ಏನಿಲ್ಲ.. ಏನಿಲ್ಲ ಕರ್ನಾಟಕಕ್ಕೆ ಏನಿಲ್ಲ!ಕರುನಾಡಿಗೆ ಪದೇಪದೆ ಅನ್ಯಾಯವೇಕೆ?
ಮಿತ್ರ ಪಕ್ಷಗಳಿಗೆ ಮಾತ್ರನಾ ಬಜೆಟ್?
ಕಳೆದ ವರ್ಷದಂತೆ ಈ ವರ್ಷ ಕೂಡ ಕರ್ನಾಟಕಕ್ಕೆ ಕೇಂದ್ರ ಬಜೆಟ್ನಲ್ಲಿ ಅನ್ಯಾಯವಾಗಿದೆ. ಕೇಂದ್ರಕ್ಕೆ ಆದಾಯ ಕೂಡುವಲ್ಲಿ ಕರ್ನಾಟಕದ ಕೊಡುಗೆ ದೊಡ್ಡದಿದೆ. ಅತೀ ಹೆಚ್ಚು ಟ್ಯಾಕ್ಸ್ ಕಲೆಕ್ಷನ್ ಮಾಡೋ 2 ನೇ ರಾಜ್ಯ ಕರ್ನಾಟಕವೇ ಆಗಿದೆ.. ಅದ್ರಲ್ಲೂ ದೇಶದ ಅಭಿವೃದ್ಧಿ ನಮ್ಮ ರಾಜ್ಯದ ಪಾತ್ರ ಬಹಳಷ್ಟಿದೆ.. ಆದ್ರೆ ಬಜೆಟ್ನಲ್ಲಿ ಬೆಂಗಳೂರಿಗೆ ಕೇಂದ್ರ ಸರ್ಕಾರ ಕೊಟ್ಟಿದ್ದು ಚೊಂಬು.. ಒಂದೇ ಒಂದು ಯೋಜನೆ ಕೂಡ ಕರ್ನಾಟಕದ ಪರವಾಗಿ ಘೋಷನೆ ಮಾಡಿಲ್ಲ.. ಕಳದ ವರ್ಷದಂತೆ ಈ ವರ್ಷ ಕೂಡ ಅನ್ಯಾಯ ಮಾಡಿದೆ. ತನ್ನ ಮಿತ್ರ ಪಕ್ಷಗಳ ರಾಜ್ಯಗಳಿಗೆ ಬಂಪರ್ ಕೊಟ್ಟ ಮೋದಿ ಸರ್ಕಾರ ಕರ್ನಾಟಕಕ್ಕೆ ದೊಡ್ಡ ಚೊಂಬು ಕೊಟ್ಟಿದೆ.
ಇದನ್ನೂ ಓದಿ: ಬಜೆಟ್ನಲ್ಲಿ ಕೃಷಿಗೆ ಬಂಪರ್ – ಕಿಸಾನ್ ಕ್ರೆಡಿಟ್ ಕಾರ್ಡ್ ಮಿತಿ ಹೆಚ್ಚಳ
ಬಜೆಟ್ಗೂ ಮುನ್ನ ಡಿಸಿಎಂ ಡಿಕೆ ಶಿವಕುಮಾರ್ ಕೇಂದ್ರದ ಮುಂದೆ ಒಂದಷ್ಟು ಪ್ರಸ್ತಾವನೆ ಇಟ್ಟಿದ್ರು. ರಾಜಧಾನಿ ಬೆಂಗಳೂರಿನ ಅಭಿವೃದ್ಧಿಗೆ ಕೇಂದ್ರ ಅನುದಾನ ನೀಡುವ ನಿರೀಕ್ಷೆಯಲ್ಲಿ ರಾಜ್ಯದ ಜನತೆ ಕಾತುರರಾಗಿದ್ರು.. ಆದ್ರೆ ಆಸೆ ಆಸೆಯಾಗೇ ಉಳಿದಿದೆ. ಹಿಂದಿನ ಕೇಂದ್ರ ಬಜೆಟ್ನಲ್ಲಿ ಬಿಹಾರಕ್ಕೆ ವಿವಿಧ ರಸ್ತೆ ಯೋಜನೆಗಳಿಗೆ 26,000 ಕೋಟಿ ರೂ. ಅನುದಾನ ಮತ್ತು ಆಂಧ್ರಕ್ಕೆ ಸುಮಾರು 15,000 ಕೋಟಿ ರೂ. ಅನುದಾನ ನೀಡಿ ಬೇರೆ ರಾಜ್ಯಗಳನ್ನು ಕಡೆಗಣಿಸಲಾಗಿತ್ತು. 2025 ಬಜೆಟ್ನಲ್ಲಿ ಅದನ್ನು ಸರಿಪಡಿಸಬಹುದೆಂಬುದು ರಾಜ್ಯದ ಜನರ ನಿರೀಕ್ಷೆಯಿತ್ತು.. ಅದು ಸುಳ್ಳಾಗಿದ್ದು, ಮತ್ತೆ ಬಿಹಾರಕ್ಕೆ ಸೆಂಟ್ರಲ್ ಬಜೆಟ್ ಕೊಡುಗೆ ನೀಡಿದೆ.
