ಬಿಗ್ಬಾಸ್ ಗೆದ್ದ ಪಳಾರ್ ಗಿಲ್ಲಿ – ವಂಶದ ಕುಡಿ ರಕ್ಷಿತಾ ಶೆಟ್ಟಿ ರನ್ನರ್

ಸಕ್ಕರೆ ನಗರಿಯ ಅಕ್ಕರೆಯ ಕಲೆಗಾರ, ಮಂಡ್ಯ ಸೊಗಡಿನ ಭಾಷೆ, ಪ್ರಾಸ ಪದಗಳ ಪಂಚಿಂಗ್ ಡೈಲಾಗ್.. ವಿನ್ ಆಗೋದಾದ್ರೆ ಗಿಲ್ಲಿಯೇ ಎಂಬ ಅಭಿಮಾನಿಗಳ ನಿರೀಕ್ಷೆ ನಿಜವಾಗಿದೆ. ಪಳಾರ್ ಗಿಲ್ಲಿ ಬಿಗ್ಬಾಸ್ ಗೆದ್ದಾಗಿದೆ. ಅಚ್ಚರಿಯೆಂಬಂತೆ ಅಶ್ವಿನಿ ಗೌಡ ಮೂರನೇ ಸ್ಥಾನಕ್ಕೆ ಜಾರಿದ್ದಾರೆ. ರಕ್ಷಿತಾ ಶೆಟ್ಟಿ ರನ್ನರ್ ಅಪ್ ಆಗುವ ಮೂಲಕ ಕನ್ನಡಿಗರ ಮನಮಗಳಾಗಿ ಹೊರಹೊಮ್ಮಿದ್ದಾರೆ.
ಇದನ್ನೂ ಓದಿ: ಬಿಗ್ಬಾಸ್ ಗೆದ್ದ ಪಳಾರ್ ಗಿಲ್ಲಿ – ರಕ್ಷಿತಾ ಶೆಟ್ಟಿ ಬಿಗ್ಬಾಸ್ ರನ್ನರ್ ಅಪ್
ಗಿಲ್ಲಿ ಗೆಲ್ಲಬೇಕು. ಗಿಲ್ಲಿ ವಿನ್ ಆಗಲೇಬೇಕು. ಕಳೆದೆರಡು ದಿನಗಳಿಂದ ಸಕ್ಕರೆನಾಡಿನ ಅಕ್ಕರೆಯ ಕಾಮಿಡಿ ಕಿಂಗ್ ಗಿಲ್ಲಿಯನ್ನು ಎತ್ತಿ ಮೆರೆಸಿದ ಅಭಿಮಾನಿಗಳ ಆಸೆ ಈಡೇರಿದೆ. ಅಪ್ಪಟ ಹಳ್ಳಿ ಪ್ರತಿಭೆ, ಕಾಮಿಡಿ ಕಿಂಗ್ ಗಿಲ್ಲಿ ನಟ ಬಿಗ್ಬಾಸ್ ವಿನ್ನರ್ ಆಗಿದ್ದಾರೆ. ಟ್ಯಾಲೆಂಟ್ ಇದ್ದರೆ ಕನ್ನಡಿಗರು ಕೈ ಹಿಡಿದೇ ಹಿಡಿಯುತ್ತಾರೆ ಅನ್ನೋದಕ್ಕೆ ಬೆಸ್ಟ್ ಎಕ್ಸಾಂಪಲ್ ಗಿಲ್ಲಿನಟ. ಸಕಲಕಲಾವಲ್ಲಭ ಗಿಲ್ಲಿ ಬಿಗ್ಬಾಸ್ ಟ್ರೋಫಿ ಎತ್ತಿಹಿಡಿದಿದ್ದಾರೆ. ಜೊತೆಗೆ 50 ಲಕ್ಷ ರೂಪಾಯಿ ನಗದು ಬಹುಮಾನ ಗೆದ್ದಿದ್ದಾರೆ. ಬಿಗ್ಬಾಸ್ ಮನೆಯೊಳಗೆ ಕಾಮಿಡಿ ಕಲಾವಿದ ಗಿಲ್ಲಿ ನಟ ಸೆನ್ಷೇಷನ್ ಸೃಷ್ಟಿ ಮಾಡಿದ್ದರು. ಗಿಲ್ಲಿಯನ್ನು ಬೆಂಬಲಿಸುವವರ ಸಂಖ್ಯೆ ಕೋಟಿಗೂ ಹೆಚ್ಚು. ಮುಂಚೆ ಪ್ರಾಪರ್ಟಿ ಕಾಮಿಡಿ ಮಾಡುತ್ತಿದ್ದ ಗಿಲ್ಲಿ ನಟ ಬಿಗ್ ಬಾಸ್ ಮನೆಯಲ್ಲಿ ರಿಯಲ್ ಆಗಿದ್ದಾರೆ. ಮನೆಯಲ್ಲಿ ಗಿಲ್ಲಿ ನಟ ಹೇಗಿರುತ್ತಾರೋ.. ರಿಯಲ್ ಲೈಫ್ನಲ್ಲಿ ಗಿಲ್ಲಿ ನಟ ಹೇಗಿದ್ದಾರೋ.. ಅದೇ ರೀತಿಯಲ್ಲೇ ‘ಬಿಗ್ ಬಾಸ್’ ಮನೆಯಲ್ಲೂ ಇದ್ದಾರೆ. ತಮಗೆ ಕಮ್ಫರ್ಟ್ ಎನಿಸುವ ಬಟ್ಟೆಗಳನ್ನಷ್ಟೇ ಗಿಲ್ಲಿ ನಟ ಧರಿಸಿದ್ದಾರೆ. ಮನೆಯಲ್ಲಿ ಹೇಗೆ ಬನಿಯನ್ ಧರಿಸಿಕೊಂಡು ಇರುತ್ತಾರೋ.. ಬಿಗ್ ಬಾಸ್ ಮನೆಯಲ್ಲೂ ರಿಯಲ್ ಆಗಿದ್ದಾರೆ ಗಿಲ್ಲಿ ನಟ. ಸಿಂಪಥಿಗಾಗಿ ಯಾವುದೇ ಡ್ರಾಮಾ ಮಾಡಿಲ್ಲ. ಯಾವುದೇ ಕಾರ್ಡ್ ಬಳಕೆಯನ್ನೂ ಮಾಡಿಲ್ಲ. ಫುಟೇಜ್ಗಾಗಿ ಯಾವುದನ್ನೂ ಓವರ್ ಸಹ ಮಾಡಿಲ್ಲ. ಕಾವು ಜೊತೆ ಸ್ವಲ್ಪ ಓವರ್ ಆಗಿ ಇದ್ರು ಅಂತಾ ಅನಿಸಿದ್ರೂ ಕೂಡಾ ಗಿಲ್ಲಿ ತನ್ನ ಕಾಮಿಡಿಯಿಂದಲೇ ಬಿಗ್ಬಾಸ್ ವಿನ್ನರ್ ಆಗಿದ್ದಾರೆ.
