ಲಕ್ಕುಂಡಿಯಲ್ಲಿ ತ್ರಿಮುಖ ನಾಗಶಿಲೆ ಸಿಕ್ಕ ಬೆನ್ನಲ್ಲೇ ನಿಜವಾದ ಹಾವು ಪ್ರತ್ಯೇಕ್ಷ!

ಗದಗ ಜಿಲ್ಲೆಯ ಐತಿಹಾಸಿಕ ಲಕ್ಕುಂಡಿಯಲ್ಲಿ ನಿಧಿ ದೊರೆತ ಬಳಿಕ ಪುರಾತತ್ವ ಇಲಾಖೆ ನಡೆಸುತ್ತಿರುವ ಉತ್ಖನನ ವೇಳೆ ಸಾಕಷ್ಟು ಅಚ್ಚರಿಗಳು ಎದುರಾಗುತ್ತಿವೆ. ಗುರುವಾರ ( ನಿನ್ನೆ) ಅತ್ಯಂತ ಅಪರೂಪದ ‘ತ್ರಿಮುಖ ನಾಗಶಿಲೆ’ ಹಾಗೂ ಕಲ್ಲಿನ ಮುಕುಟಮಣಿ ಪತ್ತೆಯಾಗಿದೆ. ಇದರ ಜೊತೆಗೆ, ಜೀವಂತ ಹಾವು ಕೂಡ ಕಂಡುಬಂದಿದ್ದು, ಉತ್ಖನನ ನಡೆಸುತ್ತಿರುವವರು ಆತಂಕಗೊಂಡಿದ್ದಾರೆ. ಉತ್ಖನನ ಆರಂಭವಾದ ಕೆಲವೇ ಸಮಯದಲ್ಲಿ ಗುಂಡಿಯೊಂದರಲ್ಲಿಅಡಕೆ ಆಕಾರದ ಕಲ್ಲಿನ ಮುಕುಟ ಮಣಿ ಪತ್ತೆಯಾಗಿದೆ. ಈ ಶಿಲೆಯ ಕೆಳಭಾಗದಲ್ಲಿ ರಂಧ್ರವಿರುವುದು ಕುತೂಹಲ ಪತ್ತೆಯಾಗಿದೆ. ಇದು ದೇವಾಲಯದ ಶಿಲ್ಪದ ಮೇಲ್ಭಾಗದ ಕಿರೀಟ ಅಥವಾ ಯಾವುದೋ ವಿಗ್ರಹದ ಅಲಂಕಾರಿಕ ವಸ್ತುವಾಗಿರಬಹುದು ಎಂದು ತಜ್ಞರು ಅಂದಾಜಿಸಿದ್ದಾರೆ.
ಇದನ್ನೂ ಓದಿ: ಶ್ರೀಮಂತರೇ ಈಕೆಯ ಟಾರ್ಗೆಟ್! – ದುಡ್ಡಿಗಾಗಿ ಪ್ರೀತಿ, ಮದುವೆ.. ಮೂವರು ಗಂಡಂದಿರಿಗೆ ಲಕ್ಷ ಲಕ್ಷ ಪಂಗನಾಮ!
ಹಾಗೇ ಮತ್ತೊಂದು ಗುಂಡಿಯಲ್ಲಿ ಕಪ್ಪು ಬಳಪದ ಕಲ್ಲಿನಲ್ಲಿ ಕೆತ್ತಲಾದ ಐತಿಹಾಸಿಕ ‘ತ್ರಿಮುಖ ನಾಗಶಿಲೆ’ ದೊರೆತಿದೆ. ಈ ಶೋಧನೆಯು ಜನಪದ ನಂಬಿಕೆಗಳಿಗೆ ಮರುಜೀವ ನೀಡಿದೆ. ಗ್ರಾಮೀಣ ಭಾಗದಲ್ಲಿ ತ್ರಿಮುಖ, ಪಂಚಮುಖ ಅಥವಾ ಸಪ್ತಮುಖ ನಾಗಶಿಲೆಗಳಿರುವ ಕಡೆ ನಿಧಿ ಇರುತ್ತದೆ ಎಂಬ ಬಲವಾದ ನಂಬಿಕೆಯಿದೆ. ನಿಧಿಯ ಕಾವಲುಗಾರನ ಸಂಕೇತವಾಗಿ ಇಂತಹ ಶಿಲೆಗಳನ್ನು ಸ್ಥಾಪಿಸಲಾಗುತ್ತಿತ್ತು ಎಂದು ಗ್ರಾಮೀಣ ಭಾಗದ ಜನ ಅಭಿಪ್ರಾಯಪಟ್ಟಿದ್ದಾರೆ. ನಿಧಿ ಶೋಧ ನಡೆಸುವ ವೇಳೆ ನಿಜವಾಗಿಯೂ ಒಂದು ಹಾವು ಕಾಣಿಸಿಕೊಂಡಿದ್ದು ಗ್ರಾಮಸ್ಥರಲ್ಲಿ ಇದೀಗ ಆತಂಕ ಮನೆ ಮಾಡಿದೆ. ನಿನ್ನೆ ಮೂರು ಹೆಡೆ ನಾಗಶಿಲೆ ಪತ್ತೆಯ ಬೆನ್ನಲ್ಲೇ, ಇಂದು ನಿಜವಾದ ಹಾವು ಪತ್ತೆಯಾಗಿದೆ. ನಿಜವಾದ ಹಾವು ಕಂಡ ಕೂಡಲೇ ಸ್ಥಳೀಯರಲ್ಲಿ ಭಯ ಹೆಚ್ಚಿದೆ.
ಲಕ್ಕುಂಡಿಯ ಉತ್ಖನನ ಕಾರ್ಯವು ಈಗ ಕೇವಲ ಸಂಶೋಧನೆಯಾಗಿ ಉಳಿಯದೆ ಪ್ರವಾಸಿ ತಾಣವಾಗಿಯೂ ಮಾರ್ಪಟ್ಟಿದೆ. ಈ ಸ್ಥಳಕ್ಕೆ ವಿದ್ಯಾರ್ಥಿಗಳು ಸ್ಥಳಕ್ಕೆ ಭೇಟಿ ನೀಡಿ ಉತ್ಖನನದ ನೈಜ ಪ್ರಾತ್ಯಕ್ಷಿಕೆ ಹಾಗೂ ಲಕ್ಕುಂಡಿಯ ಇತಿಹಾಸದ ಬಗ್ಗೆ ತಿಳಿದುಕೊಳ್ಳುತ್ತಿದ್ದಾರೆ.

ನೋಡಿರಿ

