ಮಾರ್ಕೋಸ್ ಕಮ್ಯಾಂಡೋಗಳ ಎಂಟ್ರಿಗೆ ಹೈಜಾಕರ್ಸ್ ಎಸ್ಕೇಪ್ – ಅರಬ್ಬೀ ಆಪರೇಷನ್ ಬಗ್ಗೆ ಇಲ್ಲಿದೆ ಡಿಟೇಲ್ಸ್

ಮಾರ್ಕೋಸ್ ಕಮ್ಯಾಂಡೋಗಳ ಎಂಟ್ರಿಗೆ ಹೈಜಾಕರ್ಸ್ ಎಸ್ಕೇಪ್ – ಅರಬ್ಬೀ ಆಪರೇಷನ್ ಬಗ್ಗೆ ಇಲ್ಲಿದೆ ಡಿಟೇಲ್ಸ್

ಭಾರತದ ತಂಟೆಗೆ ಬಂದ್ರೆ ಇನ್ಯಾರಿಗೂ ಉಳಿಗಾಲ ಇರೋದಿಲ್ಲ. ಭಾರತಕ್ಕೆ ತಾಳ್ಮೆಯಿಂದ ಸಹಿಸಿಕೊಳ್ಳೋದೂ ಗೊತ್ತು. ಗಡಿ ದಾಟಿ ನುಗ್ಗಿ ಹೊಡೆಯೋಕೂ ಗೊತ್ತು. ಭೂಮಿಯಲ್ಲೇ ಆಗಲಿ, ನೀರಿನಲ್ಲೇ ಆಗಲಿ, ಆಕಾಶದಲ್ಲೇ ಇರಲಿ. ಭಾರತೀಯ ಸೇನೆಗೆ ಇರುವ ತಾಕತ್ತೇ ಬೇರೆ. ಈಗಾಗ್ಲೇ ನಮ್ಮ ಸೈನಿಕರು ಇದನ್ನ ಹಲವು ಬಾರಿ ಪ್ರೂವ್ ಮಾಡಿದ್ದಾರೆ. ಜಗತ್ತಿನ ಯಾವುದೇ ಮೂಲೆಯಲ್ಲಿ ಭಾರತೀಯರು ಸಂಕಷ್ಟಕ್ಕೆ ಸಿಲುಕಿರಲಿ, ಪರಿಸ್ಥಿತಿ ಎಂಥದ್ದೇ ಇರಲಿ ನಮ್ಮ ಸೇನೆ ಮಾತ್ರ ಪ್ರತಿಯೊಬ್ಬರನ್ನೂ ಸೇಫ್ ಆಗಿ ಭಾರತಕ್ಕೆ ಕರೆತರುತ್ತೆ. ಸಿರಿಯಾ, ಇರಾಕ್,  ಉಕ್ರೇನ್ ಹೀಗೆ ಹಲವು ದೇಶಗಳಲ್ಲಿ ಸಂಘರ್ಷವುಂಟಾದಾಗ ಅಲ್ಲಿದ್ದ ಭಾರತೀಯರನ್ನ ಸುರಕ್ಷಿತವಾಗಿ ತಾಯ್ನಾಡಿಗೆ ಕರೆತರಲಾಗಿತ್ತು. ಆದ್ರೀಗ ಅದಕ್ಕಿಂತಲೂ ರೋಚಕ ಆಪರೇಷನ್​​ನನ್ನ ನಮ್ಮ ಸೇನೆ ಮಾಡಿದೆ. ಅರೆಬಿಯನ್ ಸಮುದ್ರದಲ್ಲಿ ಹೈಜಾಕ್​ಗೊಳಗಾಗ್ತಿದ್ದ ಹಡಗಿನಲ್ಲಿದ್ದ ಭಾರತೀಯರನ್ನ ಮಾರ್ಕೋಸ್ ಕಮ್ಯಾಂಡೋಗಳು ಸಿನಿಮೀಯ ಸ್ಟೈಲ್​​ನಲ್ಲಿ ರೆಸ್ಕ್ಯೂ ಮಾಡಿದ್ದಾರೆ. ಅಷ್ಟಕ್ಕೂ ಹಡಗನ್ನ ಹೈಜಾಕ್ ಮಾಡಿರೋದ್ಯಾರು? ಶಿಪ್​​ನಲ್ಲಿ ಎಷ್ಟು ಮಂದಿ ಭಾರತೀಯರಿದ್ರು? ರೆಸ್ಕ್ಯೂ ಆಪರೇಷನ್ ಹೇಗೆ ನಡೀತು? ಮರ್ಕೋಸ್ ಕಮಾಂಡೋಗಳ ಸ್ಪೆಷಾಲಿಟಿ ಏನು? ಇವೆಲ್ಲದರ ಬಗ್ಗೆಯೂ ವಿವರವಾದ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ರಾಮಮಂದಿರವಿದ್ದ ಜಾಗದಲ್ಲೇ ಬಾಬ್ರಿ ಮಸೀದಿ ನಿರ್ಮಾಣ ಮಾಡಲಾಗಿದ್ಯಾ – ಪುರಾತತ್ವ ಇಲಾಖೆ ಉತ್ಖನನದ ವೇಳೆ ಬಯಲಾಗಿದ್ದೇನು?

