ಗೆಲ್ಲೀವಿ ಅಂತಾ ಜಂಭ ಕೊಚ್ಚಿಕೊಂಡರೂ ಗೆದ್ದೇ ಬಿಟ್ಟ ಪಾಕ್ ಕ್ಯಾಪ್ಟನ್- 22 ವರ್ಷಗಳ ನಂತರ ಪಾಕಿಸ್ತಾನಕ್ಕೆ ಗೆಲುವು
ಪಾಕ್ಗೆ ಐತಿಹಾಸಿಕ ಗೆಲುವು – ಆಸ್ಟ್ರೇಲಿಯಾಕ್ಕೆ ತವರಲ್ಲೇ ಮುಖಭಂಗ

ಗೆಲ್ಲೀವಿ ಅಂತಾ ಜಂಭ ಕೊಚ್ಚಿಕೊಂಡರೂ ಗೆದ್ದೇ ಬಿಟ್ಟ ಪಾಕ್ ಕ್ಯಾಪ್ಟನ್- 22 ವರ್ಷಗಳ ನಂತರ ಪಾಕಿಸ್ತಾನಕ್ಕೆ ಗೆಲುವುಪಾಕ್ಗೆ ಐತಿಹಾಸಿಕ ಗೆಲುವು – ಆಸ್ಟ್ರೇಲಿಯಾಕ್ಕೆ ತವರಲ್ಲೇ ಮುಖಭಂಗ

ಪಾಕಿಸ್ತಾನದ ತಂಡದ ನಾಯಕ ಮೊಹಮ್ಮದ್ ರಿಜ್ವಾನ್ ಕೊಟ್ಟ ಮಾತು ಉಳಿಸಿಕೊಂಡಿದ್ದಾರೆ. ಆಸ್ಟ್ರೇಲಿಯಾ ತಂಡವನ್ನ ಅವರದ್ದೇ ನೆಲದಲ್ಲಿ ಸೋಲಿಸುತ್ತೇವೆ ಅಂತಾ ರಿಜ್ವಾನ್ ಹೇಳಿಕೊಂಡಿದ್ದರು. ಕೊನೆಗೂ 22 ವರ್ಷಗಳ ನಂತರ ಪಾಕ್ ಫ್ಯಾನ್ಸ್‌ಗೆ ಖುಷಿ ಕೊಟ್ಟಿದ್ದಾರೆ. ಪಾಕಿಸ್ತಾನ ತಂಡವು ಆಸ್ಟ್ರೇಲಿಯಾದಲ್ಲಿ ಮೂರು ಪಂದ್ಯಗಳ ಏಕದಿನ ಸರಣಿಯನ್ನು 2-1 ಅಂತರದಲ್ಲಿ ಗೆದ್ದು ಐತಿಹಾಸಿಕ ಗೆಲುವು ಸಾಧಿಸಿದೆ.

ಇದನ್ನೂ ಓದಿ: ಮುಂಬೈಗೆ ಮತ್ತೆ ಪಾಂಡ್ಯ ಕ್ಯಾಪ್ಟನ್ – ರೋಹಿತ್, ಸೂರ್ಯ, ಬುಮ್ರಾ ಒಪ್ಪಿದ್ರಾ?

ಮೊಹಮ್ಮದ್ ರಿಜ್ವಾನ್ ನಾಯಕತ್ವದಲ್ಲಿ ಅದ್ಭುತ ಪ್ರದರ್ಶನ ನೀಡಿದ ಪಾಕಿಸ್ತಾನ, ಆಸ್ಟ್ರೇಲಿಯಾ ತಂಡವನ್ನು ಅದರ ತವರು ನೆಲದಲ್ಲಿಯೇ ಸೋಲಿಸಿದೆ. ಇತ್ತ ಆಸ್ಟ್ರೇಲಿಯಾ ಈ ಸರಣಿ ಸೋಲಿನೊಂದಿಗೆ ಅನೇಕ ಅವಮಾನಕರ ದಾಖಲೆಗಳಿಗೆ ಕೊರಳ್ಳೊಡಿದೆ. ಆಸ್ಟ್ರೇಲಿಯಾದ ಏಕದಿನ ಕ್ರಿಕೆಟ್‌ನ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ತಂಡದ ಯಾವುದೇ ಬ್ಯಾಟ್ಸ್‌ಮನ್‌ಗಳು ಈ ಸರಣಿಯಲ್ಲಿ 50 ಅಥವಾ ಅದಕ್ಕಿಂತ ಹೆಚ್ಚು ರನ್ ಗಳಿಸಲು ಸಾಧ್ಯವಾಗಲಿಲ್ಲ. ಪಾಕಿಸ್ತಾನ ವಿರುದ್ಧದ ಈ ಮೂರು ಪಂದ್ಯಗಳ ಸರಣಿಯಲ್ಲಿ ಆಸ್ಟ್ರೇಲಿಯದ ಯಾವೊಬ್ಬ ಬ್ಯಾಟ್ಸ್‌ಮನ್ ಕೂಡ ಅರ್ಧಶತಕ ಬಾರಿಸಲಿಲ್ಲ.

