ಗಂಭೀರ್ ಪಡೆಗೆ ಗವಾಸ್ಕರ್ ವಾರ್ನಿಂಗ್ SRHಗೆ ಜಿತೇಶ್.. RCBಗೆ ಇಶಾನ್?
ಔಟ್ ಆದ್ರೂ ಸ್ಟೀವ್ ಸ್ಮಿತ್ ಮೋಸ!

ಗಂಭೀರ್ ಪಡೆಗೆ ಗವಾಸ್ಕರ್ ವಾರ್ನಿಂಗ್  SRHಗೆ ಜಿತೇಶ್.. RCBಗೆ ಇಶಾನ್?ಔಟ್ ಆದ್ರೂ ಸ್ಟೀವ್ ಸ್ಮಿತ್ ಮೋಸ!

ಕ್ರಿಕೆಟ್ ಲೋಕದ ಇಂಟ್ರೆಸ್ಟಿಂಗ್ ಸುದ್ದಿಗಳು

ಟೀಂ ಇಂಡಿಯಾ ಆಟಗಾರರು ಟೆಸ್ಟ್‌ನಲ್ಲಿ ಯಾಕೆ ಫೆಲ್ಯೂರ್ ಆಗುತ್ತಿದ್ದಾರೆ ಅಂತ ಕಪಿಲ್‌ ದೇವ್‌ ಹೇಳಿದ್ದಾರೆ. ಭಾರತ ತಂಡ ಇತ್ತೀಚೆಗೆ ಸ್ಪಿನ್‌ ಬೌಲಿಂಗ್‌ ಎದುರು ಉತ್ತಮ ಪ್ರದರ್ಶನವನ್ನು ತೋರಲು ಸಾಧ್ಯವಾಗುತ್ತಿಲ್ಲ, ಏಕೆಂದರೆ, ಟೀಮ್‌ ಇಂಡಿಯಾ ಆಟಗಾರರು ಇತ್ತೀಚೆಗೆ ಸಾಕಷ್ಟು ಟಿ20 ಹಾಗೂ ಏಕದಿನ ಕ್ರಿಕೆಟ್‌ ಅನ್ನು ಆಡುತ್ತಿದ್ದಾರೆ. ಟೆಸ್ಟ್‌ ಕ್ರಿಕೆಟ್‌ ವಿಭಿನ್ನ ಚೆಂಡಿನ ಪಂದ್ಯವಾಗಿದೆ, ಶ್ರೀಲಂಕಾ ವಿರುದ್ಧಧ ಟೆಸ್ಟ್‌ ಸರಣಿಯಲ್ಲಿ ಭಾರತ ಉತ್ತಮ ಪ್ರದರ್ಶನವನ್ನು ತೋರಬಹುದೆಂದು ನಾನು ಭಾವಿಸುತ್ತೇನೆ ಎಂದಿದ್ದಾರೆ.

ಇದನ್ನೂ ಓದಿ: INDO-PAK ಪಂದ್ಯಕ್ಕೆ ಬ್ರೇಕ್ – FINAL ಟಿಕೆಟ್ ಪಡೆದ್ರಷ್ಟೇ ಚಾನ್ಸ್

ಭಾರತ ಮತ್ತು ಶ್ರೀಲಂಕಾ ಸರಣಿ ಆರಂಭಕ್ಕೂ ಮೊದಲು ಕೋಚ್ ಗೌತಮ್ ಗಂಭೀರ್ ಹಾಗೂ ತಂಡದ ಆಡಳಿತ ಮಂಡಳಿಗೆ  ಸುನಿಲ್ ಗಾವಾಸ್ಕರ್ ಎಚ್ಚರಿಕೆ ನೀಡಿದ್ದಾರೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್  ಫೈನಲ್ ರೇಸ್‌ನಲ್ಲಿ ಮುನ್ನಡೆಯಲು ಮುಂಬರುವ ಪಂದ್ಯಗಳು ಅತ್ಯಂತ ನಿರ್ಣಾಯಕವಾಗಿದ್ದು, ಭಾರತೀಯ ಕ್ರಿಕೆಟ್‌ನಲ್ಲಿ ‘ಸೂಪರ್‌ಸ್ಟಾರ್ ಸಂಸ್ಕೃತಿಗಿಂತ ತಂಡದ ಸಾಮೂಹಿಕ ಪ್ರದರ್ಶನ ಮುಖ್ಯ ಎಂದು ಗಾವಾಸ್ಕರ್ ನೆನಪಿಸಿದ್ದಾರೆ.

ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಮುಂಬರುವ ಟಿ20 ಸರಣಿಯಲ್ಲಿ ಚಿಕ್ಕ ಬದಲಾವಣೆ ಮಾಡುವಂತೆ ಬಿಸಿಸಿಐ ಬಳಿ ಅಫ್ಘಾನ್ ಮನವಿ ಮಾಡಿದೆ.  ಸೆಪ್ಟೆಂಬರ್ 13 ಅಥವಾ 15 ರಂದು ನಡೆಯಬೇಕಿರುವ ಪಂದ್ಯವನ್ನು ಸೆಪ್ಟೆಂಬರ್ 14ರ ಸೋಮವಾರದಂದು ನಡೆಸಬೇಕೆಂದು ಬಿಸಿಸಿಐ ಬಳಿ ಮನವಿ ಮಾಡಿದೆ. ಸೆಪ್ಟೆಂಬರ್ 14ರಂದು  ಗಣೇಶ ಚತುರ್ಥಿ ರಜೆ ಇರುವುದ್ದರಿಂದ, ಹೆಚ್ಚಿನ ಸಂಖ್ಯೆಯಲ್ಲಿ ಫ್ಯಾನ್ಸ್ ಬರಲಿದ್ದಾರೆ ಅನ್ನೋದು ಅಫ್ಘಾನ್ ಪ್ಲ್ಯಾನ್.

ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್‌ನ ಪ್ರಸ್ತುತ ಮುಖ್ಯಸ್ಥರಾಗಿರುವ ವಿವಿಎಸ್ ಲಕ್ಷ್ಮಣ್, ಭಾರತೀಯ ಕ್ರಿಕೆಟ್‌ನಲ್ಲಿ ಹೆಚ್ಚಿನ ಜವಾಬ್ದಾರಿಯನ್ನು ವಹಿಸಿಕೊಳ್ಳುವ ಸಾಧ್ಯತೆಯಿದೆ.  ಸೆಪ್ಟೆಂಬರ್‌ನಲ್ಲಿ ಹಿರಿಯ ಆಯ್ಕೆ ಸಮಿತಿಯ ಅಧ್ಯಕ್ಷರಾಗಿ ಅಜಿತ್ ಅಗರ್ಕರ್ ಅವರ ಅಧಿಕಾರಾವಧಿ ಕೊನೆಗೊಳ್ಳಲಿದ್ದು, ರಾಷ್ಟ್ರೀಯ ತಂಡದ ತರಬೇತಿ ವ್ಯವಸ್ಥೆಯೂ ಪರಿಶೀಲನೆಯಲ್ಲಿದೆ. ಮಂಡಳಿಯು ಕೆಲವು ಮಹತ್ವದ ಬದಲಾವಣೆಗಳನ್ನು ಮಾಡುವ ಸಾಧ್ಯತೆಯಿದ್ದು, ವಿವಿಎಸ್ ಲಕ್ಷ್ಮಣ್ ಅವರಿಗೆ ಕ್ರಿಕೆಟ್ ನಿರ್ದೇಶಕರ ಹುದ್ದೆಯನ್ನು ನೀಡುವ ಸಾಧ್ಯತೆಯಿದೆ ಎನ್ನಲಾಗಿದೆ.

ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತ ತಂಡ ಹಿನ್ನಡೆ ಅನುಭವಿಸಿದಾಗಲೆಲ್ಲಾ ಮುಖ್ಯ ತರಬೇತುದಾರ ಗೌತಮ್ ಗಂಭೀರ್ ವಿರುದ್ಧ ಕೇಳಿಬರುತ್ತಿರುವ ಟೀಕೆಗಳಿಗೆ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಂಡ ಸೋತಾಗ ಕೋಚ್ ಅನ್ನು ಹೊಣೆ ಮಾಡುವುದು ಸರಿಯಲ್ಲ ಎಂದಿರುವ ಅವರು, ಗಂಭೀರ್ ಸದಾ ತಂಡಕ್ಕೆ ಮೊದಲ ಆದ್ಯತೆ ನೀಡುವ ದೇಶಪ್ರೇಮಿ ಆಟಗಾರ ಎಂದು ಸಮರ್ಥಿಸಿಕೊಂಡಿದ್ದಾರೆ.

ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಉತ್ತಮ ಪ್ರದರ್ಶನ ನೀಡುವುದರ ಜೊತೆಗೆ ತಮ್ಮ ಫಿಟ್‌ನೆಸ್ ಕಾಪಾಡಿಕೊಂಡರೆ 2027ರ ಏಕದಿನ ವಿಶ್ವಕಪ್‌ ಟೂರ್ನಿಗೆ ಇವರಿಬ್ಬರನ್ನೂ ಆಯ್ಕೆಗೆ ಪರಿಗಣಿಸಬೇಕು ಎಂದು ಸ್ಪಿನ್‌ ದಿಗ್ಗಜ ಹರ್ಭಜನ್‌ ಸಿಂಗ್‌ ಅಭಿಪ್ರಾಯ ವ್ಯಕ್ತಪಟ್ಟಿದ್ದಾರೆ. ಲಿಯೊನೆಲ್ ಮೆಸ್ಸಿ ಇತ್ತೀಚಿನ ವಿಶ್ವಕಪ್‌ ಟೂರ್ನಿಯಲ್ಲಿ ತೋರಿದ ಪ್ರದರ್ಶನವನ್ನು ಉದಾಹರಣೆಯಾಗಿ ನೀಡಿದ ಹರ್ಭಜನ್, ಆಟಗಾರರ ವಯಸ್ಸು ಆಯ್ಕೆಗೆ ನಿರ್ಣಾಯಕ ಮಾನದಂಡವಾಗಬಾರದು ಎಂದು ಹೇಳಿದ್ದಾರೆ.

ಐಪಿಎಲ್ 2027 ಗಾಗಿ ಸನ್‌ರೈಸರ್ಸ್ ಹೈದರಾಬಾದ್   ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು   ನಡುವೆ ಬಹುದೊಡ್ಡ ಆಟಗಾರ ವಿನಿಮಯ ನಡೆಯುವ ಸಾಧ್ಯತೆಯಿದೆ ಎನ್ನಲಾಗ್ತಿದೆ. SRH ಭಾರತೀಯ ಫಿನಿಷರ್ ಜಿತೇಶ್ ಶರ್ಮಾ ಮೇಲೆ ಕಣ್ಣಿಟ್ಟಿದ್ದು, RCB ಪ್ರತಿಯಾಗಿ ಇಶಾನ್ ಕಿಶನ್‌ಗೆ ಬೇಡಿಕೆಯಿಟ್ಟಿದೆ ಎನ್ನಲಾಗ್ತಿದೆ.  ಆದ್ರೆ ಇಶಾನ್ ಕಿಶನ್ ಭವಿಷ್ಯದ ನಾಯಕನಾಗುವ ಸಾಧ್ಯತೆಗಳಿರುವುದರಿಂದ SRHಗೆ ಈ ನಿರ್ಧಾರ ಕಷ್ಟಕರವಾಗಿದೆ.

ಆಸ್ಟ್ರೇಲಿಯಾ-ಬಾಂಗ್ಲಾದೇಶ ಟೆಸ್ಟ್‌ನಲ್ಲಿ ಸ್ಟೀವ್ ಸ್ಮಿತ್ ಔಟಾಗಿದ್ದರೂ ತಂತ್ರಜ್ಞಾನದ ಲೋಪದಿಂದ ನಾಟೌಟ್ ಆಗಿ ಬ್ಯಾಟಿಂಗ್ ಮುಂದುವರಿಸಿದ ಘಟನೆ ವಿವಾದ ಸೃಷ್ಟಿಸಿದೆ. ಚೆಂಡು ಬ್ಯಾಟ್‌ಗೆ ತಾಗಿರುವುದು ಗೊತ್ತಿದ್ದರೂ   ಸ್ಮಿತ್ ಪೆವಿಲಿಯನ್‌ಗೆ ತೆರಳಲಿಲ್ಲ. ಔಟ್ ಆಗಿದ್ದು ಗೊತ್ತಾಯ್ತು ಅಂತ ಸ್ವೀವ್  ಸ್ಮಿತ್ ಪತ್ರಿಕಾಗೋಷ್ಠಿಯಲ್ಲಿ ಒಪ್ಪಿಕೊಂಡಿದ್ದು, ಅವರ ಕ್ರೀಡಾ ಸ್ಫೂರ್ತಿಯ ಬಗ್ಗೆ ಗಂಭೀರ ಪ್ರಶ್ನೆಗಳು ಎದ್ದಿವೆ.

