ಹೊಸ INCOME TAX ಬಿಲ್ – 2025ರ ಬಿಲ್‌ನಲ್ಲಿ ಏನಿದೆ? ಏನಿಲ್ಲ?
ಹೊಸ ಬಾಟಲಿಯಲ್ಲಿ ಹಳೇ ವೈನ್!

ಹೊಸ INCOME TAX  ಬಿಲ್  – 2025ರ ಬಿಲ್‌ನಲ್ಲಿ ಏನಿದೆ? ಏನಿಲ್ಲ?ಹೊಸ ಬಾಟಲಿಯಲ್ಲಿ ಹಳೇ ವೈನ್!

ಎಲ್ಲರೂ ಹೊಸ ಆದಾಯ ತೆರಿಗೆ ಬಿಲ್‌ಗಾಗಿ ಕಾತರದಿಂದ ಕಾಯುತ್ತಿದ್ದಾರೆ. ಇದೇ ಗುರುವಾರ ಹೊಸ ಆದಾಯ ತೆರಿಗೆ ಮಸೂದೆ 2025 ಅನ್ನು ಮಂಡಿಸಿದ್ದಾರೆ. ನಿರೀಕ್ಷೆಯಂತೆ ಕೇಂದ್ರ ಸರ್ಕಾರ ಇದೇ ಬಜೆಟ್ ಅಧಿವೇಶನದಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್  ಮಂಡನೆ ಮಾಡಿದ್ದಾರೆ. 622 ಪುಟಗಳಿರುವ ಇನ್‌ಕಂ  ಟ್ಯಾಕ್ಸ್ ಮಸೂದೆ 2025 ಅನ್ನು ಈ ಬಾರಿಯ ಬಜೆಟ್​ನಲ್ಲಿ ಘೋಷಿಸಲಾಗಿತ್ತು. ಪ್ರಸ್ತುತ ಇರುವ ಆದಾಯ ತೆರಿಗೆ ಕಾಯ್ದೆ- 1961 ರ ಬದಲಿಗೆ ಹೊಸ ಆದಾಯ ತೆರಿಗೆ ಮಸೂದೆಯನ್ನು ಈಗ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸಂಸತ್ತಿನಲ್ಲಿ ಮಂಡಿಸಿದರು. ನಂತರ ಅದನ್ನು ಸ್ಥಾಯಿ ಸಮಿತಿಯ ಅಭಿಪ್ರಾಯಕ್ಕಾಗಿ ಕಳುಹಿಸಲಾಗುತ್ತದೆ. ತಿದ್ದುಪಡಿಗಳ ನಂತರ, 2026ರ ಏಪ್ರಿಲ್ 1 ರಿಂದ ಜಾರಿಗೆ ಬರಲಿದೆ.

ಹೊಸ ಆದಾಯ ತೆರಿಗೆ ಮಸೂದೆ-2025 ಅನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಂಸತ್ತಿನಲ್ಲಿ ಮಂಡಿಸಿದರು. 10 ದಶಕಗಳಷ್ಟು ಹಳೆಯದಾದ 1961ರ ಆದಾಯ ತೆರಿಗೆ ಕಾಯ್ದೆಗೆ ಪ್ರಮುಖ ಬದಲಾವಣೆ ತರುವ ಉದ್ದೇಶದೊಂದಿಗೆ ಹೊಸ ಆದಾಯ ತೆರಿಗೆ ವಿಧೇಯಕ-2025 ಅನ್ನು ರಚಿಸಲಾಗಿದೆ.

ಹಿಂದಿನ ತೆರಿಗೆ ಕಾನೂನು ಒಟ್ಟು 880 ಪುಟಗಳು, 298 ವಿಭಾಗಗಳು ಮತ್ತು 14 ಷೆಡ್ಯೂಲ್‌ಗಳನ್ನು ಹೊಂದಿತ್ತು. ಈಗ ಹೊಸ ತೆರಿಗೆ ಮಸೂದೆಯು ಕೇವಲ 622 ಪುಟಗಳಲ್ಲಿ 526 ವಿಭಾಗಗಳು, 23 ಅಧ್ಯಾಯಗಳು ಮತ್ತು 16 ಷೆಡ್ಯೂಲ್‌ಗಳನ್ನು ಹೊಂದಿದೆ. ಈ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಿ ಅನುಮೋದಿಸಿದ ನಂತರ, ಸ್ಥಾಯಿ ಸಮಿತಿಯು ಅನುಮೋದಿಸಬೇಕಾಗುತ್ತದೆ. ಇಲ್ಲಿಯೂ ಅನುಮೋದನೆ ದೊರೆತರೆ, 2026ರ ಏಪ್ರಿಲ್ 1ರಿಂದ ಜಾರಿಗೆ ಬರುತ್ತದೆ. ಹೊಸ ತೆರಿಗೆ ಕಾನೂನು ಸರಳ ಮತ್ತು ಸುಲಭವಾಗಿದೆ ಎಂದು ಹೇಳಲಾಗಿತ್ತು. ಆದರೆ, ತೆರಿಗೆ ಜತ್ಞರು ಇದನ್ನು ಹೊಸ ಬಾಟಲಿಗೆ ಹಳೆಯ ವೈನ್‌ ತುಂಬಲಾಗಿದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.

