ಶ್ರೀ ಗಂಧದಗುಡಿಗೂ ಕೈಕೊಟ್ಟ ಸಂಜನಾ? – ಸೀರಿಯಲ್‌ ಬಿಡೋದಾದ್ರೆ ಒಪ್ಪಿಕೊಳ್ಳುವುದೇಕೆ?
2 ಧಾರಾವಾಹಿ.. 2 ಕಾರಣ.. ಇದು ಸರಿನಾ?

ಶ್ರೀ ಗಂಧದಗುಡಿಗೂ ಕೈಕೊಟ್ಟ ಸಂಜನಾ? – ಸೀರಿಯಲ್‌ ಬಿಡೋದಾದ್ರೆ ಒಪ್ಪಿಕೊಳ್ಳುವುದೇಕೆ?2 ಧಾರಾವಾಹಿ.. 2 ಕಾರಣ.. ಇದು ಸರಿನಾ?

ಸಂಜನಾ ಬುರ್ಲಿ.. ಪುಟ್ಟಕ್ಕನ ಮಕ್ಕಳು ಸೀರಿಯಲ್‌ನಲ್ಲಿ ಸ್ನೇಹ ಪಾತ್ರಕ್ಕೆ ಜೀವ ತುಂಬಿದ್ದ ಸಂಜನಾ ಡಿಸಿ ಸ್ನೇಹ ಅಂತಾನೇ ಫೇಮಸ್ ಆಗಿದ್ರು. ಪುಟ್ಟಕ್ಕನ ಮಕ್ಕಳು ಸೀರಿಯಲ್‌ ಬಳಿಕ ‌ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗ್ತಿರೋ ಶ್ರೀಗಂಧದಗುಡಿ ಸೀರಿಯಲ್‌ನಲ್ಲಿ ನಾಯಕಿಯಾಗಿ ನಟಿಸ್ತಾ ಇದ್ರು. ಆದ್ರೀಗ ಸಂಜನಾ ಸೀರಿಯಲ್‌ ಫ್ಯಾನ್ಸ್‌ ಗೆ ಶಾಕ್‌ ಕೊಟ್ಟಿದ್ದಾರೆ. ಇದೀಗ ಶ್ರೀ ಗಂಧದಗುಡಿ ಸೀರಿಯಲ್‌ನೂ ಅರ್ಧಕ್ಕೆ ಬಿಟ್ಟಿದ್ದಾರೆ. ಇದೀಗ ಸಂಜನಾ ವಿರುದ್ದ ಸೀರಿಯಲ್‌ ಪ್ರೇಮಿಗಳು ಸಿಟ್ಟಾಗಿದ್ದಾರೆ. ಸೀರಿಯಲ್‌ ಅರ್ಧಕ್ಕೆ ಬಿಡೋದಾದ್ರೆ ಯಾಕೆ ಒಪ್ಪಿಕೊಳ್ಬೇಕಿತ್ತು ಅಂತ ಪ್ರಶ್ನೆ ಮಾಡ್ತಿದ್ದಾರೆ.

ಇದನ್ನೂ ಓದಿ: ಗಂಡನ ಜೊತೆ ಜಗಳ ಮಾಡಿಕೊಂಡು ಸಾಯಲು ಹೊರಟ ಪತ್ನಿ! – ತಮಾಷೆ ಮಾಡ್ತಿದ್ದಾಳೆ ಎಂದು ವಿಡಿಯೋ ಮಾಡಿದ ಪತಿರಾಯ!