ಬಜೆಟ್ನಲ್ಲಿ ಬೆಂಗಳೂರಿನ ಬಗ್ಗೆ ನಿರೀಕ್ಷೆ ಏನಿತ್ತು?
- ಬೆಂಗಳೂರು ಉತ್ತರ- ದಕ್ಷಿಣ ಕಾರಿಡಾರ್ಗೆ 15 ಸಾವಿರ ಕೋಟಿ ರೂ ಅಗತ್ಯವಿತ್ತು
- ರಿಂಗ್ ರಸ್ತೆ ಮೇಲ್ದರ್ಜೆಗೆ 8,916 ಕೋಟಿ ರೂ. ಗಳ ಅಗತ್ಯವಿತ್ತು ಈ ಬಗ್ಗೆ ನಿರೀಕ್ಷೆ ಇತ್ತು
- ರಾಜ ಕಾಲುವೆ ನಿರ್ಣಹಣೆ, ವಿಸ್ತರಣೆಗೆ 3 ಸಾವಿರ ಕೋಟಿ ರೂ. ಅಗತ್ಯವಿತ್ತು
- ಬೆಂಗಳೂರಿನ ಪ್ರಮುಖ 17 ಫ್ಲೈ ಓವರ್ಗೆ 12 ಸಾವಿರ ಕೋಟಿ ರೂ ಅಗತ್ಯವಿತ್ತು
- ಬಿಸಿನೆಸ್ ಕಾರಿಡಾರ್ಗೆ 27 ಸಾವಿರ ಕೋಟಿ ಅನುದಾನ ಅಗತ್ಯವಿತ್ತು
- ಬೆಂಗಳೂರಿನ ಜನಸಂದಣಿ ಕಡಿಮೆ ಮಾಡಲು ಎರಡು ನಗರ ಸುರಂಗಗಳು
- ಎರಡು ಎಲಿವೇಟೆಡ್ ಕಾರಿಡಾರ್ಗಳಿಗೆ 36,950 ಕೋಟಿ ರೂ. ಮಂಜೂರು ಮಾಡಬಹುದೆಂಬ ನಿರೀಕ್ಷೆ ಇತ್ತು.
- ಬೆಂಗಳೂರಿನ ಸಂಚಾರ ದಟ್ಟಣೆ ಕಡಿಮೆ ಮಾಡಲು 30,000 ಕೋಟಿ ವೆಚ್ಚದ 60 ಕಿ.ಮೀ. ಉದ್ದದ ಸುರಂಗ ಮಾರ್ಗ ನಿರ್ಮಿಸಲು ರಾಜ್ಯ ಸರ್ಕಾರ ತೀರ್ಮಾನ ಮಾಡಿ
- ಈ ಯೋಜನೆಗೆ ಅನುದಾನ ನೀಡಲು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿತ್ತು.