ಯಾವ ವರ್ಷ ಆದಯವೋ ಅದೇ ವರ್ಷ ಟ್ಯಾಕ್ಸ್ 

ಈ ಹೊಸ ತೆರಿಗೆ ಮಸೂದೆಯಲ್ಲಿ ಹಿಂದಿನ ವರ್ಷ ಮತ್ತು ಮೌಲ್ಯಮಾಪನ ವರ್ಷದ ಪರಿಕಲ್ಪನೆಯನ್ನು ತೆಗೆದುಹಾಕಿ, ತೆರಿಗೆ ವರ್ಷವನ್ನು ಪರಿಚಯಿಸಿದೆ. ಎಲ್ಲರಿಗೂ ಅರ್ಥವಾಗುವಂತೆ ಮತ್ತು ಓದಲು ಸುಲಭವಾಗುವಂತೆ ಅವರು ಸಣ್ಣ ವಾಕ್ಯಗಳು, ಸೂತ್ರಗಳು ಮತ್ತು ಕೋಷ್ಟಕಗಳನ್ನು ಸಹ ಪರಿಚಯಿಸಲಾಗಿದೆ. ಹಿಂದಿನ ಕಾನೂನಿನಲ್ಲಿ, ಹಿಂದಿನ ಹಣಕಾಸು ವರ್ಷದಲ್ಲಿ ಗಳಿಸಿದ ಆದಾಯದ ಮೇಲೆ ಮೌಲ್ಯಮಾಪನ ವರ್ಷದಲ್ಲಿ ತೆರಿಗೆಯನ್ನು ಪಾವತಿಸಲಾಗುತ್ತಿತ್ತು. ಈಗ ಇದನ್ನು ಕೇವಲ ತೆರಿಗೆ ವರ್ಷ ಎಂದು ಪರಿಗಣಿಸಲಾಗುತ್ತದೆ.

ಉದಾಹರಣೆಗೆ, ಐಟಿ ರಿಟರ್ನ್ ಫೈಲ್ ಮಾಡುವಾಗ ಅಸೆಸ್ಮೆಂಟ್ ವರ್ಷ, ಹಣಕಾಸು ವರ್ಷ ಎಂದು ಎರಡು ವರ್ಗೀಕರಣ ಇತ್ತು. ಇದು ತೆರಿಗೆ ಪಾವತಿದಾರರಿಗೆ ಗೊಂದಲ ಮೂಡಿಸುವುದಾಗಿದೆ. ಇವೆರಡರ ಬದಲು ಒಂದೇ ಟ್ಯಾಕ್ಸ್ ಇಯರ್ ಎಂದು ಪರಿಗಣಿಸಲಾಗುತ್ತದೆ. ಉದಾಹರಣೆಗೆ, ನಾವು 2024-25ರ ಹಣಕಾಸು ವರ್ಷಕ್ಕೆ ತೆರಿಗೆ ಪಾವತಿಸುವಾಗ, ಅದರ ಅಸೆಸ್ಮೆಂಟ್ ವರ್ಷ 2025-26 ಎಂದು ಕರೆಯಲಾಗುತ್ತಿತ್ತು. ಈಗ ಈ ಅಸೆಸ್ಮೆಂಟ್ ಇಯರ್​ನ ಜಂಝಾಟವನ್ನು ತೆಗೆಯಲಾಗಿದೆ. ಯಾವ ವರ್ಷಕ್ಕೆ ತೆರಿಗೆ ಪಾವತಿಸುತ್ತೇವೆಯೋ ಅದನ್ನು ಆ ಟ್ಯಾಕ್ಸ್ ಇಯರ್ ಎಂದು ಪರಿಗಣಿಸಲಾಗುತ್ತದೆ.

