ನಾನೇನೂ ತಪ್ಪು ಮಾಡಿಲ್ಲ.. ಷಡ್ಯಂತ್ರದ ಬಗ್ಗೆ ಮಾತನಾಡಲ್ಲ – ಕಾನೂನು ಹೋರಾಟದ ಜೊತೆಗೆ ರೇವಣ್ಣ ಟೆಂಪಲ್ ರನ್

ನಾನೇನೂ ತಪ್ಪು ಮಾಡಿಲ್ಲ.. ಷಡ್ಯಂತ್ರದ ಬಗ್ಗೆ ಮಾತನಾಡಲ್ಲ – ಕಾನೂನು ಹೋರಾಟದ ಜೊತೆಗೆ ರೇವಣ್ಣ ಟೆಂಪಲ್ ರನ್

ಅಪಹರಣ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ರೇವಣ್ಣ ಜೈಲಿನಿಂದ ಹೊರ ಬಂದ ಬೆನ್ನಲ್ಲೇ ಟೆಂಪಲ್‌ ರನ್‌ ಶುರುಮಾಡಿದ್ದಾರೆ. ದೇವರ ದರ್ಶನದ ಜೊತೆ ಜೊತೆಗೆ ಕಾನೂನು ಹೋರಾಟಕ್ಕೂ ಮುಂದಾಗಿದ್ದಾರೆ. ಬುಧವಾರ ರೇವಣ್ಣ  ಕಾನೂನು ತಜ್ಞರ ಜೊತೆ ಸಮಾಲೋಚನೆ ನಡೆಸಿದ್ದಾರೆ.

ಇದನ್ನೂ ಓದಿ: ಪ್ರಜ್ವಲ್‌ ರೇವಣ್ಣ ಭಾರತಕ್ಕೆ ಬರೋದು ಡೌಟ್? – ಫ್ಲೈಟ್‌ ಟಿಕೆಟ್ ರದ್ದು.. ಹಣ ವಾಪಸ್ ಪಡೆಯದೆ ಗೊಂದಲ ಸೃಷ್ಟಿಸಿದ  ನಡೆ

ಕಿಡ್ನ್ಯಾಪ್‌ ಕೇಸ್‌ ಜೊತೆಗೆ, ಪ್ರಜ್ವಲ್‌ ರೇವಣ್ಣ ಕೇಸ್‌ ಬಗ್ಗೆ ಕೂಡ ಕಾನೂನು ತಜ್ಞರ ಬಳಿ ಸಲಹೆ ಪಡೆದಿದ್ದಾರೆ. ತಂದೆ ದೇವೇಗೌಡರ ಸಲಹೆ ಪಡೆದು ಹೆಜ್ಜೆ ಇಟ್ಟಿದ್ದಾರೆ  ಎಂದು ಹೇಳಲಾಗುತ್ತಿದೆ. ವಕೀಲರ ಭೇಟಿಗೂ ಮುನ್ನ ಬೆಂಗಳೂರಿನ ಜೆಪಿ ನಗರದಲ್ಲಿರುವ ವೆಂಕಟೇಶ್ವರ ಸ್ವಾಮಿ ದೇವಸ್ಥಾನಕ್ಕೆ ತೆರಳಿ ರೇವಣ್ಣ ಎರಡು ಗಂಟೆಗಳ ಕಾಲ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರೇವಣ್ಣ, ನಾನೇನೂ ತಪ್ಪು ಮಾಡಿಲ್ಲ ಎಲ್ಲವನ್ನೂ ದೇವರಿಗೆ ಬಿಟ್ಟಿದ್ದೇನೆ. ನ್ಯಾಯಾಲಯದ ಆದೇಶಕ್ಕೆ ತಲೆಬಾಗುತ್ತೇನೆ.  ಷಡ್ಯಂತ್ರದ ಬಗ್ಗೆ ಮಾತನಾಡಲ್ಲ ಎಂದಿದ್ದಾರೆ.

ಮಂಗಳವಾರ ಮಧ್ಯಾಹ್ನ ಜೈಲಿನಿಂದ ಹೊರಬಂದ ಹೆಚ್‌ಡಿ ರೇವಣ್ಣ ಬೆಂಗಳೂರಿನ ಎರಡು ದೇವಸ್ಥಾನಗಳಿಗೆ ಭೇಟಿ ನೀಡಿದರು. ಸಂಜೆ ಚಾಮುಂಡಿ ಬೆಟ್ಟಕ್ಕೂ ಹೋಗಿ ದರ್ಶನ ಪಡೆದಿದರು. ಇನ್ನು ರೇವಣ್ಣ ಬುಧವಾರ ಹಾಸನಕ್ಕೆ ಹೋಗುವ ಯೋಜನೆ ಇತ್ತು. ಹಾಸನದಲ್ಲೂ ಅದ್ಧೂರಿ ಸ್ವಾಗತಕ್ಕೆ ಪ್ಲ್ಯಾನ್ ಮಾಡಲಾಗಿತ್ತು. ಆದ್ರೆ, ನಾನೆಲ್ಲೂ ಹೋಗಲ್ಲ ಎಂದಿರುವ ರೇವಣ್ಣ, ಬೆಂಗಳೂರಲ್ಲೇ ಇದ್ದು ಕಾನೂನು ಸಮರ ಸಾರಿದ್ದಾರೆ. ವಕೀಲರನ್ನು ಭೇಟಿಯಾಗಿ ಸಮಾಲೋಚನೆ ನಡೆಸಿದ್ದಾರೆ.

Shwetha M