ಮೊದಲ ಓವರ್ ನಂದೇ.. ಗಿಲ್‌ಗೆ ಕೊಹ್ಲಿ ಚಮಕ್‌ – ವೈಭವ್ ಕಂಡ್ರೆ ಪರಾಗ್‌ ಹೊಟ್ಟೆಯುರಿ..!

ಮೊದಲ ಓವರ್ ನಂದೇ.. ಗಿಲ್‌ಗೆ ಕೊಹ್ಲಿ ಚಮಕ್‌ – ವೈಭವ್ ಕಂಡ್ರೆ ಪರಾಗ್‌ ಹೊಟ್ಟೆಯುರಿ..!

ಐಪಿಎಲ್ ಟೂರ್ನಿ ಈಗ ರೋಚಕ ಘಟ್ಟ ತಲುಪಿದೆ. ಈ ಟೂರ್ನಿಯ ಅಂಗಳದಲ್ಲಿ ನಡೆಯುತ್ತಿರುವ ಕೆಲ ಸ್ವಾರಸ್ಯಕರ ಘಟನೆಗಳ ಸಂಕ್ಷಿಪ್ತ ಸುದ್ದಿ ಇಲ್ಲಿದೆ.

ಇದನ್ನೂ ಓದಿ:RCB & SRH 200+ ರನ್ಸ್ ಆರ್ಭಟ – ಹ್ಯಾಟ್ರಿಕ್ ಸೋಲಿಲ್ಲದೇ ನುಗ್ಗಿದವರೆಷ್ಟು?

ಈ ಐಪಿಎಲ್‌ನಲ್ಲಿ 15 ಪಂದ್ಯಗಳನ್ನಾಡಿರುವ ವಿರಾಟ್ ಕೊಹ್ಲಿ 600 ರನ್‌ ಗಳಿಸಿ ದಾಖಲೆ ಬರೆದಿದ್ದಾರೆ. ಇದು ಕೊಹ್ಲಿ ಅವರ 6ನೇ 600+ ರನ್ ಆಗಿದ್ದು, ಐಪಿಎಲ್ ಇತಿಹಾಸದಲ್ಲಿ ಈ ಸಾಧನೆ ಮಾಡಿದ ಮೊದಲ ಬ್ಯಾಟ್ಸ್‌ಮನ್ ಆಗಿದ್ದಾರೆ. ಸತತ ನಾಲ್ಕು ಆವೃತ್ತಿಗಳಲ್ಲಿ 600 ರನ್ ಗಳಿಸಿದ ಹೆಗ್ಗಳಿಕೆಗೂ ಅವರು ಪಾತ್ರರಾಗಿದ್ದಾರೆ.

ಗುಜರಾತ್ ಟೈಟಾನ್ಸ್ ಓಪನರ್ಸ್ ಬ್ಯಾಟರ್​ಗಳು ಕ್ರೀಸ್‌ಗೆ ಬಂದಾಗ ವಿರಾಟ್ ಕೊಹ್ಲಿ ಚಮಕ್ ನೀಡಿದ್ರು. ಇನ್ನೇನು ಮೊದಲ ಓವರ್ ಸ್ಟಾರ್ಟ್ ಆಗ್ಬೇಕು ಎಂಬ ಟೈಮ್‌ಲ್ಲಿ ಅಂಪೈರ್​ ಹತ್ರ ಬಂದ ಕೊಹ್ಲಿ ತಮ್ಮ ಕ್ಯಾಪ್ ನೀಡಿದ್ರು. ಮೊದಲ ಓವರ್​ ನಾನೇ ಎಸೆಯುತ್ತಿದ್ದೇನೆ ಎಂದು ಹೆಜ್ಜೆಗಳನ್ನು ಅಳೆಯುತ್ತಾ ಅಂದರೆ ರನ್-ಅಪ್ ಮಾರ್ಕಿಂಗ್ ಮಾಡಿದ್ರು. ಜಿಟಿ ಕ್ಯಾಪ್ಟನ್ ಗಿಲ್ ಶಾಕ್ ಆದ್ರೆ, ಕ್ರೀಡಾಂಗಣದಲ್ಲಿದ್ದ ಫ್ಯಾನ್ಸ್ ಮತ್ತು ಕಾಮೆಂಟೇಟರ್‌ಗಳಿಗೆ ಶಾಕ್. ಇದಾಗಿ ಕೆಲವೇ ಕ್ಷಣಗಳಲ್ಲಿ ಜೇಕಬ್ ಡಫಿಗೆ ಚೆಂಡನ್ನು ಹಸ್ತಾಂತರಿಸಿದ್ರು. ಇದೀಗ ವಿರಾಟ್ ಕೊಹ್ಲಿ ಈ ಕೀಟಲೆಯ ನೋಡಿ ಫ್ಯಾನ್ಸ್ ಖುಷಿಪಡ್ತಿದ್ದಾರೆ.

