ಬದುಕಿರೋ ಭೂಮಿ ಬಚಾವ್.. ದೀಪಿಕಾ ಮುಂದೆ ಮಹಾ ಸತ್ಯ ರಿವೀಲ್! – ಜೈದೇವ್ ಅಟ್ಟಹಾಸಕ್ಕೆ ಮಲ್ಲಿ ಬ್ರೇಕ್!

ಕೇಡಿ ಜೈದೇವ್ ಸಾವನ್ನ ಗೆದ್ದು ಬಂದ್ರೂ ಆತನಿಗೆ ಬುದ್ದಿ ಬಂದಿಲ್ಲ. ತನ್ನ ಪಾಪದ ಕೆಲಸ ಮುಂದುವರಿಸಿದ್ದಾನೆ. ಮಗನ ಕೆಟ್ಟ ಕೆಲಸಗಳಿಗೆ ಶಕುಂತಲಾ ಕೂಡ ಕೈಜೋಡಿಸಿದ್ದಾಳೆ. ಭೂಮಿಕಾ ಮೇಲೆ ಅಟ್ಯಾಕ್ ಮಾಡಿಸಿ, ಅವಳು ಸತ್ತಿದ್ದಾಳೆ ಅಂದ್ಕೊಂಡು ಭೂಮಿಕಾಳ ಅವಳಿ ಸಹೋದರಿ ದೀಪಿಕಾಳನ್ನ ಮನೆಗೆ ಕರೆತಂದಿದ್ದಾರೆ ಪಾಪಿಗಳು. ಆದ್ರೀಗ ಭೂಮಿಕಾ ಬದುಕಿರುವ ವಿಚಾರ ಎಲ್ಲರಿಗೂ ಗೊತ್ತಾಗಿದೆ. ಜೈದೇವ್ ಕೈಯಿಂದ ಕೂಡ ಭೂಮಿ ಬಚಾವ್ ಆಗಿದ್ದಾಳೆ. ಅಷ್ಟೇ ಅಲ್ಲ ತನ್ನಂತೆ ಇರುವ ದೀಪಿಕಾಳನ್ನ ನೋಡಿ ಶಾಕ್ ಆಗಿದ್ದಾಳೆ. ಮತ್ತೊಂದ್ಕಡೆ ದೀಪಿಕಾ ಮುಂದೆ ಮಹಾ ಸತ್ಯ ಅನಾವರಣ ಆಗ್ತಿದೆ. ಇದೀಗ ಸೀರಿಯಲ್ನಲ್ಲಿ ಮುಂದೇನಾಗುತ್ತೆ? ಕೇಡಿ ಜೇಡಿ ಅಟ್ಟಹಾಸಕ್ಕೆ ಮಲ್ಲಿ ಬ್ರೇಕ್ ಹಾಕ್ತಾಳಾ ಕ್ಯೂರಿಯಾಸಿಟಿ ಮೂಡಿದೆ.
