ಮಾದಪ್ಪನ ಬೆಟ್ಟಕ್ಕೆ ಪಾದಯಾತ್ರೆ ನಿಷೇಧ – ಭಕ್ತರೇ ಗಮನಿಸಿ.. ವರ್ಷವಿಡೀ ಪಾದಯಾತ್ರೆ ಮಾಡುವಂತಿಲ್ಲ..!

ಮಾದಪ್ಪನ ಬೆಟ್ಟಕ್ಕೆ ಪಾದಯಾತ್ರೆ ನಿಷೇಧ – ಭಕ್ತರೇ ಗಮನಿಸಿ.. ವರ್ಷವಿಡೀ ಪಾದಯಾತ್ರೆ ಮಾಡುವಂತಿಲ್ಲ..!

ಮಲೆ ಮಹದೇಶ್ವರನ ಬೆಟ್ಟಕ್ಕೆ ಪಾದಯಾತ್ರೆಯಲ್ಲಿ ಹೋಗುವ ಭಕ್ತರೇ ಈ ಸುದ್ದಿ ಗಮನಿಸಲೇಬೇಕು. ಇನ್ಮುಂದೆ ಮಾದಪ್ಪನ ಬೆಟ್ಟಕ್ಕೆ ವರ್ಷವಿಡಿ ಪಾದಯಾತ್ರೆ ನಿಷೇಧ ಹೇರಲಾಗಿದೆ.

ಇದನ್ನೂ ಓದಿ:ಬಾಲಕನ ಚಿರತೆ ಕೊಂದ ಪ್ರಕರಣಕ್ಕೆ ಎಚ್ಚೆತ್ತ ಅರಣ್ಯಇಲಾಖೆ – ನಾಗಮಲೆ ಕ್ಷೇತ್ರದ ಭಕ್ತರಿಗೆ ಹೊಸ ರೂಲ್ಸ್

ಮಹದೇಶ್ವರ ಬೆಟ್ಟದಲ್ಲಿ ಚಿರತೆ ದಾಳಿಗೆ ಬಾಲಕ ಸಾವು ಪ್ರಕರಣದಿಂದಾಗಿ ಅರಣ್ಯ ಇಲಾಖೆ ಮಹತ್ವದ ನಿರ್ಧಾರ ಕೈಗೊಂಡಿದೆ. ಇನ್ಮುಂದೆ ಮಾದಪ್ಪನ ಬೆಟ್ಟಕ್ಕೆ ವರ್ಷವಿಡೀ ಪಾದಯಾತ್ರೆ ನಿಷೇಧ ಹೇರಲಾಗಿದೆ. ಮಹದೇಶ್ವರ ಬೆಟ್ಟಕ್ಕೆ ಯುಗಾದಿ ಮತ್ತು ಶಿವರಾತ್ರಿ ವೇಳೆ ಮಾತ್ರ ಪಾದಯಾತ್ರೆಗೆ ಅವಕಾಶ ನೀಡಲಾಗುವುದು ಎಂದು ಅರಣ್ಯ ಇಲಾಖೆ ಸಚಿವ ಈಶ್ವರ್​ ಖಂಡ್ರೆ ಆದೇಶ ಹೊರಡಿಸಿದ್ದಾರೆ. ಮಹದೇಶ್ವರ ಬೆಟ್ಟದಲ್ಲಿ ಚಿರತೆ ದಾಳಿಗೆ ಬಾಲಕ ಬಲಿಯಾದ ಪ್ರಕರಣದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಸಚಿವ ಈಶ್ವರ್​ ಖಂಡ್ರೆ ಅವರು ಹಿರಿಯ ಅಧಿಕಾರಿಗಳು ಹಾಗೂ ಚಾಮರಾಜನಗರ ಅರಣ್ಯಾಧಿಕಾರಿಗಳೊಂದಿಗೆ ಸಭೆ ನಡೆಸಿದರು. ಈ ಸಭೆಯಲ್ಲಿ ಚರ್ಚೆ ನಡೆಸಿದ ಸಚಿವ ಈಶ್ವರ್​ ಖಂಡ್ರೆ, ಭಕ್ತರಲ್ಲಿ ವನ್ಯಮೃಗಗಳ ಅಪಾಯದ ಬಗ್ಗೆ ಜಾಗೃತಿ ಮೂಡಿಸಬೇಕು, ಬೆಟ್ಟಕ್ಕೆ ಬಸ್ ಮೂಲಕವೇ ತೆರಳುವಂತೆ ಸೂಚನಾಫಲಕ ಅಳವಡಿಸಬೇಕು. ಬೆಟ್ಟದಿಂದ ನಾಗಮಲೆಗೆ 14 ಕಿ.ಮೀ ಬದಲು ಕೇವಲ 3 ಕಿ.ಮೀ ಪಾದಯಾತ್ರೆಗೆ ಅವಕಾಶ ನೀಡಿ, ವಾಕಿಟಾಕಿ ಮತ್ತು ಅಗತ್ಯ ಸುರಕ್ಷತಾ ಸಲಕರಣಗಳೊಂದಿಗೆ ಭದ್ರತಾ ಸಿಬ್ಬಂದಿಯಿಂದ  ಪಾದಯಾತ್ರಿಗಳಿಗೆ ರಕ್ಷಣೆ ಒದಗಿಸಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. 3 ಕಿ.ಮೀ ಮಾತ್ರ ಪಾದಯಾತ್ರೆಗೆ ಅವಕಾಶ ನೀಡಿ ಟಿಕೆಟ್ ಕೌಂಟರ್ ಬಳಿಯಿಂದ ನಾಗಮಲೆಗೆ ಜೀಪ್‌ನಲ್ಲಿ ತೆರಳಬೇಕು, ಉಳಿದ 3 ಕಿ.ಮೀ ಮಾತ್ರ ಪಾದಯಾತ್ರೆಗೆ ಅವಕಾಶ ನೀಡಿ ಎಂದು ಸಭೆಯಲ್ಲಿ ಭಾಗಿಯಾಗಿದ್ದ ಅಧಿಕಾರಿಗಳಿಗೆ ಅರಣ್ಯ ಇಲಾಖೆ ಸಚಿವ ಈಶ್ವರ್​ ಖಂಡ್ರೆ ಸೂಚಿಸಿದ್ದಾರೆ.

Sulekha

Leave a Reply

Your email address will not be published. Required fields are marked *