ಬೇಟೆಗೆ ಹೊರಟವನಿಗೆ ನಾಯಿಯಿಂದಲೇ ಗುಂಡೇಟು! – ಪ್ರಾಣ ಬಿಟ್ಟ ಮಾಲೀಕ

ಬೇಟೆಗೆ ಹೊರಟವನಿಗೆ ನಾಯಿಯಿಂದಲೇ ಗುಂಡೇಟು! – ಪ್ರಾಣ ಬಿಟ್ಟ ಮಾಲೀಕ

ವಾಷಿಂಗ್ಟನ್‌  (ಅಮೆರಿಕ): ದುಷ್ಕರ್ಮಿಗಳಿಂದ ಸಾರ್ವಜನಿಕರ ಮೇಲೆ ಗುಂಡಿನ ದಾಳಿ, ಗುಂಡು ಹಾರಿಸಿಕೊಂಡು ವ್ಯಕ್ತಿ ಅತ್ಮಹತ್ಯೆ ಅಂತ ಹಲವು ಬಾರಿ ಪತ್ರಿಕೆಗಳಲ್ಲಿ ಸುದ್ದಿ ಓದಿರುತ್ತೇವೆ. ಎಂದಾದರೂ ಪ್ರಾಣಿಗಳು ಮನುಷ್ಯನಿಗೆ ಶೂಟ್ ಮಾಡುವುದನ್ನು ಕೇಳಿದ್ದೀರಾ? ಅರೇ ಪ್ರಾಣಿಗಳು ಎಂದಾದರೂ ಮನುಷ್ಯನ ಮೇಲೆ ಗುಂಡು ಹಾರಿಸುತ್ತಾ? ಇದು ಸಾಧ್ಯನಾ… ಪ್ರಾಣಿಗಳು ಹೇಗೆ ಮನುಷ್ಯನ ಮೇಲೆ ಗುಂಡುಹಾರಿಸುತ್ತೆ? ಇದೆಲ್ಲಾ ಸಿನಿಮಾದಲ್ಲಿ ಮಾತ್ರ ಸಾಧ್ಯ. ಆದರೆ ಅಮೆರಿಕದಲ್ಲಿ ವಿಚಿತ್ರ ಘಟನೆ ನಡೆದಿದ್ದು, ಸಾಕು ನಾಯಿಯಿಂದ ಮಾಲೀಕ ಸಾವನ್ನಪ್ಪಿದ್ದಾನೆ.

ಇದನ್ನೂ ಓದಿ: ಚಿರತೆಗೆ ನಾಲ್ವರು ಬಲಿ – ಕಂಡಲ್ಲಿ ಗುಂಡಿಕ್ಕಿ ಕೊಲ್ಲುವಂತೆ ಸರ್ಕಾರದ ಆದೇಶ

ಅಮೆರಿಕದ ಕಾನ್ಸಾಸ್‌ನಲ್ಲಿ ಈ ಘಟನೆ ನಡೆದಿದೆ. ಮಾಲೀಕ ತನ್ನ ಸಾಕು ನಾಯಿಯೊಂದಿಗೆ ಪಿಕಪ್ ವಾಹನದಲ್ಲಿ ಬೇಟೆಗೆ ಹೋಗುತ್ತಿದ್ದ. ಈ ವೇಳೆ ಪಿಕಪ್‌ನ ಹಿಂಬದಿಯಲ್ಲಿ ಬಂದೂಕು ಇಟ್ಟಿದ್ದಾನೆ. ಹಿಂಬದಿಯಲ್ಲಿದ್ದ ನಾಯಿ ರೈಫಲ್‌ನ ಮೇಲೆ ಆಕಸ್ಮಿಕವಾಗಿ ಕಾಲಿಟ್ಟಿದೆ. ಈ ವೇಳೆ ಬಂದೂಕಿನಿಂದ ಹಾರಿದ ಗುಂಡು ಮಾಲೀಕನಿಗೆ ತಗುಲಿದ್ದು, ಆತ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ ಎಂದು ಸಮ್ನರ್ ಕೌಂಟಿ ಶೆರಿಫ್ ಕಚೇರಿ ತಿಳಿಸಿದೆ.

ಪ್ರಾಥಮಿಕ ತನಿಖೆಯ ವರದಿಯಂತೆ ಇದು ಬೇಟೆಗೆ ಸಂಬಂಧಿತ ಅನಾಹುತ ಎಂಬಂತೆ ತೋರುತ್ತದೆ. ಆದರೆ ಸಾವನ್ನಪ್ಪಿದ 30 ವರ್ಷದ ವ್ಯಕ್ತಿ ನಾಯಿಯ ಮಾಲೀಕನೇ ಎಂಬುದನ್ನು ಪತ್ತೆಹಚ್ಚಬೇಕಿದೆ. ಇದು ಕೊಲೆಯೂ ಆಗಿರಬಹುದು. ನಾಯಿಯ ಹೆಸರು ಹೇಳಿ ದಾರಿತಪ್ಪಿಸಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಅಲ್ಲದೇ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಆದರೆ ಅವರಿಗೆ ಇದುವರೆಗೆ ಯಾವುದೇ ಪುರಾವೆ ಸಿಕ್ಕಿಲ್ಲ.

ಇತ್ತೀಚಿನ ದಿನಗಳಲ್ಲಿ ಅಮೆರಿಕದಲ್ಲಿ ಆಕಸ್ಮಿಕ ಗುಂಡಿನ ದಾಳಿಗಳು ನಡೆಯುತ್ತಲೇ ಇದೆ. ಕಾನೂನು ಅನುಮತಿಯಿಂದಾಗಿ ಅಮೆರಿಕದಲ್ಲಿ ಬಂದೂಕು ಬಳಸುವವರ ಸಂಖ್ಯೆ ಹೆಚ್ಚಿದೆ. 2018 ರಲ್ಲಿ ಮೆಕ್ಸಿಕೋದಲ್ಲಿ ಇದೇ ರೀತಿಯ ಘಟನೆ ನಡೆದಿತ್ತು. ಬೇಟೆಯಾಡಲು ಹೊರಟಿದ್ದ ಮುದ್ದಿನ ನಾಯಿ ಆಕಸ್ಮಿಕವಾಗಿ ಬೆನ್ನಿಗೆ ಗುಂಡು ಹಾರಿಸಿದ್ದರಿಂದ ಮಾಲೀಕ ಮೃತಪಟ್ಟಿದ್ದ.

suddiyaana