚೆ ಶುರುವಾಗಿದೆ. ಇಷ್ಟು ದಿನ ಐಶ್ ಗೆ ಬೈತಿದ್ದ ಫ್ಯಾನ್ಸ್ ಈಗ ಅಭಿಷೇಕ್ ಗೆ ಬಾಯಿಗೆ ಬಂದಂಗೆ ಟೀಕೆ ಮಾಡ್ತಿದ್ದಾರೆ. ಐಶ್ವರ್ಯಾ ದಾಂಪತ್ಯ ಹಾಳು ಮಾಡಿದ ಬಾಲಿವುಡ್ ನಟಿಗೂ ಹಿಡಿಶಾಪ ಹಾಕ್ತಿದ್ದಾರೆ. ಆದ್ರೆ, ಇಷ್ಟು ದಿನ ಗಂಡನ ಕಳ್ಳಾಟವನ್ನ ಐಶ್‌ಬೇಬಿ ಅದೇಗೆ ಸಹಿಸಿಕೊಂಡಿದ್ದಾರೋ ಅನ್ನೋ ಮಾತು ಕೂಡಾ ಕೇಳಿಬರ್ತಿದೆ. ಬಚ್ಚನ್ ಫ್ಯಾಮಿಲಿಗೆ ಎಂಟ್ರಿಕೊಟ್ಟ ಆ ನಟಿಯಾರು?, ಬಚ್ಚನ್ ಕುಟುಂಬದಿಂದ ಐಶ್ವರ್ಯಾ ದೂರಾಗಿದ್ದು ಕನ್ಫರ್ಮ್ ಹೌದಾ?, ಐಶ್ ಅನಾರೋಗ್ಯಕ್ಕೆ ಗಂಡನ ಪ್ರೇಮ ಪುರಾಣವೇ ಕಾರಣನಾ ಅನ್ನೋ ಬಗ್ಗೆ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: 2 ಇನ್ನಿಂಗ್.. 11 ವಿಕೆಟ್.. SUPER MAN ವಾಷಿಂಗ್ಟನ್ – ಕಿವೀಸ್ ಕಿವಿ ಹಿಂಡಿದ್ದೇ ಸುಂದರ್

ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯಾ ರೈ ದಾಂಪತ್ಯದ ಬಗ್ಗೆ ಆಗಾಗ ಕೆಲವು ವದಂತಿಗಳು ಹರಿದಾಡುತ್ತಲೇ ಇರುತ್ತವೆ. ಈ ದಂಪತಿ ವಿಚ್ಛೇದನ ಪಡೆಯುತ್ತಿದ್ದಾರೆ ಎಂದು ಕೆಲವರು ಹೇಳಿದರೆ, ಇನ್ನೂ ಕೆಲವರು ಇದನ್ನು ಅಲ್ಲಗಳೆದಿದ್ದಾರೆ. ಕೊನೆಗೂ ಅಭಿಷೇಕ್ ಬಚ್ಚನ್ ಸೀಕ್ರೆಟ್ ಒಂದು ರಿವೀಲ್ ಆಗಿದೆ. ಅಭಿ ಮತ್ತು ಐಶ್ ದೂರಾಗಲು ಬಾಲಿವುಡ್​ನ ನಟಿಯೊಬ್ಬರು ಕಾರಣ ಎಂದು ಹೇಳಲಾಗುತ್ತಿದೆ. ಆಲ್‌ರೆಡಿ ಐಶ್ವರ್ಯಾ ರೈ, ಅಭಿಷೇಕ್ ಬಚ್ಚನ್ ಅವರಿಂದ ದೂರವಾಗಿ ಪ್ರತ್ಯೇಕವಾಗಿ ವಾಸ ಮಾಡುತ್ತಿದ್ದಾರೆ.  ಐಶ್ವರ್ಯಾ ಮಗಳು ಆರಾಧ್ಯಾ ಜೊತೆ ತಮ್ಮ ತಾಯಿ ಮನೆಯಲ್ಲಿ ಇದ್ದಾರೆ. ಆದರೆ, ಕಾನೂನಾತ್ಮಕವಾಗಿ ಇನ್ನೂ ವಿಚ್ಛೇದನ ಪಡೆದಿಲ್ಲ ಅಂತಾನೇ ಹೇಳಲಾಗ್ತಿದೆ. ಇಷ್ಟು ದಿನ ಐಶ್ ಬಗ್ಗೆಯೇ ಗಾಸಿಪ್ ಕ್ರಿಯೇಟ್ ಆಗಿತ್ತು. ಐಶ್ ಬೇಬಿ ದಪ್ಪ ಆಗಿದ್ದಾಳೆ. ಐಶ್ ಗೆ ಆರೋಗ್ಯ ಸರಿಯಿಲ್ಲ. ಐಶ್ ಗೆ ಬಚ್ಚನ್ ಫ್ಯಾಮಿಲಿ ಸರಿಹೋಗ್ತಿಲ್ಲ. ಅತ್ತೆಗೂ ಸೊಸೆಗೂ ಹೊಂದಾಣಿಕೆ ಆಗ್ತಿಲ್ಲ. ಒಂದಾ ಎರಡಾ.. ಗಂಡ ಹೆಂಡತಿ ಜಗಳಕ್ಕೆ ಹೆಂಡ್ತಿಯನ್ನೇ ಹೊಣೆಮಾಡಿ ಮನಸಿಗೆ ಬಂದಂಗೆ ಬೈಗುಳದ ಸುರಿಮಳೆಯೂ ಆಗಿತ್ತು. ಆದ್ರೆ, ಸತ್ಯ ಒಂದಲ್ಲ ಒಂದು ದಿನ ಹೊರಬರಲೇಬೇಕು. ಇದೀಗ ಅಭಿ ಐಶ್ ದೂರಾಗಲು ಕಾರಣ ಬಾಲಿವುಡ್ ನಟಿ ಅನ್ನೋ ವಿಚಾರ ಗೊತ್ತಾಗಿದೆ.

ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಗೆ ಇತ್ತೀಚೆಗೆ ಸಿನಿಮಾ ಆಫರ್ ಗಳು ಅಷ್ಟಕಷ್ಟೇ. ಆದ್ರೆ, ಲವ್ ಅಫೇರ್ ನಲ್ಲಿ ಮಾತ್ರ ಇನ್ನೂ ಅಭಿಷೇಕ್ ಹೀರೋ ರೇಂಜ್ ನಲ್ಲೇ ಇದ್ದಾರೆ. ನಟಿ ನಿಮ್ರತ್ ಕೌರ್ ಜೊತೆ ರಿಲೇಶನ್​ಶಿಪ್ ಹೊಂದಿದ್ದಾರೆ. ಸಿನಿಮಾದಲ್ಲಿ ಫೇಲ್ಯೂರ್ ಆದ್ರೂ ಲವ್ ಅಫೇರ್ ನಲ್ಲಿ ಅಭಿಷೇಕ್ ಬಚ್ಚನ್ ಸೋತೇ ಇಲ್ಲ. ಮನೆಯಲ್ಲಿ ಮುತ್ತಿನಂಥಾ ಹೆಂಡ್ತಿ, ಎದೆಯೆತ್ತರ ಬೆಳೆದ ಮಗಳಿದ್ದರೂ ಅಭಿಷೇಕ್ ಬಚ್ಚನ್ ಲವ್ ಲ್ಲಿ ಬಿದ್ದಿದ್ದಾರೆ. ‘ದಾಸ್ವಿ’ ಸಿನಿಮಾದ ಶೂಟ್ ವೇಳೆ ನಮೃತ್​ ಕೌರ್ ತೆಕ್ಕೆಯಲ್ಲಿ ಕಾಲ ಕಳೆದಿದ್ದಾರೆ. ಇದೇ ವಿಚಾರಕ್ಕಾಗಿ ಪತ್ನಿ ಐಶ್ವರ್ಯಾ ರೈ ಬಚ್ಚನ್ ಫ್ಯಾಮಿಲಿಯನ್ನ ತೊರೆದು ತವರು ಮನೆ ಸೇರಿದ್ದಾರೆ. ಇನ್ನು ನಮೃತಾ ಕೌರ್ ಕೂಡಾ ಬಚ್ಚನ್ ಫ್ಯಾಮಿಲಿಗೆ ಸೇರಲು ಕಾಯ್ತಾ ಇದ್ರು. ಹೀಗಾಗಿ ಐಶ್ವರ್ಯಾ ಸ್ಥಾನಕ್ಕೆ ಬರಲು ರೆಡಿಯಾಗಿದ್ದಾರೆ ಎನ್ನಲಾಗಿದೆ.

