ಭುವಿ ಆಯ್ಕೆ ಸೀಕ್ರೆಟ್ ಬಯಲು ವೈಭವ್‌ಗೆ ಭಯ ಬಿದ್ದ ಕಿವೀಸ್
ಗ್ಲೆನ್ ಫಿಲಿಪ್ಸ್ ಮೇಲೆ RCB ಕಣ್ಣು!

ಭುವಿ ಆಯ್ಕೆ ಸೀಕ್ರೆಟ್ ಬಯಲು ವೈಭವ್‌ಗೆ  ಭಯ ಬಿದ್ದ ಕಿವೀಸ್ಗ್ಲೆನ್ ಫಿಲಿಪ್ಸ್ ಮೇಲೆ RCB ಕಣ್ಣು!

ಭಾರತ ಮಹಿಳಾ ತಂಡ ಜಿಂಬಾಬ್ವೆ ವಿರುದ್ಧದ ಟಿ20 ಸರಣಿಯನ್ನು 3- 0 ಅಂತರದಿಂದ ಗೆದ್ದುಕೊಂಡಿದೆ. ಮೂರನೇ ಪಂದ್ಯದಲ್ಲಿ ಮಾಜಿ ನಾಯಕಿ ಹರ್ಮನ್‌ಪ್ರೀತ್ ಕೌರ್ ಕೇವಲ 41 ಎಸೆತಗಳಲ್ಲಿ 91 ರನ್ ಸಿಡಿಸಿ ಮಿಂಚಿದರು. ಅವರ ಸ್ಫೋಟಕ ಬ್ಯಾಟಿಂಗ್ ಭಾರತಕ್ಕೆ 92 ರನ್‌ಗಳ ಭರ್ಜರಿ ಜಯ ತಂದುಕೊಟ್ಟಿತು. ಈ ಪ್ರದರ್ಶನದ ಮೂಲಕ ಹರ್ಮನ್‌ಪ್ರೀತ್ ತಮ್ಮ ಅನುಭವ ಮತ್ತು ಸಾಮರ್ಥ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.

 ಭುವನೇಶ್ವರ್ ಕುಮಾರ್‌ರನ್ನ ಮತ್ತೆ ತಂಡಕ್ಕೆ ಆಯ್ಕೆ ಮಾಡಲು ಪ್ರಮುಖ ಕಾರಣ ಏನೆಂಬುದನ್ನು ಭಾರತದ ಟಿ20 ನಾಯಕ ಶ್ರೇಯಸ್ ಅಯ್ಯರ್ ಅಧಿಕೃತವಾಗಿ ಬಹಿರಂಗಪಡಿಸಿದ್ದಾರೆ. ತಂಡದ ಬೌಲಿಂಗ್ ವಿಭಾಗದಲ್ಲಿ ಅನುಭವದ ಕೊರತೆ ಎದ್ದು ಕಾಣುತ್ತಿದ್ದರಿಂದ ಭುವನೇಶ್ವರ್ ಕುಮಾರ್ ಅವರನ್ನು ಮರಳಿ ತಂಡಕ್ಕೆ ಕರೆಯಿಸಿಕೊಳ್ಳಲಾಯಿತು ಎಂದು ಸ್ಪಷ್ಟಪಡಿಸಿದ್ದಾರೆ.