ಕ್ವಾಲಿಫೈಯರ್ ಮೊದಲ ಪಂದ್ಯದಲ್ಲಿ ಗೆದ್ದ ಆರ್‌ಸಿಬಿ ಟೀಮ್ ಮತ್ತೊಂದು ದಾಖಲೆ ಬರೆದಿದೆ. ಐಪಿಎಲ್ ಪ್ಲೇಆಫ್ ಇತಿಹಾಸದಲ್ಲಿ ಒಂದೇ ಪಂದ್ಯದಲ್ಲಿ ಆರ್‌ಸಿಬಿ ಅತಿ ಹೆಚ್ಚು ಬೌಂಡರಿ ಗಳಿಸಿದ ತಂಡವಾಯಿತು. ಈ ಪಂದ್ಯದಲ್ಲಿ ಆರ್‌ಸಿಬಿ ತಂಡದ ಬ್ಯಾಟರ್​​ಗಳು 38 ಬೌಂಡರಿಗಳನ್ನು ಬಾರಿಸಿದರು. ಇದಕ್ಕೂ ಮೊದಲು, ಐಪಿಎಲ್ 2012 ರ ಪ್ಲೇಆಫ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 33 ಬೌಂಡರಿಗಳನ್ನು ಬಾರಿಸಿದ್ದ ಸಿಎಸ್‌ಕೆ ಈ ದಾಖಲೆ ಹೊಂದಿತ್ತು. ಈಗ ಸಿಎಸ್​​ಕೆ ದಾಖಲೆಯನ್ನು ಆರ್‌ಸಿಬಿ ಮುರಿದಿದೆ.

ಜಿಟಿ ಆರಂಭಿಕ ಸಾಯಿ ಸುದರ್ಶನ್ ಐಪಿಎಲ್ ಇತಿಹಾಸದಲ್ಲೇ ದುರಾದೃಷ್ಟಕರ ರೀತಿಯಲ್ಲಿ ಔಟ್ ಆಗಿದ್ದಾರೆ. ಜಾಕೋಬ್ ಡಫಿ ಎಸೆದ ಇನ್ನಿಂಗ್ಸ್‌ನ ಮೂರನೇ ಎಸೆತದಲ್ಲಿ ಶಾಟ್ ಹೊಡೆಯಲು ಪ್ರಯತ್ನಿಸುವಾಗ ಸಾಯಿ ಸುದರ್ಶನ್ ನಿಯಂತ್ರಣ ಕಳೆದುಕೊಂಡರು. ಪರಿಣಾಮ ಅವರ ಬ್ಯಾಟ್ ವಿಕೆಟ್‌ಗಳಿಗೆ ತಗುಲಿತು. ಇದರಿಂದಾಗಿ ಸುದರ್ಶನ್ ಔಟ್ ಆಗಬೇಕಾಯ್ತು. ಐಪಿಎಲ್‌ ಇತಿಹಾಸದಲ್ಲಿ ಎರಡು ಬಾರಿ ಹಿಟ್ ವಿಕೆಟ್ ಆದ ದಾಖಲೆಯನ್ನು ಮಾಡಿದ ಏಕೈಕ ಆಟಗಾರನಾಗಿ ಸಾಯಿ ಸುದರ್ಶನ್ ವಿಚಿತ್ರ ದಾಖಲೆ ಬರೆದಿದ್ದಾರೆ.

ಜಿಟಿ ಬೌಲರ್ ರಬಾಡ ಐಪಿಎಲ್ ಇತಿಹಾಸದಲ್ಲಿ ಮೂರು ವಿಭಿನ್ನ ಋತುಗಳಲ್ಲಿ 25 ವಿಕೆಟ್‌ಗಳನ್ನು ಪಡೆದ ವಿಶ್ವದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಕಗಿಸೋ ರಬಾಡ, ಆರ್​ಸಿಬಿ ವಿರುದ್ಧದ ಕ್ವಾಲಿಫೈಯರ್ 1 ಪಂದ್ಯದಲ್ಲಿ ಈ ಮೈಲಿಗಲ್ಲು ತಲುಪಿದರು. ರಬಾಡಾ ತಮ್ಮ ಮೊದಲ ಓವರ್‌ನಲ್ಲಿ ವೆಂಕಟೇಶ್ ಅಯ್ಯರ್ ಅವರನ್ನು ಔಟ್ ಮಾಡುವ ಮೂಲಕ ಈ ದಾಖಲೆ ಬರೆದರು.

