ಕೊಹ್ಲಿ ಸೇಫ್.. ರೋಹಿತ್ ಗೆ ಟೆನ್ಷನ್! HITಮ್ಯಾನ್ ಗೆ 6 ತಿಂಗಳ ಡೆಡ್ ಲೈನ್
2027ರ ವಿಶ್ವಕಪ್ ಗೆ ಮೇಜರ್ ಸರ್ಜರಿ?

ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಏಕದಿನ ಮಾದರಿ ಪಂದ್ಯಗಳನ್ನ ಆಡ್ತಾ ಇರೋದೇ 2027ರ ಏಕದಿನ ವಿಶ್ವಕಪ್ ಗೆಲ್ಬೇಕು ಅಂತಾ. ಆದ್ರೆ ಬಿಸಿಸಿಐ ಆಯ್ಕೆ ಸಮಿತಿಯಲ್ಲಿ ಕೆಲವ್ರಿಗೆ ಈ ಇಬ್ಬರು ಆಡ್ಲಿ ಅನ್ನೋದಿದ್ರೆ ಇನ್ನೊಂದಷ್ಟು ಮಂದಿ ಹೊಸಬರಿಗೆ ಚಾನ್ಸ್ ಕೊಡೋಣ ಅನ್ಕೋಳ್ತಿದ್ದಾರೆ. ಸ್ಟಿಲ್ ಈವರೆಗೂ ಕನ್ಫ್ಯೂಷನ್ ಅಂತೂ ಇದ್ದೇ ಇದೆ. ಆದ್ರೆ ವಿಚಾರ ಏನಂದ್ರೆ ವಿರಾಟ್ ಕೊಹ್ಲಿ ಹಾದಿಯೇನೋ ಸೇಫ್ ಇದೆ. ಆದ್ರೆ ರೋಹಿತ್ ಶರ್ಮಾ ವಿಚಾರದಲ್ಲೇ ಕೆಲ ಕನ್ಫ್ಯೂಷನ್ಸ್ ಕ್ರಿಯೇಟ್ ಆಗಿದೆ.
ಇದನ್ನೂ ಓದಿ: ಫಿಫಾ ವಿಶ್ವಕಪ್ನಲ್ಲಿ 68 ವರ್ಷಗಳ ಬಳಿಕ ಇತಿಹಾಸ – ಒಂದೇ ದಿನ ನಾಲ್ಕು ಪಂದ್ಯ ಡ್ರಾ
ಅಫ್ಘಾನಿಸ್ತಾನ ವಿರುದ್ಧದ ಏಕದಿನ ಸರಣಿ ಆಡ್ತಾ ಇರುವಂಥ ಭಾರತ ಈಗಾಗ್ಲೇ ಫಸ್ಟ್ ಮ್ಯಾಚ್ ವಿನ್ ಆಗಿದೆ. ಬುಧವಾರ ಸರಣಿಯ 2ನೇ ಪಂದ್ಯ ಲಕ್ನೋದ ಏಕನಾ ಸ್ಟೇಡಿಯಮ್ನಲ್ಲಿ ನಡೆಯಲಿದೆ. ಭಾರತಕ್ಕೆ ಈ ಸರಣಿ ಸೇರಿದಂತೆ ಇನ್ಮುಂದಿನ ಪ್ರತೀ ಏಕದಿನ ಪಂದ್ಯ ಕೂಡ ತುಂಬಾನೇ ಮುಖ್ಯ. ಯಾಕಂದ್ರೆ ಟೀಂ ಇಂಡಿಯಾದ ಟಾರ್ಗೆಟ್ ಇರೋದೇ 2027ರ ಏಕದಿನ ವಿಶ್ವಕಪ್ ಗೆಲ್ಬೇಕು ಅನ್ನೋದು. ಐಸಿಸಿ ಟೂರ್ನಿಗಳಲ್ಲೇ ಪ್ರತಿಷ್ಠಿತ ಟೂರ್ನಿ ಅಂದ್ರೆ ಅದು ಓಡಿಐ ವಿಶ್ವಕಪ್. ಈ ಕಪ್ ಗೆಲ್ಲೋಕೆ ಭಾರತ ಬಲಿಷ್ಠ ತಂಡವನ್ನೇ ರೆಡಿ ಮಾಡ್ತಿದೆ. ಶುಭ್ಮನ್ ಗಿಲ್ ಕ್ಯಾಪ್ಟನ್ಸಿಯಲ್ಲಿ ಯಾವುದೇ ಬದಲಾವಣೆ ಇಲ್ಲದೇ ಇದ್ರೂ ತಂಡದಲ್ಲಿ ಬದಲಾವಣೆ ಆಗೋ ಸಾಧ್ಯತೆಗಳಂತೂ ಇದ್ದೇ ಇದೆ.
ಕೊಹ್ಲಿ ಫಾರ್ಮ್ ಸೂಪರ್.. ರೋಹಿತ್?