 ನ್ಯೂಝಿಲೆಂಡ್ ಪ್ರವಾಸದ ಭಾರತ ತಂಡದಿಂದ ಕೈಬಿಟ್ಟ ಬೆನ್ನಲ್ಲೇ ತೀವ್ರ ಚರ್ಚೆಗೆ ಒಳಗಾಗಿದ್ದ ವೇಗದ ಬೌಲರ್ ಮೊಹಮ್ಮದ್ ಶಮಿ, ತಮ್ಮ ನಿವೃತ್ತಿಯ ವದಂತಿಗಳಿಗೆ ಪೂರ್ಣವಿರಾಮ ಇಟ್ಟಿದ್ದಾರೆ.  ನಾನು ಇಂದಿಗೂ ನನ್ನ ಫಾರ್ಮ್‌ನ ತುತ್ತತುದಿಯಲ್ಲೇ ಇದ್ದೇನೆ. ಸುಳ್ಳು ಹೇಳುವ ಅಗತ್ಯವಿಲ್ಲ, ನಾನು ಹೇಗಿದ್ದೇನೋ ಹಾಗೇ ಅತ್ಯುತ್ತಮ ಲಯದಲ್ಲೇ ಇದ್ದೇನೆ ಎಂದು ವಿಶ್ವಾಸದಿಂದ  ಹೇಳಿದ್ದಾರೆ.  ಹಾಗೇ ನ್ಯೂಜಿಲೆಂಡ್ ಪ್ರವಾಸದ ತಂಡದಲ್ಲಿ ಸ್ಥಾನ ಸಿಗದಿದ್ದಕ್ಕೆ ನಿರಾಸೆ ವ್ಯಕ್ತಪಡಿಸಿದ್ದಾರೆ.
ಕಿವೀಸ್ ನಾಯಕ ಮಿಚೆಲ್ ಸ್ಯಾಂಟ್ನರ್,  ವೈಭವ್ ಸೂರ್ಯವಂಶಿ ಅವರ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ವೈಭವ್ ಎಷ್ಟು ಅಪಾಯಕಾರಿ ಮತ್ತು ಪ್ರತಿಭಾವಂತ ಆಟಗಾರ ಎಂಬುದು ನಮಗೆ ಚೆನ್ನಾಗಿ ತಿಳಿದಿದೆ. ಒಂದು ವೇಳೆ ವೈಭವ್ ಸೂರ್ಯವಂಶಿ ಈ ಸರಣಿಯಲ್ಲಿ ಆಡುವ ಹನ್ನೊಂದರ ಬಳಗಕ್ಕೆ ಆಯ್ಕೆಯಾದರೆ, ಅವರನ್ನು ಕಟ್ಟಿಹಾಕಲು ನಮ್ಮ ತಂಡ ಈಗಾಗಲೇ ವಿಶೇಷ ರಣತಂತ್ರ ಹಾಗೂ ಯೋಜನೆಗಳನ್ನು ಸಿದ್ಧಪಡಿಸಿಕೊಂಡಿದೆ” ಎಂದು ಸ್ಯಾಂಟ್ನರ್ ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ಸಂಜು -ಅಭಿಷೇಕ್ ಓಪನರ್ಸ್- ವೈಭವ್ OUT, ಭುವಿಗೆ BIG ಚಾನ್ಸ್

ತಮಿಳುನಾಡಿನ ಸ್ಪಿನ್ನರ್ ಸಾಯಿ ಕಿಶೋರ್ ರಣಜಿ ಟ್ರೋಫಿಯಲ್ಲಿ ಅಮೋಘ ಬೌಲಿಂಗ್ ಪ್ರದರ್ಶನ ನೀಡಿದ್ದಾರೆ. ಉತ್ತರಾಖಂಡ ವಿರುದ್ಧದ ಪಂದ್ಯದಲ್ಲಿ ಎರಡನೇ ಇನ್ನಿಂಗ್ಸ್‌ನಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದು ಎದುರಾಳಿ ತಂಡವನ್ನು ಸಂಕಷ್ಟಕ್ಕೆ ಸಿಲುಕಿಸಿದರು. ಅಂತಿಮವಾಗಿ ಉತ್ತರಾಖಂಡ 113 ರನ್‌ಗಳಿಗೆ ಆಲೌಟ್ ಆಯಿತು. ತಮಿಳುನಾಡು ಇನ್ನಿಂಗ್ಸ್ ಜಯ ದಾಖಲಿಸಿತು. ಸಾಯಿ ಕಿಶೋರ್ ಅವರ ಈ ಪ್ರದರ್ಶನ ದೇಶೀಯ ಕ್ರಿಕೆಟ್‌ನಲ್ಲಿ ಸ್ಪಿನ್ನರ್‌ಗಳ ಪ್ರಭಾವವನ್ನು ಮತ್ತೊಮ್ಮೆ ತೋರಿಸಿದೆ.

ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ವಿನೂತನ ಹಾಗೂ ಐತಿಹಾಸಿಕ ಹೆಜ್ಜೆಯೊಂದನ್ನು ಬಿಸಿಸಿಐ ಮತ್ತು ಕ್ರಿಕೆಟ್ ಆಸ್ಟ್ರೇಲಿಯಾ ಇಟ್ಟಿವೆ.  ಉಭಯ ದೇಶಗಳ ನಡುವೆ ಅಂಪೈರ್‌ಗಳ ವಿನಿಮಯ ಕಾರ್ಯಕ್ರಮಕ್ಕೆ ಅಧಿಕೃತ ಚಾಲನೆ ನೀಡಿವೆ. ಈ ಐತಿಹಾಸಿಕ ನಿರ್ಧಾರದಿಂದಾಗಿ ಇನ್ನು ಮುಂದೆ ದೇಶೀಯ ಕ್ರಿಕೆಟ್‌ನ ಗುಣಮಟ್ಟ ಹಾಗೂ ತೀರ್ಪುಗಾರರ ಕೌಶಲ ಮತ್ತಷ್ಟು ಉನ್ನತ ಮಟ್ಟಕ್ಕೇರಲಿದ್ದು, ವಿಶ್ವ ಕ್ರಿಕೆಟ್ ವಲಯದಲ್ಲಿ ಈ ಮಹತ್ವದ ಬೆಳವಣಿಗೆ ಭಾರೀ ಸಂಚಲನ ಸೃಷ್ಟಿಸಿದೆ.

2027ರ ಐಪಿಎಲ್ ಮಿನಿ ಹರಾಜಿಗೂ ಮುನ್ನ ಗುಜರಾತ್ ಟೈಟಾನ್ಸ್ ತಂಡವು ಶಾರುಕ್ ಖಾನ್ ಮತ್ತು ಗ್ಲೆನ್ ಫಿಲಿಫ್ಸ್ ಅವರನ್ನು ಕೈಬಿಡಲು ಸಿದ್ಧತೆ ನಡೆಸಿದೆ. ಕಳಪೆ ಪ್ರದರ್ಶನದಿಂದಾಗಿ ಈ ಇಬ್ಬರು ಆಟಗಾರರನ್ನು ರಿಲೀಸ್ ಮಾಡಿ 6 ಕೋಟಿ ರೂ. ಉಳಿಸಿಕೊಳ್ಳಲು ಫ್ರಾಂಚೈಸಿ ಮುಂದಾಗಿದೆ. ಮುಂಬರುವ ಹರಾಜಿನಲ್ಲಿ ಗ್ಲೆನ್ ಫಿಲಿಫ್ಸ್ ಅವರನ್ನು ಆರ್‌ಸಿಬಿ ಖರೀದಿಸುವ ಸಾಧ್ಯತೆಯಿದೆ.

