ಚಿರತೆಯ ಮನೆ ಮನೆ ತಿರುಗಾಟ – ಅಂಜನಾಪುರದ ನಿವಾಸಿಗಳಿಗೆ ಪ್ರಾಣ ಸಂಕಟ – ಅರಣ್ಯಾಧಿಕಾರಿಗಳೇ ಎಲ್ಲಿದ್ದೀರಾ?

ಕಳೆದ ಕೆಲ ದಿನಗಳ ಹಿಂದೆ ರಸ್ತೆಯಲ್ಲಿ ತಿರುಗಾಡುತ್ತಿದ್ದ ಚಿರತೆ ಈಗ ಮನೆ ಮನೆ ತಿರುಗಾಟ ಶುರುಮಾಡಿದೆ. ಅದು ಕೂಡಾ ಬೆಂಗಳೂರಲ್ಲಿ.ಇದೀಗ ಅಂಜನಾಪುರದಲ್ಲಿ ಮತ್ತೆ ಚಿರತೆ ಪ್ರತ್ಯಕ್ಷವಾಗಿದೆ. ಅಂಜನಾಪುರದ 5G ಬ್ಲಾಕ್ ನಲ್ಲಿ ಮತ್ತೆ ಚಿರತೆ ಕಾಣಿಸಿಕೊಂಡಿದ್ದು, ಮನೆ ಮಂದಿ ಬೆಚ್ಚಿಬಿದ್ದಿದ್ದಾರೆ.
ಇದನ್ನೂ ಓದಿ:ಬೆಂಗಳೂರಿಗರೇ ಹುಷಾರ್.. – ನಿಮ್ಮ ಅಕ್ಕಪಕ್ಕದ ರಸ್ತೆಯಲ್ಲೇ ಚಿರತೆಯ ತಿರುಗಾಟ..!
ಬೆಂಗಳೂರಿನ ದಕ್ಷಿಣ ಭಾಗದಲ್ಲಿರುವ ಅಂಜನಾಪುರದ ನಿವಾಸಿಗಳು ಮತ್ತೆ ಬೆಚ್ಚಿಬಿದ್ದಿದ್ದಾರೆ. ಮೊನ್ನೆಯಷ್ಟೇ ರಸ್ತೆಯಲ್ಲಿ ಓಡಾಡುತ್ತಿದ್ದ ಚಿರತೆ ಈಗ ಮನೆಯಂಗಳದಲ್ಲಿ ಕಾಣಿಸಿಕೊಂಡಿದೆ. ಮನೆಯ ಗೇಟ್ ಬಳಿಯೇ ಚಿರತೆ ಪ್ರತ್ಯಕ್ಷವಾಗಿದ್ದು, ನಿವಾಸಿಗಳು ಬೆಚ್ಚಿಬಿದ್ದಿದ್ದಾರೆ. ಅಂಜನಾಪುರದ 5ನೇ ಬ್ಲಾಕ್ನಲ್ಲಿರೋ ಮನೆಯ ಬಳಿ ಚಿರತೆ ಓಡಾಟ ಕಂಡು ಬಂದಿದ್ದು, ಸಿಸಿಟಿವಿ ಕ್ಯಾಮೆರಾದಲ್ಲಿ ಚಿರತೆ ಸೆರೆಯಾಗಿದೆ. ಅದು ಕೂಡಾ ಚಿರತೆಮನೆ ಬಾಗಿಲಿಗೆ ಬಂದಿರುವುದು ನೋಡಿ ಮನೆಮಂದಿ ಭಯಭೀತರಾಗಿದ್ದಾರೆ.
ಮನೆಯ ಬಾಗಿಲ ಬಳಿ ಕಾರಿನ ಪಕ್ಕದಲ್ಲೇ ಚಿರತೆ ಪ್ರತ್ಯಕ್ಷವಾಗಿದೆ. ಅಂಜನಾಪುರದ 5G ಬ್ಲಾಕ್ ನಲ್ಲಿ ರಾತ್ರಿ 12.35ರ ಸುಮಾರಿಗೆ ಚಿರತೆ ಪ್ರತ್ಯಕ್ಷವಾಗಿದೆ. ನಾಯಿ ಬೊಗಳಿದ ಕಾರಣ ಎಚ್ಚರ ಆಯಿತು. ಹೊರಗಡೆ ಬಂದು ನೋಡಿದಾಗ ಚಿರತೆ ಇತ್ತು ಎಂದು ಮಾಲೀಕರು ಮಾಹಿತಿ ನೀಡಿದ್ದಾರೆ. ತುರಹಳ್ಳಿ ಅರಣ್ಯ ಪ್ರದೇಶದ ಸಮೀಪ ಅಂಜನಾಪುರ ಇರುವ ಹಿನ್ನೆಲೆ ಈ ಅರಣ್ಯ ಪ್ರದೇಶದಿಂದಲೇ ಚಿರತೆ ನಗರದತ್ತ ಬಂದಿದೆ ಎಂದು ಅರಣ್ಯಾಧಿಕಾರಿಗಳು ಹೇಳ್ತಿದ್ದಾರೆ. ಇದೀಗ ಅರಣ್ಯಾಧಿಕಾರಿಗಳು ಚಿರತೆಯನ್ನು ಸೆರೆ ಹಿಡಿಯುವ ಕಾರ್ಯಾಚರಣೆ ಮಾಡಬೇಕಿದೆ. ಇಲ್ಲದಿದ್ದರೆ ರೋಡ್ಗೆ ಬಂದ ಚಿರತೆ ಮನೆ ಅಂಗಳಕ್ಕೆ ಬಂದಿದೆ.ಇನ್ನು ಮನೆಯೊಳಗೆ ಬಂದರೂ ಅಚ್ಚರಿಯಿಲ್ಲ.

ನೋಡಿರಿ

