ಬಿಗ್‌ಬಾಸ್‌ ಸ್ಪರ್ಧಿ ನಟಿ ತನಿಷಾ ಕುಪ್ಪಂಡ ವಿರುದ್ಧ ಅವಹೇಳನಕಾರಿ ಪದ ಬಳಕೆ ಆರೋಪ – ಒರಿಜಿನಲ್ ವಿಡಿಯೋ ಕೇಳಿದ ಪೊಲೀಸರು

ಬಿಗ್‌ಬಾಸ್‌ ಸ್ಪರ್ಧಿ ನಟಿ ತನಿಷಾ ಕುಪ್ಪಂಡ ವಿರುದ್ಧ ಅವಹೇಳನಕಾರಿ ಪದ ಬಳಕೆ ಆರೋಪ – ಒರಿಜಿನಲ್ ವಿಡಿಯೋ ಕೇಳಿದ ಪೊಲೀಸರು

ಬಿಗ್ ಬಾಸ್ ಮನಯಲ್ಲಿ ನಟಿ ತನಿಷಾ ಕುಪ್ಪಂಡ ಅವಹೇಳನಕಾರಿ ಪದ ಬಳಕೆ ಆರೋಪಕ್ಕೆ ಸಂಬಂಧಿಸಿದ್ದಂತೆ ಈಗಾಗಲೇ ವಿಚಾರಣೆ ನಡೆದಿದೆ. ಮಂಗಳವಾರ ಕುಂಬಳಗೋಡು ಪೊಲೀಸರು ಬಿಗ್ ಬಾಸ್ ಮನೆಗೆ ತೆರಳಿ, ನಟಿಯ ವಿಚಾರಣೆ ನಡೆಸಿದ್ದಾರೆ. ಜೊತೆಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಯನ್ನು ಪೊಲೀಸರು ಮುಂದುವರೆಸಿದ್ದಾರೆ. ಬಿಗ್ ಬಾಸ್ ಆಡಳಿತ ಮಂಡಳಿಗೂ ಪೊಲೀಸರು ನೋಟಿಸ್ ನೀಡಿದ್ದು, ಪ್ರೊಮೋದ ಓರಿಜನಲ್ ಫುಟೇಜ್ ಕೊಡಲು ಸೂಚಿಸಿದ್ದಾರೆ.

ಇದನ್ನೂ ಓದಿ: ಬಿಗ್‌ಬಾಸ್ ಮನೆಯಲ್ಲಿ ಡ್ರೋನ್ ಪ್ರತಾಪ್ ಆಟ ಶುರು – ಬುದ್ಧಿವಂತನ ಮೇಲೆ ವಿನಯ್ ಟೀಮ್ ಕಣ್ಣು

ಬಿಗ್ ಬಾಸ್ ಮನೆಯಲ್ಲಿರುವ ನಟಿ ತನಿಷಾ ಕುಪ್ಪಂಡ ಅವರ ಮೇಲೆ ಜಾತಿ ನಿಂದನೆ ವಿಚಾರವಾಗಿ ಎಸ್ಸಿಎಸ್ಟಿ ಕಾಯ್ದೆಯಡಿ ಅಟ್ರಾಸಿಟಿ ಕೇಸ್ ದಾಖಲಾಗಿದೆ. ಕುಂಬಳಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಟಿ ತನಿಷಾ ಕುಪ್ಪಂಡ ವಿರುದ್ಧ ಅಖಿಲ ಕರ್ನಾಟಕ ಬೋವಿ ಸಮಾಜದ ರಾಜ್ಯಾಧ್ಯಕ್ಷೆ ಪಿ ಪದ್ಮಾ ಎಂಬುವರಿಂದ ನವೆಂಬರ್ 11ರಂದು ದೂರು ದಾಖಲಾಗಿದ್ದು, ನವೆಂಬರ್ 12ರಂದು ದೂರಿನ ಆಧಾರದ ಮೇಲೆ ಕುಂಬಳಗೂಡು ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಡ್ರೋನ್ ಪ್ರತಾಪ್ ಜೊತೆ ಮಾತನಾಡುವ ಭರದಲ್ಲಿ ಪದ ಬಳಕೆ ಮಾಡಿ ಬೋವಿ ಜನಾಂಗಕ್ಕೆ ಅವಮಾನ ಮಾಡಿದ್ದಾರೆಂದು ದೂರು ದಾಖಲಾಗಿದೆ.