ಪ್ರಸ್ತುತ ಬಿಸಿಸಿಐ ಆಯ್ಕೆ ಸಮಿತಿಯಲ್ಲಿ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಏಕದಿನ ಭವಿಷ್ಯದ ಕುರಿತು ಭಾರಿ ಚರ್ಚೆಗಳು ನಡೆಯುತ್ತಿದೆ. 2027 ಏಕದಿನ ವಿಶ್ವಕಪ್ ನಡೆಯೋದು ಅಕ್ಬೋಬರ್ ನವೆಂಬರ್ನಲ್ಲಿ. ಸದ್ಯಕ್ಕೆ ರೋಹಿತ್ ಶರ್ಮಾ ವಯಸ್ಸು 39. ಕೊಹ್ಲಿ ವಯಸ್ಸು 37. ಇನ್ನು ಒಂದೂವರೆ ವರ್ಷ ಇಬ್ಬರು ಏಕದಿನ ಪಂದ್ಯಗಳನ್ನ ಆಡಲು ರೆಡಿ ಇರ್ತಾರಾ, ಫಿಟ್ನೆಸ್, ಫಾರ್ಮ್ ಹೀಗೆ ಅವ್ರ ಪ್ರಸೆನ್ಸ್ ಬಗ್ಗೆ ಚರ್ಚೆಯಾಗ್ತಿದೆ. ಬಿಸಿಸಿಐ ಬಿಗ್ ಬಾಸ್ಗಳಿಗೆ ವಿರಾಟ್ ಕೊಹ್ಲಿ ಬಗ್ಗೆ ಜಾಸ್ತಿ ಟೆನ್ಷನ್ ಇಲ್ಲ. ಆದ್ರೆ ವಾಟ್ ಅಬೌಟ್ ಹಿಟ್ಮ್ಯಾನ್ ಅಂತಿದ್ದಾರೆ. ವಿರಾಟ್ ಕೊಹ್ಲಿ ಭಾರತದ ಪರ ಏಕದಿನ ಮಾದರಿ ಹಾಗೇ ಈ ವರ್ಷದ ಐಪಿಎಲ್ನಲ್ಲಿ ಚೆನ್ನಾಗೇ ಸ್ಕೋರ್ ಮಾಡಿದ್ದಾರೆ. ಹೀಗಾಗಿ ಅವ್ರ ಬಗ್ಗೆ ಯಾವುದೇ ಗೊಂದಲ ಇಲ್ಲ. ಆದ್ರೆ ಇತ್ತಿಚಿನ ದಿನಗಳಲ್ಲಿ ಹಿಟ್ಮ್ಯಾನ್ ಫಾರ್ಮ್ ಬಗ್ಗೆ ಕೆಲವರು ಪ್ರಶ್ನೆ ಮಾಡಿದ್ದಾರೆ.
ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಮೊದಲ ಏಕದಿನ ಪಂದ್ಯದಲ್ಲಿ 16 ರನ್ ಗಳಿಸಿ ರೋಹಿತ್ ಶರ್ಮಾ ರನ್ ಔಟ್ ಆದ್ರು. ಹೀಗಿದ್ರೂ ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಆರಂಭಿಕರಾಗಿ 16,000 ರನ್ ಪೂರೈಸಿದ ಭಾರತದ 2ನೇ ಆಟಗಾರ ಎಂಬ ಐತಿಹಾಸಿಕ ಸಾಧನೆ ಮಾಡಿದರು. ಇನ್ನು 2026ರ ಐಪಿಎಲ್ನಲ್ಲೂ ಸಾಕಷ್ಟು ಸ್ಟ್ರಗಲ್ಸ್ ಕಾಣ್ತಿತ್ತು. ಹಾರ್ಮ್ ಸ್ಟ್ರಿಂಗ್ ಇಂಜುರಿಯಿಂದ ಮುಂಬೈ ಪರ ಎಲ್ಲಾ ಪಂದ್ಯಗಳನ್ನ ಆಡೋಕೆ ಸಾಧ್ಯವಾಗ್ಲಿಲ್ಲ. ಹೀಗಾಗಿ ಎಂಐ ಪರ 9 ಪಂದ್ಯಗಳಿಂದ 283 ರನ್ ಗಳಿಸಿದರು. 