ಬದಲಾದ ಕಾಲಘಟ್ಟದಲ್ಲಿ ಹಣದ ಹೂಡಿಕೆಯು ನಾನಾ ಸ್ವರೂಪಗಳಲ್ಲಿ ನಡೆಯುತ್ತಿವೆ. ಕ್ರಿಪ್ರೋ ಕರೆನ್ಸಿ ಸೇರಿದಂತೆ ಹಲವಾರು ರೀತಿಯ ವಿದ್ಯುನ್ಮಾನ ಮಾದರಿಯ ಹೂಡಿಕೆಗಳೂ ಈಗ ಚಾಲ್ತಿಗೆ ಬಂದಿವೆ. ಭಾರತೀಯರು ಅದರಲ್ಲಿ ದೊಡ್ಡ ಮಟ್ಟದ ಹೂಡಿಕೆಗಳನ್ನು ಮಾಡಿದ್ದಾರೆ. ಅದನ್ನು ಮನಗಂಡಿರುವ ಕೇಂದ್ರ ಆದಾಯ ತೆರಿಗೆ ಇಲಾಖೆ, 2025ರ ಆದಾಯ ತೆರಿಗೆ ವಿಧೇಯಕದಲ್ಲಿ ವಚ್ಯುವಲ್ ಡಿಜಿಟಲ್ ಅಸೆಟ್  ಎಂಬ ಪರಿಕಲ್ಪನೆ ಆಧಾರದಲ್ಲಿ ತೆರಿಗೆ ಸಂಗ್ರಹಕ್ಕೆ ಮುಂದಾಗಿದೆ. ಅದರಂತೆ ಭಾರತೀಯರು ಕ್ರಿಪ್ರೋ ಕರೆನ್ಸಿ, ಡಿಜಿಟಲ್ ಮಾದರಿಯ ಫೋಟೋ, ವಿಡಿಯೋ, ದಾಖಲೆಗಳ ಮೂಲಕ ಗಳಿಸುತ್ತಿರುವ ಆದಾಯವಾಗಿರಬಹುದು. ಈ ಎಲ್ಲಾ ರೀತಿಯ ವಿದ್ಯುನ್ಮಾನ ಆಸ್ತಿಪಾಸ್ತಿಗಳನ್ನು ಡಿಜಿಟಲ್ ಅಸೆಟ್ ಪರಿಕಲ್ಪನೆಯಡಿ ತರಲಾಗಿದೆಡಿಜಿಟಲ್ ತೆರಿಗೆ ಪಾವತಿಗೆ ಹೆಚ್ಚಿನ ಒತ್ತು ನೀಡಲಾಗಿದೆ.

 ಘೋಷಿಸಿದ ಆಸ್ತಿ ವರ್ಚ್ಯುವಲ್ ಡಿಜಿಟಲ್ ಆಸ್ತಿ

ಒಂದು ವೇಳೆ, ನಿರ್ದಿಷ್ಟ ಆದಾಯ ವರ್ಷದಲ್ಲಿ ನಿಮಗೆ ಬಂದಿರುವ ಹಣ, ಷೇರು ಮಾರುಕಟ್ಟೆ ಆದಾಯ ಅಥವಾ ಚಿನ್ನಾಭರಣಗಳು ಇತ್ಯಾದಿ ಬೆಲೆ ಬಾಳುವಂಥ ವಸ್ತುಗಳನ್ನು ಆದಾಯ ತೆರಿಗೆ ಇಲಾಖೆಯ ಗಮನಕ್ಕೆ ಸಲ್ಲಿಸದೇ ಇದ್ದರೆ ಅವುಗಳನ್ನು ವಚ್ಯುವಲ್ ಡಿಜಿಟಲ್ ಅಸೆಟ್ ಗಳೆಂದು ಪರಿಗಣಿಸಲು ಹೊಸ ಕಾಯ್ದೆಯಲ್ಲಿ ಉಲ್ಲೇಖಿಸಲಾಗಿದೆ

ಹೊಸ ತೆರಿಗೆ ಮಸೂದೆಯು ತೆರಿಗೆದಾರರಲ್ಲಿ ಸ್ವಲ್ಪ ಕಳವಳ ಉಂಟುಮಾಡಿತ್ತು. ಹಳೆಯ ಮತ್ತು ಹೊಸ ಆದಾಯ ತೆರಿಗೆ ಪದ್ಧತಿಗಳಲ್ಲಿ ತೆರಿಗೆ ಸ್ಲ್ಯಾಬ್‌ಗಳನ್ನು ಯಾವುದೇ ರೀತಿಯಲ್ಲಿ ಬದಲಾವಣೆ ಮಾಡಬಹುದು ಎಂಬ ನಿರೀಕ್ಷೆಯ ಇತ್ತು. ಆದರೆ, ತೆರಿಗೆ ಸ್ಲ್ಯಾಬ್‌ಗಳಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. 2025 ರ ಬಜೆಟ್‌ನಲ್ಲಿ ಪ್ರಸ್ತಾಪಿಸಿದಂತೆ, 2025-26 ರ ಹಣಕಾಸು ವರ್ಷಕ್ಕೆ ತೆರಿಗೆ ಸ್ಲ್ಯಾಬ್‌ಗಳು ಮತ್ತು ತೆರಿಗೆ ದರಗಳು ಹಾಗೆಯೇ ಇವೆ. ಹೀಗಾಗಿ ಚಿಂತೆ ಮಾಡುವ ಅಗತ್ಯವಿಲ್ಲ. 2025ರ ಏಪ್ರಿಲ್ 1 ರಿಂದ ಜಾರಿಗೆ ಬರುವ ಹೊಸ ತೆರಿಗೆ ಪದ್ಧತಿಯಲ್ಲಿ ತೆರಿಗೆ ಸ್ಲ್ಯಾಬ್‌ಗಳು ಮತ್ತು ತೆರಿಗೆ ದರಗಳ ವಿವರ ಇಲ್ಲಿದೆ.

 ಹೊಸ ತೆರಿಗೆ ಪದ್ಧತಿಯಲ್ಲಿ ಟ್ಯಾಕ್ಸ್‌ ಸ್ಲ್ಯಾಬ್‌

₹0- 4 ಲಕ್ಷದವರೆಗೆ – ಶೂನ್ಯ ತೆರಿಗೆ

₹ 4,00,001 – 8 ಲಕ್ಷದವರೆಗೆ : 5 %

₹ 8,00,001- 12 ಲಕ್ಷದವರೆಗೆ: 10 %

₹ 12,00,001- 16 ಲಕ್ಷದವರೆಗೆ : 15 %

₹16,00,001- 20 ಲಕ್ಷದವರೆಗೆ : 20 %

₹ 20,00,001- 24 ಲಕ್ಷದವರೆಗೆ : 25 %

₹24,00,001 ಮತ್ತು ಅದಕ್ಕಿಂತ ಹೆಚ್ಚಿನದು : 30 %

ಈಗ ಹೊಸ ತೆರಿಗೆ ಪದ್ಧತಿಯಲ್ಲಿ, ರೂ. ಕೇಂದ್ರ ಸರ್ಕಾರ ಇತ್ತೀಚೆಗೆ 12 ಲಕ್ಷ ರೂಪಾಯಿವರೆಗಿನ ಆದಾಯಕ್ಕೆ ತೆರಿಗೆ ಇಲ್ಲ ಎಂದು ಘೋಷಿಸಿದ್ದು ತಿಳಿದಿದೆ. ಇದಲ್ಲದೆ, ಸಂಬಳ ಪಡೆಯುವ ವ್ಯಕ್ತಿಗಳಿಗೆ, ಸ್ಟ್ಯಾಂಡರ್ಡ್‌ ಡಿಡಕ್ಷನ್‌ ₹75 ಸಾವಿರ ಸೇರಿದರೆ, ₹12.75 ಲಕ್ಷದವರೆಗಿನ ಆದಾಯಕ್ಕೆ ಶೂನ್ಯ ತೆರಿಗೆ ಇರುತ್ತದೆ. ಇಲ್ಲಿ ಹಿರಿಯ ನಾಗರಿಕರಿಗೆ ₹3 ಲಕ್ಷದವರೆಗೆ ತೆರಿಗೆ ವಿನಾಯಿತಿ ಇದೆ. ಸೂಪರ್ ಸೀನಿಯರ್ಸ್‌ಗೆ  ಅಂದ್ರೆ 80 ವರ್ಷ ಮೇಲ್ಪಟ್ಟವರಿಗೆ ₹5 ಲಕ್ಷ ದವರೆಗೆ ಶೂನ್ಯ ತೆರಿಗೆ ಇದೆ. ಹಿಂದಿನ ಆದಾಯ ತೆರಿಗೆ ಕಾಯ್ದೆಯಲ್ಲಿರುವ ಬಹುತೇಕ ಅಂಶಗಳೇ ಹೊಸ ಕಾಯ್ದೆಯಲ್ಲೂ ಇವೆಯಾದರೂ ಸ್ಪಷ್ಟತೆ ಹೆಚ್ಚಿಸಲಾಗಿದೆ, ಸಂಕೀರ್ಣತೆ ಕಡಿಮೆ ಮಾಡಲಾಗಿದೆ.

Kishor KV

Leave a Reply

Your email address will not be published. Required fields are marked *