ಸಂಜು ಸ್ಯಾಮ್ಸನ್‌  ಅವರ ಸ್ಥಾನವನ್ನು ತುಂಬಲು ಯಾರಿಂದಲೂ ಸಾಧ್ಯವಿಲ್ಲ – RR ನಾಯಕ ರಿಯಾನ್‌ ಪರಾಗ್‌

ಸಂಜು ಸ್ಯಾಮ್ಸನ್‌  ಅವರ ಸ್ಥಾನವನ್ನು ತುಂಬಲು ಯಾರಿಂದಲೂ ಸಾಧ್ಯವಿಲ್ಲ – RR ನಾಯಕ ರಿಯಾನ್‌ ಪರಾಗ್‌

ಭಾರತ ತಂಡದಲ್ಲಿ ವಿರಾಟ್‌ ಕೊಹ್ಲಿ ಹಾಗೂ ರೋಹಿತ್‌ ಶರ್ಮಾ ಅವರ ರೀತಿ, ರಾಜಸ್ಥಾನ್‌ ರಾಯಲ್ಸ್‌  ತಂಡದಲ್ಲಿ ಸಂಜು ಸ್ಯಾಮ್ಸನ್‌  ಅವರ ಸ್ಥಾನವನ್ನು ತುಂಬಲು ಯಾರಿಂದಲೂ ಸಾಧ್ಯವಿಲ್ಲ ಎಂದು ಆರ್‌ಆರ್‌ ನಾಯಕ ರಿಯಾನ್‌ ಪರಾಗ್‌ ಹೇಳಿದ್ದಾರೆ. ಅಂದ ಹಾಗೆ ಸಂಜು ಸ್ಯಾಮ್ಸನ್‌ ಅವರು ಟ್ರೇಡ್‌ ಡೀಲ್‌ ಮೂಲಕ ರಾಜಸ್ಥಾನ್‌ ರಾಯಲ್ಸ್‌ ತಂಡದಿಂದ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ಆ ಮೂಲಕ ಅವರಿಗೆ ಸಿಎಸ್‌ಕೆ ನಾಯಕತ್ವವನ್ನು ನೀಡಬಹುದಾಗಿದೆ. ಸಂಜು 2021 ರಿಂದ 2025ರ ವರೆಗೆ ರಾಜಸ್ಥಾನ್‌ ರಾಯಲ್ಸ್‌ ತಂಡವನ್ನು ಮುನ್ನಡೆಸಿದ್ದರು. ಸಿಎಸ್‌ಕೆಯಿಂದ ರವೀಂದ್ರ ಜಡೇಜಾ, ಆರ್‌ಆರ್‌ಗೆ ಬಂದಿದ್ದಾರೆ.

ಇದನ್ನೂ ಓದಿ: ರೆಡ್ ಆರ್ಮಿಯಲ್ಲಿ KING ಹವಾ – ಪಂದ್ಯಗಳಿಗಷ್ಟೇ ಸೀಮಿತವಾದ್ರಾ ಕೊಹ್ಲಿ?

 ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಿಯಾನ್‌ ಪರಾಗ್‌,  ಸಂಜು ಸ್ಯಾಮ್ಸನ್‌ ಕೌಶಲ ಹೊಂದಿರುವ ಇನ್ನೊಬ್ಬ ಆಟಗಾರನನ್ನು ಹುಡುಕಬಹುದು ಅಥವಾ ಅವರ ಸ್ಥಾನದಲ್ಲಿ ಯಾರನ್ನಾದರೂ ಆಡಿಸಬಹುದು. ಆದರೆ ವಿರಾಟ್‌ ಕೊಹ್ಲಿ ಅಥವಾ ರೋಹಿತ್‌ ಶರ್ಮಾ ಅವರಿಗೆ ಬದಲಾವಣೆ ಇಲ್ಲದಂತೆ, ಸಂಜು ಭಾಯ್‌ಗೂ ನಿಜವಾದ ಬದಲಾವಣೆ ಯಾರೂ ಇಲ್ಲ. ಅವರು ಅಷ್ಟೊಂದು ಉತ್ತಮ ಆಟಗಾರ  ಎಂದು ಹೇಳಿದ್ದಾರೆ.

ಸಂಜು ಸ್ಯಾಮ್ಸನ್‌ 11 ವರ್ಷಗಳ ಕಾಲ ರಾಜಸ್ಥಾನ್‌ ರಾಯಲ್ಸ್‌ ತಂಡವನ್ನು ಪ್ರತಿನಿಧಿಸಿದ ನಂತರ, ರಾಜಸ್ಥಾನ್‌ ರಾಯಲ್ಸ್‌ಗೆ ಅತ್ಯಂತ ಯಶಸ್ವಿ ಕ್ಯಾಪ್ಟನ್ ಮತ್ತು ಪ್ರಮುಖ ರನ್‌ಸ್ಕೋರ್ ಆಗಿದ್ದರು. ಅವರು 2022ರ ಐಪಿಎಲ್‌ ಫೈನಲ್‌ಗೆ ಮತ್ತು 2024ರ ಟೂರ್ನಿಯ ಪ್ಲೇಆಫ್ಸ್‌ ತಂಡವನ್ನು ಮುನ್ನಡೆಸಿದ್ದರು.2026ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನವನ್ನು ತೋರುವ ಮೂಲಕ ಭಾರತ ತಂಡ ಮೂರನೇ ಬಾರಿ ಟಿ20 ವಿಶ್ವಕಪ್‌ ಗೆಲುವಿನಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದರು. ಅವರು ಈ ಟೂರ್ನಿಯಲ್ಲಿ 321 ರನ್‌ಗಳ ಮೂಲಕ ಅತಿ ಹೆಚ್ಚು ರನ್‌ ಗಳಿಸಿದ ಭಾರತದ ಬ್ಯಾಟ್ಸ್‌ಮನ್‌ ಎನಿಸಿಕೊಂಡಿದ್ದರು ಹಾಗೂ ಟೂರ್ನಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು. ಇದಾದ ಬಳಿಕ ಸಂಜು ಸ್ಯಾಮ್ಸನ್‌ ಅವರ ಭವಿಷ್ ಸಂಪೂರ್ಣವಾಗಿ ಬದಲಾಯಿತು.

Kishor KV

Leave a Reply

Your email address will not be published. Required fields are marked *