ಎಚ್ಚರಗೊಂಡ ಜಾನು ಅಜ್ಜಿ.. ಜಾಹ್ನವಿ ಹಿಡಿತದಲ್ಲಿ ಜಯಂತ್ -ಸೈಕೋಪತಿ ಕೃತ್ಯ ಕೊನೆಗೂ ಬಯಲು?

ಜಯಂತ್ ಗ್ರಹಚಾರ ಕಂಪ್ಲೀಟ್ ಕೆಟ್ಟಿದೆ ಅಂತಾ ಕಾಣ್ಸುತ್ತೆ.. ಆತನ ಕೃತ್ಯ ಒಂದೊಂದೇ ಬಯಲಾಗ್ತಿದೆ. ತನ್ನ ರಹಸ್ಯ ಎಲ್ಲಿ ಬಯಲಾಗುತ್ತೆ ಅಂತಾ ಅಜ್ಜಿಗೆ ಒಂದು ಗತಿ ಕಾಣ್ಸಿದ್ದ.. ಆದ್ರೆ ಅಜ್ಜಿನ ಸಾಯ್ಸೋದಿಕ್ಕೆ ಟ್ರೈ ಮಾಡಿರೋದು ಜಯಂತ್ ಅಂತಾ ಜಾಹ್ನವಿಗೆ ಗೊತ್ತಾಗಿದೆ. ಸತ್ಯ ಗೊತ್ತಾದ ಜಾನು ಜಯಂತ್ ಮೇಲೆ ಹಿಡಿತ ಸಾಧಿಸಿದ್ದಾಳೆ.. ಮಾತಲ್ಲೇ ಆತನನ್ನ ಕಟ್ಟಿ ಹಾಕ್ತಿದ್ದಾಳೆ. ಆದ್ರೀಗ ಕೋಮಾದಲ್ಲಿದ್ದ ಅಜ್ಜಿ ಆರೋಗ್ಯದಲ್ಲಿ ಚೇತರಿಕೆ ಕಾಣ್ತಿದೆ. ಅಜ್ಜಿ ಜಯಂತಾ.. ಜಯಂತಾ ಅಂತಾ ಕನವರಿಸ್ತಿದ್ದಾರೆ..
ಇದನ್ನೂ ಓದಿ: ಮುಂಬೈ & ಚೆನ್ನೈ IPL ಕಿಂಗ್ಸ್ – 17 ಸೀಸನ್.. ಟ್ರೋಫಿ ಗೆದ್ದವರೆಷ್ಟು?
ಲಕ್ಷ್ಮೀ ನಿವಾಸ ಸೀರಿಯಲ್ ಸದ್ಯ ರೋಚಕ ತಿರುವು ಪಡೆದುಕೊಂಡಿದೆ. ತನ್ನ ಕೃತ್ಯ ಎಲ್ಲಿ ಬಯಲಾಗುತ್ತೆ ಅನ್ನೋ ಭಯದಲ್ಲಿ ಜಯಂತ್ ಜಾಹ್ನವಿ ಅಜ್ಜಿಯನ್ನ ಕೊಲ್ಲೋದಿಕ್ಕೆ ಟ್ರೈ ಮಾಡಿದ್ದ. ಆದ್ರೆ ಜಾನು ಅಜ್ಜಿ ಸಾವಿನಿಂದ ಪಾರಾಗಿದ್ರು.. ಕೋಮಾದಲ್ಲಿದ್ದ ಅಜ್ಜಿಯನ್ನ ಜಯಂತ್ ಮತ್ತೆ ತನ್ನ ಮನೆಗೆ ಕರ್ಕೊಂಡು ಬಂದಿದ್ದ.. ಆದ್ರೆ ಜಯಂತ್ ಮನೆ ತುಂಬಾ ಹಾಕಿಸಿದ್ದ ಸಿಸಿಟಿವಿಯಲ್ಲಿ ಎಲ್ಲವೂ ರೆಕಾರ್ಡ್ ಆಗಿತ್ತು.. ಅದ್ರಿಂದಾನೇ ಆತ ಜಾನು ಕೈಗೆ ಸಿಕ್ಕಿಬಿದ್ದ. ಸತ್ಯ ಗೊತ್ತಾದ ಜಾನು ಅಜ್ಜಿಯನ್ನ ತವರು ಮನೆಗೆ ಕಳ್ಸಿದ್ದಾಳೆ. ಇದೀಗ ಜಯಂತ್ ಗೆ ಭಯ ಹೆಚ್ಚಾಗಿದೆ. ಜಾಹ್ನವಿ ಮನೆಯವರಿಗೆ ತನ್ನ ವಿಚಾರ ಗೊತ್ತಾದ್ರೆ ಚಿನ್ನುಮರಿ ದೂರ ಆಗ್ತಾಳೆ ಅನ್ನೋ ಭಯದಲ್ಲಿದ್ದಾನೆ. ಆದ್ರೆ ಜಾಹ್ನವಿ ಈ ವಿಚಾರ ಇಟ್ಕೊಂಡೇ ಆತನನ್ನ ಆಟ ಆಡಿಸ್ತಿದ್ದಾಳೆ. ಆದ್ರೀಗ ಅಜ್ಜಿ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ. ಅಜ್ಜಿ ಜಯಂತ್ ನ ಹೆಸರನ್ನೇ ಕನವರಿಸ್ತಿದ್ದಾರೆ.
ಅಜ್ಜಿಯನ್ನ ಶ್ರೀನಿವಾಸ್ ಮನೆಗೆ ಕರ್ಕೊಂಡು ಬರ್ತಿದ್ದಂತೆ ಆರೋಗ್ಯದಲ್ಲಿ ಚೇತರಿಕೆ ಕಾಣ್ತಿದೆ.. ಅಜ್ಜಿ ಜಯಂತಾ ಜಯಂತಾ ಅಂತಾ ಕನವರಿಸ್ತಿದ್ದಾಳೆ. ಇದನ್ನ ವೀಣಾ ಜಯಂತ್ ಗೆ ಹೇಳಲು ಪದೇ ಪದೇ ಕಾಲ್ ಮಾಡ್ತಿದ್ಲು.. ಆದ್ರೆ ಜಯಂತ್ ಗೆ ಕಾಲ್ ರಿಸೀವ್ ಮಾಡಲು ಧೈರ್ಯ ಸಾಲಿಲ್ಲ.. ಅಷ್ಟೊತ್ತಿಗೆ ಜಾಹ್ನವಿ ಬಂದು ಆತನ ಕೈಯಿಂದ ಫೋನ್ ಕಿತ್ತುಕೊಂಡಿದ್ದಾಳೆ. ಕಾಲ್ ರಿಸೀವ್ ಮಾಡಿ ಮಾತಾಡಿ ಅಂತಾ ಹೇಳಿದ್ದಾಳೆ. ಬಳಿಕ ಅಜ್ಜಿ ನಿನ್ನ ಹೆಸರನ್ನ ಕನವರಿಸ್ತಿದ್ದಾರೆ ಅಂತಾ ಹೇಳ್ತಿದ್ದಂತೆ ಜಯಂತ್ ಶಾಕ್ ಆಗಿದ್ದಾನೆ. ಮನೆಗೆ ಹೋಗಿ ಅಜ್ಜಿಯನ್ನ ನೋಡ್ಕೊಂಡು ಬರ್ತೇನೆ ಅಂತಾ ಜಾನುಗೆ ಹೇಳಿ ಹೊರ್ಟಿದ್ದ.. ಜಯಂತ್ ಅಲ್ಲಿಗೆ ಹೋದ್ರೆ ಅಜ್ಜಿಗೆ ಆಪತ್ತು ಗ್ಯಾರಂಟಿ ಅಂತಾ ಆಕೆಗೆ ಗೊತ್ತು.. ಹೀಗಾಗಿ ಆಕೆ ಜಯಂತ್ ನ ಮಾತಲ್ಲೇ ಕಟ್ಟಿ ಹಾಕಿದ್ದಾಳೆ. ತನ್ನ ಪರ್ಮಿಷನ್ ಇಲ್ದೇ ಎಲ್ಲೂ ಹೋಗುವಂತಿಲ್ಲ ಅಂತಾ ಹೇಳಿದ್ದಾಳೆ. ಆಗ ಜಯಂತ್ ಅಜ್ಜಿ ಸತ್ಯ ಬಾಯಿ ಬಿಟ್ರೆ ಕಷ್ಟ ಆಗುತ್ತೆ ಅಂತಾ ಜಯಂತ್ ಹೇಳಿದ್ರೂ ಗೊತ್ತಾಗ್ಲಿ ಬಿಡಿ ಅಂತಾ ಜಾಹ್ನವಿ ಹೇಳಿದ್ದಾಳೆ. ಇದೀಗ ಜಾಹ್ನವಿ ಫುಲ್ ಸ್ಟ್ರಾಂಗ್ ಆಗಿದ್ದಾಳೆ. ಜಯಂತ್ನ ಸರಿಯಾಗೇ ಆಟ ಆಡಿಸ್ತಿದ್ದಾಳೆ. ಹಾಗಾದ್ರೆ ಅಜ್ಜಿಗೆ ಎಚ್ಚರ ಆಗುತ್ತಾ? ಜಯಂತ್ಗೆ ಜಾಹ್ನವಿ ಸರಿಯಾಗೇ ಪಾಠ ಕಲಿಸ್ತಾಳಾ ಅಂತಾ ಕಾದು ನೋಡ್ಬೇಕು..
ಇದೀಗ ಸೀರಿಯಲ್ ಫ್ಯಾನ್ಸ್ ಮಾತ್ರ ಜಾಹ್ನವಿಗೆ ಬಹುಪರಾಕ್ ಹೇಳಿದ್ದಾರೆ.. ಜಯಂತ್ ನ ಜಾನು ಸರಿಯಾಗೇ ಕಟ್ಟಿಹಾಕ್ತಿದ್ದಾಳೆ. ಈ ಪಾಪಿಗೆ ಶಿಕ್ಷೆ ಆಗಲೇ ಬೇಕು. ಜಯಂತ್ ಕೃತ್ಯಗಳೆಲ್ಲಾ ಆಚೆ ಬರ್ಬೇಕು.. ಅಂತಾಹೇಳಿದ್ದಾರೆ. ಇನ್ನೂ ಕೆಲವರು, ಚಿನ್ನುಮರಿ ಪಾತ್ರ ಮಾತ್ರ ವೀಕ್ ಮಾಡಬೇಡಿ.. ಇದೆ ತರ ಇರಲಿ.. ಜಯಂತ್ ನಂತವರಿಗೆ ಹೀಗೆ ಇರಬೇಕು.. ಎಲ್ಲವನ್ನ ಧೈರ್ಯವಾಗಿ ಎದುರಿಸಬೇಕು.. ಸೈಕೋನ ಎದುರಿಸೋಕೆ ಚಿನ್ನುಮರಿನೂ ಕೂಡ ಸೈಕೋ ಆದ್ರೆ ತಪ್ಪಿಲ್ಲ. ಹೇಗೆ ಬುದ್ಧಿ ಕಲಿಸಬೇಕು ಅಂದ್ರೆ.. ಇನ್ನೊಂದು ಸಾರಿ ಈ ತರ ಬುದ್ಧಿ ಇರೋ ಗಂಡಂದಿರು ಹೆದರಬೇಕು ಅಂತಾ ಹೇಳಿದ್ದಾರೆ.