ಅರೆಬಿಯನ್​ ಸಮುದ್ರ ಇಡೀ ಜಗತ್ತನ್ನೇ ಸಂಪರ್ಕಿಸೋ ಸಮುದ್ರ ಮಾರ್ಗ. ಮಿಡ್ಲ್ ಈಸ್ಟ್, ಆಫ್ರಿಕಾ, ಯುರೋಪ್​ ರಾಷ್ಟ್ರಗಳ ಜೊತೆಗೆ ವಹಿವಾಟು ನಡೆಸಬೇಕು ಅನ್ನೋದಾದ್ರೆ ಅರೆಬಿಯನ್ ಸಮುದ್ರವನ್ನ ಹಾದುಹೋಗಲೇಬೇಕು. ಪೆಟ್ರೋಲ್, ಡೀಸೆಲ್, ಗ್ಯಾಸ್ ಸೇರಿದಂತೆ ತೈಲ ಕುಡ ಭಾರತಕ್ಕೆ ಬರೋದು ಅರೆಬಿಯನ್​ ಸಮುದ್ರದ ಮೂಲಕವೇ. ನಮ್ಮಿಂದಲೂ ವಸ್ತುಗಳು ರಫ್ತಾಗೋದು ಅರೆಬಿಯನ್ ಸಮುದ್ರವನ್ನ ದಾಟಿಯೇ. ಆದ್ರೆ, ಕಳೆದ ಒಂದು ತಿಂಗಳಿನಿಂದ ಅರೆಬಿಯನ್ ಸಮುದ್ರದಲ್ಲೂ ಭಾರಿ ಹಲ್​​ಚಲ್ ನಡೀತಿದೆ. ಕೆಂಪು ಸಮುದ್ರದಲ್ಲಂತೂ ಹೌತಿ ಬಂಡುಕೋರರು ಅಟ್ಟಹಾಸ ಮೆರೀತಿದ್ದಾರೆ. ​ಭಾರತದಿಂದ ಸಾಗಿ ಶಿಪ್​ ಮೇಲೂ ದಾಳಿ ನಡೆಸಿದ್ರು. ಇದೀಗ ಜನವರಿ 5ರಂದು ಎಂವಿ ಲಿಲಾ ನಾರ್​​ಫೋಕ್ ಅನ್ನೋ ಗೂಡ್ಸ್​ ಹಡಗು ಉತ್ತರ ಅರೆಬಿಯನ್​ ಸಮುದ್ರದಲ್ಲಿ ಸಾಗುತ್ತಿದ್ದಾಗ 6 ಮಂದಿ ಬಂಧೂಕುಧಾರಿಗಳು ಬೋಟ್​ನಲ್ಲಿ ಬಂದು ಶಿಪ್​ಗೆ ನುಗ್ಗಿ ಹೈಜಾಕ್ ಮಾಡೋಕೆ ಯತ್ನಿಸಿದ್ದಾರೆ. ಈ ಬಗ್ಗೆ ಭಾರತೀಯ ನೌಕಾಪಡೆಗೆ ಮಾಹಿತಿ ಸಿಕ್ಕಿದ್ದು, ಒಂದು ಕ್ಷಣ ಕೂಡ ತಡ ಮಾಡದೆ ಆಪರೇಷನ್​​​ಗೆ ಮುಂದಾಗಿದೆ. ಗಸ್ತಿನಲ್ಲಿದ್ದ ನೌಕಾಪಡೆಯ ಯುದ್ಧ ಹಡಗು ಐಎನ್​ಎಸ್​ನ್ನ ಉತ್ತರ ಅರಬ್ಬೀ ಸಮುದ್ರದ ಕಡೆಗೆ ಡೈವರ್ಟ್ ಮಾಡಲಾಗುತ್ತೆ. ಐಎನ್​ಎಸ್​ನಲ್ಲಿರೋ ಕಡಲ್ಗಳ್ಳತನ ವಿರೋಧಿ ತಂತ್ರಜ್ಞಾನ ಹೈಜಾಕ್​ಗೆ ಒಳಗಾಗುತ್ತಿದ್ದ ಶಿಪ್​​ನ್ನ ಐಟೆಂಟಿಫೈ ಮಾಡಿದೆ. ಯುದ್ಧ ಹಡಗಿನ ಜೊತೆಗೆ ನೌಕಾಪಡೆಯ ಗಸ್ತು ವಿಮಾನ, ಹೆಲಿಕಾಪ್ಟರ್ ಹಾಗೆಯೇ ಎಂಕ್ಯೂ9ಬಿ ಡ್ರೋನ್​ನನ್ನ ಕೂಡ ಕಳುಹಿಸಿಕೊಡಲಾಗಿತ್ತು. ಇತ್ತ ಹೈಜಾಕ್​ಗೆ ಒಳಗಾಗ್ತಾ ಇದ್ದ ಹಡಗಿನ ಲೋಕೇಷನ್​ ಕುರಿತ ಮಾಹಿತಿಯನ್ನ ಯುದ್ಧ ವಿಮಾನ ಮತ್ತು ಎಂಕ್ಯೂ9ಬಿ ಡ್ರೋನ್​ಗೆ ಕಳುಹಿಸಲಾಗಿದೆ. ಲೊಕೇಷನ್ ಮಾಹಿತಿ ಸಿಗ್ತಿದ್ದಂತೆ ಡ್ರೋನ್ ಶಿಪ್​​ ಇದ್ದ ಡೈರೆಕ್ಷನ್​ನತ್ತ ಸಾಗಿದೆ. ಈ ಎಂಕ್ಯೂ9ಬಿ ಡ್ರೋನ್​ ಆಗಸದಿಂದಲೇ ಶಿಪ್​ನ್ನ ಐಡೆಂಟಿಫೈ ಮಾಡುತ್ತೆ. ಬಳಿಕ ಹೆಲಿಕಾಪ್ಟರ್​​ ಮೂಲಕ ಹೈಜಾಕರ್ಸ್​ಗೆ ವಾರ್ನಿಂಗ್​ ಸಂದೇಶವನ್ನ ಕೂಡ ನೀಡಲಾಗುತ್ತೆ. ಭಾರತೀಯ ಸೇನೆ ಕೌಂಟರ್​ ಆಪರೇಷನ್​​ಗೆ ಇಳಿದಿದೆ. ಕೂಡಲೇ ಶರಣಾಗುವಂತೆ ಹೈಜಾಕರ್ಸ್​​ಗೆ ಎಚ್ಚರಿಕೆ ನೀಡಲಾಗುತ್ತೆ. ಇನ್ನು ಯುದ್ಧ ಹಡಗಿನಲ್ಲಿ ಭಾರತೀಯ ನೌಕಾಪಡೆಯ ಮಾರ್ಕೋಸ್ ಕಮ್ಯಾಂಡೋಗಳು ಆಪರೇಷನ್​​ಗೆ ಕಂಪ್ಲೀಟ್ ರೆಡಿಯಾಗಿದ್ರು. ಯುದ್ಧ ನೌಕೆಯಿಂದ ಬೋಟ್ ಮೂಲಕ ಮಾರ್ಕೋಸ್ ಕಮ್ಯಾಂಡೋ ಟೀಂ ಅಪಹರಣಕ್ಕೊಳಗಾಗ್ತಿದ್ದ ಶಿಪ್​​ನ ಬಳಿಗೆ ತೆರಳಿದ್ದಾರೆ. ಇವೆಲ್ಲವೂ ಮೇಲೆ ಹಾರಾಡ್ತಾ ಇದ್ದ ​ಎಂಕ್ಯೂ9ಬಿ ಡ್ರೋನ್​​ನಲ್ಲಿರೋ ಕ್ಯಾಮರಾದಲ್ಲಿ ಕ್ಯಾಪ್ಚರ್ ಆಗ್ತಾ ಇತ್ತು. ಮಾರ್ಕೋಸ್​ ಕಮ್ಯಾಂಡೋಗಳು ಬೋಟ್​​ನಿಂದ ನೇರವಾಗಿ ಹೈಜಾಕ್​ಗೆ ಒಳಗಾಗ್ತಿದ್ದ ಶಿಪ್​​ಗೆ ಎಂಟ್ರಿಯಾಗಿದ್ದಾರೆ. ಮೊದಲಿಗೆ ಹಡಗಿನ ಡೆಕ್​​ಗೆ ಬಂದ ಮಾರ್ಕೋಸ್​ಗಳು ಅಲ್ಲಿ ಪೊಸೀಶನ್ ತೆಗೆದುಕೊಳ್ತಾರೆ. ಅಪ್ಪರ್ ಡೆಕ್​ನ್ನ ಫುಲ್​ ಸ್ಯಾನಿಟೈಸ್ ಮಾಡ್ತಾರೆ. ಅಂದ್ರೆ ಅಲ್ಲಿ ಯಾರೂ ಇಲ್ಲ ಅನ್ನೋದು ಕ್ಲೀಯರ್​​​ ಮಾಡಿಕೊಳ್ತಾರೆ. ಹಡಗಿನ ಪ್ರತಿ ಕಂಪಾರ್ಟ್​​ಮೆಂಟ್​​​ಗಳನ್ನ ಕೂಡ ಶೋಧಿಸ್ತಾರೆ. ಲಿವಿಂಗ್​ ಸ್ಪೇಸ್​​ಗಳನ್ನ ಕಂಪ್ಲೀಟ್ ಚೆಕ್ ಮಾಡ್ತಾರೆ. ಬಳಿಕ ಹಡಗಿನಲ್ಲಿದ್ದ 15 ಮಂದಿ ಭಾರತೀಯರು ಸೇರಿ 21 ಮಂದಿ ಸಿಬ್ಬಂದಿಯನ್ನ ರಕ್ಷಿಸಿದ್ದಾರೆ. ಆದ್ರೆ ಇಡೀ ಹಗಡಗನ್ನ ಜಾಲಾಡಿದ್ರೂ ಎಲ್ಲೂ ಕೂಡ ಬಂದೂಕುಧಾರಿ ಹೈಜಾಕರ್ಸ್ ಪತ್ತೆಯಾಗಿಲ್ಲ. ಭಾರತೀಯ ನೌಕಾಪಡೆ ಹೇಳಿರೋ ಪ್ರಕಾರ ವಾರ್ನಿಂಗ್​ ನೀಡಿದ ಬಳಿಕ ರಾತ್ರಿ ವೇಳೆ ಹೈಜಾಕರ್​​ಗಳು ಎಸ್ಕೇಪ್​ ಆಗಿರುವ ಸಾಧ್ಯತೆ ಇದೆ ಅಂತಾ ಅನುಮಾನ ವ್ಯಕ್ತಪಡಿಸಿದೆ.