23 ವರ್ಷಗಳ ನಂತರ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡ ಬಾಂಗ್ಲಾದೇಶ, ಮೊದಲ ಟೆಸ್ಟ್‌ನ ಮೊದಲ ದಿನವೇ ಆತಿಥೇಯರನ್ನು ಬೆಚ್ಚಿಬೀಳಿಸಿದೆ.  ಬಾಂಗ್ಲಾ ಬೌಲರ್ ಹಸನ್ ಮಹಮೂದ್ ಮೊದಲ ಇನ್ನಿಂಗ್ಸ್​ನಲ್ಲಿ 17 ಓವರ್​ಗಳನ್ನು ಬೌಲ್ ಮಾಡಿ 55 ರನ್ ನೀಡಿ 6 ವಿಕೆಟ್ ಕಬಳಿಸಿದರು. 3.20 ರ ಎಕಾನಮಿ ದರದಲ್ಲಿ ರನ್ ಬಿಟ್ಟುಕೊಟ್ಟ ಹಸನ್ ಮಹಮೂದ್, ಜೇಕ್ ವೆದರೋಲ್ಡ್, ಟ್ರಾವಿಸ್ ಹೆಡ್, ಸ್ಟೀವ್ ಸ್ಮಿತ್, ಪ್ಯಾಟ್ ಕಮ್ಮಿನ್ಸ್, ನಾಥನ್ ಲಿಯಾನ್ ಅವರ ವಿಕೆಟ್​ಗಳನ್ನು ಕಬಳಿಸಿದರು. ಆಸೀಸ್ 198ಗೆ ಆಲೌಟ್ ಆಗಿದೆ.

2026ರ ದಿ ಹಂಡ್ರೆಡ್ ಲೀಗ್ ಪ್ಲೇಆಫ್‌ ಸುತ್ತು ಸಮೀಪಿಸುತ್ತಿದ್ದು, ಅರ್ಹತಾ ತಂಡಗಳ ಪಟ್ಟಿ ಅಂತಿಮಗೊಂಡಿದೆ. ಟ್ರೆಂಟ್ ರಾಕೆಟ್ಸ್ ನೇರವಾಗಿ ಫೈನಲ್‌ಗೆ ಪ್ರವೇಶಿಸಿದೆ. ಎಂಐ ಲಂಡನ್ ತನ್ನ ಅಂತಿಮ ಪಂದ್ಯ ಗೆದ್ದರೂ, ಪ್ಲೇಆಫ್‌ ರೇಸ್‌ನಿಂದ ಹೊರಬಿದ್ದಿದೆ. ಸನ್‌ರೈಸರ್ಸ್ ಲೀಡ್ಸ್ ಮತ್ತು ಮ್ಯಾಂಚೆಸ್ಟರ್ ಸೂಪರ್ ಜೈಂಟ್ಸ್ ಎಲಿಮಿನೇಟರ್‌ನಲ್ಲಿ ಇಂದು ಸೆಣಸಡಲಾಲಿದ್ದು, ಗೆದ್ದ ತಂಡ ಆಗಸ್ಟ್ 16 ರಂದು  ಫೈನಲ್‌ನಲ್ಲಿ ಟ್ರೆಂಟ್ ರಾಕೆಟ್ಸ್ ತಂಡವನ್ನು ಎದುರಿಸಲಿದ್ದಾರೆ.

Kishor KV

Leave a Reply

Your email address will not be published. Required fields are marked *