ಅಮ್ಮನನ್ನು ಸಂಕಷ್ಟದಿಂದ ಪಾರು ಮಾಡಿದ ಪುಟಾಣಿ ..! – ಕಂದನ ಸಮಯಪ್ರಜ್ಞೆಗೆ ಎಲ್ಲರ ಮೆಚ್ಚುಗೆ
ಮುದ್ದು ಮಕ್ಕಳು ಪರಿಸ್ಥಿತಿಯನ್ನ ಎಷ್ಟು ಚೆನ್ನಾಗಿ ಅರ್ಥ ಮಾಡಿಕೊಳ್ಳುತ್ತವೆ ಅನ್ನೋದಕ್ಕೆ ಇಲ್ಲೊಂದು ಘಟನೆಯೇ ಸಾಕ್ಷಿ. ಇಲ್ಲಿ ಮುದ್ದು ಕಂದನೇ ತನ್ನ ತಾಯಿಯನ್ನ ರಕ್ಷಿಸಿದ ರೀತಿಯಂತೂ ಅದೆಷ್ಟೋ ಮಂದಿಯ ಹೃದಯ ಗೆದ್ದಿದೆ. ತಾಯಿಯ ಜೀವ ಅಪಾಯದಲ್ಲಿದೆ ಅನ್ನೋದು ತಕ್ಷಣವೇ ಕಂದನಿಗೆ ಗೊತ್ತಾಗಿತ್ತು. ಪುಟ್ಟ ಕಂದ ಕ್ಷಣಮಾತ್ರವೂ ಹೆದರದೇ ತನ್ನಮ್ಮನನ್ನು ಸಂಕಷ್ಟದಿಂದ ರಕ್ಷಿಸಿದ ರೀತಿಯಂತೂ ರೋಚಕ. ಇಂಥಾ ಒಂದು ಅದ್ಭುತ ವಿಡೀಯೋವನ್ನ ಐಪಿಎಸ್ ಅಧಿಕಾರಿಯೊಬ್ಬರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದು, ತುಂಬಾ ಮೆಚ್ಚುಗೆ ಪಡೆದಿದೆ.
ಇದನ್ನೂ ಓದಿ: ಮನುಷ್ಯ ಕಾಲುಗಳ ಬಳಸಿ ನೇರ ನಡೆಯಲು ಕಲಿತಿದ್ದು ನೆಲದಲ್ಲಿ ಅಲ್ಲ.. ಮರದಲ್ಲಿ..!
ಮಹಿಳೆಯೊಬ್ಬರು ಏಣಿಯಲ್ಲಿ ನಿಂತು ಕೆಲಸ ಮಾಡುತ್ತಿರುತ್ತಾರೆ. ಆಗ ಆಕಸ್ಮಿಕವಾಗಿ ಏಣಿ ಕೆಳಕ್ಕೆ ಬೀಳುತ್ತದೆ. ಮಹಿಳೆ ಮೇಲೆಯೇ ಕೈಹಿಡಿದುಕೊಂಡು ನೇತಾಡುತ್ತಿರುತ್ತಾರೆ. ಸಹಾಯಕ್ಕಾಗಿ ಕೂಗಿಕೊಳ್ಳುತ್ತಾರೆ. ತನ್ನಮ್ಮ ಸಂಕಷ್ಟದಲ್ಲಿರುವುದನ್ನ ಅಲ್ಲೇ ಇದ್ದ ಪುಟ್ಟ ಕಂದ ಗಮನಿಸುತ್ತಾನೆ. ಭಯದಿಂದ ಕಿರುಚಾಡುತ್ತಿದ್ದ ಅಮ್ಮನನ್ನು ನೋಡಿ ಪುಟಾಣಿ ಸ್ವಲ್ಪವೂ ಹೆದರದೆ, ಏಣಿಯನ್ನು ಎತ್ತಲು ಪ್ರಯತ್ನಿಸುತ್ತಾನೆ. ಏಣಿಯನ್ನ ಎತ್ತಿಹಿಡಿಯಲು ಯಶಸ್ವಿಯಾಗುತ್ತಾನೆ. ಅಮ್ಮನಿಗೆ ಇಳಿಯುವ ಹಾಗೆ ಏಣಿಯನ್ನು ಕಂದ ಹಿಡಿಯುವ ದೃಶ್ಯ ನೋಡಿದರೆ ಹೃದಯತುಂಬಿ ಬರುತ್ತದೆ. ಪುಟ್ಟ ಮಗುವಿನ ಬುದ್ಧಿವಂತಿಕೆ ಮತ್ತು ಧೈರ್ಯ, ಸಮಯಪ್ರಜ್ಞೆಯನ್ನು ನೋಡಿದರೆ ಮನಸು ತುಂಬಿ ಬರುತ್ತದೆ. ಐಪಿಎಸ್ ಅಧಿಕಾರಿ ದೀಪಾನ್ಶು ಕಬ್ರಾ ಅವರು ಈ ವಿಡಿಯೋವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವೀಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ತುಂಬಾ ಮೆಚ್ಚುಗೆ ಪಡೆದಿದೆ.
माँ गैराज का दरवाज़ा रिपेयर कर रहीं थी कि तभी उनकी सीढ़ी गिर गयी. माँ ऊपर लटके देख नन्हे जांबाज़ ने पूरी जान लगाकर सीढ़ी को वापस लगाकर उनक़ी मदद क़ी…
इस छोटे बच्चे क़ी सूझ-बूझ और हिम्मत क़ी जितनी प्रशांसा क़ी जाए कम है. pic.twitter.com/GjX6Ol3pid
— Dipanshu Kabra (@ipskabra) December 23, 2022