ಬೆಳಗ್ಗೆ 8.30ರ ನಂತರ ಶಾಲಾ ವಾಹನ ಸಂಚಾರ ನಿಷೇಧ – ‘ಟ್ರಾಫಿಕ್’ ಪರಿಹಾರಕ್ಕೆ ಪೊಲೀಸರ ಟಾನಿಕ್
ಟ್ರಾಫಿಕ್ ಕಂಟ್ರೋಲ್ಗೆ ಪೊಲೀಸ್ ಇಲಾಖೆ ಹೊಸ ಐಡಿಯಾ
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಟ್ರಾಫಿಕ್ ನದ್ದೇ ದೊಡ್ಡ ಸಮಸ್ಯೆ. ದಿನೇ ದಿನೇ ಹೆಚ್ಚುತ್ತಿರುವ ಟ್ರಾಫಿಕ್ ಸಮಸ್ಯೆ ನಿಯಂತ್ರಿಸಲು ಪೊಲೀಸ್ ಇಲಾಖೆ ಈಗ ಮತ್ತೊಂದು ಐಡಿಯಾ ಮಾಡಿದೆ. ಬೆಳಿಗ್ಗೆ 8.30 ರ ನಂತರ ಶಾಲಾ ಬಸ್ಗಳ ಸಂಚಾರವನ್ನು ನಿಷೇಧಿಸಲು ನಿರ್ಧರಿಸಿದೆ. ಬೆಳಗ್ಗೆ 8.15ರ ನಂತರ ಶಾಲೆಗಳ ಸಮೀಪವೇ ವಿದ್ಯಾರ್ಥಿಗಳನ್ನು ಇಳಿಸಿ ಮತ್ತು ಅಲ್ಲೇ ಪಾರ್ಕಿಂಗ್ ಮಾಡುವ ಶಾಲಾ ಬಸ್ಗಳಿಗೆ ದಂಡ ವಿಧಿಸುವ ಮೂಲಕ ಹೊಸ ಕಾನೂನನ್ನು ಜಾರಿಗೆ ತರಲು ನಗರದ ನೂತನ ಸಂಚಾರ ಆಯುಕ್ತ ಐಪಿಎಸ್ ಅಧಿಕಾರಿ ಎಂ.ಎ.ಸಲೀಂ ನಿರ್ದೇಶನ ನೀಡಿದ್ದಾರೆ.
ಇದನ್ನೂ ಓದಿ : ‘ಬಡವರ ಮಕ್ಕಳನ್ನು ಗುಲಾಮಗಿರಿಗೆ ತಳ್ಳುವುದೇ ಬಿಜೆಪಿ ಅಜೆಂಡಾ’ – ಕಾಂಗ್ರೆಸ್
ಬೆಳಗ್ಗೆ 8.30ರ ನಂತರ ಯಾವುದೇ ಶಾಲಾ ವಾಹನಗಳನ್ನು ಶಾಲೆಗಳ ಬಳಿ ನಿಲ್ಲಿಸಲು ಅನುಮತಿ ಇಲ್ಲ. ನಿಲ್ಲಿಸಿದರೆ ದಂಡವನ್ನು ಪಾವತಿಸಬೇಕಾಗುತ್ತದೆ ಎಂದು ಸಂಚಾರ ಪೊಲೀಸ್ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ತರಗತಿಗಳನ್ನು ಬೇಗ ಆರಂಭಿಸುವಂತೆ ಶಾಲಾ ಆಡಳಿತ ಮಂಡಳಿಗೆ ಈಗಾಗಲೇ ಸೂಚನೆ ನೀಡಿದ್ದೇವೆ. ಮಕ್ಕಳು ಸುರಕ್ಷಿತವಾಗಿ ಶಾಲೆಗೆ ಹೋಗುವುದನ್ನು ಖಚಿತಪಡಿಸಿಕೊಳ್ಳಲು ಸಂಚಾರ ಪೊಲೀಸ್ ಇಲಾಖೆಯು ಮೀಸಲಾದ ಕ್ಯಾರೇಜ್ವೇ(Dedicated Carriageway) ಮತ್ತು ಸುರಕ್ಷಿತ ಮಾರ್ಗವನ್ನು ಜಾರಿಗೊಳಿಸುತ್ತದೆ ಎಂದು ಎಂ.ಎ.ಸಲೀಂ ಮಾಹಿತಿ ನೀಡಿದ್ದಾರೆ. ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಪಿಕ್ ಮತ್ತು ಡ್ರಾಪ್ ಮಾಡಲು ಪ್ರವೇಶ ಮತ್ತು ನಿರ್ಗಮನವನ್ನು ನಿಯೋಜಿಸಲಾಗುವುದು. ಆ ಮೀಸಲಾದ ಜಾಗದಿಂದಲೇ ಪೋಷಕರು ಮಕ್ಕಳನ್ನು ಶಾಲೆಗೆ ಕರೆದುಕೊಂಡು ಹೋಗುವುದು, ಬರುವುದು ಮಾಡಬಹುದು. ಪೋಷಕರಿಗೆ ನೀಡಲಾದ ಎಂಟ್ರಿ ಪಾಯಿಂಟ್ನಿಂದ ವಾಹನ ಚಲಾಯಿಸಿ ಮಕ್ಕಳನ್ನು ಆಟದ ಮೈದಾನದಲ್ಲಿ ಬಿಟ್ಟು ಮತ್ತೆ ಎಕ್ಸಿಟ್ ಪಾಯಿಂಟ್ಗೆ ಹಿಂತಿರುಗಬೇಕು. ಇದರಿಂದ ಟ್ರಾಫಿಕ್ ಸಮಸ್ಯೆ ನಿಯಂತ್ರಣಕ್ಕೆ ಬರುತ್ತದೆ ಎನ್ನಲಾಗ್ತಿದೆ.