ಪ್ರಿನ್ಸ್ ಕೆಣಕಿ ಕಿಂಗ್ ಮರೆತ ಅಬ್ರಾರ್ – ಕಣ್ಸನ್ನೆ ಮಾಡಿದವ್ನು ಫುಲ್ ರೋಸ್ಟ್

ಭಾರತ ವರ್ಸಸ್ ಪಾಕಿಸ್ತಾನ ನಡುವಿನ ಮ್ಯಾಚ್ ಮುಗಿದ್ಮೇಲೆ ವಿರಾಟ್ ಕೊಹ್ಲಿ ಫುಲ್ ಟ್ರೆಂಡಿಂಗ್ನಲ್ಲಿದ್ದಾರೆ. ಅದ್ರಲ್ಲೂ ಅವ್ರ ಪವರ್ ಫುಲ್ ಸೆಂಚುರಿ ಬಗ್ಗೆ ಇಡೀ ಕ್ರಿಕೆಟ್ ಜಗತ್ತೇ ಗುಣಗಾನ ಮಾಡ್ತಿದೆ. ಹೀಗೆ ಕೊಹ್ಲಿ ಪಾಸಿಟಿವ್ ಆಗಿ ಸದ್ದು ಮಾಡ್ತಿದ್ರೆ ಅತ್ತ ಪಾಕಿಸ್ತಾನದ ಬೌಲರ್ವೊಬ್ಬ ಸಿಕ್ಕಾಪಟ್ಟೆ ಟ್ರೋಲ್ ಆಗ್ತಿದ್ದಾನೆ. ಅವ್ನ ಌಟಿಟ್ಯೂಟ್ ಬಗ್ಗೆ ಪಾಕ್ನ ಕ್ರಿಕೆಟರ್ಗಳೇ ಹಿಗ್ಗಾಮಗ್ಗಾ ಜಾಡಿಸ್ತಿದ್ದಾರೆ. ಟೀಂ ಇಂಡಿಯಾ ಫ್ಯಾನ್ಸ್ ಅಂತೂ ಥರಹೇವಾರಿ ಮೀಮ್ಸ್ಗಳನ್ನ ಮಾಡಿ ಮುಟ್ಟಿ ನೋಡಿಕೊಳ್ಳುವಂತೆ ತಿರುಗೇಟು ಕೊಟ್ಟಿದ್ದಾರೆ.
ಇದನ್ನೂ ಓದಿ : ಸೂಪರ್ ಓವರ್ನಲ್ಲಿ ಆರ್ಸಿಬಿಗೆ ವಿರೋಚಿತ ಸೋಲು – ತನ್ನ ತಪ್ಪಿನಿಂದಲೇ ಸೋತ ಬೆಂಗಳೂರು!
ಭಾನುವಾರ ನಡೆದ ಭಾರತ ಮತ್ತು ಪಾಕಿಸ್ತಾನ ನಡುವಿನ ಮ್ಯಾಚ್ನಲ್ಲಿ ಮೇನ್ ಹೈಲೆಟ್ ಆಗಿದ್ದೇ ವಿರಾಟ್ ಕೊಹ್ಲಿ ಸೆಂಚುರಿ. ಆಫ್ಟರ್ ಎ ಲಾಂಗ್ ಟೈಂ ಫಾರ್ಮ್ಗೆ ಮರಳಿದ ಕೊಹ್ಲಿ ಸೆಂಚುರಿ ಸಿಡಿಸಿ ಬ್ಯಾಟ್ ಎತ್ತಿ ಮುಗಿಲತ್ತ ಮುಖ ಮಾಡಿ ಸೆಲೆಬ್ರೇಟ್ ಮಾಡಿದ್ರು. ಸೋ ಕೊಹ್ಲಿಯವ್ರ ಜೊತೆ ಟ್ರೆಂಡಿಂಗ್ನಲ್ಲಿ ಇರೋ ಮತ್ತೊಬ್ಬ ಆಟಗಾರನೇ ಪಾಕಿಸ್ತಾನದ ಬೌಲರ್ ಅಬ್ರಾರ್ ಅಹ್ಮದ್. ಅಬ್ರಾರ್ ಈ ಮಟ್ಟಿಗೆ ಸೆನ್ಸೇಷನಲ್ ಆಗೋಕೆ ಕಾರಣ ಒಂದು ವಿಕೆಟ್. ಅದು ಒಂದೇ ಒಂದು ವಿಕೆಟ್.
ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದಲ್ಲಿ ಪಾಕ್ ಸ್ಪಿನ್ನರ್ ಅಬ್ರಾರ್ ಅಹ್ಮದ್ ಶುಭ್ಮನ್ ಗಿಲ್ ರನ್ನು ಕ್ಲೀನ್ ಬೌಲ್ಡ್ ಮಾಡಿ ವಿಚಿತ್ರವಾಗಿ ಸೆಂಡ್ ಆಫ್ ಕೊಟ್ರು. ಕುತ್ತಿಗೆ ಮತ್ತು ಕಣ್ಸನ್ನೆಲ್ಲೇ ಪೆವಿಲಿಯನ್ಗೆ ನಡಿ ನಡಿ ಎನ್ನುವಂತೆ ಅಣಕಿಸಿದ್ರು. ಅಬ್ರಾರ್ ಅಹಂಕಾರಕ್ಕೆ ಗಿಲ್ ಕೂಡ ಗುರಾಯಿಸುತ್ತಲೇ ಹೊರ ನಡೆದ್ರು. ಇಷ್ಟೇ ನೋಡಿ ಆಗಿದ್ದು. ಈಗ ಸೋಶಿಯಲ್ ಮೀಡಿಯಾ ತುಂಬೆಲ್ಲಾ ಅಬ್ರಾರ್ ಅಹ್ಮದ್ನ ಫುಲ್ ರೋಸ್ಟ್ ಆಗ್ರಿದ್ದಾರೆ. ಅಜಿತ್ ಬೊಪ್ಪನಳ್ಳಿ ಅನ್ನೋರು ಅಬ್ರಾರ್ ಫೋಟೋವನ್ನ ಪೋಸ್ಟ್ ಮಾಡಿ ಲಗೇಜ್ ಪ್ಯಾಕ್ ಆಯ್ತಾ, ಊಟ ಮಾಡೋಕಾದ್ರೂ ಟೈಂ ಇದ್ಯಾ ಅಂತಾ ಕ್ಯಾಪ್ಶನ್ ಕೊಟ್ಟಿದ್ದಾರೆ.
ಹೀಗೆ ಟ್ರೋಲ್ಗಳ ನಡುವೆ ಪಾಕಿಸ್ತಾನದ ಮಾಜಿ ಕ್ಯಾಪ್ಟನ್ ವಾಸಿಮ್ ಅಕ್ರಮ್ ಕೂಡ ತಮ್ಮ ತಂಡದ ಆಟಗಾರನ ವರ್ತನೆಯನ್ನ ಟೀಕಿಸಿದ್ದಾರೆ. ನನಗೆ ಈಥರ ಸೆಲೆಬ್ರೇಷನ್ ಇಷ್ಟ ಆಗೋಗಿಲ್ಲ. ನಿಮ್ಮ ತಂಡ ಸೋಲುವ ಹಂತದಲ್ಲಿರುವಾಗ ಈ ರೀತಿಯಲ್ಲಿ ಸಂಭ್ರಮಿಸಬಾರದು. ಟಿವಿಯಲ್ಲಿ ನೋಡೋರಿಗೆ ಇದು ಚೆನ್ನಾಗಿ ಕಾಣಲ್ಲ ಎಂದಿದ್ದಾರೆ. ಭಾರತ & ಪಾಕ್ ಮ್ಯಾಚ್ ಮುಗಿದ್ಮೇಲೆ ಸೋಶಿಯಲ್ ಮೀಡಿಯಾ ಓಪನ್ ಮಾಡಿದ್ರೆ ಸಾಕು ಅಬ್ರಾರ್ ಅಹ್ಮದ್ರದ್ದೇ ಮೀಮ್ಸ್, ಟ್ರೋಲ್. ಜೋಕರ್ ನಂತೆಯೂ ಫೋಟೋ ವೈರಲ್ ಆಗ್ತಿದೆ. ಏನೇ ಹೇಳಿ ಮ್ಯಾಚ್ ಸೋಲ್ತೀವಿ ಅಂತಾ ಗೊತ್ತಿದ್ರೂ ವಿಕೆಟ್ ಬಿದ್ದಾಗ ಈ ರೀತಿಯಾಗಿ ಬಿಹೇವ್ ಮಾಡೋದು ಬೇಕಾಗಿರಲಿಲ್ಲ. ಹೀಗಿದ್ರೂ ವಿರಾಟ್ ಕೊಹ್ಲಿ ಅಬ್ರಾರ್ ಬೌಲಿಂಗ್ಗೆ ಬೆನ್ನು ತಟ್ಟಿ ಶಹಬ್ಬಾಸ್ ಹೇಳಿದ್ರು. ಅಲ್ಲಿ ಕೊಹ್ಲಿಗೆ ಕಂಡಿದ್ದು ಆತನ ಬೌಲಿಂಗ್ ಸ್ಕಿಲ್ ಮಾತ್ರ. 10 ಓವರ್ಗಳನ್ನ ಬೌಲ್ ಮಾಡಿದ್ದ ಅಬ್ರಾರ್ ಕೇವಲ 28 ರನ್ ನೀಡಿ ಗಿಲ್ ವಿಕೆಟ್ ಕಿತ್ತಿದ್ರು. ಎಕಾನಮಿ ಜಸ್ಟ್ 2.80 ಇತ್ತು. ಬಟ್ ಇದೊಂದು ವರ್ತನೆ ಆತನಿಂದ ಬಂದಿಲ್ಲ ಅಂದಿದ್ರೆ ಬೆಸ್ಟ್ ಬೌಲರ್ ಆಗಿ ಮಾತ್ರ ಕಾಣ್ತಿದ್ರು.