ಗಾಬಾ ಟೆಸ್ಟ್ ಡ್ರಾ.. ಯಾರಿಗೆ ಪ್ಲಸ್? – WTC ಫೈನಲ್ ಟಿಕೆಟ್ ಬಿಗ್ ಟ್ವಿಸ್ಟ್
ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿಯ ಮೂರನೇ ಮ್ಯಾಚ್ ರೋಚಕ ರೀತಿಯಲ್ಲಿ ಡ್ರಾ ಆಗಿದೆ. ಟಾಸ್ ಸೋತು ಬ್ಯಾಟಿಂಗ್ಗೆ ಇಳ್ದಿದ್ದ ಆಸ್ಟ್ರೇಲಿಯಾ ಬ್ಯಾಟಿಂಗ್ನಲ್ಲಿ ಅಬ್ಬರಿಸಿ ಬೌಲಿಂಗ್ನಲ್ಲೂ ಟೀಂ ಇಂಡಿಯಾವನ್ನ ಬೆಂಡೆತ್ತಿತ್ತು. ಬೃಹತ್ ಟಾರ್ಗೆಟ್ ನೀಡಿ ಫಾಲೋ ಆನ್ ರೂಲ್ಸ್ ಹೇರಿ ಪಂದ್ಯ ಗೆಲ್ಲೋ ಲೆಕ್ಕಾಚಾರ ಹಾಕಿಕೊಂಡಿತ್ತು. ಆಸಿಸ್ ಪಡೆಗೆ ಹೊಡೆತ ನೀಡಿದ್ದೇ ಜಸ್ಪ್ರೀತ್ ಬುಮ್ರಾ ಮತ್ತು ಆಕಾಶ್ ದೀಪ್ ಬ್ಯಾಟಿಂಗ್. ಇವ್ರಿಬ್ಬರ ಬ್ಯಾಟಿಂಗ್ ಇಡೀ ಪಂದ್ಯದ ಲೆಕ್ಕಾಚಾರವನ್ನೇ ಬುಡಮೇಲು ಮಾಡಿದೆ. ಅಂದುಕೊಂಡಂತೆಯೇ ಕೊನೆಗೂ ಮ್ಯಾಚ್ ಡ್ರಾನಲ್ಲಿ ಅಂತ್ಯ ಕಂಡಿದೆ.
ಇದನ್ನೂ ಓದಿ: ಸ್ಪಿನ್ ಮಾಂತ್ರಿಕ ರವಿಚಂದ್ರನ್ ಅಶ್ವಿನ್ ದಿಢೀರ್ ವಿದಾಯ – ಮಿಸ್ ಯೂ ಲೆಜೆಂಡ್
ಪರ್ತ್ನಲ್ಲಿ ನಡೆದಿದ್ದ ಟೆಸ್ಟ್ ಮ್ಯಾಚ್ನಲ್ಲಿ ಟೀಂ ಇಂಡಿಯಾ 295 ರನ್ಗಳಿಂದ ಭರ್ಜರಿ ಗೆಲುವು ಕಂಡಿತ್ತು. ಬಳಿಕ ಆಡಿಲೇಡ್ನಲ್ಲಿ ನಡೆದ 2ನೇ ಟೆಸ್ಟ್ ಮ್ಯಾಚ್ನಲ್ಲಿ ಆಸ್ಟ್ರೇಲಿಯಾ ತಂಡ 10 ವಿಕೆಟ್ಗಳಿಂದ ಭಾರತವನ್ನ ಸೋಲಿಸಿತ್ತು. ಅಲ್ಲಿಗೆ ಐದು ಪಂದ್ಯಗಳ ಸರಣಿ ಸಮಬಲಗೊಂಡಿತ್ತು. ಬಟ್ 14ನೇ ತಾರೀಕಿನಿಂದ ಗಾಬ್ಬಾ ಮೈದಾನದಲ್ಲಿ ಶುರುವಾಗಿದ್ದ ಮೂರನೇ ಟೆಸ್ಟ್ ಮ್ಯಾಚ್ ಎರಡೂ ಟೀಮ್ಗಳಿಗೆ ಮೋಸ್ಟ್ ಇಂಪಾರ್ಟೆಂಟ್ ಆಗಿತ್ತು. ಈ ಪಂದ್ಯವನ್ನ ಗೆದ್ದವ್ರು ವಿಶ್ವಟೆಸ್ಟ್ ಚಾಂಪಿಯನ್ಶಿಪ್ ಫೈನಲ್ಗೆ ಮತ್ತಷ್ಟು ಹತ್ತಿರವಾಗ್ತಿದ್ರು. ಕ್ಲೈಮ್ಯಾಕ್ಸ್ನಲ್ಲಿ ಬಿಗ್ ಟ್ವಿಸ್ಟ್ ಸಿಕ್ಕಿದ್ದು ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿದೆ. ಮೊದಲ ದಿನವೂ ಕಾಡಿದ್ದ ಮಳೆ ಕೊನೆ ದಿನವೂ ಎಂಟ್ರಿ ಕೊಟ್ಟು ಫಲಿತಾಂಶದ ದಿಕ್ಕನ್ನೇ ಬದಲಿಸಿದೆ.
