ಹೆಣ್ಣಿಗಾಗಿ ಇಂಡಿಯಾ ಮೈತ್ರಿಕೂಟದ ನಾಯಕರಿಂದ ಕಿತ್ತಾಟ – ಇವರಲ್ಲಿ ಮದುವೆ ಗಂಡು ಯಾರು?

ಹೆಣ್ಣಿಗಾಗಿ ಇಂಡಿಯಾ ಮೈತ್ರಿಕೂಟದ ನಾಯಕರಿಂದ ಕಿತ್ತಾಟ – ಇವರಲ್ಲಿ ಮದುವೆ ಗಂಡು ಯಾರು?

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಇಂಡಿಯಾ ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರು ಎಂದು ಬಿಜೆಪಿ ವ್ಯಂಗ್ಯದ ವಿಡಿಯೋ ಮೂಲಕ ಕೇಳಿದೆ. ಈ ವಿಡಿಯೋ ಸದ್ಯ ಭಾರಿ ವೈರಲ್‌ ಆಗುತ್ತಿದೆ.

ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ವಿಡಿಯೋ ಪೋಸ್ಟ್‌ ಮಾಡಿರುವ ಬಿಜೆಪಿ, ಮದುವೆ ಗಂಡು ಯಾರು ಅಂತ ಪ್ರಶ್ನಿಸಿದೆ. ಈ ವಿಡಿಯೋದಲ್ಲಿ ಮದುವೆಗೆ ಹೆಣ್ಣು ನೋಡಲು ಹುಡುಗಿ ಮನೆಗೆ ಒಂದಷ್ಟು ನಾಯಕರು ಹೋಗಿದ್ದಾರೆ. ಅದರಲ್ಲಿ ರಾಹುಲ್ ಗಾಂಧಿ, ಅಖಿಲೇಶ್ ಯಾದವ್, ಉದ್ಧವ್ ಠಾಕ್ರೆ, ಎಂ.ಕೆ ಸ್ಟಾಲಿನ್, ಮಮತಾ ಬ್ಯಾನರ್ಜಿ, ಅರವಿಂದ್ ಕೇಜ್ರಿವಾಲ್, ತೇಜಸ್ವಿ ಯಾದವ್, ಲಾಲು ಪ್ರಸಾದ್ ಯಾದವ್, ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ ಅವರನ್ನೇ ಹೋಲುವ ಪಾತ್ರಗಳನ್ನು ಸೃಷ್ಟಿಸಲಾಗಿದೆ.

ಇದನ್ನೂ ಓದಿ: ಶಿವಂ ದುಬೆ, ರಚಿನ್ ರವೀಂದ್ರ ಬೊಂಬಾಟ್ ಬ್ಯಾಟಿಂಗ್ – ಧೋನಿ ತಂತ್ರಗಾರಿಕೆ ವರ್ಕೌಟ್ ಆಗಿದ್ದು ಹೇಗೆ?

ಮದುವೆಗೆ ಹೆಣ್ಣು ನೋಡಲು ಹೋದಾಗ ಮದುವೆ ಗಂಡು ಯಾರು ಎಂದು ಹುಡುಗಿ ಪ್ರಶ್ನಿಸುತ್ತಾಳೆ. ಆಗ ಎಲ್ಲರೂ ತಾವೇ ಮದುವೆ ಗಂಡು ಎಂದು ಹೇಳಿ ಹೊಡೆದಾಟ ನಡೆಸುತ್ತಾರೆ. ಇವರು ತಮ್ಮ ಮಧ್ಯೆ ಮದುವೆ ಗಂಡು ಯಾರು ಎಂದು ಆಯ್ಕೆ ಮಾಡಿಕೊಳ್ಳಬಹುದು ಎಂದು ಅನ್ನಿಸುತ್ತಾ? ಎಂದು ಮದುವೆ ಹೆಣ್ಣು ಕೇಳಿದ್ದಾರೆ.  ಮದುವೆ ಗಂಡು ಯಾರು ಅನ್ನೋ ವಿಚಾರಕ್ಕೆ ನಾಯಕರ ಮಧ್ಯೆ ಕಿತ್ತಾಟ ನಡೆಯುತ್ತೆ. ಮೈತ್ರಿಕೂಟದಲ್ಲಿ ಪ್ರಧಾನಮಂತ್ರಿ ಅಭ್ಯರ್ಥಿಯನ್ನು ಹೇಗೆ ಆಯ್ಕೆ ಮಾಡಿಕೊಳ್ಳುತ್ತಾರೆ ಎಂದು ಬಿಜೆಪಿ ಈ ವಿಡಿಯೋದಲ್ಲಿ ಪ್ರಶ್ನಿಸಿದೆ. ವಿರೋಧ ಪಕ್ಷಗಳಲ್ಲಿ ಇನ್ನೂ ಪ್ರಧಾನಿ ಅಭ್ಯರ್ಥಿಯೇ ಆಯ್ಕೆಯಾಗಿಲ್ಲ. ಅಂತಿಮವೂ ಆಗಿಲ್ಲ ಎನ್ನುವುದನ್ನ ವಿಡಿಯೋದಲ್ಲಿ ಬಿಜೆಪಿ ಬಿಂಬಿಸಿದೆ.

Shwetha M