ಇದನ್ನೂ ಓದಿ: ದಾಸನಿಗೆ SUPREME COURT ಶಾಕ್! – ಮಾಫಿ ಸಾಕ್ಷಿ ರದ್ದು ಮನವಿ ತಿರಸ್ಕರಿಸಿದ ಸುಪ್ರೀಂ
ಅಮೃತಧಾರೆ ಸೀರಿಯಲ್ನಲ್ಲಿ ಯಾರೂ ಊಹಿಸಿರದ ಟ್ವಿಸ್ಟ್ ಸಿಕ್ಕಿದೆ. ಜೈದೇವ್ ಅಟ್ಟಹಾಸ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಇದೀಗ ಭೂಮಿಕಾಳನ್ನ ಮುಗಿಸಲು ಪ್ಲ್ಯಾನ್ ಮಾಡಿದ್ದ. ಆಕೆ ಚಿಕ್ಕಮಗಳೂರಿಗೆ ಹೋಗುವಾಗ ಆಕೆ ಮೇಲೆ ಅಟ್ಯಾಕ್ ಮಾಡಿದ್ದ. ಬಳಿಕ ಆಕೆ ಸತ್ತಿದ್ದಾಳೆ ಎಂದು ಭಾವಿಸಿ, ತನ್ನ ಕೆಲಸ ಸಾಧಿಸಲು ಭೂಮಿಕಾಳಂತೆ ಇರುವ ದೀಪಿಕಾಳನ್ನ ಕರೆತಂದಿದ್ದಾನೆ. ದೀಪಿಕಾ ಬಳಿ ಸುಳ್ಳು ಹೇಳಿ ದಿವಾನ್ ಮನೆಗೆ ಕಳುಹಿಸಿದ್ದಾನೆ. ದಿವಾನ್ ಮನೆಗೆ ಬಂದ ದೀಪಿಕಾ ಪೇಚಿಗೆ ಸಿಲುಕಿದ್ದಾಳೆ. ಏನು ಮಾಡಬೇಕು. ಹೇಗಿರಬೇಕು ಎಂದು ಗೊತ್ತಾಗದೇ ಒದ್ದಾಡಿದ್ದಾಳೆ. ಇದ್ರ ಜೊತೆಗೆ ಜೈದೇವ್, ಶಕುಂತಲಾ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದಾಳೆ. ಅಷ್ಟೇ ಅಲ್ಲ.. ತನ್ನನ್ನ ಬದುಕಿಸಿದ್ದು ಜೈದೇವ್. ಹೀಗಾಗಿ ಆತ ದಿವಾನ್ ಮನೆಯಲ್ಲೇ ಉಳಿಯಬೇಕು ಅಂತ ಶಕುಂತಲಾ ಹೇಳಿಕೊಟ್ಟಂತೆ ಮನೆಯವರ ಮುಂದೆ ಹೇಳಿದ್ದಾಳೆ. ಬಳಿಕ ಮಲ್ಲಿಯನ್ನ ಮನೆಯಿಂದ ಆಚೆ ಹಾಕಿದ್ದಾಳೆ.
ಹೌದು, ದೀವಾನ್ ಮನೆಗೆ ಬಂದ ದೀಪಿಕಾ ಶಕುಂತಲಾ ಹೇಳಿದಂತೆ ಕೇಳುತ್ತಿದ್ದಾಳೆ. ಅವಳ ನಡವಳಿಕೆ ಎಲ್ಲರಿಗೂ ಅನುಮಾನ ಮೂಡಿಸಿದೆ. ಇನ್ನೊಂದ್ಕಡೆ ಮಲ್ಲಿಗೆ ಮನೆಯಲ್ಲಿರುವುದು ಭೂಮಿಕಾ ಅಲ್ಲ ಅಂತ ಗೊತ್ತಾಗಿದೆ. ಹೀಗಾಗಿ ಭೂಮಿಕಾ ಎಲ್ಲಿದ್ದಾಳೆ ಅನ್ನೋದನ್ನ ಮಲ್ಲಿ ಪತ್ತೆ ಹಚ್ಚಿದ್ದಾಳೆ. ಬಳಿಕ ಆಕೆಗೆ ಭೂಮಿಕಾಗೆ ಟ್ರೀಟ್ಮೆಂಟ್ ಕೊಡಿಸಿ ಕರ್ಕೊಂಡು ಬಂದಿದ್ದಾರೆ. ಭೂಮಿಕಾ ಹುಷಾರು ಆಗ್ತಿದ್ದಂತೆ ಮಲ್ಲಿ ದೀಪಿಕಾಳನ್ನ ಒಂದ್ಕಡೆ ಹೋಗೋಣ ಎಂದು ಮನೆಯಿಂದ ಒಂದು ಗೋಡಾನ್ಗೆ ಕರ್ಕೊಂಡು ಬಂದು ದೀಪಿಕಾ ಬಳಿ ಆಕ್ಸಿಡೆಂಟ್ ಆದಾಗಿನಿಂದ ವಿಚಿತ್ರವಾಗಿ ವರ್ತಿಸ್ತಾ ಇದ್ದೀರಾ? ನಿಜ ಹೇಳಿ ಅಂತ ಮಲ್ಲಿ ಹೇಳಿದ್ದಾಳೆ. ಇದಕ್ಕೆ ನಿನಗೆ ಏನೋ ಆಗಿದೆ ಎಂದು ದೀಪಿಕಾ ಹೇಳಿದಾಗ ಮಲ್ಲಿ ಗನ್ ಹಿಡಿದಿದ್ದಾಳೆ. ನೀನು ಭೂಮಿಕಾ ಆದ್ರೆ ಅಲ್ಲಿರೋದು ಯಾರು ಅಂತ ಕೇಳಿದ್ದಾಳೆ. ಭೂಮಿಕಾಳನ್ನ ನೋಡಿದ ದೀಪಿಕಾ ಶಾಕ್ ಆಗಿದ್ದಾಳೆ. ಇದೀಗ ದೀಪಿಕಾ ಪ್ರಾಣ ಭಯಕ್ಕಾದ್ರೂ ಬಾಯಿ ಬಿಡೋದು ಫಿಕ್ಸ್ ಆಗಿದೆ. ಅಲ್ಲಿಗೆ ಜೈದೇವ್, ಶಕುಂತಲಾಳ ಷಡ್ಯಂತರ ಬಯಲಾಗಲಿದೆ. ಮಲ್ಲಿ, ಭೂಮಿಕಾ ಕುತಂತ್ರಿಗಳ ಆಟಕ್ಕೆ ಬ್ರೇಕ್ ಹಾಕೋದು ಫಿಕ್ಸ್ ಆಗಿದೆ.
ಇನ್ನೊಂದ್ಕಡೆ ದೀಪಿಕಾ, ಭೂಮಿಕಾ ಜನ್ಮ ರಹಸ್ಯ ರಿವೀಲ್ ಆಗ್ತಿದೆ. ದೀಪಿಕಾ ಮಂದಾಕಿಣಿ ಮನೆಗೆ ಬಂದಿದ್ದಾಳೆ. ಈ ವೇಳೆ ಮಹಿಮಾಗೆ ಟ್ವಿನ್ಸ್ ಮಕ್ಕಳು ಎಂದು ಮಂದಾಕಿಣಿ ಹೇಳಿದ್ದಾಳೆ. ಆಗ ದೀಪಿಕಾ ಮನೆಗೆ ಫಸ್ಟ್ ಟೈಮ್ ಟ್ವಿನ್ಸ್ ಮಕ್ಕಳು ಬರ್ತಿದ್ದಾರೆ ಎಂದಿದ್ದಾಳೆ. ಅವಳ ಮಾತು ಕೇಳಿ ಮಂದಾಕಿಣಿ, ಹಾಗೂ ಮಹಿಮಾ ಶಾಕ್ ಆಗಿದ್ದಾರೆ. ಬಳಿಕ ಮಂದಾಕಿಣಿ ಭೂಮಿಕಾ & ದೀಪಿಕಾಳ ಸಣ್ಣ ವಯಸ್ಸಿನ ಫೋಟೋ ತೋರಿಸಿ, ಹಿಂದಿನ ಸ್ಟೋರಿ ಹೇಳಲು ಶುರು ಮಾಡಿದ್ದಾರೆ. ಇದೀಗ ದೀಪಿಕಾಳೇ ಕಳೆದು ಹೋಗಿರುವ ಮಗಳು ಅನ್ನೋದು ರಿವೀಲ್ ಆಗುತ್ತಾ ಅನ್ನೋ ಕ್ಯೂರಿಯಾಸಿಟಿ ಮೂಡಿದೆ. ಒಟ್ಟಿನಲ್ಲಿ ಸೀರಿಯಲ್ ಸ್ಟೋರಿ ಸಾಕಷ್ಟು ರೋಚಕತೆಯಿಂದ ಕೂಡಿರಲಿದೆ.

ನೋಡಿರಿ

