ಹಾರ್ದಿಕ್ ಕಂಬ್ಯಾಕ್ ಕನಸಿಗೆ ಕೊಳ್ಳಿ! – ಲವ್‌ನಲ್ಲಿ ವೈಭವ್? ಸೆಲ್ಫಿ ವೈರಲ್!

ಹಾರ್ದಿಕ್ ಕಂಬ್ಯಾಕ್ ಕನಸಿಗೆ ಕೊಳ್ಳಿ! –  ಲವ್‌ನಲ್ಲಿ ವೈಭವ್? ಸೆಲ್ಫಿ ವೈರಲ್!

ಕ್ರಿಕೆಟ್ ಲೋಕದ ಇಂಟ್ರೆಸ್ಟಿಂಗ್ ಸುದ್ದಿಗಳು

ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿ ಆರಂಭಕ್ಕೂ ಮುನ್ನ ಟೀಂ ಇಂಡಿಯಾಗೆ ಆತಂಕ ಎದುರಾಗಿದೆ. ನಾಯಕ ಶುಭ್‌ಮನ್ ಗಿಲ್ ಅಭ್ಯಾಸದ ವೇಳೆ ಸಿರಾಜ್ ಅವರ ಬೌಲಿಂಗ್‌ನಲ್ಲಿ ಗಾಯಗೊಂಡಿದ್ದಾರೆ. ಚೆಂಡು ಗಿಲ್ ಅವರ ಬಲ ಮೊಣಕೈಗೆ ತಗುಲಿದ ಪರಿಣಾಮದಿಂದಾಗಿ ತೀವ್ರ ನೋವಿನಿಂದ ನರಳಲಾರಂಭಿಸಿದರು. ಇದರಿಂದಾಗಿ ಗಿಲ್ ತಕ್ಷಣವೇ ನೆಟ್‌ನಿಂದ ಹೊರಹೋಗಬೇಕಾಯಿತು. ನಂತ್ರ ಚೇತರಿಸಿಕೊಂಡ ಗಿಲ್ ಅಭ್ಯಾಸ ಆರಂಭಿಸಿದ್ರು, ನಾಳೆಯಿಂದ ಆರಂಭ ಆಗಲಿರೋ ಪಂದ್ಯದಲ್ಲಿ ಗಿಲ್ ಪ್ರಮುಖ ಪಾತ್ರ ವಹಿಸಬೇಕಿದೆ.

ಟೀಮ್ ಇಂಡಿಯಾ ಆಲ್​ರೌಂಡರ್ ಹಾರ್ದಿಕ್ ಪಾಂಡ್ಯ ಮತ್ತೆ ಗಾಯದ ಸಮಸ್ಯೆಗೆ ತುತ್ತಾಗಿದ್ದಾರೆ. ಈ ಗಾಯದ ಕಾರಣ ಅಕ್ಟೋಬರ್ 6 ರಿಂದ ಪುದುಚೇರಿಯಲ್ಲಿ ಆರಂಭವಾಗಲಿರುವ ಆಸ್ಟ್ರೇಲಿಯಾ ‘ಎ’ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಿಂದ ಅವರು ಸಂಪೂರ್ಣವಾಗಿ ಹೊರಗುಳಿಯಲಿದ್ದಾರೆ.  ಕಳೆದ ಕೆಲವು ತಿಂಗಳುಗಳಿಂದ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದ ಹಾರ್ದಿಕ್ ಪಾಂಡ್ಯ ಅವರಿಗೆ ಕಂಬ್ಯಾಕ್ ಮಾಡಲು ಭಾರತ ‘ಎ’ ತಂಡದ ಸರಣಿಯು ಉತ್ತಮ ವೇದಿಕೆಯಾಗಿತ್ತು. ಆದ್ರೆ ಈಗ ಅದ್ದ ಅದ್ದಕ್ಕೆ ಮತ್ತೆ ಬ್ರೇಕ್ ಬಿದ್ದಿದೆ.

ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿ ಸೆಪ್ಟೆಂಬರ್ 27ರಿಂದ ಅಂದ್ರೆ ನಾಳೆಯಿಂದ ಆರಂಭವಾಗಲಿದೆ. ಮೊದಲ ಪಂದ್ಯ ತಿರುವನಂತಪುರಂನಲ್ಲಿ ನಡೆಯಲಿದ್ದು, ಎರಡನೇ ಪಂದ್ಯ ಸೆಪ್ಟೆಂಬರ್ 30ರಂದು ಗುವಾಹಟಿಯಲ್ಲಿ, ಮೂರನೇ ಪಂದ್ಯ ಅಕ್ಟೋಬರ್ 3ರಂದು ನ್ಯೂ ಚಂಡೀಗಢದಲ್ಲಿ ನಡೆಯಲಿದೆ. ಮುಂದಿನ ವಿಶ್ವಕಪ್ ಸಿದ್ಧತೆಯ ದೃಷ್ಟಿಯಿಂದ ಈ ಸರಣಿ ಭಾರತಕ್ಕೆ ಪ್ರಮುಖ ಪರೀಕ್ಷೆಯಾಗಲಿದೆ.