ಲಗ್ನ ಪತ್ರಿಕೆ ಎಂಬ ಸೀರಿಯಲ್‌ ಮೂಲಕ ಸಂಜನಾ ಕಿರುತೆರೆಗೆ ಎಂಟ್ರಿಕೊಟ್ಟಿದ್ದರು. ಆದ್ರೆ ಈ ಸೀರಿಯಲ್‌ ಅರ್ಧಕ್ಕೆ ನಿಂತು ಹೋಗಿತ್ತು. ಅದಾದ ಬಳಿಕ ಸಂಜನಾ  ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಡಿಸಿ ಸ್ನೇಹಾ ಆಗಿ ಜನರ ಮನಸ್ಸಿಗೆ ಹತ್ತಿರವಾಗಿದ್ರು.  ಪುಟ್ಟಕ್ಕನ ಮಕ್ಕಳು ಸೀರಿಯಲ್‌ನಲ್ಲಿ ಸಂಜನಾ ಹೆಚ್ಚು ಕಡಿಮೆ 800 ಸಂಚಿಕೆಗಳಲ್ಲಿ ನಟಿಸಿದ್ರು. ಆದ್ರೆ ಕಳೆದ ವರ್ಷ ಏಕಾಏಕಿ ಈ ಸೀರಿಯಲ್‌ನಿಂದ ಆಚೆ ಬಂದ್ರು.  ಪುಟ್ಟಕ್ಕನ ಮಕ್ಕಳು ಧಾರಾವಾಹಿಗೆ ಗುಡ್‌ಬೈ ಹೇಳಲು ಶಿಕ್ಷಣವೇ ಪ್ರಮುಖ ಕಾರಣವೆಂದು ಹೇಳಿದ್ರು. ಆ ನಂತರ ಕಾಣಿಸಿಕೊಂಡಿದ್ದು ಕಲರ್ಸ್ ಕನ್ನಡದಲ್ಲಿ. ಪ್ರತಿ ದಿನ ರಾತ್ರಿ 8 ಗಂಟೆಗೆ ಪ್ರಸಾರವಾಗುವ ಶ್ರೀ ಗಂಧದ ಗುಡಿ ಧಾರಾವಾಹಿಯಲ್ಲಿ ಚಂದನಾ ಪಾತ್ರವನ್ನು ಸಂಜನಾ ನಿರ್ವಹಿಸುತ್ತಿದ್ದರು. ತಮ್ಮ ಅಭಿನಯದಿಂದ ಮತ್ತೊಮ್ಮೆ ತಮ್ಮ ಫ್ಯಾನ್ಸ್ ಹೃದಯ ಗೆದ್ದರು. ಕಳೆದ ಅಕ್ಟೋಬರ್ 6 ರಂದು ಆರಂಭವಾದ ಶ್ರೀ ಗಂಧದಗುಡಿ ಸದ್ಯ 156 ಸಂಚಿಕೆಗಳನ್ನು ಪೂರೈಸಿದೆ.  ಹೀಗಿರುವಾಗಲೇ ಸಂಜನಾ ಬುರ್ಲಿ ಸೀರಿಯಲ್‌ನಿಂದ ಹೊರ ಬಂದಿದ್ಧಾರೆ. ತಾನು ಮದುವೆ ಆಗುತ್ತಿದ್ದೇನೆ. ಹೀಗಾಗಿ ನಾನು ಸೀರಿಯಲ್‌ನಿಂದ ಹೊರ ಬರುತ್ತೇನೆ ಎಂದು ಹೇಳಿಕೊಂಡಿದ್ದಾರೆ.

ಹೌದು, ಜನವರಿ 25 ರಂದು ದಾವಣಗೆರೆ ಮೂಲದ ವೈದ್ಯ ಸಮರ್ಥ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಈ ಮೂಲಕ ತಮ್ಮ ಅಭಿಮಾನಿಗಳಿಗೆ ಸರ್ ಫ್ರೈಸ್ ನೀಡಿದ್ದರು. ಸದ್ಯ ಡಾಕ್ಟರ್ ಸಮರ್ಥ್ ಜೊತೆ ಸಂಜನಾ ಸಪ್ತಪದಿಯನ್ನು ತುಳಿಯಲು ಅಣಿಯಾಗಿದ್ದಾರೆ.  ಶ್ರೀ ಗಂಧದ ಗುಡಿ ಧಾರಾವಾಹಿಗೆ ಸಂಜನಾ ಪ್ರತಿ ತಿಂಗಳು 20 ದಿನ ಮೀಸಲಿಡಬೇಕಾಗುತ್ತೆ. ಹೀಗಾಗಿ ಮದುವೆಯ ತಯಾರಿಗೆ ತಮ್ಮ ಈ ಶೆಡ್ಯೂಲ್‌ದಿಂದ ಅಡೆತಡೆಯಾಗಬಹುದು ಎಂದು ಸಂಜನಾ ಶ್ರೀ ಗಂಧದಗುಡಿ ಸೀರಿಯಲ್‌ಗೆ ಗುಡ್ ಬೈ ಹೇಳಿದ್ದಾರೆ. ಆದ್ರೀಗ ಸೀರಿಯಲ್‌ ಪ್ರೇಮಿಗಳು ಸಂಜನಾ ವಿರುದ್ದ ಕಿಡಿಕಾರಿದ್ದಾರೆ.