ಇನ್ನು ಇಲ್ಲಿ ಹಡಗಿನಲ್ಲಿದ್ದ ಸಿಬ್ಬಂದಿಯನ್ನ ರಕ್ಷಿಸಿದ ಮಾರ್ಕೋಸ್​ಗಳ ಬಗ್ಗೆ ಒಂದಷ್ಟು ಸಂಗತಿಗಳನ್ನ ಹೇಳಲೇಬೇಕು. ಮಾರ್ಕೋಸ್ ಅನ್ನೋದು ನಮ್ಮ ನೌಕಾಪಡೆಗೆ ಸೇರಿದ ಕಮ್ಯಾಂಡೋಗಳು. ಭೂಸೇನೆಯನ್ನ ಎನ್​​ಎಸ್​ಜಿ ಕಮ್ಯಾಂಡೋಗಳಿದ್ರೆ, ವಾಯುಪಡೆಯಲ್ಲಿ ಗರುಡ ಕಮ್ಯಾಂಡೋಗಳಿದ್ದಾರೆ. ಹಾಗೆಯೇ ನೌಕಾಪಡೆಗೆ ಮಾರ್ಕೋಸ್​ಗಳು. ಟೋಟಲ್​ ಆಗಿ ಭಾರತೀಯ ಸೇನೆಯಲ್ಲಿ ಮೂರು ರೀತಿಯ ಕಮ್ಯಾಂಡೋ ಯುನಿಟ್​ಗಳಿವೆ. 1987ರಲ್ಲಿ ಮೊಟ್ಟ ಮೊದಲ ಬಾರಿಗೆ ನೌಕಾಪಡೆಗೆ ಕಮ್ಯಾಂಡೋ ಯುನಿಟ್​​ನ್ನ ಸೇರ್ಪಡೆಗೊಳಿಸಲಾಗುತ್ತೆ.

ನೀರಿನಲ್ಲಿ ಎಲ್ಲಿ ಬೇಕಾದ್ರೂ ಆಪರೇಷನ್​ ಮಾಡೋ ಸಾಮರ್ಥ್ಯವನ್ನ ಮಾರ್ಕೋಸ್​ಗಳು ಹೊಂದಿದ್ದಾರೆ. ಡೈವಿಂಗ್​​ನಲ್ಲಿ ಮಾರ್ಕೋಸ್​ಗೆ ಎಕ್ಸ್​​ಪರ್ಟ್​​ಗಳು. ಸಮುದ್ರ, ನದಿ ಹೀಗೆ ಎಲ್ಲಿ ಬೇಕಾದ್ರೂ ಕಾರ್ಯನಿರ್ವಹಿಸ್ತಾರೆ. ರಾತ್ರಿ ಹೊತ್ತಲ್ಲಿ ಶತ್ರುವಿನ ಸುಳಿವಿಗೂ ಸಿಗದಂತೆ ಆಪರೇಟ್ ಮಾಡ್ತಾರೆ. ರಾತ್ರಿ ವೇಳೆ ನೀರಲ್ಲಿ ಕೂಡ ಗಂಟೆಗಟ್ಟಲೆ ಕಾದು ಕುಳಿತುಕೊಳ್ತಾರೆ. ಆ ರೀತಿಯ ಅತ್ಯಂತ ಟಫೆಸ್ಟ್ ಟ್ರೈನಿಂಗ್​​ನ್ನ ಮಾರ್ಕೋಸ್​​ಗಳಿಗೆ ನೀಡಲಾಗುತ್ತೆ. ಭಾರತೀಯ ಸೇನೆ ಕೂಡ ಅರೆಬಿಯನ್ ಸಮುದ್ರದ ರಕ್ಷಣೆಯ ಹೊಣೆಯನ್ನ ಹೊತ್ತುಕೊಂಡಿದೆ. ಇಲ್ಲಿ ಮಾರ್ಕೋಸ್ ಕಮ್ಯಾಂಡೋ ಯುನಿಟ್​ನ್ನ ಕೂಡ ಬಳಸಲಾಗ್ತಿದೆ. ಸಮುದ್ರದಲ್ಲಿ ಹಡಗುಗಳಿಗೆ ಏನೇ ಅಡ್ಡಿ ಆತಂಕ ಎದುರಾದ್ರೆ ಮಾರ್ಕೋಸ್​​ಗಳು ಆಪರೇಷನ್​ಗೆ ಇಳೀತಾರೆ. ಕೇವಲ ನೀರಲ್ಲಿ ಮಾತ್ರವಲ್ಲ, ಭೂಮಿ ಮತ್ತು ಆಗಸದಿಂದಲೂ ಕಾರ್ಯಾಚರಣೆ ನಡೆಸೋ ಕೆಪಾಸಿಟಿ ಅವರಿಗಿರುತ್ತೆ. ನೀವು ನೋಡಿರಬಹುದು. ಭಾರತೀಯ ನೌಕಾಪಡೆಯ ಹೆಲಿಕಾಪ್ಟರ್​​ಗಳಿಂದ ಹಗ್ಗದ ಮೂಲಕ ಕೆಳಕ್ಕೆ ಇಳಿಯೋದು. ಯುದ್ಧ ಹಡಗಿನಲ್ಲಿ ಲ್ಯಾಂಡ್ ಆಗೋದು. ಈ ಎಲ್ಲಾ ಸಾಮರ್ಥ್ಯ ಮಾರ್ಕೋಸ್​ಗಳಿವೆ. ಹೆಲಿಕಾಪ್ಟರ್​​ನಲ್ಲಿ ಹೋಗಿ ನೀರಿಗೆ ಜಂಪ್​​ ಮಾಡಿ ಕೌಂಟರ್​ ಅಟ್ಯಾಕ್ ಮಾಡ್ತಾರೆ. 2008ರಲ್ಲಿ ಮುಂಬೈ ಮೇಲೆ ಉಗ್ರರ ದಾಳಿಯಾದಾಗ ಎನ್​ಎಸ್​ಜಿ ಕಮ್ಯಾಂಡೋಗಳ ಜೊತೆಗೆ ಮಾರ್ಕೋಸ್​​ಗಳು ಕೂಡ ಕಾರ್ಯಾಚರಣೆಯಲ್ಲಿದ್ರು.

ಇನ್ನು ಮಾರ್ಕೋಸ್​​ಗಳು ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನೇ ಬಳಸ್ತಾರೆ. ಕಣ್ಣು ಮಾತ್ರ ಕಾಣಿಸುತ್ತಷ್ಟೇ ಹೊರತು, ಇಡೀ ದೇಹವನ್ನ ಕವರ್​ ಮಾಡಿಕೊಂಡಿರ್ತಾರೆ. ನೈಟ್​ವಿಶನ್ ಬೈನ್ಯಾಕ್ಯುಲರ್, ಕ್ಯಾಮರಾ ಮತ್ತು ಲೈಟ್​ನ್ನ ಹೊಂದಿರೋ ಹೆಲ್ಮೆಟ್, ಲೇಸರ್​​ ಪಾಯಿಂಟ್ಸ್​​ ಕೂಡ ಮಾರ್ಕೋಸ್​ಗಳ ಬಳಿ ಇರುತ್ತೆ. ಅಮೆರಿಕದಲ್ಲಿ ನೇವಿ ಸೀಲ್​ ಟೀಮ್ ಇರುವಂತೆ ಮಾರ್ಕೋಸ್​ಗಳು ನಮ್ಮ ನೌಕಾಪಡೆಯ ಬಿಗ್ಗೆಸ್ಟ್ ಸ್ಟ್ರೆಂತ್. ಮಾರ್ಕೋಸ್​ ಯುನಿಟ್​​ನ್ನ ಸೇರಿಕೊಳ್ಳೋದು ಅಂದ್ರೆ ಅಷ್ಟು ಸುಲಭ ಇಲ್ಲ. ಮಾರ್ಕೋಸ್​ಗಳ ಸೆಲೆಕ್ಷನ್​​ ಪ್ರೋಸೆಸ್ಸೇ ಭಯಾನಕವಾಗಿರುತ್ತೆ. ಫಿಸಿಕಲಿ, ಮೆಂಟಲಿ ಅತ್ಯಂತ ಕಠಿಣ ಪರೀಕ್ಷೆಗಳಿಗೆ ಒಳಪಡಬೇಕಾಗುತ್ತೆ. ಡೈವಿಂಗ್​ನಲ್ಲಿ ಎಕ್ಸ್​​ಪರ್ಟ್​​ಗಳಾಗಿರಬೇಕು. ನೀರಿನ ಒಳಗಡೆಯೂ ಹಲವು ಟೆಸ್ಟ್​ಗಳನ್ನ ನಡೆಸಲಾಗುತ್ತೆ. ಕೌಂಟರ್​​ ಟೆರರಿಸಂ ಆಪರೇಷನ್ ಹೀಗೆ ಬೇರೆ ಬೇರೆ ರೀತಿಯ ಟ್ರೈನಿಂಗ್​​ಗಳಿರುತ್ತೆ. ಸದ್ಯ ಕೇವಲ ಪುರುಷರನ್ನಷ್ಟೇ ಮಾರ್ಕೋಸ್ ಕಮ್ಯಾಂಡೋ ಯುನಿಟ್​ಗೆ ಸೇರಿಸಲಾಗ್ತಿದೆ. ಸುಮಾರು 5 ವಾರಗಳ ಕಾಲ ಸೆಲೆಕ್ಷನ್ ಪ್ರಾಸೆಸ್ ನಡೆಯುತ್ತೆ. ಈ ಟೈಮ್​ನಲ್ಲಿ ಅತೀ ಕಡಿಮೆ ನಿದ್ರೆ ಮಾಡಬೇಕಾಗುತ್ತೆ. ನಿತ್ಯವೂ ಅರ್ಲಿ ಮಾರ್ನಿಂಗ್ 20 ಕಿಲೋ ಮೀಟರ್​​​ ರನ್ನಿಂಗ್ ಇರುತ್ತೆ. ರಾತ್ರಿ ಹೊತ್ತಲ್ಲಿ ಅತ್ಯಂತ ಭಾರದ ವಸ್ತುಗಳನ್ನ, ಶಸ್ತ್ರಾಸ್ತ್ರಗಳನ್ನ ಹೊತ್ತುಕೊಂಡು ಕಿಲೋಮೀಟರ್​ಗಟ್ಟಲೆ ವಾಕ್ ಮಾಡಬೇಕಾಗುತ್ತೆ. ಹಾಗೆಯೇ ನಿಗದಿತ ಗಂಟೆಯಲ್ಲಿ 120 ಕಿಲೋ ಮೀಟರ್​ ಮಾರ್ಚ್​​ ಕೂಡ ಮಾಡ್ಬೇಕು. ಈ ರೀತಿಯ ಹಲವು ಟಫ್ ಟಾಸ್ಕ್​​ಗಳಿದ್ದು, ಅವುಗಳನ್ನ ಪಾಸ್ ಆದ್ರಷ್ಟೇ ಮಾರ್ಕೋಸ್​ಗಳಾಗಬಹುದು. ಇವಿಷ್ಟು ಮಾರ್ಕೋಸ್​ ಕಮ್ಯಾಂಡೋಗಳ ರೆಸ್ಕ್ಯೂ ಆಪರೇಷನ್ ಮತ್ತು ಮಾರ್ಕೋಸ್​​​​ಗಳ ವೃತ್ತಿ ಎಷ್ಟು ಚಾಲೆಂಜಿಂಗ್ ಆಗಿರುತ್ತೆ ಅನ್ನೋದ್ರ ಕುರಿತ ಮಾಹಿತಿ. ಹೀಗಾಗಿ ಈಗ ಸಮುದ್ರ ಮಧ್ಯೆ 21 ಮಂದಿಯನ್ನ ರಕ್ಷಿಸಿದ ಈ ಕಮ್ಯಾಂಡೋಗಳಿಗೆ ನಿಜಕ್ಕೂ ಹ್ಯಾಟ್ಸಾಫ್ ಹೇಳಲೇಬೇಕು.

 

Sulekha