ಸಿದ್ದು ಸಂಪುಟ ಸಚಿವರಲ್ಲೇ ಅತ್ಯಂತ ಶ್ರೀಮಂತರು ಯಾರು – ಮಂತ್ರಿಗಳ ವಿದ್ಯಾರ್ಹತೆ, ವಯಸ್ಸು, ಜಾತಿ ಏನು..?
ಪ್ರಚಂಡ ಬಹುಮತದೊಂದಿಗೆ ಜಯ ಗಳಿಸಿ ಸರ್ಕಾರ ರಚಿಸಿರುವ ಕಾಂಗ್ರೆಸ್ ಪಕ್ಷ ಈಗಾಗಲೇ ಸಚಿವ ಸಂಪುಟವನ್ನೂ ರಚನೆ ಮಾಡಿ ಖಾತೆ ಹಂಚಿಕೆ ಮಾಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramiah) ನೇತೃತ್ವದ 34 ಮಂದಿಯ ಸಂಪೂರ್ಣ ಸಚಿವ ಸಂಪುಟ ರಚನೆಯಾಗಿದ್ದು, ಖಾತೆಗಳನ್ನು ಹಂಚಿಕೆ ಮಾಡಲಾಗಿದೆ. ಸದ್ಯ ಸಿದ್ದು ಸಂಪುಟ ಸಚಿವರ ಆಸ್ತಿ, ವಯಸ್ಸು ಮತ್ತು ಶೈಕ್ಷಣಿಕ ವಿವರ ಮತ್ತೊಮ್ಮೆ ಸದ್ದು ಮಾಡ್ತಿದೆ.
ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ (DK Shivakumar) ಅವರು ಎಲ್ಲಾ ಸಚಿವರ ಪೈಕಿ ಅತ್ಯಂತ ಶ್ರೀಮಂತರಾಗಿದ್ದಾರೆ. ಕನಕಪುರ ವಿಧಾನಸಭಾ ಕ್ಷೇತ್ರದ ಶಾಸಕ ಡಿ.ಕೆ ಶಿವಕುಮಾರ್ ಬರೋಬ್ಬರಿ 1,413.80 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿದ್ದಾರೆ. ಆದರೆ ಮುಧೋಳ ಮೀಸಲು ಕ್ಷೇತ್ರದ ಶಾಸಕ ತಿಮ್ಮಾಪುರ ರಾಮಪ್ಪ ಬಾಳಪ್ಪ ಅವರು 58.56 ಲಕ್ಷ ರೂ. ಮೌಲ್ಯದ ಆಸ್ತಿ ಹೊಂದಿದ್ದು ಕಡಿಮೆ ಆಸ್ತಿ ಹೊಂದಿರುವ ಸಚಿವ ಎನಿಸಿಕೊಂಡಿದ್ದಾರೆ.
ಇದನ್ನೂ ಓದಿ : ಜೂನ್ 1ರಂದು ಸಚಿವ ಸಂಪುಟ ಸಭೆ – ಗುರುವಾರವೇ 5 ಗ್ಯಾರಂಟಿ ಯೋಜನೆಗಳ ಜಾರಿ..?
ಸಂಪುಟದ 34 ಸಚಿವರ ಪೈಕಿ 32 ಸಚಿವರು ನಾಮಪತ್ರ ಸಲ್ಲಿಕೆ ವೇಳೆ ಸ್ವಯಂ ಪ್ರೇರಿತವಾಗಿ ತಮ್ಮ ಆಸ್ತಿ ವಿವರವನ್ನು ಘೋಷಿಸಿಕೊಂಡಿದ್ದಾರೆ. ಆದರೆ ಸಚಿವ ಕೆ.ಜೆ ಜಾರ್ಜ್ ಮತ್ತು ಎನ್ಎಸ್ ಬೋಸರಾಜು ಅವರ ಆಸ್ತಿ ವಿವರ ಚುನಾವಣಾ ಆಯೋಗದ ವೆಬ್ಸೈಟ್ನಲ್ಲಿ ದೊರೆತಿಲ್ಲ. ಇನ್ನು ಎನ್.ಎಸ್ ಬೋಸರಾಜು ಅವರು ರಾಜ್ಯ ವಿಧಾನಸಭೆ ಅಥವಾ ವಿಧಾನ ಪರಿಷತ್ತಿನ ಎರಡೂ ಸದನಗಳ ಸದಸ್ಯರಲ್ಲವಾದರೂ ಸಚಿವ ಸ್ಥಾನ ಗಿಟ್ಟಿಸಿಕೊಂಡಿದ್ದು ವಿಶೇಷವಾಗಿದೆ. ಸದ್ಯ ಕರ್ನಾಟಕ ಸಂಪುಟದಲ್ಲಿ ಒಟ್ಟು 31 (ಶೇ. 