ಗುಜರಾತ್ ಟೈಟಾನ್ಸ್ ತಂಡದ ನಾಯಕ ಶುಭ್​ಮನ್ ಗಿಲ್ ಆರ್‌ಸಿಬಿ ವಿರುದ್ಧದ ಸೋಲಿಗೆ ಕಳಪೆ ಫೀಲ್ಡಿಂಗ್ ಪ್ರಮುಖ ಕಾರಣ ಎಂದಿದ್ದಾರೆ. ಈ ಪಂದ್ಯದಲ್ಲಿ 12 ಅಥವಾ 13ನೇ ಓವರ್​ವರೆಗೆ ನಾವು ಉತ್ತಮ ಹಿಡಿತ ಸಾಧಿಸಿದ್ದೆವು. ಆದರೆ ಆ ಬಳಿಕ ನಮ್ಮ ಕಳಪೆ ಫೀಲ್ಡಿಂಗ್​ಗೆ ಭಾರೀ ಬೆಲೆ ತೆರಬೇಕಾಯಿತು. ನಮ್ಮ ಫೀಲ್ಡಿಂಗ್​ ಅತ್ಯಂತ ಕಳಪೆ ಮಟ್ಟದಲ್ಲಿತ್ತು ಎಂಬುದನ್ನು ಒಪ್ಪಿಕೊಳ್ಳಲೇಬೇಕು. ಏಕೆಂದರೆ ಕೆಲ ಪ್ರಮುಖ ಕ್ಯಾಚ್​ಗಳನ್ನು ಕೈ ಬಿಟ್ಟೆವು. ಇದರ ಸಂಪೂರ್ಣ ಲಾಭ ಪಡೆದ ಆರ್​ಸಿಬಿ ಬ್ಯಾಟರ್​ಗಳು ಬೃಹತ್ ಮೊತ್ತ ಪೇರಿಸಿದ್ದಾರೆ. ಇದರಿಂದ ನಾವು ಸೋಲಬೇಕಾಯಿತು ಎಂದು ಗಿಲ್ ಹೇಳಿದ್ದಾರೆ.

ಎಸ್‌ಆರ್‌ಹೆಚ್ ಮತ್ತು ಆರ್‌ಆರ್ ನಡುವಿನ ರೋಚಕ ಪಂದ್ಯಕ್ಕೆ ಕೌಂಟ್‌ಡೌನ್ ಶುರುವಾಗಿದೆ. ಕ್ವಾಲಿಫೈಯರ್ ಎರಡನೇ ಪಂದ್ಯದಲ್ಲಿ ಈ ಎರಡು ತಂಡಗಳು ಕಾದಾಟ ನಡೆಸಲಿವೆ. ನ್ಯೂ ಚಂಡೀಗಢದ ಮಹಾರಾಜ ಯಾದವೀಂದ್ರ ಸಿಂಗ್ ಕ್ರೀಡಾಂಗಣದಲ್ಲಿ ಎಲಿಮಿನೇಟರ್ ಪಂದ್ಯ ನಡೆಯಲಿದೆ. ಉಭಯ ತಂಡಗಳಿಗೂ ಇದು ಡು ಆರ್ ಡೈ ಮ್ಯಾಚ್. ಈ ಪಂದ್ಯದಲ್ಲಿ ಗೆದ್ದ ತಂಡ ಕ್ವಾಲಿಫೈಯರ್-2ರಲ್ಲಿ ಗುಜರಾತ್ ಟೈಟನ್ಸ್‌ನೊಂದಿಗೆ ಆಡಲಿದೆ. ಸೋತ ತಂಡ ಹೊರಬೀಳಲಿದೆ.

ಮುಂದಿನ ಋತುವಿನಲ್ಲಿ ಮುಂಬೈ ಇಂಡಿಯನ್ಸ್ ಸೂರ್ಯಕುಮಾರ್ ಯಾದವ್ ಅವರನ್ನು ರಿಲೀಸ್ ಮಾಡಲಿದೆ ಎಂದು ಹೇಳಲಾಗ್ತಿದೆ. ಇದರ ಬೆನ್ನಲ್ಲೇ ಸೂರ್ಯಕುಮಾರ್ ಯಾದವ್ ಅವರ ಪೋಸ್ಟ್ ಇನ್ನಷ್ಟು ಚರ್ಚೆನ್ನು ಹುಟ್ಟುಹಾಕಿದೆ. ಸ್ನೇಹಿತರೇ, ನಾನು ಈಗ ದೊಡ್ಡದನ್ನು ಮಾಡಲಿದ್ದೇನೆ. ಜೀವನದಲ್ಲಿ ಹೊಸ ಅಧ್ಯಾಯವನ್ನು ವಿಭಿನ್ನ ವೇಗದಲ್ಲಿ ಪ್ರಾರಂಭಿಸುತ್ತಿದ್ದೇನೆ. #T60 ಲೈಫ್,’ ಎಂದು ಸೂರ್ಯ ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ಮೂಲಕ ಸೂರ್ಯ ಏನು ಹೇಳಲು ಹೊರಟಿದ್ದಾರೆ ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ.