ರಣಜಿಯಲ್ಲಿ ಮಹಾರಾಷ್ಟ್ರ ತಂಡ ಜಾರ್ಖಂಡ್ ವಿರುದ್ಧ ಭರ್ಜರಿ ಪ್ರದರ್ಶನ ನೀಡಿದೆ. ಋತುರಾಜ್ ಗಾಯಕ್ವಾಡ್ ಅಜೇಯ 101 ರನ್ ಗಳಿಸಿದರೆ, ಅಂಕಿತ್ ಬಾವ್ನೆ 169 ಮತ್ತು ದಿಗ್ವಿಜಯ್ ಪಾಟೀಲ್ 148 ರನ್ ಸಿಡಿಸಿದ್ದಾರೆ. ಮಹಾರಾಷ್ಟ್ರ 527/5ಕ್ಕೆ ಡಿಕ್ಲೇರ್ ಮಾಡಿಕೊಂಡಿದೆ . ಜಾರ್ಖಂಡ್ ಎರಡನೇ ಇನ್ನಿಂಗ್ಸ್‌ನಲ್ಲಿ 200 ರನ್‌ಗಳ ಹಿನ್ನಡೆಯಲ್ಲಿದೆ. ಮಹಾರಾಷ್ಟ್ರ ಗೆಲುವಿನ ನಿರೀಕ್ಷೆಯಲ್ಲಿದೆ.

ರಣಜಿ ಟ್ರೋಫಿಯಲ್ಲಿ ಕರ್ನಾಟಕ ಮತ್ತು ಸೌರಾಷ್ಟ್ರ ನಡುವಿನ ಪಂದ್ಯ ರೋಚಕ ಘಟ್ಟ ತಲುಪಿದೆ. ಕರ್ನಾಟಕದ ಮನ್ವಂತ್ ಕುಮಾರ್ 135 ರನ್‌ಗಳ ಶತಕ ಸಿಡಿಸಿ ತಂಡಕ್ಕೆ ನೆರವಾಗಿದ್ದಾರೆ. ಆದರೆ ಸೌರಾಷ್ಟ್ರದ ಚೇತನ್ ಸಕಾರಿಯಾ ಕರಣ್ ನಾಯರ್ ಅವರನ್ನು ಔಟ್ ಮಾಡುವ ಮೂಲಕ ಕರ್ನಾಟಕಕ್ಕೆ ಆಘಾತ ನೀಡಿದ್ದಾರೆ. ಕರ್ನಾಟಕ 117 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡಿದ್ದು, ಮೊದಲ ಇನ್ನಿಂಗ್ಸ್ ಮುನ್ನಡೆ ಪಡೆಯಲು ಹೋರಾಡುತ್ತಿದೆ.

21 ವರ್ಷದ ಬಳಿಕ ಇಂಗ್ಲೆಂಡ್ ವಿರುದ್ಧದ ಏಕದಿನ ಪಂದ್ಯದಲ್ಲಿ ಪಾಕಿಸ್ತಾನ್ ತಂಡ ಪ್ರಚಂಡ ಜಯ ಸಾಧಿಸಿದೆ. ರಾವಲ್ಪಿಂಡಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಏಕದಿನ ತ್ರಿಕೋನ ಸರಣಿಯ ಈ ಪಂದ್ಯದಲ್ಲಿ  ಪಾಕಿಸ್ತಾನ್ ತಂಡ 50 ಓವರ್​​ಗಳಲ್ಲಿ 9 ವಿಕೆಟ್ ಕಳೆದುಕೊಂಡು 302 ರನ್ ಕಲೆಹಾಕಿತು. 303 ರನ್‌ಗಳ ಕಠಿಣ ಗುರಿ ಬೆನ್ನಟ್ಟಿದ ಇಂಗ್ಲೆಂಡ್‌ 38.4 ಓವರ್‌ಗಳಲ್ಲಿ 215 ರನ್‌ಗಳಿಗೆ ಆಲೌಟ್ ಆಯಿತು. ಈ ಮೂಲಕ ಶ್ರೀಲಂಕಾ, ಇಂಗ್ಲೆಂಡ್ ವಿರುದ್ಧದ ತ್ರಿಕೋನ ಸರಣಿಯ ಮೊದಲೆರಡು ಪಂದ್ಯಗಳಲ್ಲೂ ಪಾಕಿಸ್ತಾನ್ ತಂಡ ಭರ್ಜರಿ ಜಯ ಸಾಧಿಸಿದೆ

Kishor KV

Leave a Reply

Your email address will not be published. Required fields are marked *