ಟಾಲಿವುಡ್​ಗೆ ಶಾಸಕ ಪ್ರದೀಪ್ ಈಶ್ವರ್ – ಚಿರಂಜೀವಿ ಚಿತ್ರದಲ್ಲಿ ಡೈಲಾಗ್ ಕಿಂಗ್
ಬಿಗ್​ಬಾಸ್ ಬಳಿಕ ಫಿಲ್ಮ್ ಆಫರ್ ಸಿಕ್ಕಿದ್ದೇಗೆ?

ಟಾಲಿವುಡ್​ಗೆ ಶಾಸಕ ಪ್ರದೀಪ್ ಈಶ್ವರ್ – ಚಿರಂಜೀವಿ ಚಿತ್ರದಲ್ಲಿ ಡೈಲಾಗ್ ಕಿಂಗ್ಬಿಗ್​ಬಾಸ್ ಬಳಿಕ ಫಿಲ್ಮ್ ಆಫರ್ ಸಿಕ್ಕಿದ್ದೇಗೆ?

ಪ್ರದೀಪ್ ಈಶ್ವರ್. ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ. ಶಾಸಕರಾಗಿ ಗುರುತಿಸಿಕೊಂಡಿದ್ದಕ್ಕಿಂತ ಕಾಂಟ್ರವರ್ಸಿ ಕಿಂಗ್ ಅಂತಾನೇ ಜಾಸ್ತಿ ಕರೆಸಿಕೊಂಡಿದ್ದಾರೆ. ಡೈಲಾಗ್ ಮೇಲೆ ಡೈಲಾಗ್ ಬಿಡೋ ಪ್ರದೀಪ್ ಈಶ್ವರ್ ಸೋಶಿಯಲ್ ಮೀಡಿಯಾ ಟ್ರೆಂಡ್ ಆಗಿದ್ದೂ ಇದೆ. ಬಟ್ ಇತ್ತೀಚಿನ ದಿನಗಳಲ್ಲಿ ಪ್ರದೀಪ್ ಈಶ್ವರ್ ಟೀಕೆಗಳಿಂದಲೇ ಸದ್ದು ಮಾಡ್ತಿದ್ದಾರೆ. ಇದೆಲ್ಲದ್ರ ನಡುವೆ ಬಯಾಲಜಿ ಬ್ರಹ್ಮ ಅಂತಾ ಕರೆಸಿಕೊಳ್ಳೋ ಪ್ರದೀಪ್ ಈಶ್ವರ್ ಸಿನಿಮಾದಲ್ಲಿ ಬಣ್ಣ ಹಚ್ಚೋಕೆ ರೆಡಿಯಾಗಿದ್ದಾರೆ. ಅದೂ ಕೂಡ ಟಾಲಿವುಡ್​​ನಿಂದ ದೊಡ್ಡ ಆಫರ್ ಬಂದಿದ್ಯಂತೆ. ನಿರರ್ಗಳವಾಗಿ ಮಾತಾಡುವ ಪ್ರದೀಪ್ ಈಶ್ವರ್ ಟ್ಯಾಲೆಂಟ್‌ಗೆ ಮನ ಸೋತಿರುವ ನಿರ್ದೇಶಕರೊಬ್ಬರು ಮೆಗಾಸ್ಟಾರ್ ಚಿರಂಜೀವಿ ಸಿನಿಮಾದಲ್ಲಿ ನಟಿಸುವಂತೆ ಆಫರ್ ಕೊಟ್ಟಿದ್ದಾರಂತೆ.  ಅಷ್ಟಕ್ಕೂ ಯಾವ ಸಿನಿಮಾ? ಪ್ರದೀಪ್ ಈಶ್ವರ್​ರದ್ದು ಯಾವ ಪಾತ್ರ? ಈ ಬಗ್ಗೆ ಶಾಸಕರು ಹೇಳಿದ್ದೇನು ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಸೆಂಚುರಿ ಸ್ಟಾರ್ ಅಭಿಷೇಕ್ ಗಿಲ್ಲ ಚಾನ್ಸ್ – ಗಿಲ್ & ಜೈಸ್ವಾಲ್ ಮುಂದೆ ಸೈಡ್ ಲೈನ್

ಟಾಲಿವುಡ್ ಗೆ ಪ್ರದೀಪ್ ಈಶ್ವರ್!