ಈ ಎಲ್ಲಾ ನಿರೀಕ್ಷೆಗಳು ಕೆವಲ ನಿರೀಕ್ಷೆಗಳಾಗಿಯೇ ಉಳಿದಿವೆ.. ಕರ್ನಾಟಕಕ್ಕೆ ಒಂದೇ ಒಂದು ಮಹತ್ವದ ಯೋಜನೆ ಘೋಷಣೆ ಆಗದೇ ಇರೋದು ಬೇಸರದ ಸಂಗತಿ.
ಎನ್ಡಿಎ ಮಿತ್ರಪಕ್ಷಗಳಿಗೆ ಬಂಪರ್
ಈ ಬಾರಿಯೂ ಬಜೆಟ್ನಲ್ಲಿ ಎನ್ಡಿಎ ಮಿತ್ರ ಪಕ್ಷಗಳ ರಾಜ್ಯಗಳಿಗೆ ಬಂಪರ್ ಸಿಕ್ಕಿದೆ. ಕಳೆದ ಎರಡು ಅವಧಿಯಿಂದಲೂ ಸ್ವತಂತ್ರವಾಗಿ ಆಡಳಿತ ನಡೆಸಿದ್ದ ಪ್ರಧಾನಿ ನರೇಂದ್ರ ಮೋದಿ ನೃತೃತ್ವದ ಸರ್ಕಾರವು ಈ ಬಾರಿ ಸಮ್ಮಿಶ್ರ ಸರ್ಕಾರವನ್ನು ನಡೆಸುತ್ತಿದೆ. ಸಮ್ಮಿಶ್ರ ಸರ್ಕಾರದ ಭಾಗವಾಗಿ ಬಿಹಾರದ ಜೆಡಿಯು ಹಾಗೂ ಆಂಧ್ರ ಪ್ರದೇಶದ ತೆಲುಗು ದೇಶಂ ಪಕ್ಷ ಇವೆ. ಕಳೆದ ಬಾರಿಯ ಕೇಂದ್ರ ಸರ್ಕಾರದ ಬಜೆಟ್ನಲ್ಲೂ ಈ ಪಕ್ಷಗಳಿಗೆ ಭರ್ಜರಿ ಬಂಪರ್ ಸಿಕ್ಕಿತ್ತು. ಈ ಬಾರಿಯೂ ಅದೇ ರಿಪೀಟ್ ಆಗಿದೆ. ಕೇಂದ್ರ ಬಿಜೆಪಿ ಸರ್ಕಾರದ ಆಧಾರಸ್ತಂಭಗಳಾಗಿ ಈ ಪಕ್ಷಗಳು ಇವೆ. ಈ ಬಾರಿ ನಿರೀಕ್ಷೆಯಂತೆಯೇ ಈ ಎರಡೂ ರಾಜ್ಯಗಳಿಗೆ ಭರ್ಜರಿ ಗಿಫ್ಟ್ಗಳನ್ನ ಕೊಡಲಾಗಿದೆ.