ಗಂಡನ ಕಳ್ಳಾಟದಿಂದ ಅತಿಯಾದ ಒತ್ತಡದಿಂದ ಇದ್ದ ಐಶ್ವರ್ಯಾ ಅವರಿಗೆ ಅನಾರೋಗ್ಯ ಉಂಟಾಗಿದೆ ಎನ್ನಲಾಗಿದೆ. ಈ ಕಾರಣದಿಂದಲೇ ಅವರ ದೇಹದ ತೂಕ ಹೆಚ್ಚುತ್ತಿದೆಯಂತೆ. ಅವರು ಮೊದಲಿಗಿಂತ ದಪ್ಪ ಆಗಿದ್ದು ಕೂಡಾ ಗಂಡನ ಪ್ರೇಮ ಪುರಾಣದ ಒತ್ತಡದಿಂದಲೇ ಅಂತಾ ಹೇಳಲಾಗ್ತಿದೆ. ಇನ್ನು ಅಭಿಶೇಕ್ ಬಚ್ಚನ್ ನಮೃತಾ ಕೌರ್ ಪ್ರೇಮ ಪುರಾಣ ಈಗ ಬಟಾಬಯಾಲಾಗಿದೆ.

2021ರಲ್ಲಿ ದಸವಿ ಸಿನಿಮಾದಲ್ಲಿ ಅಭಿಶೇಕ್ ಗೆ ಜೊತೆಯಾಗಿ ನಟಿಸಿದ್ದೇ ಈ ನಿಮ್ರತ್ ಕೌರ್.  ಈ ಚಿತ್ರವೇ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ರೈ ಸಂಸಾರವನ್ನ ಹಾಳು ಮಾಡಿದ್ದು ಅನ್ನೋದು ಈಗ ಬಹುತೇಕರಿಗೆ ಗೊತ್ತಾಗಿದೆ. ಈ ಚಿತ್ರದ ಸಮಯದಲ್ಲಿ ನಿಮ್ರತ್ ಕೌರ್ ಸೌಂದರ್ಯಕ್ಕೆ ಅಭಿಷೇಕ್ ಬಚ್ಚನ್ ಮನ ಸೋತಿದ್ದರು. ಪ್ರೀತಿಯಲ್ಲಿ ಬಿದ್ದಿದ್ದರು. ಇನ್ನೂ ನಿಮ್ರತ್ ಕೌರ್ ಕೂಡ ಅಭಿಷೇಕ್ ಬಚ್ಚನ್ ಜೊತೆ ತೀರಾ ಸಲುಗೆಯನ್ನು ಬೆಳೆಸಿಕೊಂಡಿದ್ದರು. ಅಭಿಷೇಕ್ ಬಚ್ಚನ್ ಅವರನ್ನು ನಿಮ್ರತ್ ಕೌರ್ ಕೂಡ ಪ್ರೀತಿಸಲು ಶುರು ಮಾಡಿದ್ದರು. ಐಶ್ವರ್ಯ ರೈ ಬೆನ್ನ ಹಿಂದೆ ಇಬ್ಬರು ಮಾಡಬಾರದ್ದನ್ನೆಲ್ಲ ಮಾಡಿದ್ದರು. ಬೆಕ್ಕು ಕಣ್ಣು ಮುಚ್ಚಿ ಹಾಲು ಕುಡಿದರೆ ಗೊತ್ತಾಗಲ್ವಾ..? ಅಭಿಷೇಕ್ ಬಚ್ಚನ್ ತಮಗೆ ಮೋಸ ಮಾಡುತ್ತಿರುವುದನ್ನ ಐಶ್ವರ್ಯ ರೈ ಕಣ್ಣಾರೆ ಕಂಡಿದ್ದಾರೆ. ಅದೇ ದಿನವೇ ಐಶ್ವರ್ಯ ಹೃದಯ ನುಚ್ಚು ನೂರಾಗಿತ್ತು ಅಂತಾ ಐಶ್ ಆತ್ಮೀಯರೊಬ್ಬರು ಹೇಳಿದ್ದಾರೆ.