ಇನ್ನು ರಕ್ಷಿತಾ ಶೆಟ್ಟಿ ರನ್ನರ್ ಅಪ್ ಆಗುವ ಮೂಲಕ ಕನ್ನಡಿಗರ ಮನೆಮಗಳಾಗಿದ್ದಾಳೆ. ಅಶ್ವಿನಿ ವಿರುದ್ಧದ ಶಪಥ ಕೂಡಾ ಈಡೇರಿದ ಖುಷಿ ರಕ್ಷಿತಾ ಶೆಟ್ಟಿ ಮುಖದಲ್ಲಿ ಎದ್ದು ಕಾಣುತ್ತಿತ್ತು. ನನಗಿಂತ ಮೊದಲು ಹೊರಗೆ ಹೋಗೋದೇ ನೀನು ಎಂದು ಅಶ್ವಿನಿ ಗೌಡ ಅವರಿಗೆ ರಕ್ಷಿತಾ ಸವಾಲ್ ಹಾಕಿದ್ದಳು. ಕೊನೆಗೂ ರಕ್ಷಿತಾಗೂ ಮೊದಲೇ ಅಶ್ವಿನಿ ಗೌಡ ಹೊರ ಹೋಗಿದ್ದು, ಶಾಕಿಂಗ್ ಅನಿಸಿದೆ. ಇನೋಸೆಂಟ್ಗೆ ನಾನು ಇನೋಸೆಂಟ್, ರಾಕ್ಷಸಿಗೆ ನಾನು ರಾಕ್ಷಸಿಯಾಗುತ್ತೇನೆ. ಗೊತ್ತಾಯ್ತಾ ಎಂದು ಹೇಳುವ ಮೂಲಕ ರಕ್ಷಿತಾ ಎಲ್ಲರಿಗೂ ಇಷ್ಟವಾಗಿದ್ದಳು. ಹಂಡ್ರಡ್ ಪರ್ಸಂಟ್ ಎನರ್ಜಿ, ಎಲ್ಲರಿಗೂ ನಮ್ಮದೇ ಮನೆ ಮಗಳು ಅನ್ನೋ ರೀತಿ ಆಟವಾಡಿದ ರಕ್ಷಿತಾ ನಿಜಕ್ಕೂ ರನ್ನರ್ ಅಪ್ ಆಗಿದ್ದು ಸಂತಸದ ವಿಚಾರವೇ.
ಮತ್ತೊಂದೆಡೆ ಅಚ್ಚರಿಯೆಂಬಂತೆ ಅಶ್ವಿನಿ ಗೌಡ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳುವಂತಾಗಿದೆ. ಸೋತರೂ ಅಶ್ವಿನಿ ಗೌಡ ಗತ್ತು ಮಾತ್ರ ಕಡಿಮೆಯಿರಲಿಲ್ಲ. ಗೆದ್ದೇ ಗೆಲ್ಲುವೆ ಎಂಬ ರೀತಿ ಅಶ್ವಿನಿ ಗೌಡ ತುಂಬಾ ವಿಶ್ವಾಸದಲ್ಲಿದ್ದರು. ಇವರ ಅತಿಯಾದ ವಿಶ್ವಾಸವೇ ಫಿನಾಲೆ ಟೈಮ್ಲ್ಲಿ ಮುಳ್ಳಾಯ್ತಾ ಅನ್ನೋ ಚರ್ಚೆ ಶುರುವಾಗಿದೆ. ಮೀಟರ್ ಬೇಕು ಮೀಟರ್ ಎಂದು ಹೇಳುತ್ತಿದ್ದ ಗಿಲ್ಲಿ ಬಿಗ್ಬಾಸ್ ಟ್ರೋಫಿ ಎತ್ತಿಹಿಡಿದಿದ್ದಾರೆ. ಬಿಬಿಕೆ 12ಕ್ಕೆ ಗಿಲ್ಲಿಯೇ ಬಾಸ್ ಆಗಿದ್ದಾರೆ. ಗಿಲ್ಲಿ ವಂಶದ ಕುಡಿ ರಕ್ಷಿತಾ ರನ್ನರ್ ಆಗಿದ್ದಾರೆ.

ನೋಡಿರಿ