ಬಿಹಾರ ರಾಜ್ಯಕ್ಕೆ ಬಂಪರ್ ಕೊಡುಗೆ
ಐಐಟಿ ಪಾಟ್ನಾ ಸೇರಿದಂತೆ ಒಟ್ಟು 5 ಐಐಟಿ ಅಭಿವೃದ್ಧಿಗಳ ಅನುದಾನ
ಮೈತ್ರಿ ಪಕ್ಷಗಳಿಗೆ ಭರ್ಜರಿ ಕೊಡುಗೆ ಕೊಡುವುದನ್ನು ಶುರು ಮಾಡಲಾಗಿದೆ
ಗ್ರೀನ್ ಫೀಲ್ಡ್ ವಿಮಾನ ನಿಲ್ದಾಣ ಮಂಜೂರು ಮಾಡಲಾಗಿದೆ
ಬಿಹಾರದ 500 ಹೆಕ್ಟೇರ್ ಜಮೀನಿಗೆ ನೀರಾವರಿ ಯೋಜನೆ ಅಭಿವೃದ್ಧಿ
ಬಿಹಾರದಲ್ಲಿ ವಿಶೇಷ ಮಕಾನಾ ಮಂಡಳಿಯನ್ನು ಸ್ಥಾಪಿಸುವುದಾಗಿ ಘೋಷಣೆ
ಬಿಹಾರದಲ್ಲಿ ಮಕಾನ ಉತ್ಪಾದನೆ, ಮಾರುಕಟ್ಟೆ ವ್ಯವಸ್ಥೆ ಅಭಿವೃದ್ಧಿಯಾಗಲಿದೆ
ಬಿಹಾರದಲ್ಲಿ ರಾಷ್ಟ್ರೀಯ ಆಹಾರ ತಂತ್ರಜ್ಞಾನ ಅಭಿವೃದ್ಧಿಗೂ ಆದ್ಯತೆ ಕೊಡಲಾಗಿದೆ
ಆಂಧ್ರ ಪ್ರದೇಶಕ್ಕೂ ಬಂಪರ್
ಇನ್ನು ಕೇಂದ್ರ ಸರ್ಕಾರವು ಬಜೆಟ್ ಮಂಡನೆ ಮಾಡುವುದಕ್ಕೆ ಮುಂಚೆಯೇ ಆಂಧ್ರ ಪ್ರದೇಶಕ್ಕೆ ಬಂಪರ್ ಗಿಫ್ಟ್ ಕೊಟ್ಟಾಗಿದೆ. ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ರಾಷ್ಟ್ರೀಯ ಉಕ್ಕು ಕಾರ್ಖಾನೆ / ವೈಜಾಗ್ ಸ್ಟೀಲ್ ಪುನಶ್ಚೇತನಕ್ಕೆ ಬರೋಬ್ಬರಿ 11,400 ಕೋಟಿ ರೂಪಾಯಿ ಪ್ಯಾಕೇಜ್ ಘೋಷಣೆ ಮಾಡಲಾಗಿದೆ. ಭಾರತವು 2030ರ ವೇಳೆಗೆ ವಾರ್ಷಿಕ 300 ದಶಲಕ್ಷ ಟನ್ ಉಕ್ಕು ಉತ್ಪಾದಿಸುವ ಗುರಿಯನ್ನು ಹಾಕಿಕೊಂಡಿದೆ. ಈ ಮೂಲಕ ಎರಡು ಮಿತ್ರ ಪಕ್ಷಗಳಿಗೂ ಹಾಗೂ ಮಿತ್ರ ಪಕ್ಷ ರಾಜ್ಯಗಳಿಗೆ ಬಂಪರ್ ಕೊಡುಗೆಯನ್ನು ಕೊಡಲಾಗಿದೆ.
ಏನಿಲ್ಲ ಏನಿಲ್ಲ ಕರ್ನಾಟಕಕ್ಕೆ ಏನಿಲ್ಲ
ಈ ಬಜೆಟ್ನಲ್ಲಿ ಕರ್ನಾಟಕಕ್ಕೆ ಏನೂ ಕೊಟ್ಟಿಲ್ಲ. ಸಾಕಷ್ಟು ಆದಾಯ ಕೊಡುವ ಬೆಂಗಳೂರಿಗೆ ಈ ಮಟ್ಟಿಗೆ ಕಡೆಗಣಿಸೋದು ಯಾಕೆ ಅನ್ನೋ ಪ್ರಶ್ನೆ ಎದ್ದಿದೆ. ಕಳೆದ ವರ್ಷ ಕೇಂದ್ರ ಬಜೆಟ್ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದ ರಾಜ್ಯ ಸರ್ಕಾರಕ್ಕೆ ಅನ್ಯಾಯವಾಗಿತ್ತು. ಈ ಬಾರಿ ಕೂಡ ಅದೇ ರಿಪೀಟ್ ಆಗಿದೆ.. ಕರ್ನಾಟಕದ ಜನರ ಬಜೆಟ್ನಲ್ಲಿ ಕೇಂದ್ರ ಸರ್ಕಾರ ನಿರ್ಲಕ್ಷ್ಯ ಮಾಡಲಾಗಿದೆ ಅಂದ್ರೆ ತಪ್ಪಿಲ್ಲ..