97ರಷ್ಟು) ಸಚಿವರು ಕೋಟ್ಯಾಧಿಪತಿಗಳಾಗಿದ್ದು, ಅವರ ಸರಾಸರಿ ಆಸ್ತಿ 119.06 ಕೋಟಿ ರೂ. ಆಗಿದೆ. 32 ಸಚಿವರ ಪೈಕಿ ಡಿ.ಕೆ ಶಿವಕುಮಾರ್ ಅಗ್ರಸ್ಥಾನದಲ್ಲಿದ್ದಾರೆ. ಪುಟದ 24 ಕ್ಯಾಬಿನೆಟ್ ಸಚಿವರು ಕ್ರಿಮಿನಲ್ ಹಿನ್ನಲೆ ಹೊಂದಿದ್ದು, ಅವರಲ್ಲಿ 7 ಸಚಿವರು ತಮ್ಮ ವಿರುದ್ಧ ಗಂಭೀರ ಆರೋಪಗಳಿವೆ ಎಂದು ಘೋಷಿಸಿಕೊಂಡಿದ್ದಾರೆ. ಇನ್ನು 34 ಸಚಿವ ಸಂಪುಟದಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ 48 ವರ್ಷದ ಲಕ್ಷ್ಮಿ ಹೆಬ್ಬಾಳ್ಕರ್ ಏಕೈಕ ಮಹಿಳಾ ಸಚಿವೆಯಾಗಿದ್ದಾರೆ. ಸಂಪುಟದಲ್ಲಿ 6 ಸಚಿವರು 8 ರಿಂದ 12ನೇ ತರಗತಿ ಒಳಗೆ ತಮ್ಮ ಶೈಕ್ಷಣಿಕ ಅರ್ಹತೆಯನ್ನು ಹೊಂದಿದ್ದಾರೆ. 24 ಮಂದಿ ಪದವಿ ಮತ್ತು ಅದಕ್ಕಿಂತ ಹೆಚ್ಚಿನ ಶೈಕ್ಷಣಿಕ ಅರ್ಹತೆಯನ್ನು ಹೊಂದಿದ್ದಾರೆ. ಇಬ್ಬರು ಸಚಿವರು ಡಿಪ್ಲೊಮಾ ಪದವೀಧರರಾಗಿದ್ದಾರೆ. ಒಟ್ಟು 18 (ಶೇ 56 ರಷ್ಟು) ಸಚಿವರ ವಯಸ್ಸು 41 ರಿಂದ 60 ವರ್ಷ ಒಳಗೆ ಇದ್ದರೇ, 14 (ಶೇ 44 ರಷ್ಟು) ಸಚಿವರು 61 ರಿಂದ 80 ವರ್ಷ ಒಳಗಿನ ವಯಸ್ಸಿನವರಾಗಿದ್ದಾರೆ.
ಹೆಸರು ಪ್ರತಿನಿಧಿಸುವ ಕ್ಷೇತ್ರ ವಯಸ್ಸು ವಿದ್ಯಾರ್ಹತೆ ಜಾತಿ
ಸಿದ್ದರಾಮಯ್ಯ ವರುಣಾ 74 BSc, LLB ಕುರುಬ
ಡಿ.ಕೆ ಶಿವಕುಮಾರ್ ಕನಕಪುರ 61 ಮಾಸ್ಟರ್ ಡಿಗ್ರಿ ಒಕ್ಕಲಿಗ
ಡಾ. ಜಿ.ಪರಮೇಶ್ವರ್ ಕೊರಟಗೆರೆ 71 ಡಾಕ್ಟರೇಟ್, PHD ಪರಿಶಿಷ್ಟ ಜಾತಿ
ರಾಮಲಿಂಗಾ ರೆಡ್ಡಿ ಬಿಟಿಎಂ ಲೇಔಟ್ 70 BSc ರೆಡ್ಡಿ
ಎಂ.ಬಿ.ಪಾಟೀಲ್ ಬಬಲೇಶ್ವರ 58 ಬಿಇ ಲಿಂಗಾಯತ
ಸತೀಶ್ ಜಾರಕಿಹೊಳಿ ಯಮಕನಮರಡಿ 61 ಪಿಯುಸಿ ಪರಿಶಿಷ್ಟ ಪಂಗಡ
ಪ್ರಿಯಾಂಕ್ ಖರ್ಗೆ ಚಿತ್ತಾಪುರ 44 ಡಿಪ್ಲೊಮೊ ಪರಿಶಿಷ್ಟ ಜಾತಿ
ಜಮೀರ್ ಅಹ್ಮದ್ ಖಾನ್ ಚಾಮರಾಜಪೇಟೆ 56 SSLC ಮುಸ್ಲಿಂ