ಟಾಸ್ಕ್ ವಿಚಾರಕ್ಕೆ ಒಮ್ಮೆ ಪ್ರತಾಪ್ ಅವರಿಗೆ ತನಿಷಾ ಅವರು ಮಾತಿನ ಮಧ್ಯೆ ವಡ್ಡನ ತರ ಆಡಬೇಡ ಎಂದು ಹೇಳಿದ್ದಾರೆ. ಇದು ಕೆಲವರಿಗೆ ಬೇಸರ ತಂದಿದೆ. ವಡ್ಡ ಎನ್ನುವುದು ಒಂದು ಜಾತಿಯನ್ನು ಪ್ರತಿನಿಧಿಸುವ ಪದ. ಇದನ್ನು ಅವಹೇಳನಕಾರಿಯಾಗಿ ಬಳಸಲಾಗಿದೆ ಎಂದು ಆರೋಪಿಸಲಾಗಿದೆ. ಇದು ಗೊಂಬೆ ಆಟವಯ್ಯ ಎಂಬ ಟಾಸ್ಕ್‌ನಲ್ಲಿ ಸ್ಪರ್ಧಿಗಳು ತಮ್ಮ ಎದುರಾಳಿ ಸ್ಪರ್ಧಿಗಳ ಭಾವನೆಗಳನ್ನು ವ್ಯಕ್ತಪಡಿಸುವ ಹಾಗೆ ಮಾಡಬೇಕಿತ್ತು ಎಂದು ಹೇಳಲಾಗಿತ್ತು. ಆಗ ಪ್ರತಾಪ್ ಅವರು ಉಸ್ತುವಾರಿಯಾಗಿದ್ದರು. ಪ್ರತಾಪ್ ಅವರು ಎದುರಾಳಿ ತಂಡದ ತಪ್ಪುಗಳನ್ನು ಸರಿಯಾಗಿ ಮೆನ್ಶನ್ ಮಾಡಿಲ್ಲ ಅಂತ ವರ್ತೂರು ಸಂತೋಷ್, ತನಿಷಾ, ಮೈಕಲ್ ಅವರು ಆರೋಪ ಮಾಡಿದ್ದರು. ಈ ವಿಚಾರವಾಗಿ ಒಂದಷ್ಟು ಜಗಳ ನಡೆದಿದೆ. ಇನ್ನು ಪ್ರತಾಪ್ ಅವರು ನಾಮಿನೇಶನ್ ಟಾಸ್ಕ್ ವಿಚಾರದಲ್ಲಿ ತನಿಷಾ ಅವರನ್ನು ನಾಮಿನೇಟ್ ಮಾಡಿದ್ದರು, ಒಳಗೊಂದು ಹೊರಗೊಂದು ಎನ್ನುವ ರೀತಿ ಆಟ ಆಡ್ತಿದ್ದಾರೆ ಎಂದು ಕಾರಣ ನೀಡಿದ್ದರು. ಇದು ತನಿಷಾಗೆ ಬೇಸರ ತಂದಿತ್ತು. ಹೀಗಾಗಿ ತನಿಷಾ, ವರ್ತೂರು ಸಂತೋಷ್, ಭಾಗ್ಯಶ್ರೀ ಅವರು ಪ್ರತಾಪ್ ವಿರುದ್ಧ ಕೂಗಾಡಿದ್ದರು.

Sulekha