ಸಿಲಿಕಾನ್‌ ಸಿಟಿ ಮಂದಿಗೆ ಗುಡ್‌ನ್ಯೂಸ್!‌ – ಇನ್ಮುಂದೆ ರಾತ್ರಿಯೂ ಬರಲಿದೆ ಕಸದ ಗಾಡಿಗಳು!

ಸಿಲಿಕಾನ್‌ ಸಿಟಿ ಮಂದಿಗೆ ಗುಡ್‌ನ್ಯೂಸ್!‌ – ಇನ್ಮುಂದೆ ರಾತ್ರಿಯೂ ಬರಲಿದೆ ಕಸದ ಗಾಡಿಗಳು!

ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಇತ್ತೀಚಿನ ದಿನಗಳಲ್ಲಿ ಕಸದ ಸಮಸ್ಯೆ ಹೆಚ್ಚಾಗುತ್ತಿದೆ ಎನ್ನುವ ಗಂಭೀರವಾದ ಆರೋಪಗಳು ಕೇಳಿ ಬರುತ್ತಿವೆ. ಬೆಂಗಳೂರಿನಲ್ಲಿ ಎಲ್ಲೆಂದರಲ್ಲಿ ಕಸ ಎಸೆಯಲಾಗುತ್ತಿದೆ. ಕಸ ಸಂಗ್ರಹ ಹಾಗೂ ವಿಲೇವಾರಿಯಲ್ಲಿ ಗ್ರೇಟರ್ ಬೆಂಗಳೂರು ಆಡಳಿತವು ಸಾಕಷ್ಟು ಕ್ರಮಗಳನ್ನು ಅನುಸರಿಸುತ್ತಿಲ್ಲ ಎನ್ನುವ ಆರೋಪಗಳು ಕೇಳಿ ಬರುತ್ತಿವೆ. ಇದೀಗ ಜಿಬಿಎ ಹೊಸ ಕ್ರಮ ಕೈಗೊಳ್ಳಲು ಮುಂದಾಗಿದೆ. ಇನ್ಮುಂದೆ ರಾತ್ರಿ ಕೂಡ ಕಸ ಸಂಗ್ರಹಿಸಲು ನಿರ್ಧರಿಸಿದೆ.

ಇದನ್ನೂ ಓದಿ: ಮದುವೆ ಬೇಡ ಎಂದು ತಲೆ ಬೋಳಿಸಿಕೊಂಡ ಯುವತಿ! – ಆಮೇಲೆ ಏನಾಯ್ತು?

ಬೆಂಗಳೂರಿನಲ್ಲಿ  ಎಲ್ಲೆಂದರಲ್ಲಿ ಕಸ ಹಾಕುವ ಸಮಸ್ಯೆಗೆ ಇತಿಶ್ರೀ ಹಾಡಲು ಜಿಬಿಎ ಹೊಸ ಪ್ರಯತ್ನಕ್ಕೆ ಕೈ ಹಾಕಿದೆ. ಇನ್ನುಂದೆ ರಾತ್ರಿ ಸಮಯದಲ್ಲೂ ಕಸ ಸಂಗ್ರಹಿಸಲು ಜಿಬಿಎ ನಿರ್ಧರಿಸಿದೆ. ಕೆಲಸಕ್ಕೆ ಹೋಗುವವರು ಹಗಲು ಹೊತ್ತಿನಲ್ಲಿ ಕಸದ ಗಾಡಿಗೆ ಕಸ ಹಾಕಲು ಆಗದೆ, ರಸ್ತೆ ಬದಿ ಎಸೆದು ಹೋಗುತ್ತಾರೆ. ಇದನ್ನು ತಡೆಗಟ್ಟುವ ದೃಷ್ಟಿಯಿಂದ ರಾತ್ರಿ ಟಿಪ್ಪರ್ ಲಾರಿಗಳ ಮೂಲಕ ತ್ಯಾಜ್ಯ ಸಂಗ್ರಹಿಸಲಾಗುತ್ತದೆ.  ಮೊದಲಿಗೆ ದಕ್ಷಿಣ ನಗರ ಪಾಲಿಕೆಯಿಂದ ಪ್ರಾಯೋಗಿಕವಾಗಿ ಸಂಗ್ರಹಿಸಲಾಗಿದ್ದು, ಇದು ಯಶಸ್ವಿಯಾದರೇ ಮುಂದೆ ನಗರದಾದ್ಯಂತ ಜಾರಿಗೆ ತರಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Shwetha M

Leave a Reply

Your email address will not be published. Required fields are marked *