ಕರ್ನಾಟಕದಲ್ಲಿ ಮೋಟಿವೇಷನಲ್ ಸ್ಪೀಕರ್, ಶಾಸಕರು, ಡೈಲಾಗ್ ಕಿಂಗ್ ಆಗಿರೋ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಪ್ರದೀಪ್‌ಈಶ್ವರ್, ಈ ಹಿಂದೆಯೇ ಬಿಗ್‌ಬಾಸ್‌ನಲ್ಲಿ ಅತಿಥಿಯಾಗಿ ಕಾಣಿಸಿಕೊಳ್ಳುವ ಮೂಲಕ ಸಿಕ್ಕಾಪಟ್ಟೆ ಸೌಂಡ್ ಮಾಡಿದ್ರು. ಇದೀಗ ಡೈರೆಕ್ಟ್ ಸಿನಿಮಾ ಆಫರ್ ಸಿಕ್ಕಿದೆ. ಅದೂ ಕೂಡ ಟಾಲಿವುಡ್ ಮೆಗಾ ಸ್ಟಾರ್ ಚಿರಂಜೀವಿ ನಟನೆಯ ಚಿತ್ರದಲ್ಲಿ. ಚಿರಂಜೀವಿ ಅಭಿನಯಿಸುತ್ತಿರುವ ಸಾಮಾಜಿಕ ಕ್ರಾಂತಿಯ ಚಲನಚಿತ್ರವೊಂದರಲ್ಲಿ ನಟಿಸಲು ಪ್ರದೀಪ್ ಈಶ್ವರ್ ಸನ್ನದರಾಗುತ್ತಿದ್ದಾರಂತೆ. ಇದರಿಂದ ಚಿರಂಜೀವಿ ಜೊತೆ ಬಣ್ಣ ಹಚ್ಚಿ ನಟಿಸಲು ಶಾಸಕ ಪ್ರದೀಪ್‌ಈಶ್ವರ್‌ಗೆ ಕರೆ ಬಂದಿದೆ. ಸ್ವತಃ ಮೆಗಸ್ಟಾರ್ ಚಿರಂಜೀವಿಯವರ ಚಲನಚಿತ್ರವನ್ನು ನಿರ್ದೇಶಿಸುತ್ತಿರುವ ಖ್ಯಾತ ನಿರ್ದೇಶಕರೊಬ್ಬರು ಶಾಸಕ ಪ್ರದೀಪ್‌ಈಶ್ವರ್‌ಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಕರ್ನಾಟಕ ಮಾತ್ರವಲ್ಲದೆ ತೆಲಂಗಾಣದಲ್ಲೂ ಪ್ರದೀಪ್‌ ಈಶ್ವರ್ ಜನಪ್ರಿಯತೆ ಇದೆ. ಕರ್ನಾಟಕದಲ್ಲಿ ನಡೆದ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಅಂದಿನ ಪ್ರಭಾವಿ ಮಂತ್ರಿಯಾಗಿದ್ದ ಡಾ. ಕೆ.ಸುಧಾಕರ್‌ರನ್ನೇ ಸೋಲಿಸಿ, ಪ್ರದೀಪ್‌ಈಶ್ವರ್ ಜಯಭೇರಿ ಭಾರಿಸಿದ್ದರು. ಇದರಿಂದ ರಾಜ್ಯದಲ್ಲಿ ಪ್ರದೀಪ್‌ಈಶ್ವರ್ ರಾತ್ರೋರಾತ್ರಿ ರೆಬಲ್‌ಸ್ಟಾರ್ ಆಗಿ ಜನಮನ್ನಣೆ ಪಡೆದಿದ್ದರು. ತೆಲಂಗಾಣದಲ್ಲೂ ಬಿರುಗಾಳಿ ಎಬ್ಬಿಸಿದ್ದ ಪ್ರದೀಪ್‌ ಈಶ್ವರ್ ತೆಲಂಗಾಣದಲ್ಲಿ ನಡೆದ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕೆಲವು ಕ್ಷೇತ್ರಗಳಿಗೆ ಉಸ್ತುವಾರಿ ವಹಿಸಿದ್ದರು. ತಮ್ಮದೇ ಆದ ಡೈಲಾಗ್ ಜೊತೆಗೆ ಪವನ್‌ಕಲ್ಯಾಣ್, ಮೆಗಾಸ್ಟಾರ್ ಚಿರಂಜೀವಿ ಸೇರಿದಂತೆ ಇನ್ನಿತರರ ಡೈಲಾಗ್‌ಗಳನ್ನು ಹೇಳುವುದರ ಮೂಲಕ ತೆಲಂಗಾಣದ ಜನರಲ್ಲಿ ತಮ್ಮ ಪರ ಬಿರುಗಾಳಿ ಎಬ್ಬಿಸಿದ್ದರು. ಇದರಿಂದ ಶಾಸಕ ಪ್ರದೀಪ್‌ಈಶ್ವರ್‌ರವರ ಜನಪ್ರಿಯತೆಯನ್ನು ಗಮನಿಸಿ ಈಗ ತೆಲುಗು ಸಿನಿರಂಗ ಕೈಬೀಸಿ ಕರೆದಿದೆ.

