ಕನ್ನಡಿಗರ ಹೃದಯ ಬೆಸೆದ ಪತ್ರಿಕೆಗಳು – ಕನ್ನಡಕ್ಕಾಗಿ ದನಿಯೆತ್ತಲು ಸಹಾಯ ಮಾಡಿದ ಪತ್ರಿಕೆಗಳ ಬಗ್ಗೆ ನಿಮಗೆಷ್ಟು ಗೊತ್ತು?

ಕನ್ನಡಿಗರ ಹೃದಯ ಬೆಸೆದ ಪತ್ರಿಕೆಗಳು – ಕನ್ನಡಕ್ಕಾಗಿ ದನಿಯೆತ್ತಲು ಸಹಾಯ ಮಾಡಿದ ಪತ್ರಿಕೆಗಳ ಬಗ್ಗೆ ನಿಮಗೆಷ್ಟು ಗೊತ್ತು?

ಕನ್ನಡಕ್ಕಾಗಿ ದನಿಯೆತ್ತಲು, ಕನ್ನಡಿಗರನ್ನು ಬೆಸೆಯಲು ಪತ್ರಿಕೆಗಳ ಸಹಾಯ ಅಪಾರವಾದುದು. ಕನ್ನಡ ಪತ್ರಿಕೆಗಳ ಆವಿಷ್ಕಾರದಿಂದಾಗಿ ಹರಿದು ಹಂಚಿ ಹೋಗಿದ್ದ ಕನ್ನಡಿಗರಿಗೆ ತಾವೆಲ್ಲಾ ಒಂದು ಎಂಬ ಭಾವನೆ ಬರಲು ಸಾಧ್ಯವಾಗಿತ್ತು. ಕನ್ನಡಿಗರ ಹೃದಯ ಬೆಸೆದ ಪತ್ರಿಕೆಗಳ ವಿವರ ಇಲ್ಲಿದೆ.

ಇದನ್ನೂ ಓದಿ:ಕನ್ನಡಕ್ಕಾಗಿ ದುಡಿದ ಜಾನ್ ಫೇಥ್‌ಫುಲ್ ಫ್ಲೀಟ್ – ಚಿರಕಾಲ ಕನ್ನಡಿಗರ ಮನದಲ್ಲಿ ಉಳಿದ ಬ್ರಿಟಿಷ್ ಅಧಿಕಾರಿ

