ಹಾರ್ದಿಕ್ ಪಾಂಡ್ಯಾ ತಪ್ಪು ತಿದ್ದಿಕೊಳ್ತಾರಾ? – ಆರೆಂಜ್ ಆರ್ಮಿ ಎದುರು ಅಬ್ಬರಿಸ್ತಾರಾ ಹಿಟ್‌ಮ್ಯಾನ್ ರೋಹಿತ್ ಶರ್ಮಾ?

ಹಾರ್ದಿಕ್ ಪಾಂಡ್ಯಾ ತಪ್ಪು ತಿದ್ದಿಕೊಳ್ತಾರಾ? – ಆರೆಂಜ್ ಆರ್ಮಿ ಎದುರು ಅಬ್ಬರಿಸ್ತಾರಾ ಹಿಟ್‌ಮ್ಯಾನ್ ರೋಹಿತ್ ಶರ್ಮಾ?

ಮುಂಬೈ ಇಂಡಿಯನ್ಸ್ ಐಪಿಎಲ್ ನ ಪವರ್‌ಫುಲ್ ಟೀಮ್. ಎಂಐ ಮ್ಯಾಚ್ ಇದ್ರೆ ನೋಡೋಕೆ ಕಣ್ಣಿಗೆ ಹಬ್ಬ. ಹಿಟ್‌ಮ್ಯಾನ್ ಅಬ್ಬರ, ಬೂಮ್ ಬೂಮ್ ಬೂಮ್ರಾ ಬೌಲಿಂಗ್ ಮ್ಯಾಜಿಕ್, ಸೂರ್ಯಕುಮಾರ್ ಯಾದವ್ ಹೊಡಿಬಡಿಯಾಟ, ಇಶಾನ್ ಕಿಶನ್ ಕೀಪಿಂಗ್ ಸ್ಟೈಲ್, ಹೀಗೆ ಬೌಲಿಂಗ್, ಬ್ಯಾಟಿಂಗ್, ಕೀಪಿಂಗ್, ಫೀಲ್ಡಿಂಗ್ ಯಾವ ವಿಭಾಗ ತಗೊಂಡ್ರೂ ಅಲ್ಲಿ ಮುಂಬೈ ಇಂಡಿಯನ್ಸ್‌ ಕಮ್ಮಿಯಿಲ್ಲ.. ಹಾಗಿದ್ದರೂ ಎಲ್ಲವೂ ಇರುವ ಮುಂಬೈ ಇಂಡಿಯನ್ಸ್ ಆಡಿದ ಮೊದಲ ಪಂದ್ಯದಲ್ಲೇ ಮುಗ್ಗರಿಸಿದೆ. ಇದು ತಂಡದ ಮೊದಲ ಸೋಲು. ಇದರ ಜೊತೆಗೆ ಎದುರಾಗಿದೆ ನಾಯಕತ್ವದ ಸವಾಲು. ಹೌದು, ಹಿಟ್‌ಮ್ಯಾನ್ ರೋಹಿತ್ ಶರ್ಮಾರನ್ನ ಕ್ಯಾಪ್ಟನ್ಸಿಯಿಂದ ಕೆಳಗಿಳಿಸಿದ್ದೇ ಮುಂಬೈ ಇಂಡಿಯನ್ಸ್‌ಗೆ ಮುಳುವಾಗಿದೆ. ಮುಂಬೈ ಇಂಡಿಯನ್ಸ್ ಫೀಲ್ಡಿಗೆ ಇಳಿದಾಗ ರೋಹಿತ್ ಶರ್ಮಾ ಬಾಡಿ ಲ್ಯಾಂಗ್ವೇಜ್ ನೋಡೋದೇ ಫ್ಯಾನ್ಸ್ ಗೆ ಸಿಕ್ಕಾಪಟ್ಟೆ ಕ್ರೇಜ್. ಆದ್ರೆ, ಮೊದಲ ಪಂದ್ಯದಲ್ಲಿ ನೋಡಿದ್ದು ರೋಹಿತ್ ಶರ್ಮಾ ಅವರ ಡಲ್ ಫೇಸ್, ಹಾರ್ದಿಕ್ ಪಾಂಡ್ಯ ಓವರ್ ಆಟಿಟ್ಯೂಡ್.. ಹಾರ್ದಿಕ್ ಮತ್ತು ಹಿಟ್‌ಮ್ಯಾನ್ ಫ್ಯಾನ್ಸ್ ವಾರ್.. ಹಾರ್ದಿಕ್ ಪಾಂಡ್ಯಾ ನಿಜಕ್ಕೂ ಹಿಟ್ ಮ್ಯಾನ್ ವಿಚಾರದಲ್ಲಿ ಸೆಲ್ಪಿಷ್ ಆಗಿರೋದೇ ಹೌದಾ, ಜೊತೆಗೆ ಟೀಮ್ ವಿಚಾರದಲ್ಲೂ ಅಷ್ಟೇ, ತಾನ್ ಹೇಳಿದ್ದೇ ಆಗ್ಬೇಕ್, ಅನುಭವಿ ಆಟಗಾರರ ಮಾತು ಕೇಳಲೇಬಾರದು, ಹಿರಿಯ ಆಟಗಾರರಿಗೂ ರೆಸ್ಪೆಕ್ಟ್ ಕೊಡಲೇಬಾರದು ಅನ್ನೋ ಹಾಗೆ ಪಾಂಡ್ಯ ವರ್ತಿಸ್ತಿರೋದು ಯಾಕೆ?.