ಟೀಂ ಇಂಡಿಯಾಗೆ ಮುಂದಿನ ದಿನಗಳಲ್ಲಿ ನಿರಂತರ ಕ್ರಿಕೆಟ್ ಎದುರಾಗಲಿದೆ. ವೆಸ್ಟ್ ಇಂಡೀಸ್ ವಿರುದ್ಧ ಮೂರು ODI ಹಾಗೂ ಐದು T20I ಪಂದ್ಯಗಳ ಸರಣಿ ಸೆಪ್ಟೆಂಬರ್ 27ರಿಂದ ಅಕ್ಟೋಬರ್ 17ರವರೆಗೆ ನಡೆಯಲಿದೆ. ಬಳಿಕ ಭಾರತ ತಂಡದ ಮುಂದಿನ ಅಂತರರಾಷ್ಟ್ರೀಯ ಚಟುವಟಿಕೆಗಳು ಮುಂದುವರಿಯಲಿವೆ. ಹೀಗಾಗಿ ಆಟಗಾರರ ಫಿಟ್‌ನೆಸ್ ಮತ್ತು ವರ್ಕ್‌ಲೋಡ್ ಮೇಲೆ ಮ್ಯಾನೇಜ್‌ಮೆಂಟ್‌ ಹೆಚ್ಚು ತಲೆ ಕೆಡಿಸಿಕೊಂಡಿದೆ.

ಇದನ್ನೂ ಓದಿ: ಕೊಹ್ಲಿ-ರೋಹಿತ್ ನಿವೃತ್ತಿ ನಂತರ ಏನಾಗುತ್ತೆ? – ಸೆಹ್ವಾಗ್ ಖಡಕ್ ಮಾತು ವೈರಲ್!

ಕ್ರಿಕೆಟ್‌ನಲ್ಲಿ ಮಿಂಚುತ್ತಿರೋ ವೈಭವ್ ಸೂರ್ಯವಂಶಿ ತಮ್ಮ ಗೆಳತಿಯೊಂದಿಗೆ ಮಿರರ್ ಸೆಲ್ಫಿ ತೆಗೆದುಕೊಂಡಿರುವಂತೆ ಫೋಟೋಗಳು ಸಖತ್ ವೈರಲ್ ಆಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಫೋಟೋಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ.  ಆ ಹುಡುಗಿ ಯಾರು ಅಂತ ಸೋಷಿಯಲ್ ಮೀಡಿಯಾದಲ್ಲಿ ಹುಡುಕುತ್ತಿದ್ದಾರೆ. ಆದರೆ ಇದು AI ಫೋಟೋ ಆಗಿದ್ದು, ಸಾಕಷ್ಟು ಜನ ಗೊತ್ತಿಲ್ಲದೇ ಶೇರ್ ಮಾಡುತ್ತಿದ್ದಾರೆ.

ವಿರಾಟ್ ಕೊಹ್ಲಿ ಮತ್ತೆ ಅಭಿಮಾನಿಗಳ ಮನ ಗೆದ್ದಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಗಾಗಿ ತಿರುವನಂತಪುರಂನಲ್ಲಿ ಬೀಡುಬಿಟ್ಟಿರುವ ಕೊಹ್ಲಿ, ವಿಶೇಷ ಚೇತನ ಬಾಲಕನನ್ನು ಭೇಟಿಯಾಗಿ ಕೆಲ ಸಮಯ ಮಾತನಾಡಿದ್ದಾರೆ. ಬಾಲಕನ ತಂದೆಯೊಂದಿಗೆ ಮಾತನಾಡಿದ ಕೊಹ್ಲಿ, ಬಳಿಕ ಅಭಿಮಾನಿಗೆ ಆಟೋಗ್ರಾಫ್ ನೀಡಿ ಖುಷಿಪಡಿಸಿದ್ದಾರೆ. ಕೊಹ್ಲಿಯ ಈ ಸರಳ ನಡೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆಯುತ್ತಿದೆ.

ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಸಂಪೂರ್ಣವಾಗಿ ಕ್ರಿಕೆಟ್‌ಗೆ ವಿದಾಯ ಹೇಳಿದ್ರೆ  ಭಾರತದಲ್ಲಿ ಕ್ರಿಕೆಟ್ ಕ್ರೇಝ್ ಕಮ್ಮಿಯಾಗುತ್ತಾ ಅನ್ನೋ ಪ್ರಶ್ನೆಗೆ  ವೀರೇಂದ್ರ ಸೆಹ್ವಾಗ್ ತಮ್ಮದೇ ಶೈಲಿಯಲ್ಲಿ  ಉತ್ತರ ನೀಡಿದ್ದಾರೆ. ಒಬ್ಬರು ಅಥವಾ ಇಬ್ಬರು ಆಟಗಾರರಿಂದ ಕ್ರಿಕೆಟ್ ನಡೆಯುತ್ತಿಲ್ಲ. ಬರಿ ಕ್ರಿಕೆಟಿಗರಿಂದಲೇ ಈ ಆಟ ನಡೆಯುತ್ತಿದ್ದರೆ, ಕ್ರಿಕೆಟ್ ಇಷ್ಟೊತ್ತಿಗಗಲೇ ಎಂದೋ ನಿಂತುಹೋಗುತ್ತಿತ್ತು ಎಂದು ಸೆಹ್ವಾಗ್ ಹೇಳಿದ್ದಾರೆ. ಈ ಹಿಂದೆ ಕೂಡ ಇದೇ ವಾದ ಇತ್ತು ಎಂದಿದ್ದಾರೆ.