1843ರಲ್ಲಿ ಪ್ರಾರಂಭವಾದ ಮಂಗಳೂರು ಸಮಾಚಾರ ಪತ್ರಿಕೆಯೆ ಮೊದಲ ಕನ್ನಡ ಪತ್ರಿಕೆಯೆಂದು ಹೇಳಲಾಗುತ್ತದೆ. ಅದುವೇ ಮುಂದಿನ ದಿನಗಳಲ್ಲಿ ಕನ್ನಡ ಸಮಾಚಾರವಾಯಿತು. ಇನ್ನೊಂದು ಮಹತ್ವದ ಅಂಶವೆಂದರೆ, ಮೈಸೂರು ಅಂದಿನ ಮಂಗಳೂರು ಜನರಿಗೆ ಹೊರದೇಶ. ಅಲ್ಲಿಯ ಜನ ಪರಕೀಯರು, ಆದರೆ ಭಾಷೆಯ ಮೂಲಕ ಸಂಪರ್ಕವನ್ನು ಕಲ್ಪಿಸಲು ಪತ್ರಿಕೆಯಿಂದ ಸಾಧ್ಯವಾಗಿತ್ತು. ಪುರಂದರದಾಸರ ಪದಗಳ ಪ್ರಥಮ ಮುದ್ರಣ ರೂಪದಲ್ಲಿ ಹೊರಬಂದುದು ಇದೇ ಪತ್ರಿಕೆಯಿಂದ. ನಂತರದ ದಿನಗಳಲ್ಲಿ ಈ ಪತ್ರಿಕೆ ನಿಂತು ಹೋಯಿತು. ಕನ್ನಡದಲ್ಲಿ ಮೊಟ್ಟ ಮೊದಲ ಪತ್ರಿಕೆಯನ್ನು ದೇಶೀಯರು ಪ್ರಾರಂಭಿಸಿದ್ದು ಬೆಳಗಾವಿಯಲ್ಲಿ. ಬೆಳಗಾವಿಯಲ್ಲಿ ಕನ್ನಡ ಪತ್ರಿಕೆ ಆರು ವರುಷಗಳವರೆಗೆ ನಡೆದಿದೆ. ಬೆಳಗಾವಿ ಮರಾಠಿಗರದ್ದು ಎನ್ನುವ ಮರಾಠಿ ಜನ ಇದನ್ನು ಗಮನಿಸಲೇಬೇಕು. ಈ  ಪತ್ರಿಕೆಯೇ ಸುಬುದ್ಧಿ ಪ್ರಕಾಶ. ನಂತರ ಬೆಂಗಳೂರು, ಧಾರವಾಡ ಮತ್ತು ಮಂಗಳೂರು ನಗರಗಳಿಂದಲೂ ಪತ್ರಿಕೆಗಳು ಶುರುವಾದವು.. ೧೮೫೯ರಲ್ಲಿ ಆರಂಭವಾದ ಮೈಸೂರು ವೃತ್ತಾಂತ ಬೋಧಿನಿಯು ಮೈಸೂರು ಕಡೆಯ ಮೊತ್ತ ಮೊದಲಿನ ವಾರಪತ್ರಿಕೆಯಾಗಿದೆ. ೧೮೬೧ರಲ್ಲಿ ಧಾರವಾಡದಲ್ಲಿ ಜ್ಞಾನಬೋಧಕ ಎಂಬ ಕನ್ನಡ ಪತ್ರಿಕೆ ಪ್ರಾರಂಭವಾಯಿತು. ಅರುಣೋದಯ ಎಂಬ ಮಾಸಪತ್ರಿಕೆಯು ೧೯೬೧ರಲ್ಲಿ ಬೆಂಗಳೂರಿನಿಂದ ಆರಂಭವಾಗಿತ್ತು. ಮಂಗಳೂರಿನಿಂದ ವಿಚಿತ್ರ ವರ್ತಮಾನ ಸಂಗ್ರಹ ಎಂಬ ಕನ್ನಡ – ಇಂಗ್ಲಿಷ್ ಎರಡೂ ಭಾಷೆಗಳ ಲೇಖನಗಳುಳ್ಳ ಪತ್ರಿಕೆ ಆರಂಭವಾಗಿತ್ತು. ಆನಂತರದಲ್ಲಿ ಬಂದ ಮಹತ್ವದ ಪತ್ರಿಕೆಯೆಂದರೆ ಕನ್ನಡ ಶಾಲಾ ಪತ್ರಿಕೆ. ಬೆಳಗಾವಿಯಿಂದ ಹೊರಡಿಸಲ್ಪಟ್ಟ ಕನ್ನಡ ಶಾಲಾ ಪತ್ರಿಕೆ ಜೀವನ ಶಿಕ್ಷಣ ಎಂಬುದಾಗಿ ಹೊಸ ಹೆಸರಿನಿಂದ ಇಂದಿಗೂ ಇರುವ ಪತ್ರಿಕೆಯಾಗಿದೆ. ಮೂರು ಶತಮಾನಗಳನ್ನು ಕಂಡ ಏಕೈಕ ಕನ್ನಡ ಪತ್ರಿಕೆ ಇದಾಗಿದೆ.ಧಾರವಾಡದಿಂದ ಹೊರಡುತ್ತಿದ್ದ ಅರುಣೋದಯ ಪತ್ರಿಕೆ ೩೫ ವರ್ಷಗಳ ಕಾಲ ಕನ್ನಡ ಪತ್ರಿಕೆಯಾಗಿ ಅಸ್ತಿತ್ವದಲ್ಲಿದ್ದಿತು. ಇನ್ನೂ ಒಂದು ಪತ್ರಿಕೆಯ ಬಗ್ಗೆ ಹೇಳಲೇಬೇಕು. ಅದುವೇ ಕರ್ನಾಟಕ ವೈಭವ. ಮರಾಠಿ ವರ್ಚಸ್ಸಿಗೊಳಗಾಗಿದ್ದ ವಿಜಾಪುರ ಪ್ರದೇಶದಲ್ಲಿ ಕನ್ನಡತನದ ಅರಿವುಂಟುಮಾಡಲು ಮತ್ತು ರಾಷ್ಟ್ರೀಯ ಜಾಗೃತಿಗಾಗಿ ಶ್ರಮಿಸಲು ಸವಣೂರು ಗುಂಡೂರಾಯರು ೧೮೯೨ರಲ್ಲಿ ವಿಜಾಪುರದಲ್ಲಿ ಪ್ರಾರಂಭಿಸಿದ ವಾರಪತ್ರಿಕೆಯಿದು. ಕರ್ನಾಟಕ ಏಕೀಕರಣದ ಮೂಲಮಂತ್ರ ಉದ್ಭವವಾಗಿದ್ದು ಕೂಡಾ ಕರ್ನಾಟಕ ವೈಭವ ಪತ್ರಿಕೆಯಿಂದಲೇ.

Sulekha