ಕೆ.ಎಚ್.ಮುನಿಯಪ್ಪ ದೇವನಹಳ್ಳಿ 75 ಎಲ್ಎಲ್ ಬಿ ಪರಿಶಿಷ್ಟ ಜಾತಿ
ಕೆ.ಜೆ.ಜಾರ್ಜ್ ಸರ್ವಜ್ಞ ನಗರ 76 ಪಿಯುಸಿ ಕ್ರಿಶ್ಚಿಯನ್
ಡಾ.ಎಂ.ಸಿ.ಸುಧಾಕರ್ ಚಿಂತಾಮಣಿ 54 ಎಂಡಿಎಸ್ (ಡೆಂಟಲ್) ಒಕ್ಕಲಿಗ
ಮಂಕಾಳ ವೈದ್ಯ ಭಟ್ಕಳ 50 8ನೇ ತರಗತಿ ಮೊಗವೀರ
ಈಶ್ವರ್ ಖಂಡ್ರೆ ಭಾಲ್ಕಿ 61 ಬಿಇ ಲಿಂಗಾಯತ
ಲಕ್ಷ್ಮೀ ಹೆಬ್ಬಾಳ್ಕರ್ ಬೆಳಗಾವಿ ಗ್ರಾಮೀಣ 48 ಎಂಎ ಲಿಂಗಾಯತ
ಮಧು ಬಂಗಾರಪ್ಪ ಸೊರಬ 57 ಬಿಕಾಂ ಈಡಿಗ
ಕೆ.ವೆಂಕಟೇಶ್ ಪಿರಿಯಾಪಟ್ಟಣ 75 ಬಿಎಸ್ ಸಿ ಒಕ್ಕಲಿಗ
ಡಿ ಸುಧಾಕರ್ ಹಿರಿಯೂರು 62 ಬಿಕಾಂ ಜೈನ್
ಹೆಚ್.ಕೆ.ಪಾಟೀಲ್ ಗದಗ 70 ಬಿಎಸ್ ಸಿ ನಾಮಧಾರಿ ರೆಡ್ಡಿ
ಎನ್.ಚೆಲುವರಾಯಸ್ವಾಮಿ ನಾಗಮಂಗಲ 63 ಡಿಪ್ಲೊಮೊ ಒಕ್ಕಲಿಗ
ಶಿವಾನಂದ ಪಾಟೀಲ್ ಬಸವನಬಾಗೇವಾಡಿ 61 ಡಿಪ್ಲೊಮೊ ಲಿಂಗಾಯತ
ಡಾ.ಹೆಚ್.ಸಿ.ಮಹದೇವಪ್ಪ ತಿ.ನರಸೀಪುರ 70 ಎಂಬಿಬಿಎಸ್ ಪರಿಶಿಷ್ಟ ಜಾತಿ
ಬೈರತಿ ಸುರೇಶ್ ಹೆಬ್ಬಾಳ, ಬೆಂಗಳೂರು 51 ಬಿಇ ಕುರುಬ
ಕೃಷ್ಣ ಭೈರೇಗೌಡ ಬ್ಯಾಟರಾಯನಪುರ 50 ಎಂಎ ಒಕ್ಕಲಿಗ
ಕೆ.ಎನ್.ರಾಜಣ್ಣ ಮಧುಗಿರಿ 72 BSc ಪರಿಶಿಷ್ಟ ಪಂಗಡ
ಬಿ.ನಾಗೇಂದ್ರ ಬಳ್ಳಾರಿ ಗ್ರಾಮಾಂತರ 52 ಬಿಕಾಂ ಪರಿಶಿಷ್ಟ ಪಂಗಡ
ಶರಣಬಸಪ್ಪ ದರ್ಶನಾಪುರ ಶಹಾಪುರ 62 BSc ರೆಡ್ಡಿ ಲಿಂಗಾಯತ
ಎಸ್.ಎಸ್. ಮಲ್ಲಿಕಾರ್ಜುನ ದಾವಣಗೆರೆ ಉತ್ತರ 56 ಬಿಕಾಂ ಲಿಂಗಾಯತ
ಶಿವರಾಜ ತಂಗಡಗಿ ಕನಕಗಿರಿ 52 ಬಿಎಸ್ ಸಿ ಭೋವಿ
ರಹೀಂ ಖಾನ್ ಬೀದರ್ 57 ಪಿಯುಸಿ ಮುಸ್ಲಿಂ
ಸಂತೋಷ್ ಲಾಡ್ ಕಲಘಟಗಿ 48 ಬಿಕಾಂ ಮರಾಠ
ಆರ್.ಬಿ.ತಿಮ್ಮಾಪುರ ಮುಧೋಳ 61 ಬಿಇ, LLB ಪರಿಶಿಷ್ಟ ಜಾತಿ
ಡಾ.ಶರಣಪ್ರಕಾಶ್ ಪಾಟೀಲ್ ಸೇಡಂ 56 ಎಂಬಿಬಿಎಸ್ ಲಿಂಗಾಯತ
ದಿನೇಶ್ ಗುಂಡೂರಾವ್ ಗಾಂಧಿನಗರ 54 ಬಿಇ ಬ್ರಾಹ್ಮಣ
ಎನ್.ಎಸ್.ಬೋಸ್ ರಾಜು ಮಾಜಿ ಎಂಎಲ್ಎ 76 ಡಿಪ್ಲೊಮೊ ಕ್ಷತ್ರಿಯ ರಾಜು