ಗಾಬ್ಬಾ ಟೆಸ್ಟ್ನಲ್ಲಿ ಟಾಸ್ ಗೆದ್ದಿದ್ದಂತ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ರು. ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ಪರ ಟ್ರಾವಿಸ್ ಹೆಡ್ 152 ಹಾಗೂ ಸ್ಟೀವ್ ಸ್ಮಿತ್ 101 ರನ್ ಸಿಡಿಸುವ ಮೂಲಕ ಅಬ್ಬರಿಸಿದ್ರು. ಈ ಮೂಲಕ ಮೊದಲ ಇನಿಂಗ್ಸ್ನಲ್ಲಿ 445 ರನ್ ಗಳಿಸಿ ಆಸ್ಟ್ರೇಲಿಯಾ ಆಲೌಟ್ ಆಗಿತ್ತು. ಟೀಮ್ ಇಂಡಿಯಾ ಪರ ಮೊದಲ ಇನಿಂಗ್ಸ್ನಲ್ಲಿ 6 ವಿಕೆಟ್ ಕಬಳಿಸಿ ಜಸ್ಪ್ರೀತ್ ಬುಮ್ರಾ ಹೀರೋ ಆಗಿದ್ರು. 445 ರನ್ಗಳ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ ಬ್ಯಾಟಿಂಗ್ನಲ್ಲಿ ಕಂಪ್ಲೀಟ್ ಫೇಲ್ಯೂರ್ ಆಗಿತ್ತು. ಮೊದಲ ಇನಿಂಗ್ಸ್ನಲ್ಲಿ ಟೀಮ್ ಇಂಡಿಯಾ ಪರ ಕೆಎಲ್ ರಾಹುಲ್ 84 ರನ್ ಸಿಡಿಸಿದ್ರೆ ರವೀಂದ್ರ ಜಡೇಜಾ 77 ರನ್ ಗಳಿಸಿ ಭಾರತದ ಮಾನ ಕಾಪಾಡಿದ್ರು. ಅದ್ರಲ್ಲೂ ಟೀಂ ಇಂಡಿಯಾದ ಸೋಲು ತಪ್ಪಿಸಿದ್ದೇ ಜಸ್ಪ್ರೀತ್ ಬುಮ್ರಾ ಮತ್ತು ಆಕಾಶ್ ದೀಪ್. 10ನೇ ವಿಕೆಟ್ಗೆ ಜೊತೆಯಾದ ಇವ್ರಿಬ್ರು 47 ರನ್ಗಳ ಜೊತೆಯಾಟವಾಡಿ ಫಾಲೋಆನ್ ತಪ್ಪಿಸಿದ್ರು. ಅದ್ರಲ್ಲೂ ಆಕಾಶ್ ದೀಪ್ 31 ರನ್ಗಳನ್ನ ಸಿಡಿಸಿ ಹೀರೋ ಆಗಿದ್ರು. ಈ ಮೂಲಕ ಮೊದಲ ಇನಿಂಗ್ಸ್ನಲ್ಲಿ 260 ರನ್ಗಳಿಸಿ ಟೀಮ್ ಇಂಡಿಯಾ ಆಲೌಟ್ ಆಯ್ತು. ಇನ್ನು ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ್ದ ಆಸ್ಟ್ರೇಲಿಯಾ 7 ವಿಕೆಟ್ ನಷ್ಟಕ್ಕೆ 89 ರನ್ಗಳಿಸಿ ಪಂದ್ಯವನ್ನ ಡಿಕ್ಲೇರ್ ಮಾಡಿಕೊಳ್ತು. ಮೊದಲ ಇನಿಂಗ್ಸ್ ಹಿನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ನಲ್ಲಿ ಕಣಕ್ಕಿಳಿದ ಭಾರತಕ್ಕೆ 275 ರನ್ಗಳ ಗುರಿ ಇತ್ತು. ಟೀಂ ಇಂಡಿಯಾ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ್ದು ಕೆಎಲ್ ರಾಹುಲ್ ಮತ್ತು ಯಶಸ್ವಿ ಜೈಸ್ವಾಲ್ ಬ್ಯಾಟಿಂಗ್ ಶುರು ಮಾಡಿದ್ರು. ಜೈಸ್ವಾಲ್ ಮತ್ತು ಕೆಎಲ್ 8 ರನ್ ಕಲೆ ಹಾಕಿದ್ರು. ಅಷ್ಟ್ರಲ್ಲಿ ಮಳೆ ಎಂಟ್ರಿ ಕೊಟ್ಟಿದ್ದು ಐದನೇ ದಿನದಾಟವನ್ನು ಅಂಪೈರ್ ರದ್ದುಗೊಳಿಸಿದ್ರು. ಈ ಮೂಲಕ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರನೇ ಟೆಸ್ಟ್ ಪಂದ್ಯ ಡ್ರಾನಲ್ಲಿ ಅಂತ್ಯವಾಯ್ತು.
ಮಳೆಯ ಅಡ್ಡಿ ನಡುವೆ ಕೊನೆಯ ದಿನದಾಟದಲ್ಲಿ ಇನ್ನೂ 50 ಓವರ್ ಬಾಕಿ ಇರುವಂತೆಯೇ ಉಭಯ ತಂಡಗಳ ನಾಯಕರ ಸಮ್ಮತಿಯಿಂದಾಗಿ ಗಾಬಾ ಟೆಸ್ಟ್ ಪಂದ್ಯವು ಡ್ರಾನಲ್ಲಿ ಮುಗಿಯಿತು.