‘ಸಿದ್ರಾಮುಲ್ಲಾಖಾನ್ v/s ಬೊಮ್ಮಾಯುಲ್ಲಾ ಖಾನ್’ ಕಾವೇರಿದ ಕಾಂಗ್ರೆಸ್ ಬಿಜೆಪಿ ಟ್ವೀಟ್ ವಾರ್
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಸಿದ್ರಾಮುಲ್ಲಾಖಾನ್ ಎಂದು ಬ್ರ್ಯಾಂಡ್ ಮಾಡಲು ಹೊರಟಿದ್ದ ಬಿಜೆಪಿಗೆ ಇಂದು ಕಾಂಗ್ರೆಸ್ ಬಲವಾದ ತಿರುಗೇಟು ನೀಡಿದೆ. ಬಿಜೆಪಿ ನಾಯಕರು, ಮುಸ್ಲಿಮರು ಧರಿಸುವ ಟೋಪಿ ಹಾಕಿರುವ ಫೋಟೋಗಳನ್ನು ಹಾಕಿ ಇವರಿಗೆ ಯಾವ ಹೆಸರಿಡುತ್ತೀರಿ ಎಂದು ಟ್ವೀಟ್ ಮೂಲಕ ಕಾಂಗ್ರೆಸ್ ಪ್ರಶ್ನಿಸುತ್ತಾ ಹೋಗಿದೆ. ಮುಖ್ಯಮಂತ್ರಿ ಬಸವರಾಜ್ ಅವರ ಫೋಟೋವೊಂದನ್ನ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಿದ ಕಾಂಗ್ರೆಸ್, ಇವರನ್ನು “ಬೊಮ್ಮಾಯುಲ್ಲಾ ಖಾನ್” ಎಂದು ಕರೆಯಬಹುದೇ @BJP4Karnataka ಎಂದು ಪ್ರಶ್ನೆ ಮಾಡಿದೆ.
ಇವರನ್ನು “ಬೊಮ್ಮಾಯುಲ್ಲಾ ಖಾನ್” ಎಂದು ಕರೆಯಬಹುದೇ @BJP4Karnataka? pic.twitter.com/XXRI64IYRt
— Karnataka Congress (@INCKarnataka) December 6, 2022
ಇದನ್ನೂ ಓದಿ : ಸಿದ್ರಾಮುಲ್ಲಾ ಖಾನ್ ಎಂದು ಕರೆಯುವುದ್ಯಾಕೆ ?-ಸರಣಿ ಟ್ವೀಟ್ ಮೂಲಕ ವಿವರಿಸಿದ ಬಿಜೆಪಿ
ಬಿಜೆಪಿ ಮುಖಂಡರ ಫೋಟೋಗಳನ್ನ ಮುಂದಿಟ್ಟುಕೊಂಡು ಕಾಂಗ್ರೆಸ್ ಸರಣಿ ಟ್ವೀಟ್ ಮಾಡುವ ಮೂಲಕ ವಾಗ್ದಾಳಿ ನಡೆಸುತ್ತಿದೆ. ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಸಚಿವ ಆರ್. ಆಶೋಕ್ ಅವರು ಮುಸ್ಲಿಂರು ಧರಿಸುವ ಟೋಪಿ ಹಾಕಿರುವ ಫೋಟೋ ಶೇರ್ ಮಾಡಿದ ಕಾಂಗ್ರೆಸ್, ಉತ್ತರ ನೀಡಿ ಅನ್ನೋ ರೀತಿ ಟ್ವೀಟ್ ಮಾಡಿದೆ. ಇವರಿಗೆ “ಜಬ್ಬಾರ್ ಖಾನ್” “ಅಶ್ವಾಖ್ ಇನಾಯತ್ ಖಾನ್” ಎಂದು ಹೆಸರಿಡುತ್ತೀರಾ @CTRavi_BJP ಎಂದು ಪ್ರಶ್ನಿಸಿದೆ.
ಇವರಿಗೆ “ಜಬ್ಬಾರ್ ಖಾನ್”
“ಅಶ್ವಾಖ್ ಇನಾಯತ್ ಖಾನ್” ಎಂದು ಹೆಸರಿಡುತ್ತೀರಾ @CTRavi_BJP ? pic.twitter.com/91HcuOVxb1— Karnataka Congress (@INCKarnataka) December 6, 2022
ಇನ್ನು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಫೋಟೋ ಶೇರ್ ಮಾಡಿದ ಕಾಂಗ್ರೆಸ್, ಇವರಿಗೆ ಮಹಮದ್ ಗಡ್ಕರಿ ಶೇಕ್ ಎಂದು ಮರುನಾಮಕರಣ ಮಾಡುವಿರಾ @BJP4Karnataka ಎಂದು ಬಿಜೆಪಿಯನ್ನ ಪ್ರಶ್ನಿಸಿದೆ.
ಇವರಿಗೆ ಮಹಮದ್ ಗಡ್ಕರಿ ಶೇಕ್ ಎಂದು ಮರುನಾಮಕರಣ ಮಾಡುವಿರಾ @BJP4Karnataka? pic.twitter.com/gvEhZEuJna
— Karnataka Congress (@INCKarnataka) December 6, 2022