ಸಲ್ಮಾನ್ ಖಾನ್ ಜೊತೆ ರಶ್ಮಿಕಾ ನೋಡಲು ಫ್ಯಾನ್ಸ್ ಕಾತರ – ಸಿಕಂದರ್ ಸಿನಿಮಾ ಮಾರ್ಚ್ 30ಕ್ಕೆ ಗ್ರ್ಯಾಂಡ್ ರಿಲೀಸ್

ಬಾಲಿವುಡ್ನ ಗ್ರೇಟ್ ಬ್ಯಾಚುಲರ್ ಹೀರೋ ಸಲ್ಮಾನ್ ಖಾನ್ ಮತ್ತು ರಶ್ಮಿಕಾ ಮಂದಣ್ಣ ನಟನೆಯ ಸಿಕಂದರ್ ಚಿತ್ರ ನೋಡಲು ಪ್ರೇಕ್ಷಕರು ತುದಿಗಾಲಲ್ಲಿ ನಿಂತಿದ್ದಾರೆ. ಫ್ಯಾನ್ಸ್ ಕಾಯುವಿಕೆಗೆ ಇನ್ನು ಕೆಲವೇ ದಿನಗಳಷ್ಟೇ ಬಾಕಿ. ಮಾರ್ಚ್ 30ರಂದು ಸಿಕಂದರ್ ಸಿನಿಮಾ ತೆರೆಕಾಣುತ್ತಿದೆ. ಚಿತ್ರಕ್ಕೆ ಯು/ಎ ಪ್ರಮಾಣಪತ್ರ ದೊರೆತಿದ್ದು, ಯಾವುದೇ ಕಟ್ ಇಲ್ಲದೆ ಬಿಡುಗಡೆಯಾಗುತ್ತಿದೆ.
ಇದನ್ನೂ ಓದಿ: ರಶ್ಮಿಕಾ ಮಂದಣ್ಣ ಫ್ಯಾನ್ಸ್ ಗೆ ಗುಡ್ನ್ಯೂಸ್.. – ಪುಷ್ಪಾ 3 ತೆರೆಗೆ ಬರುತ್ತಾ?
ಸಲ್ಮಾನ್ ಖಾನ್ ಹಾಗೂ ರಶ್ಮಿಕಾ ಮಂದಣ್ಣ ನಟನೆಯ ‘ಸಿಕಂದರ್’ ಸಿನಿಮಾ ಶುಕ್ರವಾರ ರಿಲೀಸ್ ಆಗ್ತಿಲ್ಲ. ಭಾನುವಾರ ತೆರೆಗೆ ಬರಲಿದೆ. ಇಡೀ ಸಿನಿಮಾದ ಸತ್ವವನ್ನು ಟ್ರೇಲರ್ನಲ್ಲಿ ತೋರಿಸಲಾಗುತ್ತಿದೆಯೇ ಎಂಬ ಪ್ರಶ್ನೆ ಮೂಡುವಂತೆ ಮಾಡಿದೆ. ಇನ್ನು ಸಿನಿಮಾದ ಅವಧಿ 150.8 ನಿಮಿಷ ಇದೆ. ಅಂದರೆ, ಸಿನಿಮಾ 2 ಗಂಟೆ 30 ನಿಮಿಷ ಇರಲಿದೆ. ಚಿತ್ರಕ್ಕೆ ಯುಎ ಪ್ರಮಾಣ ಪತ್ರ ಸಿಕ್ಕಿದ್ದು, 13 ವರ್ಷ ಮೇಲ್ಪಟ್ಟವರು ಚಿತ್ರವನ್ನು ವೀಕ್ಷಿಸಬಹುದು. ಸಲ್ಮಾನ್ ಖಾನ್ ಸಿನಿಮಾಗಳು ಇತ್ತೀಚಿನ ವರ್ಷಗಳಲ್ಲಿ ದೊಡ್ಡ ಗೆಲುವು ಕಂಡೇ ಇಲ್ಲ. ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಗೆಲುವು ಕಾಣಲಿ ಎಂದು ಸಲ್ಲು ಭಾಯ್ ಫ್ಯಾನ್ಸ್ ಹಾರೈಸುತ್ತಿದ್ದಾರೆ.
‘ಸಿಕಂದರ್’ ರಶ್ಮಿಕಾ ಪಾಲಿಗೂ ವಿಶೇಷ ಸಿನಿಮಾ. ಈಗಾಗಲೇ ಅವರ ನಟನೆಯ ಮೂರು ಸಿನಿಮಾಗಳು 500 ಕೋಟಿ ರೂಪಾಯಿ ಕ್ಲಬ್ ಸೇರಿವೆ. ಜೊತೆಗೆ ಈ ಸಿನಿಮಾದ ಪ್ರಚಾರದ ಚುಕ್ಕಾಣಿ ರಶ್ಮಿಕಾ ಹೆಗಲಿಗೇರಿದೆ. ಈ ಸಿನಿಮಾದ ಪ್ರಚಾರದಲ್ಲಿ ಸಲ್ಮಾನ್ ಸಕ್ರಿಯವಾಗಿ ಭಾಗಿ ಆಗುವುದಿಲ್ಲ. ಅವರ ಅನುಪಸ್ಥಿತಿಯಲ್ಲಿ ರಶ್ಮಿಕಾ ಸಿನಿಮಾದ ಪ್ರಚಾರ ಮಾಡಲಿದ್ದಾರೆ. ಸಲ್ಮಾನ್ ಖಾನ್ಗೆ ಜೀವ ಬೆದರಿಕೆ ಇರುವ ಕಾರಣದಿಂದಾಗಿ ಸಲ್ಲು ಸಿನಿಮಾದ ಪ್ರಚಾರದಲ್ಲಿ ಸಕ್ರಿಯವಾಗಿ ಭಾಗಿ ಆಗುವುದಿಲ್ಲ. ಹಾಗಾಗಿ ಸಲ್ಮಾನ್ ಗೈರು ಹಾಜರಿಯಲ್ಲಿ ರಶ್ಮಿಕಾ ಅವರೇ ಸಿನಿಮಾದ ಪ್ರಚಾರ ಮಾಡಲಿದ್ದಾರೆ ಎನ್ನಲಾಗುತ್ತಿದೆ.