ಇದಾದ ಸ್ವಲ್ಪ ಸಮಯದ ನಂತರ ಪ್ರೀತಿ ವಿಚಾರದಲ್ಲಿ ಮುಂದೆ ಇಟ್ಟಿದ್ದ ಹೆಜ್ಜೆಯನ್ನು ಹಿಂದೆ ತೆಗೆದುಕೊಳ್ಳಲು ಅಭಿಷೇಕ್ ಬಚ್ಚನ್ ಮುಂದಾಗಿದ್ದಾರೆ. ನಾ ಅವನಲ್ಲ.. ನಾ ನಿನ್ನವನೇ ಅಂತಾ ಮರಳಿ ಐಶ್ವರ್ಯ ರೈ ಬಳಿ ಬಂದಿದ್ದಾರೆ. ಆದರೆ ಐಶ್ವರ್ಯ ರೈ ಅವರ ಒಡೆದ ಹೃದಯ ಮತ್ತೆ ಮಿಡಿಯಲಿಲ್ಲ. ಈ ಕಾರಣಕ್ಕೆ ಮನೆಯನ್ನು ಖಾಲಿ ಮಾಡಿದ ಐಶ್ವರ್ಯ ರೈ ಸದ್ಯ ತಮ್ಮ ಮಗಳು ಆರಾಧ್ಯ ಮತ್ತು ತಾಯಿಯ ಜೊತೆ ಪ್ರತೈಕವಾಗಿ ವಾಸ ಮಾಡುತ್ತಿದ್ದಾರೆ ಎಂದು ಐಶ್ ಫ್ಯಾಮಿಲಿಯ ಆತ್ಮೀಯರೊಬ್ಬರು ವಿಚಾರವನ್ನು ಹಂಚಿಕೊಂಡಿದ್ಧಾರೆ. ಬಾಲಿವುಡ್‌ನಲ್ಲಿ ಸಂಚಲನ ಸೃಷ್ಟಿಸಿದ್ದಾರೆ. ಸದ್ಯಕ್ಕೆ ಈ ವಿಚಾರದ ಕುರಿತು ಐಶ್ವರ್ಯ ರೈ ಆಗಲಿ ಅಭಿಷೇಕ್ ಬಚ್ಚನ್ ಆಗಲಿ ಅಥವಾ ನಿಮ್ರತ್ ಕೌರ್ ಆಗಲಿ ಯಾರು ಅಧಿಕೃತವಾದ ಹೇಳಿಕೆಯನ್ನು ನೀಡಿಲ್ಲ. ಸ್ಪಷ್ಟನೆಯನ್ನು ಕೂಡ ನೀಡಿಲ್ಲ. ಹೀಗಾಗಿಯೇ ಅನೇಕರು ಹಬ್ಬಿರುವ ಈ ಸುದ್ದಿ ನಿಜಾ ಎಂದುಕೊಳ್ಳುತ್ತಿದ್ದಾರೆ. ಬೆಂಕಿ ಇರದೇ ಹೊಗೆಯಾಡಲ್ಲ ಎನ್ನುತ್ತಿದ್ದಾರೆ. ಇನ್ನು ಇದೇ ವಿಚಾರವನ್ನ ಇಟ್ಟುಕೊಂಡು ಟ್ರೋಲ್‌ ಕೂಡ ಮಾಡಲಾಗ್ತಿದೆ.. ಮನೆಯಲ್ಲಿ ಲ್ಯಾಂಬೋರ್ಗಿನಿ ಕಾರು ಇದ್ರು.. ಬೇರೆ ಮನೆ ಅವರ ಟಯೋಟಾ ಯಾಕೆ ಬೇಕು ಅಂತಾ ನೆಟ್ಟಿಗರು ಕೇಳ್ತಿದ್ದಾರೆ..

ಅದೇನೇ ಇರಲಿ, ಇಷ್ಟು ದಿನ ಐಶ್ ಗೆ ಬೆರಳು ತೋರಿಸುತ್ತಿದ್ದವರೆಲ್ಲಾ ಅಭಿಷೇಕ್ ಕಡೆ ಬೊಟ್ಟು ಮಾಡಿ ತೋರಿಸುತ್ತಿದ್ದಾದರೆ. ಅಷ್ಟು ದೊಡ್ಡ ಮಗಳಿದ್ದರು, ಅಪ್ಪನ ಪ್ರೇಮಪುರಾಣಕ್ಕೆ ಟೀಕೆ ಮಾಡ್ತಿದ್ದಾರೆ. ಅಂತೂ ಬಾಲಿವುಡ್ ನಟಿ ಒಂದು ಚೆಂದದ ಸಂಸಾರ ಹಾಳು ಮಾಡಿದ್ದು ಹೌದೇ ಆದರೆ, ಐಶ್ ಅಭಿ ಡೈವೋರ್ಸ್ ಅಂತೂ ಪಕ್ಕಾ ಅಂತಿದ್ದಾರೆ ಕುಟುಂಬದ ಆತ್ಮೀಯರು.

Shwetha M

Leave a Reply

Your email address will not be published. Required fields are marked *