35.38 ಸರಾಸರಿ ಮತ್ತು 157.22ರ ಸ್ಟ್ರೈಕ್ ರೇಟ್ನಲ್ಲಿ ಬ್ಯಾಟ್ ಬೀಸಿದ್ರು. ಅದೂ ಅಲ್ದೇ ಮುಂಬೈ ಫ್ರಾಂಚೈಸಿ ರೋಹಿತ್ರನ್ನ ಇಂಪ್ಯಾಕ್ಟ್ ಪ್ಲೇಯರ್ ಆಗಿ ಮಾತ್ರ ಆಡಿಸಿದ್ದರಿಂದ ಬ್ಯಾಟಿಂಗ್ಗೆ ಮಾತ್ರ ಸೀಮಿತವಾಗಿದ್ರು. ಫೀಲ್ಡಿಂಗ್ ಮಾಡ್ತಾ ಇರ್ಲಿಲ್ಲ. ಆದ್ರೆ ಏಕದಿನ ಮಾದರಿಯಲ್ಲಿ ಆಡುವಾಗ ಬ್ಯಾಟಿಂಗ್ ಜೊತೆ 50 ಓವರ್ಗಳ ಫೀಲ್ಡಿಂಗ್ ಹೇಗೆ ಮಾಡ್ತಾರೆ ಅನ್ನೋ ಚರ್ಚೆಗಳೂ ನಡೀತಿವೆ. ಸೋ ಯಂಗ್ಸ್ಟರ್ಸ್ಗೆ ಅವಕಾಶ ನೀಡೋಣ ಅಂತಾ ಬಿಸಿಸಿಐ ಮಟ್ಟದಲ್ಲಿ ಕೆಲ ಅಧಿಕಾರಿಗಳು ಆಯ್ಕೆದಾರರಿಗೆ ಸಲಹೆಗಳನ್ನೂ ನೀಡಿದ್ದಾರೆ. ಮಾಜಿ ಕ್ರಿಕೆಟಿಗ ಮತ್ತು ಆಯ್ಕೆದಾರ ಸಬಾ ಕರೀಮ್ ಈ ಬಗ್ಗೆ ಮಾತನಾಡಿದ್ದು ರೋಹಿತ್ ಶರ್ಮಾ ವಿಶ್ವಕಪ್ ಆಡ್ಬೇಕು ಅಂತಾ ತಮ್ಮ ಫಿಟ್ನೆಸ್ ಮತ್ತು ಫಾರ್ಮ್ ಸಾಬೀತು ಪಡಿಸಬೇಕು ಅಂದಿದ್ದಾರೆ. ಹಾಗೇ ರೋಹಿತ್ ಸಾಕಷ್ಟು ಶ್ರಮ ವಹಿಸಬೇಕು. ಮುಂದಿನ ಆರು ತಿಂಗಳ ಕಾಲ ರೋಹಿತ್ ಅವರ ಪ್ರದರ್ಶನವನ್ನು ಆಯ್ಕೆದಾರರು ಗಮನಿಸುತ್ತಾರೆ ಮತ್ತು ಅವರು ತಂಡದ ಭಾಗವಾಗಬಹುದೇ ಅಥವಾ ಇಲ್ಲವೇ ಎಂಬುದನ್ನು ನಿರ್ಧರಿಸುತ್ತಾರೆ. ವಿರಾಟ್ ಕೊಹ್ಲಿ ತಂಡದ ಜೊತೆ ಇರ್ತಾರೆ. ಯಾಕಂದ್ರೆ ಕೊಹ್ಲಿ ಪ್ರದರ್ಶನ ಮತ್ತು ಫಿಟ್ನೆಸ್ ಮಟ್ಟ, ರನ್ಗಳ ಹಸಿವಿನ ಮೂಲಕ ತಮ್ಮನ್ನು ತಾವು ಸಾಭೀತುಪಡಿಸಿಕೊಂಡಿದ್ದಾರೆ. ಹೀಗಾಗಿ ಯ್ಕೆದಾರರಿಗೆ ಏನನ್ನೂ ಸಾಬೀತುಪಡಿಸುವ ಅಗತ್ಯವಿಲ್ಲ. ಆದ್ರೆ ವಿಶ್ವಕಪ್ ಯೋಜನೆಯಲ್ಲಿ ಮತ್ತೆ ಸ್ಥಾನ ಪಡೆಯಲು ರೋಹಿತ್ ಸಾಕಷ್ಟು ಕಷ್ಟಪಡಬೇಕಾಗುತ್ತದೆ ಎಂದಿದ್ದಾರೆ.
ಒಟ್ನಲ್ಲಿ ಎಲ್ಲರ ಕಣ್ಣು 2027ರ ವಿಶ್ವಕಪ್ ಮೇಲಿದೆ. ರೋಹಿತ್ ಅವ್ರ ಜರ್ನಿ ಹಾಗೂ ಭಾರತ ತಂಡಕ್ಕೆ ಅವ್ರು ನೀಡಿರೋ ಕೊಡುಗೆ ನೋಡಿದ್ರೆ ತಂಡದಲ್ಲಿ ಇರಲಿ ಅನ್ನೋದು ಎಲ್ಲರ ಆಶಯ. ಆದ್ರೆ ಬಿಸಿಸಿಐ ಮಟ್ಟದಲ್ಲಿ ಬೇರೆಯದ್ದೇ ಲೆಕ್ಕಚಾರ ನಡೀತಾ ಇರೋದ್ರಿಂದ ಅಂತಿಮವಾಗಿ ಯಾವ ನಿರ್ಧಾರ ಕೈಗೊಳ್ತಾರೆ ನೋಡ್ಬೇಕು. ನಿಮ್ಮ ಪ್ರಕಾರ ರೋಹಿತ್ ಏಕದಿನ ವಿಶ್ವಕಪ್ ತಂಡದಲ್ಲಿ ಬೇಕಾ ಅಥವಾ ಬೇಡ್ವಾ ಅನ್ನೋದನ್ನ ಕಮೆಂಟ್ಸ್ ಮೂಲಕ ತಿಳಿಸಿ.

ನೋಡಿರಿ