ಕಿರುತೆರೆಯಲ್ಲಿ ಯಾವುದೇ ಸೀರಿಯಲ್‌ ಇರ್ಲಿ.. ಆ ಧಾರಾವಾಹಿಯ ಪಾತ್ರಗಳ ಜೊತೆ ಪ್ರೇಕ್ಷಕರು ಎಮೋಷ್ನಲೀ ಕನೆಕ್ಟ್‌ ಆಗಿರ್ತಾರೆ. ಹೀಗಾದ್ರೆ ಆ ಸೀರಿಯಲ್ ಗೆದ್ದಂತೆ. ವೀಕ್ಷಕರು ಕೆಲ ಪಾತ್ರಗಳನ್ನ ದ್ವೇಷ ಮಾಡಿದ್ರೆ, ಇನ್ನೂ ಕೆಲ ಪಾತ್ರಗಳನ್ನ ತುಂಬಾ ಇಷ್ಟ ಪಡ್ತಾರೆ. ಹೀಗಾಗಿ ಯಾವುದಾದೂ ಪಾತ್ರ ಬದಲಾದ್ರೆ ವೀಕ್ಷಕರು ಅದನ್ನ ಸ್ವೀಕರಿಸಲು ತುಂಬಾ ಟೈಮ್‌ ತೆಗೆದುಕೊಳ್ಳುತ್ತೆ. ಇದೀಗ ಸಂಜನಾ ವಿಚಾರದಲ್ಲೂ ಹೀಗೆ ಆಗಿದೆ. ಪುಟ್ಟಕ್ಕನ ಮಕ್ಕಳು ಸೀರಿಯಲ್‌, ಹಾಗೇ ಶ್ರೀ ಗಂಧದಗುಡಿ ಸೀರಿಯಲ್‌ ನಲ್ಲಿ ಸಂಜನಾ ಪಾತ್ರವನ್ನ ಸೀರಿಯಲ್‌ ಪ್ರೇಕ್ಷಕರು ಮನಸಾರೆ ಮೆಚ್ಚಿಕೊಂಡಿದ್ರು. ಇದೀಗ ಸಂಜನಾ ಸೀರಿಯಲ್‌ ಬಿಡ್ತಿರೋದು ವೀಕ್ಷಕರಿಗೆ ಬೇಸರ ತರಿಸಿದೆ. ಇದೇ ಕಾರಣಕ್ಕೆ ಸಂಜನಾ ಫ್ಯಾನ್ಸ್‌ ಸೋಶಿಯಲ್‌ ಮೀಡಿಯಾದಲ್ಲಿ ಕಮೆಂಟ್‌ ಹಾಕ್ತಿದ್ದಾರೆ. ಸೀರಿಯಲ್‌ ಒಪ್ಪಿಕೊಂಡ ಮೇಲೆ ಸೀರಿಯಲ್‌ ಕಂಪ್ಲೀಟ್‌ ಮಾಡಬೇಕು. ಅದು ಬಿಟ್ಟು ಅರ್ಧಕ್ಕೆ ಕೈಕೊಡೋದು ಯಾಕೆ? ಸೀರಿಯಲ್‌ ಅರ್ಧಕ್ಕೆ ಬಿಡೋದು ಅಂತ ಗೊತ್ತಿದ್ದ ಮೇಲೆ ಸೀರಿಯಲ್‌ ನ ಯಾಕೆ ಒಪ್ಪಿಕೊಳ್ಳಬೇಕಿತ್ತು ಅಂತ ಪ್ರಶ್ನೆ ಮಾಡ್ತಿದ್ದಾರೆ.

ಇನ್ನು ಸಂಜನಾ ಅವರ ಜಾಗಕ್ಕೆ ಹೊಸ ನಟಿಯ ಎಂಟ್ರಿ ಆಗಿದೆ. ಚಂದನಾ ಪಾತ್ರಕ್ಕೆ ಬಂದಿರುವ ಹೊಸ ನಟಿಯನ್ನ ಸಂಜನಾ ಪರಿಚಯ ಮಾಡಿಕೊಟ್ಟಿದ್ದಾರೆ. ನಟಿ ಸ್ನೇಹಾ ಮಂಜುನಾಥ್ ಇನ್ಮುಂದೆ ಚಂದನಾ ಪಾತ್ರಕ್ಕೆ ಜೀವ ತುಂಬಲಿದ್ದಾರೆ. ಅಂದ್ಹಾಗೆ ಸ್ನೇಹಾ ಬೇರೆ ಯಾರು ಅಲ್ಲ. ಈ ಹಿಂದೆ ಜೀ ಪವರ್‌ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಶುಭಸ್ಯ ಶೀಘ್ರಂ ಧಾರಾವಾಹಿಯ ನಾಯಕಿ. ಇದಕ್ಕೂ ಮುನ್ನ ಶಾಂತಂ ಪಾಪಂ ಮತ್ತು ರಾಮಾಚಾರಿ ಧಾರಾವಾಹಿಯಲ್ಲಿ ಸ್ನೇಹಾ ಕಾಣಿಸಿಕೊಂಡಿದ್ದರು. ಈಗ ಸ್ನೇಹಾ ಶ್ರೀಗಂದದ ಗುಡಿ ಸೀರಿಯಲ್‌ನಲ್ಲಿ ಚಂದನಾ ಆಗಿ ಕಾಣಿಸಿಕೊಳ್ಳಲಿದ್ದಾರೆ. ಈ ಪಾತ್ರ ಸ್ನೇಹಗೆ ಸಕ್ಸಸ್‌ ತಂದು ಕೊಡುತ್ತಾ ಅಂತ ಕಾದು ನೋಡ್ಬೇಕು.

Shwetha M

Leave a Reply

Your email address will not be published. Required fields are marked *