22 ವರ್ಷಗಳ ಬಳಿಕ ಆಸ್ಟ್ರೇಲಿಯಾದಲ್ಲಿ ಸರಣಿ ಗೆಲ್ಲುವಲ್ಲಿ ಪಾಕಿಸ್ತಾನ್ ತಂಡ ಯಶಸ್ವಿಯಾಗಿದೆ. ಇದಕ್ಕೂ ಮುನ್ನ 2002 ರಲ್ಲಿ ವಾಕರ್ ಯೂನಿಸ್ ನೇತೃತ್ವದ ಪಾಕ್ ಪಡೆ ಆಸ್ಟ್ರೇಲಿಯಾ ವಿರುದ್ಧ 2-1 ಅಂತರದಿಂದ ಏಕದಿನ ಸರಣಿ ಗೆದ್ದುಕೊಂಡಿತ್ತು. ಇದಾದ ಬಳಿಕ ಒಮ್ಮೆಯೂ ಪಾಕಿಸ್ತಾನ್ ತಂಡ ಆಸ್ಟ್ರೇಲಿಯಾದಲ್ಲಿ ಸರಣಿ ಜಯಿಸಿರಲಿಲ್ಲ. ಇದೀಗ ಇತಿಹಾಸ ಪುನರಾವರ್ತಿಸುವಲ್ಲಿ ಮೊಹಮ್ಮದ್ ರಿಝ್ವಾನ್ ಪಡೆ ಯಶಸ್ವಿಯಾಗಿದೆ.

ಇನ್ನು ಪಾಕ್ ಟೀಮ್ ಗೆಲ್ಲುತ್ತಿದ್ದಂತೆ ಟೀಮ್ ಇಂಡಿಯಾದ ಬ್ಯಾಟ್ಸಮನ್‌ಗಳು ಟ್ರೆಂಡಿಂಗ್‌ನಲ್ಲಿದ್ದಾರೆ. ಯಾಕೆಂದ್ರೆ, ಪಾಕ್ ಟೀಮ್ ನ ಬೌಲರ್‌ಗಳು ಲಯ ಕಳೆದುಕೊಂಡಿದ್ದೇ ಟೀಮ್ ಇಂಡಿಯಾದ  ಭರ್ಜರಿ ಬ್ಯಾಟಿಂಗ್‌ನಿಂದಾಗಿ. ಏಷ್ಯಾಕಪ್​ನ ಸೂಪರ್ ಫೋರ್​ ಹಂತದ 3ನೇ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಟಾಸ್ ಗೆದ್ದ ಪಾಕಿಸ್ತಾನ್ ತಂಡದ ನಾಯಕ ಬಲಿಷ್ಠ ಬೌಲಿಂಗ್ ಲೈನಪ್ ಅನ್ನು ನಂಬಿ ಫೀಲ್ಡಿಂಗ್ ಆಯ್ದುಕೊಂಡಿದ್ದರು. ಆದರೆ ಈ ನಂಬಿಕೆಯನ್ನು ಟೀಮ್ ಇಂಡಿಯಾ ಬ್ಯಾಟರ್​ಗಳು ನುಚ್ಚುನೂರು ಮಾಡಿದ್ದರು. ಆಗ ಬೆಂಡಾದ ಬೌಲರ್‌ಗಳು ಕಡೆಗೂ ಫಾರ್ಮ್‌ಗೆ ಬರಲು ಇಷ್ಟು ಸಮಯ ಬೇಕಾಯ್ತು.

ಆಸ್ಟ್ರೇಲಿಯಾ ವಿರುದ್ಧದ ಮೂರನೇ ಪಂದ್ಯವನ್ನು 8 ವಿಕೆಟ್‌ಗಳಿಂದ ಗೆದ್ದುಕೊಂಡ ಬಳಿಕ ಮಾತನಾಡಿದ ರಿಜ್ವಾನ್, ತಮ್ಮ ಆಟಗಾರರ ಗುಣಗಾನ ಮಾಡಿದ್ದಾರೆ. ಕಳೆದ ಕೆಲವು ವರ್ಷಗಳಿಂದ ನಮ್ಮ ತಂಡಕ್ಕೆ ನಿರೀಕ್ಷಿತ ಪ್ರದರ್ಶನ ನೀಡಲು ಸಾಧ್ಯವಾಗಿಲ್ಲ. ಆದರೆ ಇದೀಗ ತಂಡ ಉತ್ತಮ ಪ್ರದರ್ಶನ ನೀಡುತ್ತಿದೆ. ನಾನು ನೂತನ ನಾಯಕನಾಗಿದ್ದರೂ, ನಾನು ಟಾಸ್ ಮತ್ತು ಪ್ರೆಸೆಂಟೇಷನ್​ಗೆ ಮಾತ್ರ ನಾಯಕ. ಉಳಿದಂತೆ ಪ್ರತಿಯೊಬ್ಬ ಆಟಗಾರನೂ ನನಗೆ ಫೀಲ್ಡಿಂಗ್, ಬ್ಯಾಟಿಂಗ್ ಮತ್ತು ಬೌಲಿಂಗ್‌ ಬಗ್ಗೆ ಸಲಹೆ ನೀಡುತ್ತಾರೆ. ಈ ಗೆಲುವಿನ ಶ್ರೇಯ ಪಾಕಿಸ್ತಾನದ ಬೌಲರ್‌ಗಳಿಗೆ ಸಲ್ಲುತ್ತದೆ ಎಂದಿದ್ದಾರೆ.

 

suddiyaana