ಇದನ್ನೂ ಓದಿ: ಗುಜರಾತ್​ ಟೈಟನ್ಸ್​​ ವಿರುದ್ಧ ಗೆದ್ದು ಬೀಗಿದ ಚೆನ್ನೈ ಸೂಪರ್​ ಕಿಂಗ್ಸ್​​ – ಬರೋಬ್ಬರಿ 63 ರನ್​ಗಳ ಭರ್ಜರಿ ಗೆಲುವು

ಜಸ್ಟ್ ಒಂದ್ ಎಕ್ಸಾಂಪಲ್ ನಮ್ಮ ಕಣ್ಣಮುಂದಿದೆ. ಮುಂಬೈ ಇಂಡಿಯನ್ಸ್ ವೇಗಿ ಜಸ್ಪ್ರೀತ್ ಬುಮ್ರಾ ಟೀಮ್ ನ ಸ್ಟ್ರೆಂಥ್ ಬೌಲರ್. ಆದರೆ ಮೊದಲ ಪಂದ್ಯದಲ್ಲಿ ಬುಮ್ರಾ ಮೊದಲ 12 ಓವರ್ಗಳಲ್ಲಿ ಎಸೆದಿದ್ದು ಕೇವಲ 1 ಓವರ್. ಐಪಿಎಲ್ನಲ್ಲಿ ಅತ್ಯಂತ ಯಶಸ್ವಿ ಬೌಲರ್ ಆಗಿರುವ ಬುಮ್ರಾ ಅವರನ್ನು ಪವರ್ಪ್ಲೇನಲ್ಲಿ ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ ಬಳಸಿಕೊಳ್ಳಲೇ ಇಲ್ಲ. ಸಾಮಾನ್ಯವಾಗಿ ಮುಂಬೈ ಇಂಡಿಯನ್ಸ್ ಪರ ಜಸ್ಪ್ರೀತ್ ಬುಮ್ರಾ ಪ್ರಥಮ ಓವರ್ ಎಸೆಯುವುದು ವಾಡಿಕೆ. ಇದಾಗ್ಯೂ ಮೊದಲ ಮೂರು ಓವರ್ಗಳ ತನಕ ಕ್ಯಾಪ್ಟನ್ ಪಾಂಡ್ಯ, ಬುಮ್ರಾಗೆ ಚೆಂಡು ನೀಡಿರಲಿಲ್ಲ. ಇನ್ನು ನಾಲ್ಕನೇ ಓವರ್ನಲ್ಲಿ ದಾಳಿಗಿಳಿದ ಜಸ್ಪ್ರೀತ್ ಬುಮ್ರಾ, ಜಿಟಿಯ ಆರಂಭಿಕ ಬ್ಯಾಟರ್ ವೃದ್ಧಿಮಾನ್ ಸಾಹ ಅವರನ್ನು ಕ್ಲೀನ್ ಬೌಲ್ಡ್ ಮಾಡಿ, ಮುಂಬೈ ಇಂಡಿಯನ್ಸ್ ತಂಡಕ್ಕೆ ಮೊದಲ ಯಶಸ್ಸು ತಂದುಕೊಟ್ಟಿದ್ದರು. ಅಷ್ಟಾದ್ರೂ ಪಾಂಡ್ಯಾ ಮಾತ್ರ ಎದುರಾಳಿಯ ಮೇಲೆ ಹೆಚ್ಚು ಪ್ರೆಷರ್‌ ಬಿಲ್ಡ್‌ ಮಾಡುವ ಅವಕಾಶ ಇದ್ದರೂ ಬುಮ್ರಾಗೆ ಮತ್ತೆ ಬೌಲಿಂಗ್‌ ನೀಡ್ಲೇ ಇಲ್ಲ. 4ನೇ ಓವರ್ ಮುಗಿಸಿದ ಬಳಿಕ ಮತ್ತೆ ಜಸ್ಪ್ರೀತ್ ಬುಮ್ರಾ ಅವರಿಗೆ ಚಾನ್ಸ್ ಕೊಟ್ಟಿದ್ದು 13ನೇ ಓವರ್ನಲ್ಲಿ. ಅಂದರೆ ಇಲ್ಲಿ ಪವರ್ಪ್ಲೇನಲ್ಲಿ ಯಾರ್ಕರ್ ಸ್ಪೆಷಲಿಸ್ಟ್ ಅನ್ನು ಬಳಸಿಕೊಳ್ಳಲು ಪಾಂಡ್ಯ ಮನಸ್ಸು ಮಾಡಲಿಲ್ಲ. ಹೌದು ಡೆತ್‌ ಓವರ್‌ಗಳಲ್ಲಿ ಬುಮ್ರಾ ಡೆಡ್ಲಿ ಬೌಲರ್‌ ಅನ್ನೋದ್ರಲ್ಲಿ ಅನುಮಾನವೇ ಇಲ್ಲ.. ಹಾಗಿದ್ದರೂ ಮೊದಲ ಎರಡು ಓವರ್‌ ಹಾಗೂ ಕಡೆಯ ಎರಡು ಓವರ್‌ ಎಂದು ಎರಡು ಸ್ಪೆಲ್‌ಗಳಲ್ಲಿ ಬೌಲಿಂಗ್‌ ಮಾಡಿಸೋದ್ರ ಕಡೆಗೆ ಪಾಂಡ್ಯಾ ಮನಸ್ಸು ಮಾಡಿಯೇ ಇರಲಿಲ್ಲ.. ಹೀಗೆ ಅನುಭವಿ ವೇಗಿ ಜಸ್ಪ್ರೀತ್ ಬುಮ್ರಾರನ್ನು ಬೌಲಿಂಗ್ನಿಂದಲೇ ದೂರವಿಟ್ಟಿದ್ದ  ನಾಯಕ ಹಾರ್ದಿಕ್ ಪಾಂಡ್ಯ ನಾಯಕತ್ವದ ಬಗ್ಗೆ ಸಿಕ್ಕಾಪಟ್ಟೆ ನೆಗೆಟಿವ್ ಕಾಮೆಂಟ್ಸ್ ಬರ್ತಿದೆ. ಇನ್ನು ರೋಹಿತ್ ಶರ್ಮಾರನ್ನು ಫುಟ್ಬಾಲ್‌ ಒದ್ದಂತೆ ಗ್ರೌಂಡ್ ತುಂಬಾ ಓಡಾಡಿಸಿದ್ದು ಕೂಡಾ ಹಾರ್ದಿಕ್ ಪಾಂಡ್ಯಾಗೆ ಸೆಟ್ ಬ್ಯಾಕ್ ಆಗಿದ್ದಂತೂ ಸತ್ಯ. 2013 ರಿಂದ 2023ರ ಅಂತ್ಯದವರೆಗೆ..ಭರ್ತಿ 10 ವರ್ಷಗಳ ಕಾಲ ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್ ಕ್ಯಾಪ್ಟನ್ ಆಗಿದ್ರು ಪವರ್ಪ್ಲೇ ಮುಕ್ತಾಯದ ಬೆನ್ನಲ್ಲೇ ರೋಹಿತ್ ಶರ್ಮಾ ಅವರನ್ನು ಹಾರ್ದಿಕ್ ಪಾಂಡ್ಯ ಬೌಂಡರಿ ಲೈನ್ನತ್ತ ಕಳುಹಿಸಿದರು. ಸಾಮಾನ್ಯವಾಗಿ ಹಿಟ್ಮ್ಯಾನ್ ಸ್ಲಿಪ್ ಹಾಗೂ ಕವರ್ಸ್‌ ಹೀಗೆ 30 ಯಾರ್ಡ್‌ ಸರ್ಕಲ್‌ ( thirty yard circle)ನೊಳಗೆ ಫೀಲ್ಡಿಂಗ್‌ ಮಾಡುತ್ತಲೇ ಆಲ್‌ಮೋಸ್ಟ್‌ ತಮ್ಮ ವೃತ್ತಿಜೀವನ ಕಳೆದಿದ್ದಾರೆ. ಆದ್ರೆ ಜಿಟಿ ಬ್ಯಾಟಿಂಗ್‌ ವೇಳೆ ಕಡೆಯ ಓವರ್‌ನಲ್ಲಿ ಬೌಂಡರಿ ಲೈನ್‌ ಕಡೆಗೆ 36 ವರ್ಷದ ರೋಹಿತ್‌ ಶರ್ಮಾರನ್ನು ಪಾಂಡ್ಯಾ ಓಡಿಸಿದ್ದು ಅಭಿಮಾನಿಗಳಿ ಅಚ್ಚರಿಯ ಜೊತೆ ಸಿಟ್ಟೂ ತರಿಸಿತ್ತು.. ಹಾಗೆ ನೋಡಿದ್ರೆ ಪಾಂಡ್ಯ ನಾರ್ಮಲ್‌ ಫೀಲ್ಡರ್‌ಗಳನ್ನು ಸೆಟ್‌ ಮಾಡುವ ರೀತಿಯಲ್ಲೇ ರೋಹಿತ್‌ರನ್ನು ಕಳಿಸಿರಬಹುದು.. ಆದ್ರೆ ರೋಹಿತ್‌ಗೆ ಮೊದಲು ಪಾಂಡ್ಯಾ ಯಾರಿಗೆ ಹೇಳಿದ್ದು ಅಂತ ಗೊತ್ತಾಗಲಿಲ್ಲ. ತನಗಾ ಅಂತ ಕನ್ಫರ್ಮ್‌ ಮಾಡುತ್ತಲೇ ಬೌಂಡರಿ ಲೈನ್‌ ಕಡೆಗೆ ಓಡಿದ್ರೆ, ವಾಸ್ತವವಾಗಿ ಬೌಲರ್‌ ಬಯಸಿದ್ದ ಪ್ಲೇಸ್‌ಮೆಂಟ್‌ ಆದಾಗಿರಲಿಲ್ಲ.. ಇದ್ರಿಂದಾಗಿ ಮತ್ತೆ ಶರ್ಮಾನನ್ನು ಮತ್ತೊಂದು ಕಡೆಗೆ ಓಡಿಸಿದ್ರು. ಇದು ಹಿಟ್‌ ಮ್ಯಾನ್‌ ಅಭಿಮಾನಿಗಳ ಪಿತ್ತ ನೆತ್ತಿಗೇರುವಂತೆ ಮಾಡಿತ್ತು.. ಇದಲ್ಲದೆ ಒಮ್ಮೆ ಸ್ಲಿಪ್, ಮತ್ತೊಮ್ಮೆ ಲಾಂಗ್ ಆನ್, ಇನ್ನೊಮ್ಮೆ ಲೆಗ್ ಸೈಡ್, ಮಗದೊಮ್ಮೆ ಮಿಡ್ ವಿಕೆಟ್ನತ್ತ ನಿಲ್ಲಿಸಿದರು. ಹೀಗೆ ರೋಹಿತ್ ಶರ್ಮಾ ಅವರನ್ನು ಮೈದಾನದ ಮೂಲೆ ಮೂಲೆಯಲ್ಲಿ ನಿಲ್ಲುವಂತೆ ಮಾಡಿದರು. ಅದರಲ್ಲೂ ಹಿರಿಯ ಆಟಗಾರನಾಗಿರುವ ಕಾರಣ ಬೌಂಡರಿ ಲೈನ್ನಲ್ಲಿ ಚುರುಕಾಗಿ ಫೀಲ್ಡಿಂಗ್ ಮಾಡುವುದು ಕಷ್ಟ. ಇದಾಗ್ಯೂ ಹಾರ್ದಿಕ್ ಪಾಂಡ್ಯ, ಯುವ ಆಟಗಾರರನ್ನು ಫ್ರಂಟ್ ಫೀಲ್ಡಿಂಗ್ನಲ್ಲಿ ನಿಲ್ಲಿಸಿ ರೋಹಿತ್ ಶರ್ಮಾ ಅವರನ್ನೇ ಬೌಂಡರಿ ಲೈನ್ಗೆ ಕಳುಹಿಸಿದ್ದು ಕೂಡಾ ಫ್ಯಾನ್ಸ್ ಕೆಂಗಣ್ಣಿಗೆ ಗುರಿಯಾಗಿತ್ತು. ಮೊದಲ ಮ್ಯಾಚ್‌ನಲ್ಲೇ ಸ್ಟೇಡಿಯಂ ತುಂಬಾ ಇದ್ದ ರೋಹಿತ್‌ ಅಭಿಮಾನಿಗಳು ಅಲ್ಲಿಂದಲೇ ಹಾರ್ದಿಕ್‌ ಪಾಂಡ್ಯಾಗೆ ಟ್ರೋಲ್‌ ಮಾಡಿದ್ದರು.. ಕಿರುಚಾಟ.. ಅರಚಾಟದ ಮೂಲಕ ಪೇಚಿಗೆ ಸಿಲುಕಿಸಿದ್ದರು.. ಇದ್ರಿಂದಾಗಿ ರೋಹಿತ್‌ ಶರ್ಮಾರನ್ನು ಎಲ್ಲಿ ನಿಲ್ಲಿಸೋದು ಅನ್ನೋದ್ರಿಂದ ಹಿಡಿದು ಪ್ರತಿಯೊಂದರಲ್ಲೂ ಪಾಂಡ್ಯಾ ಪ್ರೇಕ್ಷಕರ ಟಾರ್ಗೆಟ್‌ ಆಗ್ತಿದ್ದಾರೆ.. ಈಗ ಎರಡನೇ ಪಂದ್ಯದಲ್ಲಿ ಪಾಂಡ್ಯಾ ಇನ್ನೇನು ಯಡವಟ್ಟು ಮಾಡಬಹುದು ಅನ್ನೋದನ್ನು ನೋಟ್‌ ಮಾಡಿಕೊಳ್ಳಲು ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ..

ಮತ್ತೊಂದೆಡೆ ಆರೆಂಜ್ ಆರ್ಮಿ ಸನ್‌ರೈಸರ್ಸ್ ಹೈದ್ರಾಬಾದ್ ಕೂಡಾ ಮೊದಲ ಸೋಲಿನ ಆಘಾತದಲ್ಲಿದೆ. ಮೊದಲ ಮ್ಯಾಚ್‌ ಇನ್ನೇನು ಗೆದ್ದೇ ಬಿಟ್ಟರು ಎನ್ನುವಷ್ಟರಲ್ಲಿ ಸೋತಿದ್ದು, ತಂಡಕ್ಕೆ ಆಘಾತ ತಂದಿದೆ.. ಹೀಗಾಗಿ ಎರಡನೇ ಪಂದ್ಯವನ್ನು ಗೆಲ್ಲುವ ತವಕದಲ್ಲಿದೆ. ಪ್ಯಾಟ್ ಕಮಿನ್ಸ್ ಟೀಮ್ ಕೂಡಾ ಸ್ಟ್ರಾಂಗ್ ಇದೆ. ಈಗ ಎರಡನೇ ಮ್ಯಾಚ್ ಇರೋದು ಹೋಮ್ ಗ್ರೌಂಡ್‌ನಲ್ಲಿ. ಹೀಗಾಗಿ ತಮ್ಮದೇ ನೆಲದಲ್ಲಿ ಮುಂಬೈ ಇಂಡಿಯನ್ಸ್ ಟೀಮ್ ನ ಮಣಿಸೋ ಪ್ಲ್ಯಾನ್‌ನಲ್ಲಿದೆ ಎಸ್‌ಆರ್ ಹೆಚ್ ತಂಡ. ಹೈದರಾಬಾದ್‌ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯಲಿದೆ. ಈ ಹೈವೋಲ್ಟೇಜ್‌ ಮ್ಯಾಚ್‌ನಲ್ಲಿ ಯಾರು ಗೆಲ್ತಾರೆ ಅನ್ನೋದು ಒಂದು ಕುತೂಹಲವಾಗಿದ್ದರೆ ರೋಹಿತ್‌ ಶರ್ಮಾ ಮತ್ತು ಹಾರ್ದಿಕ್‌ ಪಾಂಡ್ಯಾ ನಡುವೆ ಇನ್ನೇನು ನಡೆಯುತ್ತೆ ಎನ್ನುವುದನ್ನು ನೋಡಲು ಕ್ರಿಕೆಟ್‌ ಪ್ರಿಯರು ತುದಿಗಾಲಲ್ಲಿ ನಿಂತು ಕಾಯ್ತಿದ್ದಾರೆ..

Sulekha