ಪಂಜಾಬ್ ಕಿಂಗ್ಸ್ ಕ್ಯಾಪ್ಟನ್ ಆಗಿ, ಆಟಗಾರನಾಗಿ ಶ್ರೇಯಸ್ ಅಯ್ಯರ್ ಸಕ್ಸಸ್ ಕಂಡಿದ್ದಾರೆ. ಆದ್ರೂ ಕೂಡಾ ಅಯ್ಯರ್ ಮಾಡಿರುವ ಟ್ವೀಟ್ ಕುತೂಹಲ ಕೆರಳಸಿದೆ. ಇದನ್ನು ನೋಡಿದ ಫ್ಯಾನ್ಸ್ ಶ್ರೇಯಸ್ ಪಂಜಾಬ್‌ಗೆ ವಿದಾಯಾ ಹೇಳ್ತಾರಾ ಅನ್ನೋ ಗೊಂದಲದಲ್ಲಿದ್ದಾರೆ. ಪ್ರತಿ ರನ್… ಪ್ರತಿ ಕ್ಷಣ… ಪ್ರತಿ ಯುದ್ಧ… ಈ ಅಧ್ಯಾಯವು ಕೃತಜ್ಞತೆಯಿಂದ ಕೊನೆಗೊಳ್ಳುತ್ತದೆ. ಮುಂದಿನ ಅಧ್ಯಾಯವು ಹಸಿವು ಮತ್ತು ದೃಢನಿಶ್ಚಯದಿಂದ ಪ್ರಾರಂಭವಾಗುತ್ತದೆ. ಅಧ್ಯಾಯ ಮುಗಿದಿದೆ ಎಂದು ಶ್ರೇಯಸ್ ಅಯ್ಯರ್ ಟ್ವೀಟ್ ಮಾಡಿದ್ದಾರೆ.

 

ಆರ್‌ ಆರ್ ಕ್ಯಾಪ್ಟನ್ ರಿಯನ್ ಪರಾಗ್ ಮತ್ತು ಬಾಸ್ ಬೇಬಿ ವೈಭವ್ ಸೂರ್ಯವಂಶಿ ನಡುವೆ ಕೋಲ್ಡ್ ವಾರ್ ನಡೀತಿದೆಯಾ?, ಯಾಕೆಂದ್ರೆ ಯಂಗ್​ ಸ್ಟಾರ್​​ ಜೊತೆ ಪರಾಗ್ ಫೋಟೋ ತೆಗೆಸಿಕೊಳ್ಳಲು ನಿರಾಕರಿಸಿದ್ದಾರೆ. ಈ ವಿಡಿಯೋ ನೋಡಿದವರು ನಾಯಕ ರಿಯಾನ್ ಪರಾಗ್ ಮತ್ತು ವೈಭವ್ ಸೂರ್ಯವಂಶಿ ನಡುವೆ ಎಲ್ಲವೂ ಸರಿಯಿಲ್ಲ ಎಂದು ಹೇಳುತ್ತಿದ್ದಾರೆ. ಮುಂಬೈ ವಿಮಾನ ನಿಲ್ದಾಣದಲ್ಲಿ ಆಟಗಾರರ ಚಿತ್ರಗಳನ್ನು ತೆಗೆದುಕೊಳ್ಳಲು ಮಾಧ್ಯಮ ಪ್ರತಿನಿಧಿಗಳು ಮತ್ತು ಛಾಯಾಗ್ರಾಹಕರು ಧಾವಿಸಿದರು. ಈ ಸಂದರ್ಭದಲ್ಲಿ, ಛಾಯಾಗ್ರಾಹಕರೊಬ್ಬರು ನಾಯಕ ಪರಾಗ್ ಅವರನ್ನು ಸೂರ್ಯವಂಶಿ ಜೊತೆ ಫೋಟೋಗೆ ನಿಲ್ಲುವಂತೆ ಕೇಳಿಕೊಂಡರು. ಇದನ್ನು ಪರಾಗ್ ನಿರಾಕರಿಸಿ ಮುಂದೆ ನಡೆದರು.

 

Sulekha

Leave a Reply

Your email address will not be published. Required fields are marked *