ಪಾಕ್ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಫಾತಿಮಾ ಸನಾ, ಪುರುಷರ ತಂಡದ ನಾಯಕ ಬಾಬರ್ ಆಝಂಗಿಂತಲೂ ಮುಂದಿದ್ದಾರೆ ಎಂದು ಪಾಕಿಸ್ತಾನದ ಮಾಜಿ ಮುಖ್ಯ ಆಯ್ಕೆಗಾರ ಮೊಹಮ್ಮದ್ ವಾಸಿಮ್ ಹೇಳಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ. ಫಾತಿಮಾ ಆಲ್‌ರೌಂಡರ್ ಆಗಿ ನಿರಂತರವಾಗಿ ಮಿಂಚುತ್ತಿದ್ದು, ಜಾಗತಿಕ ಮಟ್ಟದಲ್ಲೂ ಶ್ಲಾಘನೆ ಪಡೆಯುತ್ತಿದ್ದಾರೆ. ಆದರೆ ಬಾಬರ್ ಆಝಂ ಇತ್ತೀಚೆಗೆ ನಿರಂತರ ಫಾರ್ಮ್ ಕೊರತೆ ಮತ್ತು ನಾಯಕತ್ವದ ಒತ್ತಡದಿಂದ ಕಂಗೆಟ್ಟಿದ್ದಾರೆ. ಹೀಗಾಗಿ ಪ್ರಸ್ತುತ ಫಾತಿಮಾ ಸನಾ ಅವರೇ ಪಾಕಿಸ್ತಾನದ ನಿಜವಾದ ಸೂಪರ್‌ಸ್ಟಾರ್ ಎಂದು ವಾಸಿಮ್ ವ್ಯಾಖ್ಯಾನಿಸಿದ್ದಾರೆ.

ICC ಟ್ರೋಫಿ ಗೆಲ್ಲಬೇಕಾದರೆ ಭಾರತವನ್ನು ಸೋಲಿಸುವುದು ಅತ್ಯಗತ್ಯ ಎಂದು ವೆಸ್ಟ್ ಇಂಡೀಸ್ ಕೋಚ್ ಅಭಿಪ್ರಾಯಪಟ್ಟಿದ್ದಾರೆ. ಭಾರತ ಸದ್ಯ ವಿಶ್ವ ಕ್ರಿಕೆಟ್‌ನ ಬಲಿಷ್ಠ ತಂಡಗಳಲ್ಲಿ ಒಂದಾಗಿದ್ದು, ದೊಡ್ಡ ಟೂರ್ನಿಗಳಲ್ಲಿ ನಿರಂತರವಾಗಿ ಉತ್ತಮ ಪ್ರದರ್ಶನ ನೀಡುತ್ತಿದೆ. ಹೀಗಾಗಿ ಟ್ರೋಫಿ ಗೆಲ್ಲುವ ಗುರಿ ಹೊಂದಿರುವ ಯಾವುದೇ ತಂಡ ಭಾರತವನ್ನು ಮಣಿಸುವ ಸವಾಲು ಎದುರಿಸಬೇಕಾಗುತ್ತದೆ ಎಂದು ವೆಸ್ಟ್ ಇಂಡೀಸ್ ಕೋಚ್ ಹೇಳಿದ್ದಾರೆ.

ದಕ್ಷಿಣ ಆಫ್ರಿಕಾ ಮೊದಲ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು 67 ರನ್‌ಗಳಿಂದ ಸೋಲಿಸಿದೆ. ದಕ್ಷಿಣ ಆಫ್ರಿಕಾ 297/8 ರನ್ ಗಳಿಸಿದರೆ, ಆಸ್ಟ್ರೇಲಿಯಾ 41.2 ಓವರ್‌ಗಳಲ್ಲಿ 230ಕ್ಕೆ ಆಲೌಟ್ ಆಯಿತು. ಇದೀಗ ಎರಡನೇ ODI ಸೆಪ್ಟೆಂಬರ್ 27ರಂದು ಜೋಹಾನ್ಸ್‌ಬರ್ಗ್‌ನ ವಾಂಡರರ್ಸ್‌ನಲ್ಲಿ ನಡೆಯಲಿದೆ. ಸರಣಿಯಲ್ಲಿ ದಕ್ಷಿಣ ಆಫ್ರಿಕಾ 1-0 ಮುನ್ನಡೆಯಲ್ಲಿದೆ.

Kishor KV

Leave a Reply

Your email address will not be published. Required fields are marked *