ಟಾಲಿವುಡ್​ನಿಂದ ಆಫರ್ ಬಂದಿರೋ ಬಗ್ಗೆ ಪ್ರದೀಪ್ ಈಶ್ವರ್ ಕೂಡ ಒಪ್ಪಿಕೊಂಡಿದ್ದಾರೆ. ನಾನು ಮೆಗಾಸ್ಟಾರ್ ಚಿರಂಜೀವಿ ಅವರ ದೊಡ್ಡ ಅಭಿಮಾನಿ ಎಂದಿರೋ ಶಾಸಕರು, ಚಿರಂಜೀವಿ ಅವರಿಗೆ ನನ್ನ ಮೇಲೆ ವಿಶೇಷವಾದ ಪ್ರೀತಿ ಇದೆ. ಚುನಾವಣೆಯಲ್ಲಿ ಗೆದ್ದ ಮೇಲೆ ಮನೆಗೆ ಕರೆಸಿದ್ದರು. ಪವನ್ ಕಲ್ಯಾಣ್ ಅವರು ಗೆದ್ದ ಮೇಲೆ ನಾನು ಫೋನ್ ಮಾಡಿ ವಿಶ್ ಮಾಡಿದ್ದೇನೆ. ತೆಲುಗು ಚಿತ್ರರಂಗದಲ್ಲೂ ನಾನು ಕ್ಲೂಸ್ ಆಗಿದ್ದೇನೆ. ನನಗೆ ಚಿರಂಜೀವಿ ಹಾಗೂ ಅವರ ಕುಟುಂಬಕ್ಕೆ ತುಂಬಾ ಹತ್ತಿರದಲ್ಲಿ ಇದ್ದೇನೆ. ಹೀಗಾಗಿ ಟಾಲಿವುಡ್‌ನಲ್ಲಿ ನಾನು ಸಿನಿಮಾ ಮಾಡಲು ಒಪ್ಪಿಕೊಂಡಿದ್ದೇನೆ. ಚಿರಂಜೀವಿ ಜೊತೆ ನಟನೆ ಹಾಗೂ ಡ್ಯಾನ್ಸ್ ಮಾಡಬೇಕು ಎಂಬುದು ನನ್ನ ಆಸೆ. ಚಿರಂಜೀವಿ ಅವರ ಈಗಿನ ವಿಶ್ವಾಂಬರ ಚಿತ್ರದಲ್ಲಿ ನಾನು ನಟನೆ ಮಾಡುತ್ತಿಲ್ಲ. ಚಿರಂಜೀವಿ ಅವರ ಮುಂದಿನ ಸಿನಿಮಾದಲ್ಲಿ ಯಾವ ಪಾತ್ರ ಕೊಟ್ಟರೂ ಮಾಡುತ್ತೇನೆ. ಅವರೇ ಈ ಬಗ್ಗೆ ಅನೌನ್ಸ್ ಮಾಡಲಿ ಅಂತ ನಾನು ಸುಮ್ಮನಿದ್ದೇನೆ ಎಂದಿದ್ದಾರೆ. ಒಟ್ನಲ್ಲಿ ಜನರ ಮುಂದೆ ಡೈಲಾಗ್ ಮೇಲೆ ಡೈಲಾಗ್ ಬಿಡ್ತಿದ್ದ ಶಾಸಕರು ಈಗ ತೆರೆ ಮೇಲೂ ಡೈಲಾಗ್ ಹೇಳೋಕೆ ರೆಡಿಯಾಗಿದ್ದಾರೆ. ಸೋ ಜನ ಇದನ್ನ ಹೇಗೆ ಒಪ್ಪಿಕೊಳ್ತಾರೆ ಅನ್ನೋದೇ ಈಗಿರುವ ಪ್ರಶ್ನೆ.

Shwetha M