3,000 ಮೀಟರ್ ಸಮುದ್ರದ ಆಳದಲ್ಲಿ “ಹಳದಿ ಇಟ್ಟಿಗೆ ರಸ್ತೆ”!
ಸಮುದ್ರ, ಸಾಗರದ ಆಳ ಇಂತಿಷ್ಟೇ ಇದೆ ಎಂಬುದಕ್ಕೆ ನಿಖರ ಪುರಾವೆಗಳಿಲ್ಲ. ಅಲ್ಲದೇ ಸುಮುದ್ರದೊಳಗೆ ಊರು, ಕೋಟೆ, ಅರಮನೆ ಇದೆ ಎಂಬುದನ್ನೆಲ್ಲಾ ಪುರಾಣಗಳಲ್ಲಿ, ಸೀರಿಯಲ್ ಸಿನಿಮಾಗಳಲ್ಲಿ ಕೇಳಿರುತ್ತೇವೆ. ಇವೆಲ್ಲಾ ಇಂದಿಗೂ ಮಾನವ ಕುಲದ ಅಚ್ಚರಿಗಳಾಗಿವೆ. ಇದೀಗ ಸಮುದ್ರ ಮಟ್ಟದಿಂದ ಸುಮಾರು 3,000 ಮೀಟರ್‌ಗಳಷ್ಟು ಆಳದಲ್ಲಿ ಹಳದಿ ಇಟ್ಟಿಗೆಯ ರಸ್ತೆಯೊಂದು ಪತ್ತೆಯಾಗಿರುವುದು ಈಗ ಕುತೂಹಲಕ್ಕೆ ಕಾರಣವಾಗಿದೆ.
ಇದನ್ನೂ ಓದಿ: 120 ಕಿ.ಮೀ ಈಜಿ ಬಂದ ‘ರಾಯಲ್ ಬೆಂಗಾಲ್ ಟೈಗರ್’ – ವಿಡಿಯೋ ವೈರಲ್
ಉರಲ್ ಫೆಡರಲ್ ಯೂನಿವರ್ಸಿಟಿ ಮತ್ತು ಯೂನಿವರ್ಸಿಟಿ ಆಫ್ ಟ್ಯೂಬಿಂಗೆನ್ (ಜರ್ಮನಿ) ಯ ಸಂಶೋಧಕರು ಈ ಫೆಸಿಫಿಕ್ ಸಮುದ್ರದಲ್ಲಿ ‘ಹಳದಿ ಇಟ್ಟಿಗೆ ರಸ್ತೆ’ಯನ್ನು ಕಂಡುಹಿಡಿದ್ದಾರೆ. ಈ ರಸ್ತೆಯ ಕುರಿತಾಗಿ ಹಲವು ಪ್ರಶ್ನೆಗಳು ಎದುರಾಗಿವೆ.
ನಾಟಿಲಸ್ ಎಂಬ ಸಮುದ್ರ ಪರಿಶೋಧನಾ ನೌಕೆಯು ಈ ವರ್ಷದ ಆರಂಭದಲ್ಲಿ ನಾಟಿಲಸ್ ಪಾಪಹಾನೌಮೊಕುಯಾಕಿಯಾ ಮೆರೈನ್ ನ್ಯಾಶನಲ್ ಸ್ಮಾರಕ (ಪಿಎಮ್‌ಎನ್‌ಎಂ) ಒಳಗೆ ಲಿಲಿಯುಒಕಲಾನಿ ಪರ್ವತವನ್ನು ಸಮೀಕ್ಷೆ ಮಾಡುತ್ತಿತ್ತು. ಈ ವೇಳೆ ‘ಹಳದಿ ಇಟ್ಟಿಗೆ ರಸ್ತೆ’ಯನ್ನು ಪತ್ತೆಹಚ್ಚಿದೆ.
ಈ ರಸ್ತೆಯ ನಿರ್ಮಾಣದ ಸಂಶೋಧಕರು ಅಧ್ಯಯನ ನಡೆಸಿದ್ದಾರೆ. ಸಮುದ್ರ ತಳದಲ್ಲಿರುವ ಜ್ವಾಲಾಮುಖಿ ಬಂಡೆಗಳು ಒಡೆದಾಗ ಈ ‘ಹಳದಿ ಇಟ್ಟಿಗೆ ರಸ್ತೆ’ ರೂಪುಗೊಂಡಿದೆ ಎಂದು ಹೇಳಿದ್ದಾರೆ.